ಓಜೋನ್ ಪದರು ನಾಶ : ಪರಿಸರದ ನಾಶ ಮನುಕುಲದ ವಿನಾಶ -- ಮಾರ್ಗೆಟ್ ಮಿಡ್ , ಓಜೋನ್ ಅನಿಲವು ಮೂರು ಆಮ್ಲಜನಕ ಅಣುಗಳಿಂದ ರಚನೆಗೊಂಡಿದೆ.ಇದು ಮಾರಕ ಅತಿನೇರಳೆ ಕಿರಣಗಳನ್ನು ಭೂಮಿಗೆ ಬಿಡದೆ ತಡೆಹಿಡಿದು ಕೇವಲ ಹಿತಕರ ಬೆಳಕನ್ನು ಮಾತ್ರ ಬೀಡುವುದರಿಂದ ಸಕಲ ಜೀವರಾಶಿಗಳನ್ನು ರಕ್ಷಿಸಿಸುತ್ತಿದೆ .ಇಂತಹ ಅಮೂಲ್ಯಜೀವರಕ್ಷಕ ಓಜೋನ್ ಪದರು 1985ರಲ್ಲಿ ಅಂಟಾರ್ಟಿಕ್ ಪ್ರದೇಶದಲ್ಲಿ ಸಾಕಷ್ಟು ಹಾಳಾಗಿದೆ.ಇಂದು ಮಾನವನ ಅತಿ ಬಳಕೆಯ ಭೋಗ ವಸ್ತುಗಳಿಂದಾಗಿ ನಶಿಸಿ ಹೋಗುತ್ತಿದೆ. ಓಜೋನ್ ಖಾರ ವಾಸನೆಯುಳ್ಳ ನೀಲಿ ಬಣ್ಣದ ವಿಷಕಾರಿ ಅನಿಲವು ವಾತಾವರಣದ ಸ್ಟ್ರಾಟೋಸ್ಪೀಯರ್ /ಸ್ತರಗೋಲದಲ್ಲಿ ಭೂಮಿಯಿಂದ 15-40 ಕಿಮೀ ಎತ್ತರದಲ್ಲಿದೆ.
+
ಓಜೋನ್ ಪದರು ನಾಶ ಹೇಗೆ ? : ಹವಾನಿಯಂತ್ರಿತ ಫ್ರಿಜ್ ಇತ್ಯಾದಿಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಅಣುಗಳು ಮೇಲೇರಿ ಓಜೋನ್ ಅನಿಲದ ಜೊತೆ ಸೇರಿಕೊಂಡು ಸಂಯೋಗ ಹೊಂದಿ ,ಕ್ಲೋರಿನ್ ಮೊನಾಕ್ಸೈಡ್ ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.ಅಗ ಬಿಡುಗಡೆಯಾದ ಕ್ಲೋರಿನ್ ಮೊನಾಕ್ಸೈಡ್ ಮತ್ತೊಂದು ಆಮ್ಲಜನಕದ ಜೊತೆ ಸಂಯೋಗ ಹೊಂದಿದಾಗ ,ಹೊಸದೊಂದು ಆಮ್ಲಜನಕ ಅಣು ಹಾಗೂ ಕ್ಲೋರಿನ್ ಪರಮಾಣು ಉತ್ಪತ್ತಿಯಾಗುತ್ತದೆ.ಈ ಕೊಲೆಗಡುಕ ಒಂದು ಕ್ಲೋರೀನ್ ಪರಮಾಣು 5 ಲಕ್ಷ ಓಜೋನ್ ಆಣುಗಳನ್ನು ನಾಶಗೊಳಿಸುತ್ತದೆ.