ರಚನಾ ಸಮಾಜ ವಿಜ್ಞಾನ 9 ತರಬೇತಿಯ ಉದ್ದೇಶಗಳು
3. ತರಬೇತಿಯ ಉದ್ದೇಶಗಳು
ಮಗು ಸಹಜ ಕಲಿಕೆಯಿಂದ ಸಾಕಷ್ಟು ಜ್ಞಾನ ಹೊಂದಿರುತ್ತದೆ. ವಿಮರ್ಶಾಯುಕ್ತ ಚಿಂತನೆ ಮತ್ತು ಅಂತಹ ಪದ್ಧತಿಯಿಂದ ತನ್ನ ಜ್ಞಾನ ಪುನಾರಚಿಸಿಕೊಳ್ಳಲು ಸಮಾಜ ವಿಜ್ಞಾನ ವಿಷಯ ಒದಗಿಸುತ್ತದೆ. ಸಮಾಜ ವಿಜ್ಞಾನ ವಿಷಯವು ಏಕತೆಯ ಮನೋಭಾವ ಮೂಡಿಸುವ ವಿಷಯವಾಗಬೇಕೆಂದೂ, ಹಾಗೂ ಹಿಂದುಳಿದ ವರ್ಗಗಳ ದೃಷ್ಠಿಕೋನದಿಂದ ಅಧ್ಯಯನ ಮಾಡುವುದೂ ಸೂಕ್ತ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಅಭಿಪ್ರಾಯ ಪಡುತ್ತದೆ. ಲಿಂಗ ಸಮಾನತೆ, ಬುಡಕಟ್ಟುಗಳ, ದಲಿತರ, ಇತರ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ವಹಿಸುವಂತೆ ಮಕ್ಕಳು ಕಲಿಯಬೇಕು. ಇದಕ್ಕೆ ವಿಮರ್ಶಾತ್ಮಕ ಚಿಂತನೆಗೆ ಮಕ್ಕಳನ್ನು ಅಣಿಗೊಳಿಸುವಂತಹ ವಿಧಾನಗಳನ್ನು ಶಿಕ್ಷಕರು ಅನುಸರಿಸಬೇಕು. ಇದು ಸಾಮಾಜಿಕ, ಆಕ, ನೈತಿಕ ಕ್ಷೇತ್ರಗಳಲ್ಲಿ ಚಿಂತನಪರ ಚರ್ಚೆಗಳು ವರ್ತಮಾನದ ಕಾಳಜಿಗಳನ್ನು ತಾವೇ ವಿಮರ್ಶಿಸಿಕೊಳ್ಳುವ ಅವಕಾಶಗಳನ್ನು ಮಕ್ಕಳಿಗೆ ಒದಗಿಸುತ್ತದೆ ಎನ್ನಲಾಗಿದೆ. ಈ ಆಶಯಗಳಂತೆ ಸದರಿ ಸಾಹತ್ಯದಲ್ಲಿ ಪ್ರಸ್ತುತ ಪರಿಷ್ಕರಿಸಲ್ಪಟ್ಟ ಪಠ್ಯ ಪುಸ್ತಕಗಳ ಪರಿಚಯ ಮತ್ತು ಅನುಸರಿಸಬಹುದಾದ ರಚನಾವಾದ ಪದ್ಧತಿಗಳ ವಿವರ ನೀಡಿದೆ ಎಂಬುದನ್ನು ತರಬೇತಿಯಲ್ಲಿ ಶಿಬಿರಾಗಳು ಅರ್ಥೈಸಿಕೊಳ್ಳಬೇಕಿದೆ. ಹಾಗೂ ತರಬೇತಿ ಕಲಿಕಾ ನಿರ್ವಹಣಾ ಕೌಶಲ್ಯವನ್ನು ಪಡೆದುಕೊಳ್ಳಬೇಕಿದೆ.
