ವೃತ್ತಿಪರವಾಗಿ ಬೆಳೆಯಬೇಕಾದರೆ, ಶಿಕ್ಷಣದ ತಿರುಳಾದ ತರಗತಿಯಲ್ಲಿನ ಆಚರಣೆಗಳನ್ನು ಸುಧಾರಿಸಿಕೊಳ್ಳುವುದು ಅಗತ್ಯ. ಇದಕ್ಕೆ ನಮ್ಮ ಆಚರಣೆಗಳನ್ನು ಬೇರೊಬ್ಬರು ಅವಲೋಕಿಸಿ ವಿಮರ್ಶಿಸುವುದಕ್ಕಿಂತ, ನಮ್ಮ ಆಚರಣೆಗಳನ್ನು ನಾವೇ ಅವಲೋಕಿಸಿ ವಿಮರ್ಶಿಸಿಕೊಂಡರೆ ಬೋಧನೆ - ಕಲಿಕೆಯು ನಮ್ಮ ನೆಲೆಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗುಣಮಟ್ಟದ ಕಲಿಕೆಯನ್ನು ಮಕ್ಕಳು ಸಾಧಿಸುವಲ್ಲಿ ಪ್ರೇರಕ ಪೂರಕವಾಗುತ್ತದೆ. ಇದಕ್ಕಾಗಿ ವ್ಯಯಿಸಬೇಕಾದ ಸಮಯ ಹೆಚ್ಚೇನಿಲ್ಲ. ಬೇರೆಲ್ಲ ಯೋಚನೆಗಳನ್ನು ಬದಿಗೊತ್ತಿ ವಿರಾಮ ಅನುಭವಿಸುವಾಗ ಈ ದಿನದ ತರಗತಿಯಲ್ಲಿನ ಆಚರಣೆಗಳ ಬಗ್ಗೆ ಪರ್ಯಾಲೋಚನೆ ನಡೆಸಬೇಕು. ಏನು ಮಾಡಿದೆ? ಹೇಗೆ ಮಾಡಿದೆ? ಇದರ ಪರಿಣಾಮ ಏನಾಯಿತು? ಏಕೆ ಹೀಗಾಯಿತು? ನಾನಂದುಕೊಂಡಂತೆ ಆಯಿತೆ? ಇಲ್ಲವಾದರೆ ಏಕೆ? ಹಾಗೆ ಆಗಬೇಕಾದರೆ ಮುಂದಿನ ನಡೆಯೇನು? ಈ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವುದಲ್ಲದೆ ಅದಕ್ಕೆ ಉತ್ತರ ಪಡೆಯುವುದೂ ಅಗತ್ಯ. ಇದನ್ನು "ಸ್ವ-ಅವಲೋಕನ", "ಸ್ವ-ವಿಮರ್ಶೆ ಹೇಗಾದರೂ ಕರೆಯಿರಿ. ಇದಕ್ಕೆ ಪೂರಕವಾಗಿ ಒಂದು ಪಶ್ನಾವಳಿ ಹಾಗೂ ಅದರ ಕೀಲಿ ಕೈ ಕೊಡುವ ಪ್ರಯತ್ನ ಇಲ್ಲಿದೆ. ಈ ಪ್ರಶ್ನಾವಳಿಗೆ ಹೆಚ್ಚಿನ ಪ್ರಶ್ನೆಗಳನ್ನು ಸೇರಿಸುವ ಸ್ವಾತಂತ್ರ ನಮಗಿದೆ. | ವೃತ್ತಿಪರವಾಗಿ ಬೆಳೆಯಬೇಕಾದರೆ, ಶಿಕ್ಷಣದ ತಿರುಳಾದ ತರಗತಿಯಲ್ಲಿನ ಆಚರಣೆಗಳನ್ನು ಸುಧಾರಿಸಿಕೊಳ್ಳುವುದು ಅಗತ್ಯ. ಇದಕ್ಕೆ ನಮ್ಮ ಆಚರಣೆಗಳನ್ನು ಬೇರೊಬ್ಬರು ಅವಲೋಕಿಸಿ ವಿಮರ್ಶಿಸುವುದಕ್ಕಿಂತ, ನಮ್ಮ ಆಚರಣೆಗಳನ್ನು ನಾವೇ ಅವಲೋಕಿಸಿ ವಿಮರ್ಶಿಸಿಕೊಂಡರೆ ಬೋಧನೆ - ಕಲಿಕೆಯು ನಮ್ಮ ನೆಲೆಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗುಣಮಟ್ಟದ ಕಲಿಕೆಯನ್ನು ಮಕ್ಕಳು ಸಾಧಿಸುವಲ್ಲಿ ಪ್ರೇರಕ ಪೂರಕವಾಗುತ್ತದೆ. ಇದಕ್ಕಾಗಿ ವ್ಯಯಿಸಬೇಕಾದ ಸಮಯ ಹೆಚ್ಚೇನಿಲ್ಲ. ಬೇರೆಲ್ಲ ಯೋಚನೆಗಳನ್ನು ಬದಿಗೊತ್ತಿ ವಿರಾಮ ಅನುಭವಿಸುವಾಗ ಈ ದಿನದ ತರಗತಿಯಲ್ಲಿನ ಆಚರಣೆಗಳ ಬಗ್ಗೆ ಪರ್ಯಾಲೋಚನೆ ನಡೆಸಬೇಕು. ಏನು ಮಾಡಿದೆ? ಹೇಗೆ ಮಾಡಿದೆ? ಇದರ ಪರಿಣಾಮ ಏನಾಯಿತು? ಏಕೆ ಹೀಗಾಯಿತು? ನಾನಂದುಕೊಂಡಂತೆ ಆಯಿತೆ? ಇಲ್ಲವಾದರೆ ಏಕೆ? ಹಾಗೆ ಆಗಬೇಕಾದರೆ ಮುಂದಿನ ನಡೆಯೇನು? ಈ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವುದಲ್ಲದೆ ಅದಕ್ಕೆ ಉತ್ತರ ಪಡೆಯುವುದೂ ಅಗತ್ಯ. ಇದನ್ನು "ಸ್ವ-ಅವಲೋಕನ", "ಸ್ವ-ವಿಮರ್ಶೆ ಹೇಗಾದರೂ ಕರೆಯಿರಿ. ಇದಕ್ಕೆ ಪೂರಕವಾಗಿ ಒಂದು ಪಶ್ನಾವಳಿ ಹಾಗೂ ಅದರ ಕೀಲಿ ಕೈ ಕೊಡುವ ಪ್ರಯತ್ನ ಇಲ್ಲಿದೆ. ಈ ಪ್ರಶ್ನಾವಳಿಗೆ ಹೆಚ್ಚಿನ ಪ್ರಶ್ನೆಗಳನ್ನು ಸೇರಿಸುವ ಸ್ವಾತಂತ್ರ ನಮಗಿದೆ. |