೧ ನೇ ಸಾಲು: |
೧ ನೇ ಸಾಲು: |
− | ದ
| + | == ಸಾರಾಂಶ == |
| + | ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. |
| + | |
| + | ಫೆಸಿಲಿಟೇಟರ್ - ಅಪರ್ಣ |
| + | |
| + | ಕೊ-ಫೆಸಿಲಿಟೇಟರ್ಗಳು -ಶ್ರೇಯಸ್, ಅನುಷಾ, ಕಾರ್ತಿಕ್ |
| + | |
| + | == ಊಹೆಗಳು == |
| + | • ಪರೀಕ್ಷೆಗಳ ಬಗ್ಗೆ ಭಯ/ಆತಂಕ ಶುರುವಾಗಿರಬಹುದು. |
| + | |
| + | • ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ |
| + | |
| + | • ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ |
| + | |
| + | • ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ |
| + | |
| + | • ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ |
| + | |
| + | • ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ |
| + | |
| + | • ನಮ್ಮ ಸೆಷನ್ ಸಫಲವಾಗಲು ರುತು ತರಹದ ಕಿಶೋರಿಯಿಲ್ಲ ಹಾಗೂ ಇಲ್ಲಿ ಭಯವಿಲ್ಲದೆ ಮಾತನಾಡುವ ಕಿಶೋರಿಯರು ಸ್ಪಂದಿಸುತ್ತಾರೆಂದು ಆಶಿಸುತ್ತೇವೆ. |
| + | |
| + | • ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ |
| + | |
| + | • ಶಾಲೆಗೆ ಎಂದು ಹೇಳಿ ಪಾರ್ಕಿಗೆ ಹೋಗುವ, ಶಾಲೆಯ ನಂತರ ಸಮವಸ್ತ್ರ ಬದಲಿಸಿ ಸಿಂಗರಿಸಿಕೊಂಡು ಹುಡುಗರೊಂದಿಗೆ ಹೋಗುವ ಕಿಶೋರಿಯರು ಇದ್ದಾರೆ. |
| + | |
| + | == ಉದ್ದೇಶ == |
| + | ಕಿಶೋರಾವಸ್ಥೆಯ ಪರಿಚಯ ಮತ್ತು ವ್ಯಾಖ್ಯಾನವನ್ನು ಆರಂಭಿಸುವುದು |
| + | |
| + | == ಪ್ರಕ್ರಿಯೆ == |
| + | ಕಿಶೋರಿಯರ ಕುಶಲೋಪರಿಯನ್ನು ವಿಚಾರಿಸುವ ಮೂಲಕ ಮಾತುಕಥೆಯನ್ನು ಆರಂಭಿಸುವುದು. |
| + | |
| + | ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. '''(೧೦ ನಿಮಿಷ)''' |
| + | |
| + | ಹಿಂದಿನ ವಾರದ ಮಾತುಕತೆಯನ್ನು ನೆನಪಿಸುವುದು. ಈ ಕೆಳಗಿನ ೩ ಚಿತ್ರಗಳನ್ನು ತೆಗೆದುಕೊಂಡು ಹೋಗಿರುವುದು.. |
| + | |
| + | 1. ಒಂದು ಮಗುವಿನ ಚಿತ್ರ |
| + | |
| + | 2. ಎರಡು ಕಿಶೋರಿಯರ ವಯಸ್ಸಿನ ಹುಡುಗಿಯ ಚಿತ್ರ |
| + | |
