ಬದಲಾವಣೆಗಳು

Jump to navigation Jump to search
ಹೊಸ ಪುಟ: =ಅಲಂಕಾರಗಳು= ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸ...
=ಅಲಂಕಾರಗಳು=
ಮನುಷ್ಯನು ತಾನು ಚೆನ್ನಾಗಿ ಕಾಣಲು ಉಡಿಗೆ ತೊಡಿಗೆಗಳನ್ನು ಧರಿಸುವಂತೆ, ಕಾವ್ಯವು ಆಕರ್ಷಕವಾಗುವಂತೆ ಅರ್ಥವೈಚಿತ್ರ್ಯದಿಂದ ಕೂಡಿದ, ಶಬ್ದವೈಚಿತ್ರ್ಯದಿಂದ ಕೂಡಿದ ಮಾತುಗಳನ್ನು ಕಾವ್ಯಗಳಲ್ಲಿ ಪ್ರಯೋಗಿಸುತ್ತಾರೆ. ಇಂಥ ಮಾತುಗಳೇ ಅಲಂಕಾರಗಳು.

ಅರ್ಥವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಅದು ಅರ್ಥಾಲಂಕಾರ. ಶಬ್ದ ವೈಚಿತ್ರ್ಯದಿಂದ ಕಾವ್ಯದ ಸೊಬಗು ಹೆಚ್ಚಿದರೆ ಶಬ್ದಾಲಂಕಾರ.

ಕನ್ನಡದಲ್ಲಿ ಅಲಂಕಾರ ಗ್ರಂಥ ಬರೆದ ಲಾಕ್ಷಣಿಕರು ಮುಖ್ಯವಾಗಿ ನೃಪತುಂಗ, ನಾಗವರ್ಮ, ತಿರುಮಲಾರ‍್ಯ, ಜಾಯಪ್ಪದೇಸಾಯಿ ಮುಂತಾದವರು. ಇವರು ಕ್ರಮವಾಗಿ ಕವಿರಾಜಮಾರ್ಗ, ಕಾವ್ಯಾವಲೋಕನ, ಅಪ್ರತಿಮವೀರಚರಿತೆ, ಕನ್ನಡಕುವಲಯಾನಂದ-ಇತ್ಯಾದಿ ಗ್ರಂಥ ಬರೆದಿದ್ದಾರೆ.

[http://kanaja.in/archives/8485 ಅಲಂಕಾರದ ಬಗೆಗಿನ ವಿವರವಾದ ಮಾಹಿತಿಯನ್ನಜು ]ಕಣಜ ಅಂತರ್ಜಾಲ ಪುಟದಲ್ಲಿ ನೋಡಬಹುದು.

=ನವರಸಗಳು=
ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒಟ್ಟಾಗಿ '''ನವರಸ''' ಎಂದು ಕರೆಯುತ್ತಾರೆ. ಇದನ್ನು ಮೊದಲು ಭರತಮುನಿ ತನ್ನ ನಾಟ್ಯಶಾಸ್ತ್ರ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾನೆ. ಆಗವನು ಹೇಳಿದ್ದು ಎಂಟು ರಸಗಳ ಬಗ್ಗೆ. ಆನಂತರ ಬಂದ ಭಾಮಹನೆಂಬ ಲಾಕ್ಷಣಿಕ ಒಂಭತ್ತನೆ ರಸದ ಬಗ್ಗೆ ಹೇಳಿದ್ದಾನೆ. ನವರಸಗಳಲ್ಲಿ ಸ್ಥಾಯಿಭಾವಗಳು ಬಹಳ ಮುಖ್ಯ. ಸ್ಥಾಯಿಭಾವಗಳೆಂದರೆ ರಸಗಳ ಉತ್ಪತ್ತಿಗೆ ಕಾರಣೀಭೂತವಾಗಿ ಇರುವಂತಹವು.

==ಒಂಭತ್ತು ನವರಸಗಳು/ಸ್ಥಾಯಿಭಾವಗಳು ==

# ಶೃಂಗಾರಕ್ಕೆ ಸ್ಥಾಯಿಭಾವ ರತಿ
# ರುದ್ರದ ಸ್ಥಾಯಿಭಾವ ಕ್ರೋಧ
# ವೀರದ ಸ್ಥಾಯಿಭಾವ ಉತ್ಸಾಹ
# ಹಾಸ್ಯದ ಸ್ಥಾಯಿಭಾವ ಹಾಸ
# ಕರುಣೆಯ ಸ್ಥಾಯಿಭಾವ ಶೋಕ
# ಭೀಭತ್ಸದ ಸ್ಥಾಯಿಭಾವ ಜಿಗುಪ್ಸೆ
# ಅದ್ಭುತದ ಸ್ಥಾಯಿಭಾವ ವಿಸ್ಮಯ
# ಭಯಾನಕದ ಸ್ಥಾಯಿಭಾವ ಭಯ
# ಶಾಂತದ ಸ್ಥಾಯಿಭಾವ ಶಮ

ಸಂಚರಣೆ ಪಟ್ಟಿ