ತೂಕಡಿಸುವ ಭೀಮ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಪ್ರತಿ ಬೆಳಿಗ್ಗೆ, ನಮ್ಮಲ್ಲಿ ಹಲವಾರು ಮಂದಿ ಅನುಭವಿಸುವ ಕಷ್ಟವನ್ನು ಭೀಮ ಕೂಡ ಅನುಭವಿಸುತ್ತಾನೆ. ಸಮಯಕ್ಕೆ ಸರಿಯಾಗಿ ಅವನಿಂದ ಏಳಲು, ಸಾಧ್ಯವಾಗುತ್ತಿರಲಿಲ್ಲ. ಅವನ ಒಬ್ಬ ಚಿಕ್ಕ ಸ್ನೇಹಿತ ಅವನಿಗೆ ಸಹಾಯ ಮಾಡುತ್ತಾನೆ. ಅದು ಹೇಗೆ ಎಂದು ಕೇಳಿ ತಿಳಿದುಕೊಳ್ಳಿ .

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ದೈನಂದಿನ ಉತ್ತಮ ಅಭ್ಯಾಸಗಳನ್ನು ತಿಳಿಸಿಕೊಡಬಹುದು ಹಾಗೂ ಕಥೆಯಲ್ಲಿ ಭೀಮನಿಗೆ ಆತನ ಸ್ನೇಹಿತರು ಸಹಾಯ ಮಾಡಿದಂತೆ ಮಕ್ಕಳಲ್ಲೂ ಕೂಡ ಸಹಾಯ ಮನೋಭಾವವನ್ನು ಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :


ಕಥಾ ವಸ್ತು : ದಿನಚರಿ ಮತ್ತು ದೈನಂದಿನ ಅಭ್ಯಾಸಗಳು ,ಸಹಾಯ - ಸಹಕಾರ ,ಹಾಸ್ಯ

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ತರಗತಿ ೧,೨,೩,೪,೫,

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Thukadiosuva%20Bheema.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನ ಮೂಡಿಸುವಲ್ಲಿ ಮನೆಯವರ ಪ್ರಯತ್ನಗಳ ಕುರಿತು ಚರ್ಚಿಸಬಹುದು.
  2. ಕಥೆಯಲ್ಲಿ ಬಂದಂತಹ ಪ್ರಾಣಿಗಳು ಭೀಮನನ್ನು ಎಬ್ಬಿಸಲು ಹೇಗೆಲ್ಲಾ ಪ್ರಯತ್ನಿಸಿದವು ಎಂಬುದನ್ನ ನಿಮ್ಮ ಕಲ್ಪನೆಯಲ್ಲಿ ಹೇಳಿ.
  3. ನೊಣದ ಸಹಾಯವಿಲ್ಲದೆ ಭೀಮನು ಸ್ವತಃ ತಾನೇ ಎಚ್ಚರಗೊಳ್ಳುವಂತೆ ಕಥೆಯ ಅಂತ್ಯವನ್ನು ರಚಿಸಲು ತಿಳಿಸುವುದು.
  4. ಎಷ್ಟೇ ಪ್ರಯತ್ನಿಸಿದರೂ ಎಚ್ಚರಗೊಳ್ಳದ ಭೀಮನ ಕುರಿತು ಪ್ರಾಣಿಗಳ ಅಭಿಪ್ರಾಯವೇನಿರಬಹುದು? ನಿಮ್ಮ ಮಾತುಗಳಲ್ಲಿ ತಿಳಿಸಿ.
  5. ನೀವು ಕೂಡ ಭೀಮನ ಸ್ಥಿತಿಯಲ್ಲಿದ್ದು ಸಮಯಕ್ಕೆ ಏಳುವುದು ಸಾಧ್ಯವಾಗದಿದ್ದರೆ ನೀವು ಏನು ಮಾಡುತ್ತೀರಿ?
  6. ನೀವು ಭೀಮನ ಸ್ನೇಹಿತರೆಂದು ಭಾವಿಸಿ ಭೀಮನು ನಿದ್ರೆಯಿಂದ ಏಳಲು ಏನೆಲ್ಲಾ ಸಲಹೆಗಳನ್ನು ನೀಡುವಿರೀ?
  7. ಮಕ್ಕಳೇ ನೀವು ಮುಂಜಾನೆ ಬೇಗ ಏಳುವುದಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ ?