ಅರ್ಧವೃತ್ತ
Jump to navigation
Jump to search
ವೃತ್ತವನ್ನು ಎರಡು ಭಾಗಗಳಾಗಿ ವಿಭಜಿಸಿ ವ್ಯಾಸವನ್ನು ಎಳೆಯುವ ಮೂಲಕ ಅರ್ಧವೃತ್ತಗಳನ್ನು ರೂಪಿಸುತ್ತದೆ.
ಕಲಿಕೆಯ ಉದ್ದೇಶಗಳು :
- ಒಂದು ವ್ಯಾಸವು ವೃತ್ತವನ್ನು ಎರಡು ಸಮಾನ ಭಾಗಗಳಾಗಿ ವಿಂಗಡಿಸುತ್ತದೆ ಮತ್ತು ಅಂತಹ ಪ್ರತಿಯೊಂದು ಅರ್ಧವು ಅರ್ಧವೃತ್ತ ಅಥವಾ ಅರ್ಧಗೋಳವಾಗಿರುತ್ತದೆ.
- ಪರಿಧಿಯ ಯಾವುದೇ ಎರಡು ಬಿಂದುಗಳನ್ನು ವೃತ್ತದ ಕೇಂದ್ರದ ಮೂಲಕ ಸೇರುಸುವುದರಿಂದ ಅರ್ಧವೃತ್ತವನ್ನು ರೂಪಿಸುವುದು, ಅಂದರೆ. ವ್ಯಾಸವನ್ನು ಎಳೆಯುವ ಮೂಲಕ.
ಅಂದಾಜು ಸಮಯ:
10 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಡಿಜಿಟಲ್ ಅಲ್ಲದ: ಬಿಳಿ ಕಾಗದ, ಕೈವಾರ ಮತ್ತು ಬಣ್ಣದ ಪೆನ್ಸಿಲ್ಗಳು
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :
- ವೃತ್ತ ಮತ್ತು ವ್ಯಾಸವನ್ನು ಪರಿಚಯಿಸಿರಬೇಕು.
- ಕೊಟ್ಟಿರುವ ತ್ರಿಜ್ಯದ ವೃತ್ತಗಳನ್ನು ಕತ್ತರಿಸಿ ತರಲು ಹಿಂದಿನ ದಿನ ಮಕ್ಕಳನ್ನು ಕೇಳಿ.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ವಿಭಿನ್ನ ಗಾತ್ರದ ಕತ್ತರಿಸಿದ ವೃತ್ತಗಳನ್ನು ತನ್ನಿ.
- ಅವುಗಳನ್ನು ನಿಖರವಾದ ಭಾಗಗಳಾಗಿ ಮಡಿಸಿ.
- ಅರ್ಧವೃತ್ತಗಳನ್ನು ಗುರುತಿಸಿ ಮತ್ತು ಪ್ರತಿ ಅರ್ಧವನ್ನು ವಿಭಿನ್ನ ಬಣ್ಣದಿಂದ ಬಣ್ಣ ಮಾಡಿ.
- ವೃತ್ತದ ಕೇಂದ್ರ, ಪರಿಧಿ, ವ್ಯಾಸ ಮತ್ತು ಅರ್ಧವೃತ್ತವನ್ನು ಗುರುತಿಸಿ.
- ವೃತ್ತವನ್ನು ನಿಖರವಾಗಿ ಅರ್ಧಕ್ಕೆ ಮಡಿಸಿ.
- ಮಡಿಸಿದ ರೇಖೆಯಲ್ಲಿ ವ್ಯಾಸವನ್ನು ಎಳೆಯಿರಿ ಮತ್ತು ಪ್ರತಿ ಅರ್ಧವನ್ನು ವಿಭಿನ್ನ ಬಣ್ಣದಿಂದ ಬಣ್ಣ ಮಾಡಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
- ವೃತ್ತಗಳನ್ನು ಎಳೆಯಲು ಮತ್ತು ಕತ್ತರಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಯಿತೇ?
- ಮಡಿಸಿದ ರೇಖೆ (ವ್ಯಾಸ) ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತಿದೆಯೇ?
- ಕೊಟ್ಟಿರುವ ವೃತ್ತಕ್ಕೆ ನೀವು ಎಷ್ಟು ವಿಭಿನ್ನ ರೀತಿಯಲ್ಲಿ ಅರ್ಧವೃತ್ತಗಳನ್ನು ಎಳೆಯಬಹುದು?