ದುರಾಸೆಯ ಇಲಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಇಲಿ ದೊಡ್ಡ ತಿಂಡಿಯನ್ನು ಬಿಲದೊಳಗೆ ತೆಗೆದುಕೊಂಡು ಹೋಗಲು ನೋಡುತ್ತದೆ. ದುರಾಸೆಯಿಂದ ಲಾಭವಿಲ್ಲ ಎಂದು ಕಲಿಯುತ್ತದೆ.

ಉದ್ದೇಶಗಳು :

ಮಕ್ಕಳಿಗೆ ಅತಿ ಆಸೆಯೇ ದುಖಃಕ್ಕೆ ಮೂಲ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ಆರೋಗ್ಯ ಮತ್ತು ಸ್ವಛ್ಛತೆಯ ಬಗ್ಗೆ ಮಕ್ಕಳಿಗೆ ಅರಿವುಮೂಡಿಸುವುದು.

ಕಥಾ ವಸ್ತು :ದುರಾಸೆ,ಆರೊಗ್ಯ ಮತ್ತು ಸ್ವಚ್ಚತೆ,ಪ್ರಾಣಿ ಮತ್ತು ಪಕ್ಷಿಗಳು

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Duraaseya%20Ili.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಹುಡುಕಿ ತಿನ್ನಲು ಬರುವ ಪ್ರಾಣಿಗಳಾವುವು ಎಂಬುದನ್ನ ಚರ್ಚಿಸುವುದು.
  2. ಮನೆಯಲ್ಲಿನ ತಿಂಡಿ ಇಲಿ ಅಥವಾ ಯಾವುದಾದರೂ ಪ್ರಾಣಿಯ ಪಾಲಾಗಿರುವ ಕುರಿತು ಅನುಭವವನ್ನು ಹಂಚಿಕೊಳ್ಳಲು ತಿಳಿಸುವ ಮೂಲಕ ಮಕ್ಕಳಲ್ಲಿ ಮಾತನಾಡುವ ಕೌಶಲ್ಯ ಮೂಡಿಸುವುದು.
  3. ಮನೆಯಲ್ಲಿನ ಆಹಾರವನ್ನು ತಿನ್ನಲು ಬರುವ ಪ್ರಾಣಿಗಳಿಂದ (ಇಲಿ,ಜೆರಳೆ, ಬೆಕ್ಕು) ಆಹಾರವನ್ನು ಹೇಗೆ ಕಾಪಾಡುವುದು ಎಂಬುದನ್ನು ಗುಂಪು ಚರ್ಚೆ ಮಾಡಲು ತಿಳಿಸುವುದು.
  4. ಮನೆಯಲ್ಲಿ ಬೇರೆ ಪ್ರಾಣಿಗಳು ಎಂಜಲು ಮಾಡಿಬಿಟ್ಟ ಆಹಾರವನ್ನು ಸೇವಿಸುವುದರಿಂದ ಆಗುವ ಅನಾಹುತಗಳಕುರಿತು ಚರ್ಚಿಸುವುದು.
  5. ಕಥೆಯನ್ನು ಮಕ್ಕಳು ತಮ್ಮದೇ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು.
  6. ಕಥೆಯಲ್ಲಿ ಇಲಿಯ ಜಾಗದಲ್ಲಿ ನೀವು ಇದ್ದಿದ್ದರೇ ಏನು ಮಾಡುತ್ತಿದ್ದಿರಿ ? ಎಂದು ಕೇಳುವುದು.
  7. ಇಲಿಗೆ ಉಂಟಾಗಿರುವ ಸಮಸ್ಯೆಯಿಂದ ಹೊರಬರಲು ನೀವು ಏನು ಉಪಾಯಗಳನ್ನು ನೀಡುವಿರಿ.
  8. ನಿಮ್ಮ ಮನೆಯ ಇಲಿಗೆ ನೀವು ಮಾಡುವ ಮನವಿಗಳೇನು?
  9. ಇಲಿ ಮತ್ತೊಮ್ಮೆ ಇಂತಹ ಸಮಸ್ಯೆಗೆ ಸಿಲುಕದಂತೆ ನೀವು ನೀಡುವ ಸಲಹೆಗಳೇನು?

ಸಂಪೂರ್ಣ ದೈಹಿಕ ಚಟುವಟಿಕೆ

  • ಕಾಗೆ ಕರ್ರಗೆ ಕೊಕ್ಕರೆ ಕೊಕ್ಕರೆ ಬೆಳ್ಳಗೆ ಹಸಿರು ಕೊಂಪನೆ ಕೊಕ್ಕು ಹಸಿರಿನ ಗಿಳಿಗೆ, ಸಾವಿರ ಕಣ್ಣು ನವಿಲಿಗೆ, ಹಕ್ಕಿಗಳ ಜಾತ್ರೆ ಭೂಮಿಗೆ (ಹಾಡು)

ಆಲಿಸುವ ಪೂರ್ವದ ಚಟುವಟಿಕೆ

  • ಮನೆಯಲ್ಲಿ ಇಟ್ಟಿರುವ ಕುರುಕಲು ತಿಂಡಿಗಳನ್ನ ಬಯಸಿ ಬರುವ ಪ್ರಾಣಿಗಳು ಯಾವುವು?
  • ಇದರ ಕುರಿತಾಗಿ ಮಕ್ಕಳಿಗಿರುವ ಅನುಭವಗಳನ್ನು ಚರ್ಚಿಸುವುದು.

ಆಲಿಸುವ ಸಮಯದ ಚಟುವಟಿಕೆ

  • ಇಲಿ ಆಹಾರವನ್ನು ತೆಗೆದುಕೊಂಡು ಹೋಗಲು ಏಕೆ ಸಾಧ್ಯವಾಗಲಿಲ್ಲ.
  • ಇಲಿ ಆಹಾರವನ್ನು ತೆಗೆದುಕೊಂಡು ಹೋಗಲು ಏನು ಸಲಹೆಗಳನ್ನು ನೀಡುವಿರಿ?
  • ಇಲಿ ಆಹಾರ ಉರುಳಿಸಲು ಏನು ಉಪಾಯ ಮಾಡುತ್ತದೆ.

ಆಲಿಸಿದ ನಂತರದ ಚಟುವಟಿಕೆ

  • ನೀವು ಇಲಿಯಾಗಿದಿದ್ದರೆ ಏನು ಮಾಡುತ್ತಿದ್ದಿರಿ?
  • “ಹಂಚಿದರೆ ಹಸಿವಿಲ್ಲ" “ಒಗ್ಗಟ್ಟಿನಲ್ಲಿ ಬಲವಿದೆ" “ಅತಿಯಾಸೆ ಗತಿಕೇಡು" ಗಾದೆಗಳಿಗೆ ಪ್ರಭಂದ ಬರೆಯಿರಿ.
  • ಕಥೆಯನ್ನು ಇನ್ನಷ್ಟು ವಿಭಿನ್ನವಾಗಿ ರಚಿಸಿ ಹೇಳಲು ತಿಳಿಸುವುದು.
  • ನೆಚ್ಚಿನ ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಲು ತಿಳಿಸುವುದು
  • ಇಲಿಯ ಚಿತ್ರವನ್ನು ಬರೆಯಲು ತಿಳಿಸುವುದು.