ಹರಿಹರನು ಗಿರಿಜಾಕಲ್ಯಾಣ ಎಂಬ ಚಂಪೂಕಾವ್ಯವನ್ನೂ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಆಷ್ಟಕ ಮತ್ತು ಅನೇಕ ಶಿವಶರಣರ ರಗಳೆಗಳನ್ನೂ ರಚಿಸಿದ್ದಾನೆ. ಅಲ್ಲದೆ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ. | ಹರಿಹರನು ಗಿರಿಜಾಕಲ್ಯಾಣ ಎಂಬ ಚಂಪೂಕಾವ್ಯವನ್ನೂ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಆಷ್ಟಕ ಮತ್ತು ಅನೇಕ ಶಿವಶರಣರ ರಗಳೆಗಳನ್ನೂ ರಚಿಸಿದ್ದಾನೆ. ಅಲ್ಲದೆ "ರಗಳೆಗಳ ಕವಿ" ಎಂದೆ ಪ್ರಸಿದ್ಧನಾಗಿದ್ದಾನೆ. ಹನ್ನೆರಡನೆಯ ಶತಮಾನದ ಬಹು ಮಹತ್ವದ ಶರಣ ಚಳವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಆತನು ಭಕ್ತ ಕವಿ. ಆತನ ಕಾವ್ಯದ ತುಂಬ ಭಕ್ತಿಯು ಓತಪ್ರೋತವಾಗಿ ಹರಿದಿದೆ. ಹರಿಹರನ ಎರಡೂ ಶತಕಗಳಲ್ಲಿ ಆತನು ಹಂಪೆಯ ಶ್ರೀ ವಿರೂಪಾಕ್ಷನಲ್ಲಿ ತಳೆದಿರುವ ಭಕ್ತಿಯು ಎದ್ದು ಕಾಣುತ್ತದೆ. ಅಂತೆಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ. |