ಅ) ಅನುರೂಪತೆ : ಒಂದೇ ಭ್ರೂಣದಿಂದ ಉತ್ಪತ್ತಿಯಾದ ಒಂದೇ ರೀತಿಯ ರಚನೆಯನ್ನು ಹೊಂದಿದ ಹಾಗೂ ಒಂದೇ ಬಗೆಯ ಕಾರ್ಯವನ್ನು ನಿರ್ವಹಿಸುವ ಇಲ್ಲವೇ ನಿರ್ವಹಿಸದಿರುವ ಅವಯವಗಳಿಗೆ ಅನುರೂಪದ ಅವಯವಗಳೆಂದು ,ಈ ಸಂಗತಿಯನ್ನು ಅನುರೂಪತೆ ಎನ್ನುವರು .ಒಂದೇ ವಂಶದ ಪ್ರಾಣಿಗಳ ನಡುವಿನ ಇಲ್ಲವೆ ರಚನೆಯಲ್ಲಿಯ ಹೋಲಿಕೆಯನ್ನು ಅನುರೂಪತೆ ಎನ್ನುವರು.
+
ಉದಾಹರಣೆ : ಕಶೇರುಕಗಳ ಕೈ-ಕಾಲುಗಳ ರಚನೆಯ ನಕ್ಷೆಯು ಒಂದೇ ತೆರನಾಗಿದೆ.ಆದರೆ ಅವು ನಿರ್ವಹಿಸುವ ಕಾರ್ಯಕ್ಕಗನುಗುಣವಾಗಿ ಮಾರ್ಪಾಟನ್ನು ಹೊಂದಿರುತ್ತವೆ.
ಕಶೆರುಕಗಳ ಮುಂಗಾಲಿನ ರಚನೆ --- ಹುಮೆರಸ್ , ರೇಡಿಯಸ್ , ಆಲ್ನ, ಕಾರ್ಪಲ್,ಮೆಟಾ ಕಾರ್ಪಲ್ಸ್ ಮತ್ತು ಫೆಲೆಂಜಿಸ್ ಎಂಬ ಮೂಳೆಗಳಿವೆ. ಉಭಯ ಜೀವಿಗಳು , ಸರೀಸೃಪಗಳು ,ಪಕ್ಷಿಗಳು ,ಸಸ್ತನಿಗಳು ಪುರಾತನ "ಮತ್ಸ್ಯ ಪೂರ್ವಕ "ವನ್ನು ತಮ್ಮ ಮೂಲಪುರಷನನ್ನಾಗಿ ಹೊಂದಿವೆ.
+
<br><br>
+
ಆ) ಸಾದೃಶ್ಯತೆ : ಜೀವವಿಕಾಸದ ರೂಪ ಹಾಗೂ ಅಂಗರಚನಾಶಾಸ್ತ್ರದಿಂದ ದೊರೆತ ಸಾಕ್ಷಿಗಳ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಗಮನಿಸಿದಾಗ ವಿಭಿನ್ನ ರಚನೆಯನ್ನು ಹೊಂದಿದ ಬೇರೆ ಬೇರೆ ಮೂಲಗಳಿಂದ ಉತ್ಪತ್ತಿಯಾದ ಅವಯವಗಳು ಒಂದೇ ಬಗೆಯ ಕಾರ್ಯನಿರ್ವಹಿಸುವ ಅವಯವಗಳನ್ನು ಸಾದೃಶ್ಯದ ಅವಯವಗಳೆಂದೂ ,ಈ ಸಂಗತಿಯನ್ನು ಸಾದೃಶ್ಯತೆ ಎನ್ನುವರು.ಉದಾಹರಣೆ : ಕೀಟ ,ಪಕ್ಷಿ ಮತ್ತು ಬಾವಲಿ (ಸಸ್ತನಿ) ಯಲ್ಲಿ ಕಂಡುಬರುವ ರೆಕ್ಕೆಗಳ ಕ್ರಿಯೆ ಒಂದೇ ಆಗಿದ್ದು ರಚನೆ ಮಾತ್ರ ಭಿನ್ನವಾಗಿದೆ. ಈ ಬಗೆಯ ಜೀವವಿಕಾಸವನ್ನು "ಅಭಿಸರಣ ಜೀವವಿಕಾಸ" ಎಂದು ಕರೆಯುತ್ತಾರೆ.