"ಶಿಕ್ಷಣದ ಗುರಿಗಳು - ಎನ್‌ಸಿಎಫ್-2005" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೨೭ ನೇ ಸಾಲು: ೨೭ ನೇ ಸಾಲು:

#ಒಂದು ಮಗುವಿನ ಜೀವನದಲ್ಲಿ ಶಾಲಾ ಶಿಕ್ಷಣವು ಒಂದು ಉದ್ದೇಶ ಪೂರ್ವಕ ಹಾಗೂ ಬಾಹ್ಯ ಮಧ್ಯವರ್ತಿ (Intervention) ಯಾಗಿದೆ. ಶಾಲೆಯಲ್ಲಿ ಮಗುವಿಗೆ ಪರಿಚಯಿಸಲ್ಪಡುವ ಬೋಧನಾ ಕಲಿಕಾ ಪರಿಸರವು ಅದರ ಪರಿಸರದಿಂದ ಭಿನ್ನವಾಗಿರುತ್ತದೆ. ಶಾಲೆಗಳನ್ನು ಅದರ ಸುತ್ತಲಿನ ಸಮೂದಾಯದ ಜೀವನದೊಂದಿಗೆ ವಿಲೀನಗೊಳಿಸಲು ಸಾಧ್ಯವಿಲ್ಲದ ಕಾರಣ ಅದಕ್ಕೆ ಅದರದೇ ಆದ ಸೀಮೆಗಳಿರಬೇಕಾದದ್ದು ಸರಿಯಾದರೂ ಈ ಸೀಮೆಗಳೇ ಪ್ರತಿಬಂಧಕಗಳಾಗಬಾರದು. ಬದಲಿಗೆ ಅವು ಮಗುವಿನ ಮನೆ ಹಾಗೂ ಸಮೂದಾಯದಲ್ಲಿನ ಅನುಭವಕ್ಕೆ ಹಾಗೂ ಶಾಲೆಯಲ್ಲಿ ನೀಡುವ ಅನುಭವಕ್ಕೆ ಮಹತ್ವದ ಕೊಂಡಿಗಳನ್ನು ಸೃಷ್ಟಿಸಬೇಕು.

#ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ  ನಾವು  ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು.  ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ  ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು.

ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ  ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ  ಕೆಳಕಂಡ ಅಂಶಗಳನ್ನು  ಪರಿಗಣಿಸಬೇಕಾಗುತ್ತದೆ.

ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು.

'''ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?'''

- ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು.

#ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ  ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರುತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ  ಕೆಳಕಂಡ ಅಂಶಗಳನ್ನು  ಪರಿಗಣಿಸಬೇಕಾಗುತ್ತದೆ.

ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು.

'''ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?'''

- ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು.

- ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು.

- ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು.

- ಸತ್ಯದ ಒಲವನ್ನು ಅಗಾಧವಾಗಿ  ಅಂತರ್ಗತಗೊಳಿಸಿಕೊಳ್ಳುವುದರಿಂದ ಮಾತ್ರ  ಧೈರ್ಯ, ಸಂಯಮ, ಬುದ್ಧಿಶಕ್ತಿ ಇತ್ಯಾದಿ ಗುಣಗಳು ಒಟ್ಟಾಗಿ  ಸದ್ಗುಣಶೀಲ ಜೀವನದಲ್ಲಿ ಐಕ್ಯಗೊಳ್ಳಲು ಸಾಧ್ಯ.

- ಸತ್ಯದ ಒಲವನ್ನು ಅಗಾಧವಾಗಿ  ಅಂತರ್ಗತಗೊಳಿಸಿಕೊಳ್ಳುವುದರಿಂದ ಮಾತ್ರ  ಧೈರ್ಯ, ಸಂಯಮ, ಬುದ್ಧಿಶಕ್ತಿ ಇತ್ಯಾದಿ ಗುಣಗಳು ಒಟ್ಟಾಗಿ  ಸದ್ಗುಣಶೀಲ ಜೀವನದಲ್ಲಿ ಐಕ್ಯಗೊಳ್ಳಲು ಸಾಧ್ಯ.

- ಅತ್ಯುನ್ನತವಾದ ಹಾಗೂ ಸಕ್ರಿಯವಾದ 'ಅಹಿಂಸೆ'ಯಿಂದಲೇ ಸತ್ಯದ ಒಲವನ್ನು ಅಭಿವೃದ್ಧಿಸಲು ಸಾಧ್ಯ.

ಎರಡನೆಯದಾಗಿ ಹೇಳಬೇಕೆಂದರೆ ನೈತಿಕ ಜೀವನದ ಸನ್ನಿವೇಶದಲ್ಲಿ ಮಾರ್ಗ (means)  ಹಾಗೂ  ಗುರಿ (end) ಎರಡೂ ಪರಿಪೂರ್ಣ ಐಕ್ಯತೆಯನ್ನು ಹೊಂದುವ ರೀತಿಯಲ್ಲಿ ನಿರಂತರತೆಯನ್ನು ರೂಪಿಸಬೇಕು. ಈ ಸಂದರ್ಭದಲ್ಲಿ ಮಾರ್ಗವನ್ನು ಗುರಿಯನ್ನು ತಲುಪಲು ಬೇಕಾದ ಸಾಧನವನ್ನಾಗಿ ನೋಡಬಾರದು. ಪ್ರಕ್ರಿಯೆಯು  ಯಾವಾಗಲೂ  ಫಲಶೃತಿಯ ಅವಿಭಾಜ್ಯ ಅಂಗವಾಗಿರುತ್ತದೆ ಹಾಗೂ ಫಲಶೃತಿಯನ್ನು ಯಾವತ್ತೂ ಪ್ರಕ್ರಿಯೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಲ್ಲಿ ಪೂರ್ವನಿರ್ಧಾರಿತ ಗುರಿಯನ್ನು ಸಾಧಿಸಲು ಯಾವ ಮಾರ್ಗ ಉತ್ತಮ ಎಂದು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ನೈತಿಕತೆ ಎಂಬ ಗುರಿಯನ್ನು ಬೆನ್ನಟ್ಟಿಹೋಗುವಲ್ಲಿ ಅದರ ಮಾರ್ಗವನ್ನು ಬೇರಾವುದರಿಂದಲೂ  ಸ್ಥಾನಪಲ್ಲಟ ಮಾಡಲು ಸಾಧ್ಯವಿಲ್ಲ.
ಮೌಲ್ಯ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ  ಒಂದು ಭಾಗವಾಗಬೇಕಾದರೆ ಮೌಲ್ಯಗಳು ಹಾಗೂ ಸದ್ಗುಣಗಳು ಇಡೀ ಶಿಕ್ಷಣದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ  ಬೆರೆತಿರಬೇಕು. ಮೌಲ್ಯ ಶಿಕ್ಷಣವನ್ನು  ಶಿಕ್ಷಣದ ಪ್ರತ್ಯೇಕ ಅಂಶವಾಗಿ ನೀಡಲು ಸಾಧ್ಯವಿಲ್ಲ. ಇಡೀ ಶಿಕ್ಷಣವೇ ಮೌಲ್ಯ ಶಿಕ್ಷಣವಾಗಬೇಕು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಅಹಿಂಸೆ, ಶಾಂತಿ ಹಾಗೂ ಸಾಮರಸ್ಯಗಳನ್ನು ಅನೇಕ ವಿಧಗಳಿಂದ ಪ್ರಬಲವಾಗಿ  ನೆನಪಿಸುವ ಅಗತ್ಯತೆ ಇದೆ.

