ಚಗಳಿ ಇರುವೆ
Jump to navigation
Jump to search
ಪಠ್ಯ : ಚಗಳಿ ಇರುವೆ.
ಕರ್ತೃ : ಪೂರ್ಣಚಂದ್ರ ತೇಜಸ್ವಿ.
ಪಠ್ಯ ವಿಷಯದ ಉದ್ದೇಶಗಳು:
- ನಮಗೆ ಚಿರಪರಿಚಿತವಾದ ಇರುವೆಗಳ ಕುರಿತ ವಿಶಿಷ್ಟ ಶಕ್ತಿಯ ಕುರಿತು ತಿಳಿದುಕೊಳ್ಳುವುದು.
- ಅತ್ಯಂತ ಸಣ್ಣ ಜೀವಿಯಾದ ಇರುವೆಗಳಲ್ಲಿರುವ ಒಗ್ಗಟ್ಟನ್ನು ಮೆಚ್ಚಿಕೊಳ್ಳುಕೊಳ್ಳುವುದು.
- ಪರಿಸರದಲ್ಲಿರುವ ಇತರೆ ಜೀವಿಗಳ ಕೌತುಕ ವಿಚಾರಗಳನ್ನು ಅನ್ವೇಷಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು.
- ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳನ್ನು ಮಕ್ಕಳಿಗೆ ಪರಿಚಯಿಸುವುದು.
ಸಂಪನ್ಮೂಲ :
- ಪೂರ್ಣಚಂದ್ರ ತೇಜಸ್ವಿ ರವರ ಕವಿ ಪರಿಚಯ - MIND MAP
- ಚಗಳಿ ಇರುವೆಗಳು ಕಾರ್ಯ ನಿರ್ವಹಿಸುವ ಕೌತುಕ ವಿಡಿಯೋ. https://www.youtube.com/watch?v=B3QTAgHlwEg&t=0s
ತರಗತಿ ಚಟುವಟಿಕೆ.
ಚಟುವಟಿಕೆ ೧ :
ಕೆಳಗಿನ ಚಿತ್ರಪಟ ಪ್ರದರ್ಶಿಸಿ ಅವುಗಳ ಕುರಿತಾಗಿ ಮಕ್ಕಳಿಗಿರುವ ಪೂರ್ವಜ್ಞಾನವನ್ನು ಹಂಚಿಕೊಳ್ಳಲು ಅವಕಾಶ ನೀಡುವುದು.
ಚಟುವಟಿಕೆ ೨ :
ಪಠ್ಯಕ್ಕೆ ಪೂರಕವಾಗಿ ತಿಳಿಸಿರುವ ಚಗಳಿ ಇರುವೆ ಪಾಠ ರಚನೆಯ ಹಿನ್ನೆಲೆಯನ್ನು ಮಕ್ಕಳಲ್ಲಿ ಕೃತಿಕಾರರ ಕುರಿತು ಆಸಕ್ತಿ ಮೂಡುವಂತೆ ಶಿಕ್ಷಕರು ಮೌಖಿಕವಾಗಿ ತಿಳಿಸುವುದು.
ಚಟುವಟಿಕೆ ೩ :
ಚಗಳಿ ಇರುವೆ ಪಾಠದ ಕರ್ತೃಗಳಾದ ಕೆ.ಪಿ ಪೂರ್ಣಚಂದ್ರ ತೇಜಸ್ವಿರವರನ್ನು ಪರಿಚಯಿಸುವುದು.
ಚಟುವಟಿಕೆ ೪ :
ಚಗಳಿ ಇರುವೆಗಳು ಹೇಗೆ ತಮ್ಮ ಗೂಡನ್ನು ನಿರ್ವಹಿಸುತ್ತವೆ ಎಂಬುದನ್ನ ವಿಡಿಯೋ ಮೂಲಕ ಪ್ರದರ್ಶಿಸುವುದು.
https://www.youtube.com/watch?v=B3QTAgHlwEg&t=0s
(ಚಗಳಿ ಇರುವೆಗಳಂತೆ ಕುತೂಹಲವೆನಿಸುವ ಇತರೆ ಜೀವಿಗಳ ಕುರಿತು ತಿಳಿದುಕೊಂಡು ಬಂದು ತರಗತಿಯಲ್ಲಿಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವುದು.)
ಚಟುವಟಿಕೆ ೫ :
ಇರುವೆಯನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಕಥೆಯನ್ನು ಸೃಷ್ಟಿಸುವ ಚಟುವಟಿಕೆ ನೀಡುವುದು.
(ಮೊದಲನೇ ವಿದ್ಯಾರ್ಥಿ ಪ್ರಾರಂಭಿಸಿದ ಕಥೆಯನ್ನ ಮುಂದಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಮುಂದುವರೆಸಿಕೊಂಡು ಹೋಗುವುದು.)
ಮೌಲ್ಯಮಾಪನ
- ಮಕ್ಕಳ ಭಾಷಾ ಹಿನ್ನೆಲೆಯ ಕುರಿತು ತಿಳಿದುಕೊಳ್ಳುವುದು.
- ಮಕ್ಕಳು ಭಾಷೆಯನ್ನು ಅರ್ಥೈಸಿಕೊಳ್ಳಲು ಕಷ್ಟಪಡುತ್ತಿರುವರೇ ಎಂಬುದನ್ನು ಗಮನಿಸುವುದು.
- ಗುಂಪು ಚಟುವಟಿಕೆಯಲ್ಲಿ ಎಲ್ಲ ಮಕ್ಕಳೂ ಸಕ್ರಿಯವಾಗಿ ಭಾಗವಹಿಸುತ್ತಿರುವರೇ? ಎಂದು ಗಮನಿಸುವುದು
- ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಿಖರವಾಗಿ ವಾಕ್ಯ ರಚನೆ ಮಾಡುತ್ತಿರುವರೇ ಎಂದು ಗಮನಿಸುವುದು.