ಅಲ್ಲದೆ ಸಂವಿಧಾನದ ಮೌಲ್ಯಗಳನ್ನಾಧರಿಸಿ ರಾಷ್ಟ್ರೀಯ ಪಠ್ಯಕ್ರಮ, ಪಠ್ಯಕ್ರಮವನ್ನಾಧರಿಸಿ ಪಠ್ಯವಸ್ತು, ಹಾಗೂ ಪಠ್ಯವಸ್ತುವನ್ನಾಧರಿಸಿ ಪಠ್ಯಪುಸ್ತಕ ರಚನೆಯಾಗುವ ಪ್ರಕ್ರಿಯೆ ಎಲ್ಲಾ ಭಾಗೀದಾರರು ಅರ್ಥೈಸಿಕೊಳ್ಳಬೇಕೆನ್ನುವುದು ನಮ್ಮ ಆಶಯ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಹೊಸ ಪಠ್ಯಪುಸ್ತಕವೂ ಮೇಲೆ ತಿಳಿಸಿದ ಸರಣಿಯಲ್ಲಿಯೇ ರೂಪಿತವಾಗಿದೆ. ಪಾಠಗಳು ಮತ್ತು ಪಾಠ ನಿರ್ವಹಣಾ ಪದ್ಧತಿಗಳು ರಾ ಪ ಚೌ 05ರ ತತ್ವಗಳನ್ನು ಆಧರಿಸಿದೆ. ಈ ಅಂಶಗಳನ್ನು ತಿಳಿದುಕೊಳ್ಳುವ ನಿಮಿತ್ತ ಈ ತರಬೇತಿಯನ್ನು ಆಯೋಜಿಸಲಾಗಿದೆ. ಸದರಿ ತರಬೇತಿಯ ಉದ್ದೇಶಗಳು ಹೀಗಿವೆ.
- ಹೊಸ ಪಠ್ಯಪುಸ್ತಕ ರೂಪಿಸಿದ ಹಿನ್ನೆಲೆ ಮತ್ತು ಉದ್ದೇಶಗಳನ್ನು ತಿಳಿಯುವುದು.
- ಪಠ್ಯಪುಸ್ತಕವನ್ನು ಅರ್ಥೈಸಿಕೊಳ್ಳುತ್ತಾ ಪಠ್ಯದಲ್ಲಿರುವ ಹೊಸ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯುವುದು.
- ಪಾಠಗಳ ಮೂಲಕ ಕಲಿಕೆ ಅನುಕೂಲಿಸುವ ವಿಧಾನಗಳನ್ನು ಉದಾಹರಣೆಗಳೊಂದಿಗೆ ಅರ್ಥೈಸಿಕೊಳ್ಳುವುದು.
- ವಿವಿಧ ಚಟುವಟಿಕೆಗಳ ಸೃಷ್ಟಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಕಲಿಕೆ ಅನುಕೂಲಿಸುವ ಅನುಭವ ಪಡೆಯುವುದು.
- ಪಾಠ ವಿಷಯಗಳ ಜ್ಞಾನ ರಚನೆ ಮತ್ತು ಪುನಾರಚನೆಗೆ ಇರುವ ಅವಕಾಶಗಳನ್ನು ಸೃಜಿಸುವುದು.
- ಹೊಸ ಪಠ್ಯ ಪುಸ್ತಕಗಳ ಮೂಲಕ ಹೆಚ್ಚಿನ ವಿಚಾರಗಳನ್ನು ವಿದ್ಯಾಗಳು ಗ್ರಹಿಸಲು ಪೂರಕವಾಗುವಂತಹ ಚಟುವಟಿಕಾಧಾರಿತ ತರಬೇತಿಯನ್ನು ಶಿಕ್ಷಕರಿಗೆ ಆಯೋಜಿಸುವುದು.
- ಜಾಗತಿಕ ಶೈಕ್ಷಣಿಕ ಮಟ್ಟವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿರುವ ಪ್ರಸ್ತುತತೆಯ ಅಂಶವನ್ನು ಶಿಕ್ಷಕರಿಗೆ ಮೂಡಿಸುವುದು.
- ಇದುವರೆಗಿನ ಕಂಠಪಾಠಯುಕ್ತ ಕಲಿಕೆಯನ್ನು, ಮಾಹಿತಿಯಾಧಾರಿತ ಕಲಿಕೆಯನ್ನು ದೂರಮಾಡಿ ಮಗು ಕ್ರಿಯಾಶೀಲವಾಗಿ ಜ್ಞಾನ ಕಟ್ಟಿಕೊಳ್ಳುವಂತೆ ಅವಕಾಶ ಕಲ್ಪಿಸುವುದು ಹೇಗೆ ಎಂಬುದನ್ನು ತರಬೇತಿಯ ಮೂಲಕ ಶಿಕ್ಷಕರಿಗೆ ತಿಳಿಸುವುದು.