- ಅತ್ಯುನ್ನತವಾದ ಹಾಗೂ ಸಕ್ರಿಯವಾದ 'ಅಹಿಂಸೆ'ಯಿಂದಲೇ ಸತ್ಯದ ಒಲವನ್ನು ಅಭಿವೃದ್ಧಿಸಲು ಸಾಧ್ಯ

#ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ  ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ  ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.

ಶಿಕ್ಷಣಕ್ಕೆ ಹಾಗೂ ಅದರ ಫಲಶೃತಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮದೇ ಆದ ಜೀವನ ಶೈಲಿಯನ್ನು ಹೊರತುಪಡಿಸಿ ಇತರರ ಸಂಸ್ಕೃತಿಯೂ ಗೌರವಕ್ಕೆ ಅರ್ಹತೆಯನ್ನು ಪಡೆಯುವ ರೀತಿಯಲ್ಲಿ ಇತರರ ಜೀವನಶೈಲಿಯನ್ನು  ಕಾಲ್ಪನಿಕ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಪ್ರಸ್ತುತ ಪಡಿಸಬೇಕು.

೧೪:೩೨, ೧ ಆಗಸ್ಟ್ ೨೦೧೭ ನಂತೆ ಪರಿಷ್ಕರಣೆ

ಶಿಕ್ಷಣದ ಗುರಿಗಳು

ಪೀಠಿಕೆ:

ನಮ್ಮ ದೇಶವು ಐತಿಹಾಸಿಕ, ವೈವಿಧ್ಯಮಯ ಹಾಗೂ ಸಂಕೀರ್ಣವಾದ ಸಂಸ್ಕೃತಿಗಳನ್ನು ಹೊಂದಿದ ಶ್ರೀಮಂತ ರಾಷ್ಟ್ರವಾಗಿದ್ದು, ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಸಾರ್ವತ್ರಿಕ ಕಲ್ಯಾಣದ ಗುರಿಯನ್ನೊಳಗೊಂಡಿರುವ ಈ ದೇಶದಲ್ಲಿ, ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಒಂದು ಮಹತ್ತರ ಕಾರ್ಯ. ನಮ್ಮಲ್ಲಿ ಶಿಕ್ಷಣದ ಉದ್ದೇಶ ಏನಾಗಿರಬೇಕು?' ಎಂಬ ಮೂಲಭೂತ ಪ್ರಶ್ನೆಯನ್ನು ಇದು ಮೂಡಿಸುತ್ತದೆ. ಕಳೆದ ದಶಕಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದ್ದರೂ, ಶಿಕ್ಷಣ ವ್ಯವಸ್ಥೆಯ ಅನೇಕ ಅಂಶಗಳ ಬಗ್ಗೆ ಅದರಲ್ಲೂ ನಿರ್ದಿಷ್ಟವಾಗಿ ಶಾಲಾ ವ್ಯವಸ್ಥೆಯ ಬಗ್ಗೆ ಇನ್ನೂ ಹಲವಾರು ಕಾಳಜಿಗಳು ಸಾರ್ಥಕವಾಗಬೇಕಿದೆ. ಈ ಕಾಳಜಿಗಳಿಗೆ ಅನೇಕ ಕಾರಣಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖವಾದವು ಈ ಕೆಳಗಿನಂತಿವೆ.

1. ವ್ಯವಸ್ಥೆಯಲ್ಲಿನ ಅನಮ್ಯತೆಯು ಹೊಸತನಕ್ಕೆ ಅನುವು ಮಾಡಲು ಅಡಚಣೆಯುಂಟುಮಾಡುತ್ತದೆ.
2. ಕಲಿಕೆಯು ಮಕ್ಕಳಿಗೆ ಒಂದು ಯಾಂತ್ರಿಕವಾದ ಹಾಗೂ ಸಮಾಜದಿಂದ ಪ್ರತ್ಯೇಕಿಸಿದ ಚಟುವಟಿಕೆಯಾಗಿ ಅವರು ತಮ್ಮ ಕಲಿಕೆಯನ್ನು ಜೀವನದಲ್ಲಿ ಸುಸಂಘಟಿತವಾಗಿ ಅಥವಾ ಯಾವುದೇ ಪ್ರಮುಖ ರೀತಿಯಲ್ಲಿ ಅಳವಡಿಸಿಕೊಳ್ಳಲು ಅಸಮರ್ಥರಾಗಿದ್ದಾರೆ.
3. ಮಕ್ಕಳ ವಿದ್ಯಾಭ್ಯಾಸವು ಭವಿಷ್ಯದ ದೃಷ್ಟಿಯಿಂದ ಅಂದರೆ, ಉನ್ನತ ಹುದ್ದೆ, ಆರ್ಥಿಕ ಸ್ಥಾನಮಾನವನ್ನು ಗಳಿಸುವ ಒಂದು ಮಾರ್ಗವಾಗಿ ಪರಿಗಣಿಸಲ್ಪಡುತ್ತಿದೆ. ಹೀಗಾಗಿ ವರ್ತಮಾನದಲ್ಲಿನ ಕಲಿಕೆಯ ಸಂತೋಷ ಮತ್ತು ಅನುಭವ ಜನ್ಯ ಕಲಿಕೆಯಂತಹ ದೃಷ್ಟಿಕೋನಗಳು ನಿರ್ಲಕ್ಷಿಸಲ್ಪಡುತ್ತಿವೆ. ಇದರಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯು ಮಕ್ಕಳನ್ನು ಭವಿಷ್ಯತ್ತಿನ ಸಿದ್ದತೆಗೆ ರೂಪಿಸುತ್ತಿರುವುದಕ್ಕಿಂತಲೂ ಅಧಿಕ ಸಂಪದ್ಭರಿತವಾದ ವಿಷಯಗಳಿಂದ ಕೂಡಿದ, ಗುಣಮಟ್ಟದ ಜೀವನದಿಂದ ಮಕ್ಕಳನ್ನು ವಂಚಿತಗೊಳಿಸುವ ಸಾಧ್ಯತೆ ಇದೆ
4. ಜ್ಞಾನವು ಏಕಾತ್ಮಕ ಪರಿಕಲ್ಪನೆಯಾಗಿರದೆ, ವಿವಿಧ ತೆರನಾದ ಜ್ಞಾನಗಳಿದ್ದು, ಜ್ಞಾನವನ್ನು ಪಡೆಯುವ ಮಾರ್ಗಗಳು ಹಲವಾರು. ಶಾಲೆಗಳಲ್ಲಿ ಪ್ರಸ್ತುತ ಪಡಿಸುತ್ತಿರುವ ಹಾಗೂ ಪ್ರಸಾರಮಾಡಲಾಗುತ್ತಿರುವ 'ಜ್ಞಾನವು ' ಪ್ರಮುಖ ಅಂಶವಾದ ವ್ಯಕ್ತಿಯ ಜ್ಞಾನಶೀಲತೆಯನ್ನು ಹೊರತುಗೊಂಡಿದೆ.
5. ಶಾಲೆಗಳಲ್ಲಿ ಪ್ರಚಲಿತವಿರವ ಆಚರಣೆಗಳು (regime of thought ) ಆಲೋಚಿಸುವ ಪ್ರಕ್ರಿಯೆಗೆ ಹಾಗೂ ನವೀನ ಮತ್ತು ಅನಿರೀಕ್ಷಿತ ಒಳನೋಟಗಳಿಗೆ ಪ್ರೋತ್ಸಾಹದಾಯಕ ವಾತಾವರಣವನ್ನು ಕಲ್ಪಿಸುತ್ತಿಲ್ಲ.

