ರಚನಾ ಸಮಾಜ ವಿಜ್ಞಾನ 9 ಪಾಠ(ಘಟಕ)ಯೋಜನೆಯನ್ನು ಕುರಿತು
11(ಎ). ಪಾಠ (ಘಟಕ) ಯೋಜನೆಯನ್ನು ಕುರಿತು
ಹೊಸ ಶಿಕ್ಷಣ ನೀತಿಯ ಪರಿಕಲ್ಪನೆಯೊಂದಿಗೆ, ರಾಷ್ಟ್ರೀಯ ಪಠ್ಯಕ್ರಮ ಮತ್ತು ಸಿ.ಸಿ.ಇ. ಅನ್ವಯ ಜ್ಞಾನವನ್ನು ಕಟ್ಟಿಕೊಳ್ಳುವುದು ಮತ್ತು ಹೊರಗಿನ ಜ್ಞಾನದೊಂದಿಗೆ ಶಾಲಾ ತರಗತಿಯೊಳಗಿನ ಜ್ಞಾನವನ್ನು ಸಂಯೋಜಿಸುವ ಕ್ರಿಯೆಗೆ ಇಂದು ನಾವು ಹೆಚ್ಚು ಒತ್ತು ಕೊಡಬೇಕಾಗಿದೆ. ಪಠ್ಯಪುಸ್ತಕಗಳ ಮೂಲ ಉದ್ದೇಶ ಜ್ಞಾನವನ್ನು ವರ್ಗಾಯಿಸುವುದಲ್ಲ. ಅದರ ಬದಲಿಗೆ ಜ್ಞಾನವನ್ನು ಪುನರ್ರಚಿಸಿಕೊಳ್ಳುವ ಅವಕಾಶಗಳನ್ನು ಮಕ್ಕಳಿಗೆ ಮುಕ್ತವಾಗಿರಿಸಿ ಅನುಕೂಲಕಾರರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕಿದೆ. ಈ ಹಿನ್ನಲೆಯಲ್ಲಿ ನಾವು ರೂಪಿಸಿಕೊಳ್ಳುವ ಪಾಠಯೋಜನೆಯು ನಾವು ಹೊಸ ಪಠ್ಯಪುಸ್ತಕವನ್ನು ಹೇಗೆ ಅರ್ಥೈಸಿಕೊಂಡಿದ್ದೇವೆ ಹಾಗೂ ಅದರ ಉದ್ದೇಶ, ಕಲಿಯುವವರ ಅವಶ್ಯಕತೆ ಅವುಗಳನ್ನು ಪೂರೈಸುವಲ್ಲಿ ನಾವು ಪೂರ್ವ ತಯಾರಿಗಾಗಿ ತಯಾರಿಸಿಟ್ಟುಕೊಂಡಿರುವ ಪಾಠಯೋಜನೆ ಅನುಕೂಲಕಾರರಾದ ಶಿಕ್ಷಕರಿಗೆ ಹೇಗೆ ಮಾರ್ಗದರ್ಶನ ನೀಡುತ್ತದೆ ಎಂಬುದನ್ನು ಒಳಗೊಂಡಿರುವುದು ಸೂಕ್ತವೆನಿಸುತ್ತದೆ.
ಇದರಿಂದಾಗಿಯೇ ಪಾಠಯೋಜನೆಗೆ ಒಂದು ನಿರ್ದಿಷ್ಟವಾದ ಚೌಕಟ್ಟನ್ನು ಒದಗಿಸಲು ಹೊಸ ಶಿಕ್ಷಣ ನೀತಿ ಬಯಸುವುದಿಲ್ಲ ಆದರೂ ಅನುಕೂಲಕಾರರು ತಮ್ಮ ತರಗತಿಯ ಕಲಿಕಾ ಪ್ರಕ್ರಿಯೆಗೆ ರೂಪಿಸಿಕೊಂಡಿರುವ ಪೂರ್ವ ತಯಾರಿ ಗುರುತಿಸಿಕೊಂಡ ಜ್ಞಾನ ರಚನೆಯ ಅಂಶಗಳು, ಚಟುವಟಿಕೆ, ಕಲಿಕಾ ಸಾಮಗ್ರಿಗಳು ಹಾಗೂ ಮೌಲ್ಯಮಾಪನವನ್ನು ಒಳಗೊಂಡಂತೆ ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಹೊಂದಬೇಕಿರುವುದರಿಂದ ಈ ಕೆಳಕಂಡ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಒಂದು ಪಾಠಯೋಜನಾ ಮಾದರಿಯನ್ನು ನೀಡಲಾಗಿದೆ.
ಪಾಠ ಯೋಜನೆಯ ಉದ್ದೇಶಗಳು
- ಎನ್.ಸಿ.ಎಫ್ ಮತ್ತು ಸಿ.ಸಿ.ಇ. ಆಶಯಗಳನ್ನು ತರಗತಿ ಕೋಣೆಯಲ್ಲಿ ಅನುಪಾಲಿಸುವ ಕ್ರಮವನ್ನು ನಿಗದಿಪಡಿಸಿಕೊಳ್ಳುವುದು.
- ಮಕ್ಕಳಲ್ಲಿ ಮೌಲ್ಯಗಳು ಆಸಕ್ತ, ಕೌಶಲ್ಯಗಳನ್ನು ಬೆಳೆಸಲು ಚಟುವಟಿಕೆಗಳನ್ನು ಆಯೋಜಿಸಿಕೊಳ್ಳುವುದು.
- ಪ್ರತಿ ಟಕವನ್ನು ಸಾಮಥ್ರ್ಯವಾರು ಕಲಿಕೆಗೆ ಪೂರಕವಾಗುವಂತೆ ಅರ್ಥೈಸಿಕೊಳ್ಳುವುದು.
