ದುರಾಸೆಯ ಇಲಿ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಇಲಿ ದೊಡ್ಡ ತಿಂಡಿಯನ್ನು ಬಿಲದೊಳಗೆ ತೆಗೆದುಕೊಂಡು ಹೋಗಲು ನೋಡುತ್ತದೆ. ದುರಾಸೆಯಿಂದ ಲಾಭವಿಲ್ಲ ಎಂದು ಕಲಿಯುತ್ತದೆ.
ಉದ್ದೇಶಗಳು :
ಮಕ್ಕಳಿಗೆ ಅತಿ ಆಸೆಯೇ ದುಖಃಕ್ಕೆ ಮೂಲ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ಆರೋಗ್ಯ ಮತ್ತು ಸ್ವಛ್ಛತೆಯ ಬಗ್ಗೆ ಮಕ್ಕಳಿಗೆ ಅರಿವುಮೂಡಿಸುವುದು.
ಕಥಾ ವಸ್ತು :ದುರಾಸೆ,ಆರೊಗ್ಯ ಮತ್ತು ಸ್ವಚ್ಚತೆ,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Duraaseya%20Ili.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಕಾಗೆ ಕರ್ರಗೆ ಕೊಕ್ಕರೆ ಕೊಕ್ಕರೆ ಬೆಳ್ಳಗೆ ಹಸಿರು ಕೊಂಪನೆ ಕೊಕ್ಕು ಹಸಿರಿನ ಗಿಳಿಗೆ, ಸಾವಿರ ಕಣ್ಣು ನವಿಲಿಗೆ, ಹಕ್ಕಿಗಳ ಜಾತ್ರೆ ಭೂಮಿಗೆ (ಹಾಡು)
ಆಲಿಸುವ ಪೂರ್ವದ ಚಟುವಟಿಕೆ
- ಮನೆಯಲ್ಲಿ ಇಟ್ಟಿರುವ ಕುರುಕಲು ತಿಂಡಿಗಳನ್ನ ಬಯಸಿ ಬರುವ ಪ್ರಾಣಿಗಳು ಯಾವುವು?
- ಇದರ ಕುರಿತಾಗಿ ಮಕ್ಕಳಿಗಿರುವ ಅನುಭವಗಳನ್ನು ಚರ್ಚಿಸುವುದು.
ಆಲಿಸುವ ಸಮಯದ ಚಟುವಟಿಕೆ
- ಇಲಿ ಆಹಾರವನ್ನು ತೆಗೆದುಕೊಂಡು ಹೋಗಲು ಏಕೆ ಸಾಧ್ಯವಾಗಲಿಲ್ಲ.
- ಇಲಿ ಆಹಾರವನ್ನು ತೆಗೆದುಕೊಂಡು ಹೋಗಲು ಏನು ಸಲಹೆಗಳನ್ನು ನೀಡುವಿರಿ?
- ಇಲಿ ಆಹಾರ ಉರುಳಿಸಲು ಏನು ಉಪಾಯ ಮಾಡುತ್ತದೆ.
ಆಲಿಸಿದ ನಂತರದ ಚಟುವಟಿಕೆ
- ನೀವು ಇಲಿಯಾಗಿದಿದ್ದರೆ ಏನು ಮಾಡುತ್ತಿದ್ದಿರಿ?
- “ಹಂಚಿದರೆ ಹಸಿವಿಲ್ಲ" “ಒಗ್ಗಟ್ಟಿನಲ್ಲಿ ಬಲವಿದೆ" “ಅತಿಯಾಸೆ ಗತಿಕೇಡು" ಗಾದೆಗಳಿಗೆ ಪ್ರಭಂದ ಬರೆಯಿರಿ.
- ಕಥೆಯನ್ನು ಇನ್ನಷ್ಟು ವಿಭಿನ್ನವಾಗಿ ರಚಿಸಿ ಹೇಳಲು ತಿಳಿಸುವುದು.
- ನೆಚ್ಚಿನ ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಲು ತಿಳಿಸುವುದು
- ಇಲಿಯ ಚಿತ್ರವನ್ನು ಬರೆಯಲು ತಿಳಿಸುವುದು.