ಹಿನ್ನೆಲೆ :

ನಾವು ಶಿಕ್ಷಣವನ್ನು ಬೋಧನೆ ಮತ್ತು ಕಲಿಕೆಯ ಒಂದು ವ್ಯವಸ್ಥೆ ಎಂದು ಭಾವಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಾಂಪ್ರದಾಯಿಕ ಸಮುದಾಯಗಳು ಔಪಚಾರಿಕ ಹಾಗೂ ಅನೌಪಚಾರಿಕ ಬೋಧನಾ ಕಲಿಕಾ ವಿಧಾನಗಳನ್ನು ರೂಪಿಸಿಕೊಂಡಿವೆ. ಈ ರೀತಿಯ ಕಲಿಕೆ ಮತ್ತು ಬೋಧನೆಯ ಪ್ರಾಥಮಿಕ ಗುರಿಯು ಮಕ್ಕಳು ಮತ್ತು ಹದಿಹರೆಯದವರನ್ನು ಸಮುದಾಯದ ಜೀವನ ಶೈಲಿಯ ಅನುಭವಕ್ಕೆ ಒಳಪಡಿಸುವುದಾಗಿದೆ. ಸ್ಥಳೀಯ ಭಾಷೆಯ ಕಲಿಕೆ ಇದರಲ್ಲಿ ಪ್ರಥಮವಾಗಿದೆ. ಭಾಷಾ ಕಲಿಕೆಯು ಸರಿ ತಪ್ಪು, ಸತ್ಯ ಅಸತ್ಯಗಳನ್ನು ಗುರುತಿಸುವುದು ಹಾಗೂ ಇನ್ನಿತರ ಆಯಾಮಗಳನ್ನೊಳಗೊಂಡಿದೆ.

ಸಾಂಪ್ರದಾಯಿಕವಾಗಿ ಸಮುದಾಯಕ್ಕೆ ಶಿಕ್ಷಣದ ಬಗ್ಗೆ ಇದ್ದ ಒಂದು ಮುಖ್ಯವಾದ ಕಾಳಜಿ ವಿವಿಧ ಕೌಶಲ್ಯಗಳನ್ನು ಪ್ರಸರಣಮಾಡುವುದಾಗಿತ್ತು. ಅದರಲ್ಲೂ ಸಮುದಾಯದ ಆರ್ಥಿಕ ಜೀವನಕ್ಕೆ ಸಂಬಂಧಿಸಿದ್ದವು ಇದರಲ್ಲಿ ಪ್ರಮುಖವಾಗಿದ್ದವು. ಉದಾಹರಣೆ: ವ್ಯವಸಾಯ, ಬೇಟೆ, ಮೀನುಗಾರಿಕೆ, ಪರಿಸರದ ಬಗ್ಗೆ ಕಾಳಜಿವಹಿಸುವಿಕೆ ಇತ್ಯಾದಿ.

ಆದರೆ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಸಮುದಾಯದ ನಿರ್ದಿಷ್ಟ ಆಸೆ ಆಕಾಂಕ್ಷೆಗಳ ಪ್ರಸರಣಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿತ್ತು. ಇದನ್ನು 'ಕಲಾತ್ಮಕ' ಹಾಗೂ 'ಆಧ್ಯಾತ್ಮಿಕ' ಎಂದು ತಪ್ಪಾಗಿ, ವಿಸ್ತಾರವಾಗಿ ವರ್ಗೀಕರಿಸಲಾಗಿತ್ತು. ಇದು ಸಮುದಾಯದ ಆಂತರಿಕ ಜೀವನದ ಅಭಿವ್ಯಕ್ತಿಗೆ ಸಂಬಂಧಿಸಿದ್ದಾಗಿತ್ತು. ಉದಾಹರಣೆ: ಸಂಗೀತ, ಕೆತ್ತನೆ, ಮಡಕೆ ತಯಾರಿಕೆ, ಕರಕುಶಲ ವಸ್ತುಗಳ ತಯಾರಿಕೆ ಇತ್ಯಾದಿ. ಸಮುದಾಯವು ಯಾವಾಗಲೂ ತನ್ನ ಸಮುದಾಯದ ರಚನಾ ಘಟಕದ ಹಾಗೂ ಮಾನವೀಯ ಸಂಬಂಧಗಳ ನಿರಂತರತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಇದರಿಂದಾಗಿ ಸಮುದಾಯಕ್ಕೆ ಅದರದೇ ಆದ ಗುರುತು ಹಾಗೂ ಅರ್ಥ ಲಭ್ಯವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಸಾಂಪ್ರದಾಯಿಕ ಶಿಕ್ಷಣದ ಗುರಿಯು, ಆ ಸಮುದಾಯದ ಏಳಿಗೆ ಹಾಗೂ ಒಳಿತಿನ ಚೌಕಟ್ಟಿಗೆ ಸೀಮಿತವಾಗಿತ್ತು. ಈ ಚೌಕಟ್ಟು ಸಮುದಾಯದ ಬಗ್ಗೆ ಪ್ರಚಾರ ಹಾಗೂ ಅದನ್ನು ಬೆಳೆಸುವ ಬಗ್ಗೆ ಹೆಚ್ಚು ನಿಷ್ಟೆಯುಕ್ತವಾಗಿತ್ತು.

