ತಂದೆಯ ಪಾಠ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಮಗ ತಪ್ಪು ದಾರಿ ಹಿಡಿದಿರುವುದನ್ನು ತಿಳಿದ ಅಪ್ಪ ಏನು ಉಪಾಯ ಮಾಡಿದರು ಗೊತ್ತೇ?
ಉದ್ದೇಶಗಳು :
ಕಥೆಯ ಮೂಲಕ ಮಕ್ಕಳಿಗೆ ಕಳ್ಳತನ ಮಾಡುವುದು ತಪ್ಪು ಎಂಬುದನ್ನು ತಿಳಿಸುವುದಲ್ಲದೇ ಪುಸ್ತಕಗಳ ಮಹತ್ವವನ್ನು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು :ಕುಟುಂಬ,ಬುದ್ಧಿವಂತಿಕೆ ಮತ್ತು ಚತುರತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Tandeya%20Patha.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
This is my Thumb Head of the family – Rhyme ಹೇಳಿಕೊಡುವುದು.
ಕಾಫಿ - ಕನ್ನಡಿ ಆಟ ಆಡಿಸುವುದು.
ಆಲಿಸುವ ಪೂರ್ವದ ಚಟುವಟಿಕೆ
- ಕುಟುಂಬದ ಸದಸ್ಯರ ಪರಿಚಯ.
- ಪುಟ್ಟ ಕೌಮುದಿ ಕಥೆಯ ಪರಿಚಯ
- ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳನ್ನು ಪಟ್ಟಿ ಮಾಡುವುದು.
ಆಲಿಸುವ ಸಮಯದ ಚಟುವಟಿಕೆ
- ರಾಮು ಕಳ್ಳತನ ಮಾಡಲು ಕಾರಣವೇನು?
- ರಾಮು ಸುಳ್ಳು ಹೇಳಲು ಕಾರಣವೇನು?
- ರಾಮು ಸರಿದಾರಿಗೆ ಬರಲು ನೀವು ಏನೆಲ್ಲಾ ಸಲಹೆ ನೀಡುವಿರಿ?
- ರಾಮುವಿನ ತಂದೆ ಮಾಡಿದ ಉಪಾಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಆಲಿಸಿದ ನಂತರದ ಚಟುವಟಿಕೆಗಳು
- ರಾಮು ಕಳ್ಳತನ ಮಾಡುವುದನ್ನು ಹೀಗೆ ಮುಂದುವರಿಸಿದರೆ ಏನೆಲ್ಲಾ ಪರಿಣಾಮಗಳಾಗಬಹುದು ಎಂಬುದನ್ನ ತಂಡದೊಂದಿಗೆ ಚರ್ಚಿಸಿ.
- ನಿಮ್ಮ ತಂದೆ ತಾಯಿ ನಿಮ್ಮ ಜೀವನದ ಮೇಲೆ ಬೀರಿದ ಪರಿಣಾಮನ್ನು ಕುರಿತು ಬರೆಯಿರಿ.
- ಈ ಕಥೆಗೆ ಹೋಲುವಂತೆ ಮತ್ತೊಂದು ಕಥೆ ರಚಿಸಿ.
ಪಠ್ಯ ಪುಸ್ತಕಕ್ಕೆ ಸಂಪರ್ಕಿಸುವುದು
6 ನೇ ತರಗತಿ
- ದೊಡ್ಡವರ ದಾರಿ