| + | ಮುಖ್ಯ ಫೆಸಿಲಿಟೇಟರ್ “ಈ ಚಿತ್ರಗಳಲ್ಲಿ ನಿಮ್ಮನ್ನ ಯಾವ ಚಿತ್ರಕ್ಕೆ ಹೋಲಿಕೆ ಮಾಡ್ಕೋತೀರಾ?” ಎಂದು ಕೇಳುವುದು. |
| + | |
| + | ಕಿಶೋರಿಯರು ಒಂದು ಚಿತ್ರವನ್ನು ಹೇಳಿದಾಗ."ಏಕೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು. |
| + | |
| + | • ಒಂದೇ ವಯಸ್ಸು. |
| + | |
| + | • ಒಂದೇ ತರಹದ ಸಮಸ್ಯೆಗಳು. |
| + | |
| + | • ಒಂದೇ ತರಹದ ಸನ್ನಿವೇಶಗಳು. |
| + | |
| + | • ಅವರಿಗೆ ಆಗಿರೋದೆಲ್ಲಾ ನಮಗೂ ಅಗುತ್ತೆ. '''(೧೫ ನಿಮಿಷ)''' |
| + | |
| + | ====== ಉಪಸಂಹಾರ ====== |
| + | ಹದಿಹರೆಯದ ವ್ಯಾಖ್ಯಾನದ ಬಗ್ಗೆ ಮಾಡಿರುವ ಪ್ರಸ್ತುತಿಯನ್ನು ಉಪಯೋಗಿಸಿಕೊಂಡು ಫೆಸಿಲಿಟೇಟರ್ ಈ ಕೆಳಗಿನ ಅಂಶಗಳನ್ನು ಹೇಳಬಹುದು. ಹೇಳುವ ರೀತಿ ವಿಧಾನಗಳು ಸನ್ನಿವೇಶಕ್ಕೆ ತಕ್ಕಂತೆ ಬದಲಾಗಬಹುದು. |
| + | |
| + | ಹಿಂದಿನ ವಾರಗಳಲ್ಲಿ ನಿಮ್ಮ ಜೊತೆ ಮಾತನಾಡಿದಾಗ ಬೇರೆ ಬೇರೆ ಸಮಸ್ಯೆಗಳನ್ನು ಗುರುತಿಸಿದ್ದೇವೆ. |
| + | |
| + | ಉದಾಹರೆಣೆಗೆ |
| + | |
| + | • ಸ್ಕೂಲಿನಿಂದ ಹೋಗುವಾಗ ರೇಗಿಸುತ್ತಾರೆ |
| + | |
| + | • ಬಸ್ನಲ್ಲಿ ಕಾಲು ತುಳಿಯುತ್ತಾರೆ. |
| + | |
| + | ಹಾಗೂ, ಈ ಸಮಸ್ಯೆಗಳು ಕೇವಲ ನಮ್ಮದೊಂದೇ ಅಲ್ಲ, ಎಲ್ಲರದ್ದೂ ಅಂತ ತಿಳಿದುಕೊಂಡಿದ್ದೇವೆ. |
| + | |
| + | ಆಮೇಲೆ ಹಿಂದಿನ ವಾರ ಪಾತ್ರಾಭಿನಯಗಳ ಮಾಡಿದ್ದೆವು. ಈ ಪಾತ್ರಾಭಿನಯಗಳ ಮೂಲಕ ಹಾಗೂ ಗುಂಪಿನ ಚರ್ಚೆಗಳ ಮೂಲಕ ಯಾವ ವಯಸ್ಸಿನ ಹೆಣ್ಣುಮಕ್ಕಳಿಗೆ ಪಾತ್ರಾಭಿನಯಗಳಲ್ಲಿ ಹೇಳಿರುವ ಸಮಸ್ಯೆಗಳು ಬರಬಹುದು ಅಂತ ಗುರುತಿಸಿದ್ದೇವೆ. |
| + | |
| + | ಆಮೇಲೆ ನೀವು ಹೇಳಿದ ಹಾಗೆ ಇವರೆಲ್ಲಾ ನಿಮ್ಮ ವಯಸ್ಸಿನ ಹುಡುಗಿಯರೇ ಅಂತ. |
| + | |
| + | ೧೨ ವರ್ಷಕ್ಕಿಂತ ಕಮ್ಮಿ ವಯಸ್ಸನ್ನ ಬಾಲ್ಯಾವಸ್ಥೆ ಅಂತ ಹೇಳಬಹುದು. ೧೯ ವರ್ಷಕ್ಕಿಂತ ಜಾಸ್ತಿ ವಯಸ್ಸನ್ನ ಪ್ರೌಢಾವಸ್ಥೆ ಅಂತ ಹೇಳಬಹುದು. ಹಾಗೇ ಆ ಮಧ್ಯದಲ್ಲಿ ಇರುವ ೧೨- ೧೯ ವಯಸ್ಸು. ಅದನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು. |
| + | |
| + | ಈ ವಯಸ್ಸನ್ನೇ ಅಥವಾ ನಿಮ್ಮ ವಯಸ್ಸನ್ನೇ ಕಿಶೋರಾವಸ್ಥೆ ಅಂತ ಹೇಳಬಹುದು. |
| + | |
| + | ಇದನ್ನ ಹದಿಹರೆಯ, ಟೀನೇಜ್ ಎಂದು ಹೇಳಬಹುದು. |