ಆದರೆ ಪ್ರಪಂಚವು ಸಮುದಾಯ ಕೇಂದ್ರಿತ ಶಿಕ್ಷಣದಿಂದ ಎರಡು ವ್ಯಾಪಕವಾದ ವೈವಿಧ್ಯಮಯ ದಿಕ್ಕಿನೆಡೆಗೆ ಚಲಿಸುತ್ತಿದೆ. ಅವೇ ವ್ಯಕ್ತಿಗತ ದಿಕ್ಕು ಹಾಗೂ ಸಾರ್ವತ್ರಿಕ ಅಥವಾ ಜಾಗತಿಕ ದಿಕ್ಕು. ಬಹುಶ: ವ್ಯಕ್ತಿಯ ಒಳಿತು ಸಮುದಾಯದ ಒಳಿತಿಗಿಂತ ಹೆಚ್ಚು ಮುಖ್ಯ ಎಂಬ ಅಂಶವು 'ಮಾನವ ಹಕ್ಕುಗಳ' ಪರಿಕಲ್ಪನೆಯ ಹುಟ್ಟಿಗೆ ಕಾರಣವಾಗಿರಬಹುದು.

ದೃಷ್ಟಿಕೋನದಲ್ಲಿ ಆಗುತ್ತಿರುವ ತೀವ್ರ ಬದಲಾವಣೆಗಳನ್ನು ಗಮನಿಸಿದಾಗ ಬಹುಶ: ನಾವು ಶಿಕ್ಷಣವನ್ನು ಮೌಲ್ಯಗಳನ್ನು ಅಳವಡಿಸುವಂತಹ ಶಿಕ್ಷಣವನ್ನಾಗಿ ನೋಡಬೇಕಾಗಿದೆ. ಈ ಮೌಲ್ಯಗಳು ಒಂದು ಕಡೆ ವ್ಯಕ್ತಿಯ ಒಳಿತನ್ನು ರೂಪಿಸಿದರೆ ಮತ್ತೊಂದು ಕಡೆ ಮನುಕುಲದ ಒಳಿತನ್ನು ರೂಪಿಸಬೇಕಾಗಿದೆ. ಆದರೆ 'ವ್ಯಕ್ತಿ' ಹಾಗೂ 'ಮನುಕುಲ'ದ ಪರಿಕಲ್ಪನೆಯ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೆ ಶಿಕ್ಷಣದ ಗುರಿಗಳ ಬಗ್ಗೆ ಆಲೋಚಿಸುವಲ್ಲಿ ಖಂಡಿತವಾಗಿಯೂ ತೊಡಕುಗಳುಂಟಾಗುತ್ತದೆ. ವ್ಯಕ್ತಿ ಹಾಗೂ ಮನುಕುಲದ ನಡುವೆ ನಾವು ನಮ್ಮ ದೇಶಕ್ಕೆ ಸ್ಥಿರತೆಯನ್ನು ಕಂಡುಕೊಳ್ಳಬೇಕಾಗಿದೆ.

ಶಿಕ್ಷಣದ ಗುರಿಗಳು:

ಶಿಕ್ಷಣವನ್ನು ಕುರಿತಂತೆ ಇರುವ ಸಮಸ್ಯೆಗಳೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಂಡಾಗ 'ಶಿಕ್ಷಣದ ಗುರಿಗಳು ಏನಿರಬೇಕು?' ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಸಹಾಯವಾಗುತ್ತದೆ.