- ಕಲಿಕಾ ಸಾಮಗ್ರಿ, ಮೌಲ್ಯಮಾಪನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಸಂದರ್ಭವನ್ನು ಗುರುತುಮಾಡಿಕೊಳ್ಳುವುದು.
- ಮಗುವಿನ ಭಾಗವಹಿಸುವಿಕೆಯನ್ನು ಅವಲೋಕಿಸಿ ದಾಖಲಿಸುವುದು.
- ವಿಶೇಷವಾಗಿ ರೂಪಣಾತ್ಮಕ ಮೌಲ್ಯಮಾಪನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಅವಲೋಕನ ನಮೂನೆಯನ್ನು ಸಿದ್ಧಪಡಿಸಿಕೊಳ್ಳುವುದು.
- ಅನುಭವಾತ್ಮಕ ಕಲಿಕೆ ಹೇಗೆ ತರಗತಿ ಪ್ರಕ್ರಿಯೆಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ಸ್ಪಷ್ಪಪಡಿಸಿಕೊಳ್ಳುವುದು.
- ಜ್ಞಾನ ಪುನರ್ರಚನೆಗೆ ಅವಕಾಶ ಕಲ್ಪಿಸುವುದು.
ಪಾಠ ಪ್ರಾರಂಭಿಸುವ ದಿನಾಂಕ: ಮುಕ್ತಾಯದ ದಿನಾಂಕ:
ಪಾಠಯೋಜನಾ ಮಾದರಿ
ಘಟಕ: 1 ಪಾಠದ ಹೆಸರು : ಕ್ರೈಸ್ತ ಮತ್ತು ಇಸ್ಲಾಂ ಮತಗಳು
1) ಸಾಮಥ್ರ್ಯಗಳು: (ಕಲಿಕಾಂಶ, ಜ್ಞಾನ ರಚನಾ ಅಂಶಗಳು)
1) ಏಸು ಮತ್ತು ಮಹಮದ್ ಪೈಗಂಬರರ ಜೀವನ ತಿಳಿಯುವುದು.
2) ಕ್ರೈಸ್ತ ಮತ್ತು ಇಸ್ಲಾಂ ಮತದ ಬೆಳವಣಿಗೆ ಅರಿಯುವುದು
3) ಕ್ರೈಸ್ತ ಹಾಗೂ ಇಸ್ಲಾಂ ಮತದ ಬೋಧನೆಗಳನ್ನು ಅರ್ಥೈಸಿಕೊಳ್ಳುವುದು.
4) ಕ್ರೈಸ್ತ ಮತ್ತು ಇಸ್ಲಾಂ ಮತಗಳ ಪ್ರಸಾರವನ್ನು ಗಮನಿಸುವುದು.
2) ಕಲಿವಿನ ವಿಧಾನ: ಚರ್ಚಾ ವಿಧಾನ
- ಶಿಕ್ಷಕರು ಮಕ್ಕಳನ್ನು ಐದು ಗುಂಪುಗಳನ್ನಾಗಿ ಮಾಡುವರು.
ಪ್ರತಿ ಗುಂಪಿಗೂ ಏಸು ಮತ್ತು ಪೈಗಂಬರ ಜೀವನ, ಕ್ರೈಸ್ತ ಮತ್ತು ಇಸ್ಲಾಂ ಮತದ ಬೆಳವಣಿಗೆ, ಬೋಧನೆಗಳು ಹಾಗೂ ಈ ಧರ್ಮಗಳ ಪ್ರಭಾವವನ್ನು ಮಿಂಚು ಪಟ್ಟಿಯಲ್ಲಿ ಬರೆದು ಹಂಚಿ ಚರ್ಚಿಸಲು ತಿಳಿಸುವರು.
- ವಿದ್ಯಾಗಳು
ಏಸುವಿನ ಜೀವನ - ಪೈಗಂಬರರ ಜೀವನ ಬೋಧನೆಗಳ ಬಗ್ಗೆ ಮಕ್ಕಳು ಪಠ್ಯ
3) ಚಟುವಟಿಕೆಗಳು - ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ಬೋಧನೆಗಳ ಪಟ್ಟಿ ತಯಾರಿಕೆ
- ಇಸ್ಲಾಂ ಮತ್ತು ಕ್ರೈಸ್ತ ಮತಾಚರಣೆಯ ವ್ಯತ್ಯಾಸಗಳ ಪಟ್ಟಿ
- ಮಸೀದಿ ಮತ್ತು ಚರ್ಚ್ಗಳಿಗೆ ಭೇಟಿ ನೀಡಲು ತಿಳಿಸುವುದು.
4) ಮೌಲ್ಯಮಾಪನ: - ಇಸ್ಲಾಂ ಮತ್ತು ಕ್ರೈಸ್ತ ಮತಗಳ ಬೋಧನೆ ನಿಮ್ಮ ಮೇಲೆ ಬೀರಿದ ಪ್ರಭಾವ ಕುರಿತು ಪ್ರಬಂಧ ಬರೆಯಿರಿ.
5) ಕಲಿಕಾ ಸಾಮಗ್ರಿಗಳು - ಏಸುವಿನ ಚಿತ್ರ - ಮೆಕ್ಕಾದ ಚಿತ್ರ
- ಏಸು ಮತ್ತು ಪೈಗಂಬರರ ಬೋಧನೆಗಳ ಚಾರ್ಟ್ ಪ್ರದರ್ಶನ
- ಬೈಬಲ್ ಮತ್ತು ಕುರಾನ್ ಗ್ರಂಥಗಳ ಪ್ರದರ್ಶನ.