೧ ನೇ ಸಾಲು:
೧ ನೇ ಸಾಲು:
=ಡಯಟ್ ಪ್ರಾಂಶುಪಾಲರುಗಳಿಗೆ ಐ.ಸಿ.ಟಿ ಆಧಾರಿತ ಸಾಮರ್ಥ್ಯಾಭಿವೃದ್ದಿ ಕಾರ್ಯಾಗಾರ=
=ಡಯಟ್ ಪ್ರಾಂಶುಪಾಲರುಗಳಿಗೆ ಐ.ಸಿ.ಟಿ ಆಧಾರಿತ ಸಾಮರ್ಥ್ಯಾಭಿವೃದ್ದಿ ಕಾರ್ಯಾಗಾರ=
==ಪರಿಕಲ್ಪನಾ ಟಿಪ್ಪಣಿ==
==ಪರಿಕಲ್ಪನಾ ಟಿಪ್ಪಣಿ==

===ಹಿನ್ನೆಲೆ===

[ಡಯಟ್ ಪ್ರಾಂಶುಪಾಲರ ಕಾರ್ಯಾಗಾರದ ಬಗೆಗಿನ ಪರಿಕಲ್ಪನಾ ಟಿಪ್ಪಣಿಯನ್ನು ಓದಲು[http://karnatakaeducation.org.in/KOER/images1/c/ce/1._Note_on_DIET_Principals_Workshop_2016_-_draft.odt ಇಲ್ಲಿ ಕ್ಲಿಕ್ ಮಾಡಿ]

ಶಿಕ್ಷಕರ ಶಿಕ್ಷಣ ಕಾರ್ಯಕ್ರಮದ ಪರಿಕಲ್ಪನೆಗಳಲ್ಲಿ "ಬೋಧಕ ಶಿಕ್ಷಕರ ಸಮುದಾಯ" (Community of Practitioners-COP) ವನ್ನು ಬಲಗೊಳಿಸುವುದರ ಮೂಲಕ ಡಯಟ್ ಅಧಿಕಾರಿಗಳನ್ನು ಶೈಕ್ಷಣಿಕವಾಗಿ ಸಹವರ್ತಿ ಕಲಿಕೆಯಲ್ಲಿ ತೊಡಗಲು ಪ್ರೋತ್ಸಾಹಿಸಬೇಕಿದೆ. ಮೊಬೈಲ್ ಮತ್ತು ಕಂಪ್ಯೂಟರ್ ಗಳ ಮೂಲಕ ತಂತ್ರಜ್ಞಾನಾಧಾರಿತ ವೇದಿಕೆಗಳಲ್ಲಿ ಡಯಟ್ ಅಧಿಕಾರಿಗಳು ಭಾಗವಹಿಸುವ ಮೂಲಕ ಸಾಂಸ್ಥಿಕ ಪ್ರಕ್ರಿಯೆಗಳು, ಶೈಕ್ಷಣಿಕ ವಿಚಾರಗಳು, ಸಂಪನ್ಮೂಲಗಳಲನ್ನು ಡಯಟ್ ಅಧಿಕಾರಿಗಳ ನಡುವೆ, ಸಹಯೋಜಿತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ಡಯಟ್‌ಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ನಾಯಕತ್ವವನ್ನು ಬಲಗೊಳಿಸುವಲ್ಲಿ ತಂತ್ರಜ್ಞಾನ ಹೇಗೆ ಸಹಕಾರಿಯಾಗುವುದು ಎಂಬುದನ್ನು ತಿಳಿಯುವುದು ಹಾಗು "ಭೋದಕ ಶಿಕ್ಷಕರ ಸಮುದಾಯ" ಚಟುವಟಿಕೆಯಲ್ಲಿ ಭಾಗವಹಿಸುವುದು ಹಾಗು ಸಂಸ್ಥೆಯ ಅಧಿಕಾರಿಗಳ ಕಾರ್ಯಚಟುವಟಿಕೆಗಳಲ್ಲಿ ಸೂಕ್ತ ಮಾರ್ಗದರ್ಶ ನೀಡಲು ಸಾಧ್ಯವಾಗುವಂತಹ ಆಂತರಿಕ ಇಮೇಲ್ ಮತ್ತು ಮೊಬೈಲ್ ಪೋನ್ ಆಧಾರಿತ ವೇದಿಕೆಗಳನ್ನು ರಚಿಸಿಕೊಳ್ಳಬಹುದಾಗಿದೆ. ( ಇಮೇಲ್, ವಾಟ್ಸಪ್ ಇತ್ಯಾದಿ)