1. ಒಂದು ಮಗುವಿನ ಜೀವನದಲ್ಲಿ ಶಾಲಾ ಶಿಕ್ಷಣವು ಒಂದು ಉದ್ದೇಶ ಪೂರ್ವಕ ಹಾಗೂ ಬಾಹ್ಯ ಮಧ್ಯವರ್ತಿ (Intervention) ಯಾಗಿದೆ. ಶಾಲೆಯಲ್ಲಿ ಮಗುವಿಗೆ ಪರಿಚಯಿಸಲ್ಪಡುವ ಬೋಧನಾ ಕಲಿಕಾ ಪರಿಸರವು ಅದರ ಪರಿಸರದಿಂದ ಭಿನ್ನವಾಗಿರುತ್ತದೆ. ಶಾಲೆಗಳನ್ನು ಅದರ ಸುತ್ತಲಿನ ಸಮೂದಾಯದ ಜೀವನದೊಂದಿಗೆ ವಿಲೀನಗೊಳಿಸಲು ಸಾಧ್ಯವಿಲ್ಲದ ಕಾರಣ ಅದಕ್ಕೆ ಅದರದೇ ಆದ ಸೀಮೆಗಳಿರಬೇಕಾದದ್ದು ಸರಿಯಾದರೂ ಈ ಸೀಮೆಗಳೇ ಪ್ರತಿಬಂಧಕಗಳಾಗಬಾರದು. ಬದಲಿಗೆ ಅವು ಮಗುವಿನ ಮನೆ ಹಾಗೂ ಸಮೂದಾಯದಲ್ಲಿನ ಅನುಭವಕ್ಕೆ ಹಾಗೂ ಶಾಲೆಯಲ್ಲಿ ನೀಡುವ ಅನುಭವಕ್ಕೆ ಮಹತ್ವದ ಕೊಂಡಿಗಳನ್ನು ಸೃಷ್ಟಿಸಬೇಕು.
2. ಸ್ವಯಂ ಜ್ಞಾನವು, ಸ್ವಯಂ ಅಜ್ಞಾನ ಹಾಗೂ ಆತ್ಮ ವಂಚನೆಗೆ ತದ್ವಿರುದ್ದವಾಗಿದೆ. ಇತರರಿಂದ ವಂಚನೆಗೊಳಗಾಗುವುದು ಒಳ್ಳೆಯದಲ್ಲ. ಆದರೆ ಸ್ವಯಂವಂಚನೆಗೊಳಗಾಗುವುದು ಅದಕ್ಕಿಂತಲೂ ಕೆಟ್ಟದ್ದು. ದುರದೃಷ್ಟವಷಾತ್ ಅನೇಕ ಬಾರಿ ನಾವು ನಮ್ಮನ್ನೇ ವಂಚನೆಗೊಳಿಸಿಕೊಳ್ಳುತ್ತೇವೆ. ಇದು ನಮ್ಮಲ್ಲಿರುವ 'ಅಹಂ' ಅನ್ನು ಇನ್ನೂ ಬೆಳೆಸುತ್ತದೆ. ಇತರರ ಜ್ಞಾನದ ಮುಖಾಂತರವೇ ಸ್ವಯಂ ಜ್ಞಾನಾರ್ಜನೆ ಸಾಧ್ಯ. ಇತರರೊಂದಿಗೆ ತೆರೆದಮನಸ್ಕನಾಗಿದಲ್ಲಿ ಮಾತ್ರ ಇತರರನ್ನು ಅರಿಯಲು ಸಾಧ್ಯ. ಶಿಕ್ಷಣವು ತನ್ನ ಬಗ್ಗೆ ನಿಜವರಿಯುವ ಸ್ವಯಂ ಅನ್ವೇಷಣೆಯ ಒಂದು ನಿರಂತರ ಪ್ರಕ್ರಿಯೆಯಾಗಬೇಕು. ಇದು ಜೀವನ ಪರ್ಯಂತ ಪ್ರಕ್ರಿಯೆಯಾದರೂ ಶಾಲೆಗಳು ವಿವಿಧ ಬಗೆಯ ಬೋಧನಾ - ಕಲಿಕಾ ಸನ್ನಿವೇಶಗಳ ಮೂಲಕ ಮಕ್ಕಳಿಗೆ ಈ ಪ್ರಕ್ರಿಯೆಯ ಮಹತ್ವವನ್ನು ಮನದಟ್ಟು ಮಾಡಬಹುದು.
3. ಅನೀತಿ ಮತ್ತು ದುಷ್ಟತನಕ್ಕಿಂತ ಸದ್ಗುಣ ಭರಿತ ಜೀವನದ ಶ್ರೇಷ್ಟತೆಯ ಬಗ್ಗೆ ಮಕ್ಕಳು ಹಾಗೂ ಹದಿಹರೆಯದವರಿಗೆ ಮನವರಿಕೆ ಮಾಡುವ ಅಗತ್ಯತೆಯಿದೆ. ಇದನ್ನು ಮನವರಿಸಲು ನಿಜವಾದ ಮಾನವೀಯ ಸಂತೋಷಗಳು ಸದ್ಗುಣಗಳಿಗನುಗುಣವಾದ ಜೀವನದಿಂದ ಹೊರಹೊಮ್ಮುತ್ತದೆ ಎಂಬ ತತ್ವವನ್ನು ಅಳವಡಿಸಿ ಸಮರ್ಪಕವಾಗಿ ಪ್ರದರ್ಶಿಸಿದಾಗ ಮಾತ್ರ ಸಾಧ್ಯ. ಇದಕ್ಕೆ ತದ್ವಿರುದ್ದವಾದ ಅಧಿಕಾರ ಮತ್ತು ಐಶ್ವರ್ಯವೇ ಜೀವನದಲ್ಲಿ ನಿಜ ಸಂತೋಷವನ್ನು ನೀಡುತ್ತದೆ ಎಂಬ ನಂಬಿಕೆಯನ್ನು ಹೋಗಲಾಡಿಸುವುದು ಹೇಗೆ? ಇದಕ್ಕಾಗಿ ನಾವು ಸಮಾಜದ ವ್ಯವಸ್ಥೆಯನ್ನು ಗಾಢವಾಗಿ ಪ್ರಶ್ನಿಸುವಂತಹ ಸಾಧ್ಯತೆಗಳನ್ನು ಸೃಷ್ಟಿಮಾಡಿ ಸದ್ಗುಣರಹಿತ ಜೀವನಕ್ಕೂ ಹಾಗೂ ಅಸಂತೃಪ್ತಿಗೂ ಇರುವ ಸಂಬಂಧವನ್ನು ಅನೇಕ ವಿಧಗಳಿಂದ ತೋರಿಸಬೇಕಾಗಿದೆ.

