ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. | ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. |