ಹಾಗೆಯೇ, ರಾಜ್ಯಮಟ್ಟದಲ್ಲಿ ಆರ್.ಎಂ.ಎಸ್.ಎ ಮತ್ತು ಡಿ.ಎಸ್.ಇ.ಆರ್.ಟಿ ವತಿಯಿಂದ ಜಾರಿಗೆ ಬರುವ ಎಲ್ಲಾ ಶೈಕ್ಷಣಿಕ ಚಟುವಟಿಗಳನ್ನು ಜಿಲ್ಲಾ ಹಂತದಲ್ಲಿ ಅನುಷ್ಟಾನಗೊಳಿಸುವಲ್ಲಿ ಜಿಲ್ಲಾ ಡಯಟ್‌ಗಳು ಪ್ರಮುಖ ಪಾತ್ರವಹಿಸುತ್ತವೆ. . ಈ ಹಂತದಲ್ಲಿ ಸಂಸ್ಥೆಯ ನಾಯಕರ ಪಾತ್ರ ಬಹಳ ಮಹತ್ವದ್ದಾಗಿದ್ದು, ರಾಜ್ಯಮಟ್ಟದಲ್ಲಿ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ಅನುಷ್ಟಾನ ಸಂಬಂಧಿತ ಪ್ರಕ್ರಿಯೆಯ ಜವಾಬ್ದಾರಿ ಡಯಟ್ ಪ್ರಾಂಶುಪಾಲರದ್ದಾಗಿರುತ್ತದೆ. ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಿಲ್ಲಾ ಹಂತದಲ್ಲಿ ಅನುಷ್ಟಾನಗೊಳಿಸಲು ಸಹಾಯಕವಾಗುವಂತೆ ಡಯಟ್ ಅಧಿಕಾರಿಗಳೊಡನೆ, ರಾಜ್ಯಮಟ್ಟದ ಅಧಿಕಾರಿಗಳೋಡನೆ ನಿರಂತರವಾಗಿ ಇಮೇಲ್‌ಗಳ ಮೂಲಕ ಸಂವಹನ/ಸಂಪರ್ಕ ನಡೆಸಲು, ಕಾರ್ಯಕ್ರಮಗಳ ಹಂತ ಹಂತದಲ್ಲಿ ಮಾಹಿತಿ / ಪ್ರಗತಿ ವರದಿಗಳನ್ನು ತಯಾರಿಸಲು, ಈ ವರದಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಲು, ಈ ವರದಿಗಳನ್ನು ನಿರಂತರವಾಗಿ ರಾಜ್ಯಮಟ್ಟದ ಕಛೇರಿಗಳಿಗೆ ಸೂಕ್ತ ನಮೂನೆಗಳಲ್ಲಿ ಸಲ್ಲಿಸುವಂತಹ ಚಟುವಟಿಕೆಗಳಲ್ಲಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರ ಬಹುತೇಕ ಸಮಯ ಬಳಕೆಯಾಗುತ್ತಿರುವುದನ್ನು ಕಾಣಬಹುದು.

ಪ್ರಸ್ತುತ ಸಂದರ್ಭದಲ್ಲಿ ಈ ಮೇಲಿನ ಎಲ್ಲಾ ಚಟುವಟಿಕೆಗಳನ್ನು ಸರಳೀಕರಿಸುವ ಅಗತ್ಯವಿದ್ದು, ಇದಕ್ಕಾಗಿ ವಿದ್ಯುನ್ಮಾನ ವಿಧಾನ ಮತ್ತು ತಂತ್ರಜ್ಞಾನ ಬಳಕೆ ಬಹಳ ಉಪಯುಕ್ತವಾಗಿದೆ.

