ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು. <br>ಮಾನವರ ಕಣ್ಣಿಗೆ ನಿಗದಿತ ವ್ಯಾಪ್ತಿಯಲ್ಲಿರುವ ಪುನರಾವರ್ತನೆಯ ಬೆಳಕಿನ ಕಿರಣಗಳು ಮಾತ್ರ ಗೋಚರಿಸುತ್ತವೆ. ಈ ವಿವಿಧ ಪುನಾರಾವರ್ತನೆ ಗಳನ್ನು ಮಾನವರ ಮೆದುಳು ಬೆಳಕಿನ ಬಣ್ಣವಾಗಿ ಅರ್ಥೈಸುತ್ತದೆ. ಹೀಗೆ, ಗೋಚರ ವ್ಯಾಪ್ತಿಯ ಅತಿ ಕಡಿಮೆ ಪುನರಾವರ್ತನೆಯ ಬೆಳಕು "ಕೆಂಪು" ಬಣ್ಣದ್ದಾಗಿ ಕಂಡು ಬಂದರೆ, ಈ ವ್ಯಾಪ್ತಿಯ ಅತಿ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು "ನೇರಳೆ" ಬಣ್ಣದ್ದಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ - ಈ ಬೆಳಕನ್ನು "ಅತಿನೇರಳೆ" ಎಂದು ಕರೆಯಲಾಗುತ್ತದೆ. ಹಾಗೆಯೇ, ಕೆಂಪು ಬೆಳಕಿಗಿಂತ ಕಡಿಮೆ ಪುನರಾವರ್ತನೆ ಹೊಂದಿರುವ ಬೆಳಕು ಸಹ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ- ಇದನ್ನು "ಅವೆಗೆಂಪು" ಎಂದು ಕರೆಯಲಾಗುತ್ತದೆ. <br> | ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.99 ಲಕ್ಷ ಕಿಮೀ. ಅನೇಕ ಭೌತಶಾಸ್ತ್ರಾಜ್ಜರು ಬೆಳಕಿನ ವೇಗದ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಈ ಆಧುನಿಕ ಫಲಿತಾಂಶವನ್ನು ಪಡೆಯಲಾಗಿದೆ. ಬೆಳಕಿನ ವೇಗವನ್ನು ಅಳೆಯಲು ಮೊದಲ ಮುಖ್ಯ ಪ್ರಯತ್ನ ನಡೆಸಿದವರು ಡೆನ್ಮಾರ್ಕ್ ನ ಓಲ್ ರೋಮರ್. ಗುರು ಗ್ರಹದ ಉಪಗ್ರಹಗಳ ಚಲನೆಯ ಲೆಕ್ಕಾಚಾರಗಳು ಹಾಗೂ ಪ್ರಾಯೋಗಿಕ ಅಳತೆಗಳು ಸರಿಯಾಗಿ ಹೊಂದಿಕೆಯಾಗದ್ದನ್ನು ಗಮನಿಸಿ, ಇದರ ಆಧಾರದ ಮೇಲೆ ಬೆಳಕಿನ ವೇಗ ಸುಮಾರು ಸೆಕೆಂಡಿಗೆ 2.27 ಲಕ್ಷ ಕಿಮೀ ಎಂದು ಅವರು ಪ್ರತಿಪಾದಿಸಿದರು. ಬೆಳಕಿನ ವೇಗವನ್ನು ಅಳೆಯಲು ನಡೆಸಲಾದ ಪ್ರಸಿದ್ಧ ಆಧುನಿಕ ಪ್ರಯೋಗ ಆಲ್ಬರ್ಟ್ ಮೈಕೇಲ್ ಸನ್ ಅವರದ್ದು - ಇದರಂತೆ ಬೆಳಕಿನ ವೇಗ ಸೆಕೆಂಡಿಗೆ ಸುಮಾರು 2.99 ಲಕ್ಷ ಕಿಮೀ ಎಂದು ಕಂಡುಹಿಡಿಯಲಾಯಿತು. <br>ಮಾನವರ ಕಣ್ಣಿಗೆ ನಿಗದಿತ ವ್ಯಾಪ್ತಿಯಲ್ಲಿರುವ ಪುನರಾವರ್ತನೆಯ ಬೆಳಕಿನ ಕಿರಣಗಳು ಮಾತ್ರ ಗೋಚರಿಸುತ್ತವೆ. ಈ ವಿವಿಧ ಪುನಾರಾವರ್ತನೆ ಗಳನ್ನು ಮಾನವರ ಮೆದುಳು ಬೆಳಕಿನ ಬಣ್ಣವಾಗಿ ಅರ್ಥೈಸುತ್ತದೆ. ಹೀಗೆ, ಗೋಚರ ವ್ಯಾಪ್ತಿಯ ಅತಿ ಕಡಿಮೆ ಪುನರಾವರ್ತನೆಯ ಬೆಳಕು "ಕೆಂಪು" ಬಣ್ಣದ್ದಾಗಿ ಕಂಡು ಬಂದರೆ, ಈ ವ್ಯಾಪ್ತಿಯ ಅತಿ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು "ನೇರಳೆ" ಬಣ್ಣದ್ದಾಗಿ ತೋರುತ್ತದೆ. ಇದಕ್ಕಿಂತ ಹೆಚ್ಚು ಪುನರಾವರ್ತನೆ ಹೊಂದಿರುವ ಬೆಳಕು ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ - ಈ ಬೆಳಕನ್ನು "ಅತಿನೇರಳೆ" ಎಂದು ಕರೆಯಲಾಗುತ್ತದೆ. ಹಾಗೆಯೇ, ಕೆಂಪು ಬೆಳಕಿಗಿಂತ ಕಡಿಮೆ ಪುನರಾವರ್ತನೆ ಹೊಂದಿರುವ ಬೆಳಕು ಸಹ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ- ಇದನ್ನು "ಅವೆಗೆಂಪು" ಎಂದು ಕರೆಯಲಾಗುತ್ತದೆ. <br> |