- ಸಮಾಜ ವಿಜ್ಞಾನದ ವಿಷಯವಾರು, ಪಾಠವಾರು ಜ್ಞಾನವು ಸಂಯೋಜಿತ ರೂಪದಲ್ಲಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು.
- ತರಗತಿಯಲ್ಲಿ ಶಿಕ್ಷಕರು ಬೋಧಕರಲ್ಲ. ಕಲಿಕೆಯ ಅನುಕೂಲಕಾರರು ಎಂದು ಅರ್ಥೈಸಿಕೊಳ್ಳುವುದು.
- ಮಗುವಿನ ಕಲಿವಿನ ಅನುಭವವು ರಚನಾತ್ಮಕವಾಗಿ ಗುಣಾತ್ಮಕ ಹಿಮ್ಮಾತಿಯೊಂದಿಗೆ ಜ್ಞಾನ ಕಟ್ಟಿಕೊಳ್ಳುವಿಕೆಯ ವಿಧಾನದ ಬಗ್ಗೆ ಶಿಕ್ಷಕರು ಮನನ ಮಾಡಿಕೊಳ್ಳುವುದು.
- ಪ್ರತಿಯೊಬ್ಬ ಶಿಕ್ಷಕರು ತರಗತಿ ಪ್ರಕ್ರಿಯೆಗಳನ್ನು ಸಂಟಿಸಿ ಮಗುವಿನ ಅನುಭವಗಳನ್ನು ತರಗತಿಯ ಒಟ್ಟು ಕಲಿಕಾ ನಿರೀಕ್ಷೆಗಳೊಂದಿಗೆ ವಿಷಯದ ಕಲಿಯುವಿಕೆಗೆ ಶಿಕ್ಷಕರನ್ನು ತರಬೇತಿಗೊಳಿಸುವುದು.
- ಮೌಲ್ಯಮಾಪನ (ನಿರಂತರ ಮತ್ತು ವ್ಯಾಪಕ) ತಾಳೆಪಟ್ಟಿ, ಚರ್ಚೆ, ಸಂಭಾಷಣೆ, ಮಾಹಿತಿ ಸಂಗ್ರಹ, ಅಭಿಪ್ರಾಯ, ಅನುಭವಗಳನ್ನು, ಪರಿಕಲ್ಪನೆಗಳನ್ನು ಉದಾಹರಣೆ ಮೂಲಕ ಶಿಕ್ಷಕರಿಗೆ ಸ್ಪಷ್ಟಪಡಿಸುವುದು.
- ಪ್ರತಿಯೊಬ್ಬ ಶಿಕ್ಷಕರೂ ತಮ್ಮ ತಮ್ಮ ಜವಾಬ್ದಾರಿ ತೆಗೆದುಕೊಳ್ಳುವುದರ ಮೂಲಕ ಮಗುವಿನ ಕಲಿಕೆಯ ಅನುಭವಕ್ಕೆ ಅವಕಾಶ ಕಲ್ಪಿಸುವಂತಹ ಸ್ವ ಶಕ್ತಿಕರಚನೆಗೆ ಶಿಕ್ಷಕ ತನ್ನನ್ನು ತಾನು ತೊಡಗಿಸಿಕೊಳ್ಳುವುದು.
- ಶಿಕ್ಷಕರು ಮಕ್ಕಳಿಗೆ ನೀಡುವ ಅಂಶಗಳು ಕೇವಲ ತೋರಿಕೆಯ ಸೂಚಕಗಳು ಮಾತ್ರ ಹಾಗೂ ಇವತ್ತಿನ ಪ್ರತಿ ಪರೀಕ್ಷೆಗಳಲ್ಲಿ ಅಂಕಗಳು ಕಾಣುತ್ತವೆಯೇ ಹೊರತು ಜೀವನಾನುಭವವಲ್ಲ ಎಂಬುದನ್ನು ತಿಳಿಯುವಂತೆ ಶಿಕ್ಷಕರ ಮನಸ್ಸನ್ನು ಸಿದ್ಧಗೊಳಿಸುವುದು.