ಫಾರೂಕಜ್ಜನ ತೋಟ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಅಮೀರ್‌ನಿಗೆ ಫಾರೂಕಜ್ಜನ ತೋಟ ಎಂದರೆ ತುಂಬಾ ಇಷ್ಟ. ಆದರೆ, ಯಾವುದೋ ಕೀಟಗಳು ತೋಟದ ಗಿಡಗಳನ್ನೆಲ್ಲ ತಿನ್ನುತ್ತಿವೆ. ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಅಮೀರ್ ಏನು ಮಾಡಬಹುದು?

ಉದ್ದೇಶಗಳು :

ಪರಿಸರದ ಪ್ರಾಮುಖ್ಯತೆಯನ್ನ ಅರಿತು ಪರಿಸರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಅದನ್ನ ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಮಕ್ಕಳಿಗೆ ತಿಳಿಸಬಹುದು. ಮಕ್ಕಳಿಗೆ ಪರಿಸರದ ಕುರಿತು ಆಸಕ್ತಿ ಮೂಡಿಸಿ ಕೈದೋಟ ಬೆಳೆಸಲು ಪ್ರೇರೇಪಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಹುಟ್ಟಿಸಬಹುದು.

ಕಥಾ ವಸ್ತು :ಪರಿಸರ ಮತ್ತು ವಾತಾವರಣ,ಬುದ್ಧಿವಂತಿಕೆ ಮತ್ತು ಚತುರತೆ,ಕರುಣೆ ಮತ್ತು ಕಾಳಜಿ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Farookhajjana%20Tota.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳೊಂದಿಗೆ ಪರಿಸರದಲ್ಲಿ ಕಂಡುಬರುವ ವಿವಿಧ ರೀತಿಯ ಗಿಡ-ಮರ, ಹೂವು-ಹಣ್ಣು, ಪ್ರಾಣಿ-ಪಕ್ಷಿಗಳ ಕುರಿತು ಚರ್ಚಿಸಬಹುದು.
  2. ಮರಗಳ ಪ್ರಾಮುಖ್ಯತೆ ಕುರಿತು ಚರ್ಚಿಸುವುದು.
  3. ಮಕ್ಕಳು ತಮ್ಮ ಊರುಗಳಲ್ಲಿ ರಸ ಗೊಬ್ಬರ ತಯಾರಿಸುವ ಬಗ್ಗೆ ಚರ್ಚಿಸಬಹುದು.
  4. ಪರಿಸರ ಸ್ನೇಹಿ ದುಂಬಿಗಳು (ಕೀಟಗಳು) ಹಾಗೂ ಪರಿಸರ ನಾಶ ಪಡಿಸುವ ಕೀಟಗಳ ಕುರಿತು ಚರ್ಚಿಸಬಹುದು.
  5. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೀವು ಯಾವಾಗಲಾದರೂ ತೋಟದಲ್ಲಿ ಕೆಲಸ ಮಾಡಿದ್ದೀರಾ? ನೀವು ಇದರಿಂದ ಏನನ್ನು ಕಲಿತಿದ್ದೀರಿ?
  6. ನೀವು ತೋಟ ಅಥವಾ ಉದ್ಯಾನವನದಲ್ಲಿ ನೈಸರ್ಗಿಕ ಸ್ಥಳದಲ್ಲಿ ಸಮಯ ಕಳೆಯುವಾಗ ನಿಮಗೆ ಹೇಗನಿಸುತ್ತದೆ?

ಸಂಪೂರ್ಣ ದೈಹಿಕ ಚಟುವಟಿಕೆ

  • ಶಾಲಾ ಆವರಣದಲ್ಲಿನ ತೋಟವನ್ನು ನಿರ್ವಹಣೆ ಮಾಡಿಸುವುದು.
  • ಆಲಿಸುವ ಪೂರ್ವದ ಚಟುವಟಿಕೆ
  • ಪರಿಸರದಲ್ಲಿ ಕಂಡುಬರುವ ವಿಭಿನ್ನ ಪ್ರಾಣಿ ಪಕ್ಷಿ ಕೀಟಗಳನ್ನು ಪಟ್ಟಿ ಮಾಡುವುದು.
  • ಕೃಷಿ ಎಂದರೇನು? ಅದನ್ನು ಮಾಡುವ ವಿಧಾನವೇನು? ನೀವು ನಿಮ್ಮ ಪೋಷಕರಿಗೆ ಕೃಷಿಯಲ್ಲಿ ಏನೆಲ್ಲಾ ಸಹಾಯ ಮಾಡುವಿರಿ.
  • ವಿವಿಧ ಹೂವು, ಹಣ್ಣುಗಳು ಹಾಗೂ ಅದಕ್ಕೆ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿ.

ಆಲಿಸುವ ಸಮಯದ ಚಟುವಟಿಕೆ

  • ಪರಿಸರ ಸ್ನೇಹಿ ಕೃಷಿ ಎಂದರೇನು?
  • ಜಮೀನಿನಲ್ಲಿ ಮಾಡಬಹುದಾದ ಕಾರ್ಯಗಳನ್ನು ಪಟ್ಟಿ ಮಾಡಿ.
  • ಕಾಂಪೋಸ್ಟ್ ಗೊಬ್ಬರವನ್ನು ಹೇಗೆ ತಯಾರಿಸುವಿರಿ?
  • ರಸಾಯನಿಕ ಮತ್ತು ಕಾಂಪೋಸ್ಟ್ ಗೊಬ್ಬರದ ನಡುವಿನ ವ್ಯತ್ಯಾಸ ತಿಳಿಸಿ.
  • ಕೀಟ ಬಾಧೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ನೀವು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳುವಿರಿ.

ಆಲಿಸಿದ ನಂತರದ ಚಟುವಟಿಕೆಗಳು

  • ಮನೆ ಮತ್ತು ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸುವುದು.
  • ಕಾಂಪೋಸ್ಟ್ ಗೊಬ್ಬರದ ಮಹತ್ವವನ್ನು ಚರ್ಚಿಸಿ ಹೇಳುವುದು.
  • ಪರಿಸರ ಸ್ನೇಹಿಯಾಗಿ ಜೀವ ಸಂಕುಲವನ್ನು ರಕ್ಷಿಸುವ ಬಗ್ಗೆ ಚರ್ಚಿಸಿ ಹೇಳಲು ತಿಳಿಸುವುದು.

ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು

4 ತರಗತಿ

  • ಕನ್ನಡ - ಅಜ್ಜಿಯ ತೋಟದಲ್ಲಿ ಒಂದು ದಿನ

5 ತರಗತಿ

  • ಪರಿಸರ - ಅಧ್ಯಯನ ಜೀವ ಜಗತ್ತು

8 ತರಗತಿ

  • ವಿಜ್ಞಾನ - ರಸಗೊಬ್ಬರ ಮತ್ತು ಜೈವಿಕ ಗೊಬ್ಬರದ ನಡುವಿನ ವ್ಯತ್ಯಾಸ.