| + | |
| + | ನಾವು ತರಗತಿಯಲ್ಲಿ ಏನೆಂದು ಕರೆಯೋಣ ಎಂದು ನಿರ್ಧರಿಸಿಕೊಳ್ಳುತ್ತೇವೆ. |
| + | |
| + | ನಿಮಗೆ ಗೊತ್ತಿರುವ ಹಾಗೆ, ಟೀನೇಜ್ನಲ್ಲಿ, ಶಾರೀರಿಕ ಬದಲಾವಣೆ, ಮಾನಸಿಕ ಹಾಗೂ ಬೌಧ್ಧಿಕ ಬದಲಾವಣೆಗಳು ಅಗುತ್ತವೆ. ಇದು ಹುಡುಗೀರಿಗೊಂದೇ ಅಲ್ಲ. ಹುಡುಗರಿಗೂ ಆಗುತ್ತವೆ. |
| + | |
| + | ಶಾರೀರಿಕವಾಗಿ, ಎತ್ತರ ಜಾಸ್ತಿ ಆಗಬಹುದು. ಬೇರೆ ಬೇರೆ ವಯಸ್ಸಲ್ಲಿ ದೊಡ್ಡೋರಾಗಬಹುದು. ಹುಡುಗರಿಗೆ ಧ್ವನಿ ಗಡಸು ಆಗಬಹುದು. |
| + | |
| + | ಮಾನಸಿಕ ಬದಲಾವಣೆಗಳನ್ನು ನೋಡಿದರೆ, ನಮ್ಮ ಉಡುಪಿನ ಶೈಲಿ ಬದಲಾಗಬಹುದು. ನಾವು ಯಾವ ಥರ ಬಟ್ಟೆ ತೊಡಬೇಕು, ಕೂದಲು ಯಾವ ಥರ ಇರಬೇಕು ಎಂದು ನಾವೇ ಯೋಚಿಸಲು ಶುರು ಮಾಡಿರಬಹುದು. |
| + | |
| + | ಯಶ್, ದರ್ಶನ್, ವಿಜಯ್ ಎಲ್ಲಾ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು. |
| + | |
| + | ಅಥವಾ ಗಂಡುಮಕ್ಕಳಿಗೆ ರಚಿತಾ ರಾಮ್, ತಮನ್ನಾ, ದೀಪಿಕಾ ಪಡುಕೋಣೆ ಚಿತ್ರಗಳಲ್ಲಿ ನೋಡಿದರೆ, "ಎಷ್ಟು ಚೆನ್ನಾಗಿದಾರಲ್ಲಾ?” ಅಂತ ಅನ್ನಿಸಬಹುದು. |
| + | |
| + | ಬೌಧ್ಧಿಕವಾಗಿ ಕೆಲವೊಂದು ವಿಷಯಗಳು ಅರ್ಥ ಆಗಲು ಶುರು ಆಗಬಹುದು. |
| + | |
| + | ಮೂವಿ ಕಥೆ ಮೊದಲು ಅರ್ಥ ಆಗ್ತಾ ಇರಲಿಲ್ಲ, ಈಗ ಅರ್ಥ ಆಗುತ್ತೆ. ಪರಿಸರ, ಮಾಲಿನ್ಯದ ಬಗ್ಗೆ ಅರ್ಥ ಆಗುತ್ತದೆ. |
| + | |
| + | ಹೀಗೇ ಹಲವಾರು ಬದಲಾವಣೆಗಳು ನಮ್ಮಲ್ಲಿ ಆಗಬಹುದು. |
| + | |
| + | ಇವುಗಳನ್ನೆಲ್ಲ ಒಟ್ಟು ಸೇರಿಸಿ ನಾವು ಅದನ್ನ ಟೀನೇಜ್ ಅಂತ ಕರೆಯಬಹುದೆ? ಎಂದು ಕೇಳುವುದು. |
| + | |
| + | ಹೌದು ಎಂದು ಕಿಶೋರಿಯರು ಹೇಳಬಹುದು. |
| + | |
| + | ಇಷ್ಟು ಹೇಳಿ ಮಾತುಕತೆಯನ್ನು ಮುಗಿಸುತ್ತೇವೆ. (೨೫ ನಿಮಿಷ) |
| + | |
| + | == ಬೇಕಾಗಿರುವ ಸಂಪನ್ಮೂಲಗಳು == |
| + | • ಕಂಪ್ಯೂಟರ್ |
| + | |
| + | • ಪ್ರೊಜೆಕ್ಟರ್ |
| + | |
| + | == ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು ೩ == |
| + | |
| + | == ಒಟ್ಟು ಸಮಯ == |
| + | ೫೦ ನಿಮಿಷಗಳು |
| + | |
| + | == ಇನ್ಪುಟ್ಗಳು == |
| + | • ಹದಿಹರೆಯದ ವ್ಯಾಖ್ಯಾನದ ಪ್ರಸ್ತುತಿ |
| + | |
| + | == ಔಟ್ಪುಟ್ಗಳು == |