ಇದರ ಜೊತೆಗೆ, ಜಿಲ್ಲಾ ಹಂತದ ಶೈಕ್ಷಣಿಕ ಸಂಸ್ಥೆಯಾದ ಡಯಟ್ ನಲ್ಲಿ ಪ್ರತೀ ಶೈಕ್ಷಣಿಕ ವರ್ಷಗಳಿಗೆ "ವಾರ್ಷಿಕ ಕ್ರಿಯೋ ಯೋಜನೆ" ತಯಾರಿಸುವಾಗ ಶಿಕ್ಷಕರ ಶಿಕ್ಷಣದ ಅಂಶಗಳನ್ನು ಒಳಗೊಳ್ಳಿಸುವುದು ಹಾಗು ಶಿಕ್ಷಕರ ಶಿಕ್ಷಣದ ಪರಿಕಲ್ಪನೆಗಳನ್ನು ಆಳವಾಗಿ ಅರ್ಥೈಸಿಕೊಂಡು, ಶಿಕ್ಷಕರ ಕಲಿಕಾ ಪ್ರಕ್ರಿಯೆಯಲ್ಲಿ ನಿರ್ಧಿಷ್ಟವಾದ ವಿಧಾನವನ್ನು ಅಳವಡಿಸಿಕೊಳ್ಳು ವುದು ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷಗಳ ಕ್ರಿಯಾ ಯೋಜನೆಗಳಲ್ಲಿ ಅನುಷ್ಟಾನಗೊಳ್ಳಿಸಬಹುದಾದ ಶಿಕ್ಷಕರ ಶಿಕ್ಷಣದ ಯೋಜನೆಗಳನ್ನು ಡಯಟ್ ಪ್ರಾಂಶುಪಾಲರುಗಳು ಒಟ್ಟುಗೂಡಿ ಚರ್ಚಿಸಿ ತಮ್ಮ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಬಹುದಾದ ವಿವಿಧ ಚಟುವಟಿಕೆಗಳನ್ನು ಹಂಚಿಕೊಳ್ಳಬೇಕಿದೆ.

ಡಯಟ್ ಪ್ರಾಂಶುಪಾಲರುಗಳು ಸಾಮನ್ಯ ಐ.ಸಿ.ಟಿ ಕೌಶಲವನ್ನು ತಮ್ಮ ವೃತ್ತಿ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾರ್ಯಯೋಜನೆಗಳಿಗೆ ಹಾಗು ಶೈಕ್ಷಣಿಕೆ ಚಟುವಟಿಕೆಗಳ ಮಾರ್ಗದರ್ಶನ ಪ್ರಕ್ರಿಯೆಗೆ ಪೂರಕವಾಗಿ, ಸುಲಭವಾಗಿ ಮಾಹಿತಿ ಸಂಗ್ರಹ, ಇಮೇಲ್ ಮೂಲಕ ಮಾಹಿತಿ ಹಂಚಿಕೆ ಮತ್ತು ಇತರರೊಡನೆ ಸಂವಹನ ಮತ್ತು ಅಂತರ್ಜಾಲದ ಮೂಲಕ ಪೂರಕ ಸಂಪನ್ಮೂಲಗಳನ್ನು ಪಡೆದುಕೊಳ್ಳಬಹುದು ಮತ್ತು ಎಸ್.ಟಿ.ಎಫ್ ಹಾಗು ಇತರೇ ಐ.ಸಿ.ಟಿ ಆಧಾರಿತ ಕಾರ್ಯಗಾರಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಬಹುದು.

ಈ ಮೇಲಿನ ಅಂಶಗಳಿಗಾಗಿ. ಡಯಟ್ ಗಳಲ್ಲಿನ ಕಾರ್ಯಚಟುವಟಿಕೆಗಳಲ್ಲಿ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳುವುದರ ಬಗ್ಗೆ ಡಯಟ್ ಪ್ರಾಂಶುಪಾಲರನ್ನು ಪ್ರೋತ್ಸಾಹಿಸಲು ಐ.ಸಿ.ಟಿ ಸಾಮರ್ಥ್ಯಾಭಿವೃದ್ದಿ ಕಾರ್ಯಗಾರವನ್ನು ಆಯೋಜಿಸಲಾಗುತ್ತಿದೆ.

===ಕಾರ್ಯಾಗಾರದ ಉದ್ದೇಶಗಳು===
===ಕಾರ್ಯಾಗಾರದ ಉದ್ದೇಶಗಳು===