ಈ ಹಿನ್ನೆಲೆಯಲ್ಲಿ 'ಮೌಲ್ಯ ಶಿಕ್ಷಣದ' ಅಗತ್ಯತೆಯ ಬಗ್ಗೆ ಬಹಳಷ್ಟು ಕೂಗುಗಳು ಕೇಳಿ ಬರುತ್ತಿರುವುದರಿಂದ ಸದ್ಗುಣ ಅಥವಾ ನೈತಿಕ ಜೀವನದ ಬಗ್ಗೆ ಈ ಕೆಳಕಂಡ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.
ಗುಣಗಳನ್ನು ಹೊಂದಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯು ಸದ್ಗುಣಶೀಲ ವ್ಯಕ್ತಿಯಲ್ಲ. ಗುಣಗಳು ಪ್ರತ್ಯೇಕತೆಯಲ್ಲಿದ್ದರೆ ಅದು ನೈತಿಕ ಜೀವನಕ್ಕೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದಿಲ್ಲ. ಉದಾಹರಣೆಗೆ ಒಬ್ಬ ವ್ಯಕ್ತಿಯಲ್ಲಿ 'ಧೈರ್ಯ'ವಿರಬಹುದು ಆದರೆ ಅದನ್ನು ಕೆಟ್ಟ ಕೆಲಸಕ್ಕೆ ಬಳಸಬಹುದು. ನಾಥೂರಾಮ್ ಗೋಡ್ಸೆಯ ಧೈರ್ಯದ ಬಗ್ಗೆ ನೆನಸಿಕೊಳ್ಳಿ. ಇದನ್ನೇ 'ಬುದ್ಧಿ ಶಕ್ತಿ' ಹಾಗೂ 'ಸಂಯಮ'ಕ್ಕೂ ಹೇಳಬಹುದು.
ಸದ್ಗುಣಗಳಲ್ಲಿ ನೈತಿಕತೆಯನ್ನು ತುಂಬುವುದು ಯಾವುದು?
- ಸತ್ಯ ಹಾಗೂ ಪ್ರೀತಿಯನ್ನು ಒಪ್ಪಿಕೊಳ್ಳುವ ಧೈರ್ಯವಿರಬೇಕು.
- ಸತ್ಯವೆಂಬುದು ಸ್ವಯಂವಂಚನೆಯಿಂದ ಸ್ವತಂತ್ರವಾಗಿರುವುದು.
- ಸತ್ಯದ ಒಲವನ್ನು ಅಗಾಧವಾಗಿ ಅಂತರ್ಗತಗೊಳಿಸಿಕೊಳ್ಳುವುದರಿಂದ ಮಾತ್ರ ಧೈರ್ಯ, ಸಂಯಮ, ಬುದ್ಧಿಶಕ್ತಿ ಇತ್ಯಾದಿ ಗುಣಗಳು ಒಟ್ಟಾಗಿ ಸದ್ಗುಣಶೀಲ ಜೀವನದಲ್ಲಿ ಐಕ್ಯಗೊಳ್ಳಲು ಸಾಧ್ಯ.
- ಅತ್ಯುನ್ನತವಾದ ಹಾಗೂ ಸಕ್ರಿಯವಾದ 'ಅಹಿಂಸೆ'ಯಿಂದಲೇ ಸತ್ಯದ ಒಲವನ್ನು ಅಭಿವೃದ್ಧಿಸಲು ಸಾಧ್ಯ
ಎರಡನೆಯದಾಗಿ ಹೇಳಬೇಕೆಂದರೆ ನೈತಿಕ ಜೀವನದ ಸನ್ನಿವೇಶದಲ್ಲಿ ಮಾರ್ಗ (means) ಹಾಗೂ ಗುರಿ (end) ಎರಡೂ ಪರಿಪೂರ್ಣ ಐಕ್ಯತೆಯನ್ನು ಹೊಂದುವ ರೀತಿಯಲ್ಲಿ ನಿರಂತರತೆಯನ್ನು ರೂಪಿಸಬೇಕು. ಈ ಸಂದರ್ಭದಲ್ಲಿ ಮಾರ್ಗವನ್ನು ಗುರಿಯನ್ನು ತಲುಪಲು ಬೇಕಾದ ಸಾಧನವನ್ನಾಗಿ ನೋಡಬಾರದು. ಪ್ರಕ್ರಿಯೆಯು ಯಾವಾಗಲೂ ಫಲಶೃತಿಯ ಅವಿಭಾಜ್ಯ ಅಂಗವಾಗಿರುತ್ತದೆ ಹಾಗೂ ಫಲಶೃತಿಯನ್ನು ಯಾವತ್ತೂ ಪ್ರಕ್ರಿಯೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಇಲ್ಲಿ ಪೂರ್ವನಿರ್ಧಾರಿತ ಗುರಿಯನ್ನು ಸಾಧಿಸಲು ಯಾವ ಮಾರ್ಗ ಉತ್ತಮ ಎಂದು ಹುಡುಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ನೈತಿಕತೆ ಎಂಬ ಗುರಿಯನ್ನು ಬೆನ್ನಟ್ಟಿಹೋಗುವಲ್ಲಿ ಅದರ ಮಾರ್ಗವನ್ನು ಬೇರಾವುದರಿಂದಲೂ ಸ್ಥಾನಪಲ್ಲಟ ಮಾಡಲು ಸಾಧ್ಯವಿಲ್ಲ. ಮೌಲ್ಯ ಶಿಕ್ಷಣವು ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಬೇಕಾದರೆ ಮೌಲ್ಯಗಳು ಹಾಗೂ ಸದ್ಗುಣಗಳು ಇಡೀ ಶಿಕ್ಷಣದ ಪ್ರಕ್ರಿಯೆಯೊಂದಿಗೆ ಸಮಗ್ರವಾಗಿ ಬೆರೆತಿರಬೇಕು. ಮೌಲ್ಯ ಶಿಕ್ಷಣವನ್ನು ಶಿಕ್ಷಣದ ಪ್ರತ್ಯೇಕ ಅಂಶವಾಗಿ ನೀಡಲು ಸಾಧ್ಯವಿಲ್ಲ. ಇಡೀ ಶಿಕ್ಷಣವೇ ಮೌಲ್ಯ ಶಿಕ್ಷಣವಾಗಬೇಕು. ಇಲ್ಲಿ ಗಾಂಧೀಜಿಯವರ ತತ್ವಗಳಾದ ಅಹಿಂಸೆ, ಶಾಂತಿ ಹಾಗೂ ಸಾಮರಸ್ಯಗಳನ್ನು ಅನೇಕ ವಿಧಗಳಿಂದ ಪ್ರಬಲವಾಗಿ ನೆನಪಿಸುವ ಅಗತ್ಯತೆ ಇದೆ.

1. ಸಾಂಸ್ಕೃತಿಕ ವೈವಿಧ್ಯತೆ ನಮ್ಮಲ್ಲಿರುವ ಶ್ರೇಷ್ಠತೆಗಳಲ್ಲೊಂದು. ಇತರರನ್ನು ಗೌರವಿಸುವುದು ಹಾಗೂ ಇತರರಿಗೆ ನ್ಯಾಯ ಒದಗಿಸುವುದು ಸ್ವತ: ತಮಗೆ ಸಂಬಂಧಿಸಿದ ಸಂಸ್ಕೃತಿ ಅಥವಾ ಸಮೂದಾಯವನ್ನು ಗೌರವಿಸುವುದು ಹಾಗೂ ಅದಕ್ಕೆ ನ್ಯಾಯ ಒದಗಿಸುವುದೇ ಆಗಿದೆ. ಹೊರವಲಯದಲ್ಲಿರುವ ಸಂಸ್ಕೃತಿಗಳಿಗೆ ಕೇಂದ್ರಗಳಲ್ಲಿರುವ ಸಂಸ್ಕೃತಿಗಳಷ್ಟೇ ಗಮನ ಸಿಗಬೇಕು.

ಶಿಕ್ಷಣಕ್ಕೆ ಹಾಗೂ ಅದರ ಫಲಶೃತಿಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ತಮ್ಮದೇ ಆದ ಜೀವನ ಶೈಲಿಯನ್ನು ಹೊರತುಪಡಿಸಿ ಇತರರ ಸಂಸ್ಕೃತಿಯೂ ಗೌರವಕ್ಕೆ ಅರ್ಹತೆಯನ್ನು ಪಡೆಯುವ ರೀತಿಯಲ್ಲಿ ಇತರರ ಜೀವನಶೈಲಿಯನ್ನು ಕಾಲ್ಪನಿಕ ರೀತಿಯಲ್ಲಿ ಹಾಗೂ ಸಮರ್ಪಕವಾಗಿ ಪ್ರಸ್ತುತ ಪಡಿಸಬೇಕು.

1. ವ್ಯಕ್ತಿಗತ ಭಿನ್ನತೆಗಳು ಸಾಂಸ್ಕೃತಿಕ ಭಿನ್ನತೆಗಳಷ್ಟೇ ಮಖ್ಯವಾದದ್ದು. ಅನೇಕ ಬಾರಿ ಶಾಲೆಗಳಲ್ಲಿನ ಪರಿಸರದಲ್ಲಿ ಮಕ್ಕಳಲ್ಲಿರುವ ಸಾಮರ್ಥ್ಯ ಹಾಗೂ ಕೌಶಲಗಳಿಗೆ ಸೂಕ್ತ ಮನ್ನಣೆ ದೊರೆಯುವುದಿಲ್ಲ. ಈ ಕೌಶಲ ಹಾಗೂ ಸಾಮರ್ಥ್ಯಗಳ ಅಭಿವೃದ್ಧಿ ಹಾಗೂ ಏಳಿಗೆಯು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ ಸಮೂದಾಯದ ಜೀವನವನ್ನೂ ಸಂಪದ್ಭರಿತವಾಗಿಸುತ್ತದೆ. ಆದುದರಿಂದ ಶಿಕ್ಷಣವು ಸಾಧ್ಯವಾದಷ್ಟು ವ್ಯಾಪಕ ರೀತಿಯ ಸಾಮರ್ಥ್ಯ ಹಾಗೂ ಕೌಶಲಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕು. ಈ ಕೌಶಲಗಳ ಪಟ್ಟಿಯು ಕಲಾ ಪ್ರದರ್ಶನ, ಚಿತ್ರಕಲೆ ಹಾಗೂ ಕರಕುಶಲತೆ, ಸಾಹಿತ್ಯಿಕ ಸಾಮರ್ಥ್ಯಗಳನ್ನು ಒಳಗೊಂಡಿರಬೇಕು. ಅಷ್ಟೇ ಅಲ್ಲದೆ ಮಕ್ಕಳಲ್ಲಿರುವ (ಸಹಜ ಕೌಶಲಗಳು ಉದಾ: ಪ್ರಕೃತಿಯೊಡನೆ ಬೆರೆಯುವ 'ಪ್ರಕೃತಿಯಲ್ಲಿನ ಬಂಧನ' ದಂತಹ ಕೆಲವು ವೈವಿಧ್ಯವಾದ ವಿಶೇಷ ಸಾಮರ್ಥ್ಯಗಳನ್ನು ಪೋಷಿಸಬೇಕು.
2. ಜ್ಞಾನ ಎಂಬುದು ಏಕಮಾನ ಪರಿಕಲ್ಪನೆಯಲ್ಲ. ಜ್ಞಾನದಲ್ಲಿ ವಿವಿಧ ಪ್ರಕಾರಗಳಿವೆ ಹಾಗೂ ಜ್ಞಾನವನ್ನು ಅರಿಯುವ ವಿಧಾನಗಳೂ ಸಹ ವಿವಿಧತೆ ಇದೆ. ವಸ್ತುನಿಷ್ಠತೆಯು ಜ್ಞಾನದ ಒಂದು ಅವಶ್ಯಕ ಘಟಕ ಹಾಗೂ ಅದು ಸಂವೇಗ (ಭಾವನೆ) ರಹಿತವಾಗಿದ್ದಲ್ಲಿ ಮಾತ್ರ ಜ್ಞಾನವನ್ನು ಸಾಧಿಸಬಹುದು ಎಂಬ ಆಲೋಚನೆಯನ್ನು ತೊರೆಯಬೇಕು. ಶೈಕ್ಷಣಿಕವಾಗಿ ಹೇಳಬೇಕೆಂದರೆ ಜ್ಞಾನವನ್ನು ಪ್ರಯೋಗಗಳ ಮೂಲಕ ಹಾಗೂ ನಿಗಮನ ತಾರ್ಕಿಕತೆಯಿಂದ (deductive-reasoning) ಹುಡುಕುವಷ್ಟೇ ಜ್ಞಾನಶೀಲತೆಯು ಸಾಹಿತ್ಯಕ ಹಾಗೂ ಕಲಾತ್ಮಕ ಸೃಜನಶೀಲತೆಗೂ ಇದೆ. ಇದು ದೃಷ್ಟಾಂತಯುಕ್ತ ವೈಜ್ಞಾನಿಕ ಅನ್ವೇಷಣೆಗಳಿಂದ ನೋಡಲು ಸಾಧ್ಯವಿಲ್ಲದ ರೀತಿಯಲ್ಲಿ ಸತ್ಯವನ್ನು ತೋರಿಸುತ್ತದೆ.
3. ಶಿಕ್ಷಣವನ್ನು ಒಂದು ವಿಮೋಚನಾ ಪ್ರಕ್ರಿಯೆಯಾಗಿ ನೋಡಬೇಕು. ಆದುದರಿಂದ ಶಿಕ್ಷಣದ ಪ್ರಕ್ರಿಯೆಯು ತನ್ನನ್ನು ತಾನು ಎಲ್ಲಾ ರೀತಿಯ ಶೋಷಣೆ ಮತ್ತು ಅನ್ಯಾಯದ ಸರಪಣಿಗಳಿಂದ ಬಿಡಿಸಿಕೊಳ್ಳಬೇಕು. (ಉದಾ: ಬಡತನ, ಲಿಂಗ ತಾರತಮ್ಯ, ಜಾತಿ ಮತ್ತು ಕೋಮು ಪಕ್ಷಪಾತ). ಇಲ್ಲದಿದ್ದಲ್ಲಿ ಇದು ನಮ್ಮ ಮಕ್ಕಳು ಪ್ರಕ್ರಿಯೆಯ ಭಾಗವಾಗುವುದನ್ನು ತಡೆಗಟ್ಟುತ್ತದೆ.
4. ಶಾಲೆಯ ಬೋಧನಾ ಕಲಿಕಾ ಪ್ರಕ್ರಿಯೆಯು ಕಲಾತ್ಮಕವಾದ ಸಂತೋಷ ನೀಡುವಂತಹ (aesthetically pleasing) ಪರಿಸರದಲ್ಲಿ ನಡೆಯುವುದು ಬಹಳ ಮುಖ್ಯ. ಅಷ್ಟೇ ಅಲ್ಲ ಮಕ್ಕಳು ತಮಗೆ ಬೇಕಾದ ಅಂತಹ ವಾತಾವರಣವನ್ನು ತಾವೇ ಸಕ್ರಿಯವಾಗಿ ಸೃಜಿಸುವುದೂ (ಸೃಜಿಸುವಂತಹ ಅವಕಾಶಗಳನ್ನು ಪಡೆಯುವುದು) ಬಹಳ ಮುಖ್ಯ.
5. ಪ್ರತಿ ಮಗುವಿಗೆ ತನ್ನ ರಾಷ್ಟ್ರದ ಬಗ್ಗೆ ಅಭಿಮಾನ ಹೊಂದಲು ಸಾಧ್ಯವಾಗಬೇಕು. ಯಾರಿಗೇ ಆದರೂ ಆ ಸಾಧನೆಯು ಸ್ವತಹ ತಮ್ಮದೇ ಸಾಧನೆಯಾಗಿದ್ದಲ್ಲಿ ಅಥವಾ ಯಾರದಾದರೂ ಸಾಧನೆಯ ಜೊತೆಗೆ ಅನ್ಯೋನ್ಯ ಸಂಪರ್ಕಹೊಂದಿದ್ದರೆ ಮಾತ್ರ ಅದರ ಬಗ್ಗೆ ಅಭಿಮಾನ ಹೊಂದಲು ಸಾಧ್ಯ. ಆದುದರಿಂದ ನಮ್ಮ ರಾಷ್ಟ್ರೀಯ ಪರಂಪರೆಗಳಿಗೆ ಸಂಬಂಧಿಸಿದಂತೆ ಸಾಧನೆಗೈದ ಜನರ ಬಗ್ಗೆ ಅನ್ಯೋನ್ಯ ಮನೋಭಾವವನ್ನು ಶಿಕ್ಷಣವು ಮಕ್ಕಳಲ್ಲಿ ಬೆಳೆಸುವುದು ಬಹು ಮುಖ್ಯ. ಆದರೆ ತಮ್ಮಲ್ಲಿರುವ ರಾಷ್ಟ್ರಾಭಿಮಾನವು ಒಟ್ಟಾರೆ ಮನುಕುಲದ ಸಾಧನೆಯ ಅಭಿಮಾನವನ್ನು ಅಲ್ಲಗೆಳೆಯದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.

ಶಿಕ್ಷಣ ಶಾಸ್ತ್ರ ಹಾಗೂ ಮೌಲ್ಯಮಾಪನದ ಮೇಲೆ ಕೆಲವು ಪರಿಣಾಮಗಳು:

ಶಿಕ್ಷಣಶಾಸ್ತ್ರ ಹಾಗೂ ಮೌಲ್ಯಮಾಪನದ ಮೇಲೆ ಇದುವರೆಗೂ ಚರ್ಚಿಸಿದ ಅಂಶಗಳ ಪರಿಣಾಮವೇನೆಂದು ನೋಡೋಣ. ಶಾಲೆಯ ಹೊರಗಿನ ಸಮೂದಾಯದಲ್ಲಿರುವ ಮಗುವಿನ ಅನುಭವವನ್ನು ಕಲ್ಪನಾತ್ಮಕವಾಗಿ ಶಾಲಾನುಭವಕ್ಕೆ ಸಂಪರ್ಕ ಕಲ್ಪಿಸುವುದರ ಮೂಲಕ ಮಗುವಿಗಿರುವ ಶಾಲಾ ಪರಿಸರದ ಅಪರಿಚಿತತೆಯನ್ನು ಕಡಿಮೆಮಾಡಬಹುದು. ಮಗುವಿಗೆ ಶಾಲೆಯಲ್ಲಿ ಅನೇಕ ಹೊಸ ಹಾಗೂ ಅತ್ಯಾಕರ್ಷಕ ಅನುಭವಗಳು ಇರಬಹುದಾದರೂ ಅದು ಮಗುವಿಗಿರುವ ಸಮೂದಾಯದ ಅನುಭವಗಳನ್ನು ತಿರಸ್ಕರಿಸುವಂತಾಗಲೀ ಅಥವಾ ನಿರ್ಲಕ್ಷಿಸುತ್ತಿರುವಂತಾಗಲೀ ಇರಬಾರದು. ಮಕ್ಕಳ ಅನುಭವಗಳನ್ನು ಅಳವಡಿಸಿಕೊಳ್ಳುವುದರಿಂದ ಶಿಕ್ಷಣಶಾಸ್ತ್ರವು ಸಮೃದ್ಧಗೊಳ್ಳುತ್ತದೆ. ಅದೇ ರೀತಿ ಶಾಲೆಯ ಹೊರಗಿನ ಪ್ರಪಂಚದ ಅನುಭವಗಳನ್ನು ನೂತನ ರೀತಿಯಲ್ಲಿ ಪಡೆದುಕೊಳ್ಳುವುದನ್ನು ಸಹ ಅದು ಬೋಧಿಸಬಹುದು.

ವಿವಿಧ ಪ್ರಕಾರಗಳ ಸಾಹಿತ್ಯ, ಹೊಸ ಹೊಸದನ್ನು ಅನಾವರಣಗೊಳ್ಳುವ ಇತಿಹಾಸದಂತಹಾ ಸೃಜನಶೀಲ ಹಾಗೂ ಸಂಶೋಧನಾ ಸಂಪನ್ಮೂಲಗಳನ್ನು ಶಿಕ್ಷಣ ಶಾಸ್ತ್ರವು ಆಧರಿಸಬೇಕು. ಮಗುವಿನ ಒಳನೋಟಗಳನ್ನು ತಕ್ಷಣ ಉದ್ಧೀಪನಗೊಳಿಸಬಹುದಾದ ಸಂಬಂಧವಿರುವ ವಿಭಿನ್ನ ಘಟನೆಗಳು, ವಿಷಯ ವಸ್ತುಗಳ ನಡುವೆ ಸಂಬಂಧೀಕರಿಸುವುದು ಅತ್ಯಂತ ಮುಖ್ಯ. ಈ ಅಂಶಗಳಲ್ಲಿ ವಿವಿಧ ಸಂದರ್ಭಗಳಲ್ಲಿ, ವಿವಿಧ ಸ್ಥಳಗಳಲ್ಲಿ ನಡೆದ ಘಟನೆಗಳು ಸೇರಿರಬಹುದು.

ಸಮಗ್ರಶಿಕ್ಷಣವು ಒಂದು ಅರ್ಥದಲ್ಲಿ ಮೌಲ್ಯ ಶಿಕ್ಷಣವಾದರೆ ಹಾಗೂ ಮಾರ್ಗ ಮತ್ತು ಗುರಿ ಎರಡೂ ಮೌಲ್ಯಾಧಾರಿತವಾಗಿ, ಜೈವಿಕವಾಗಿ ಅಥವ ಆಂತರಿಕವಾಗಿ ಸಂಪರ್ಕ ಹೊಂದಿದೆ ಎಂದಾಗ ಶಿಕ್ಷಣವನ್ನು ತಲುಪಿಸುವ ರುವಾರಿಗಳಾದ ಶಿಕ್ಷಕರು ಅನುಕರಣೀಯ ಮಾದರಿಯಾಗುತ್ತಾರೆ.

ಬೋಧನೆಯು ಅಧಿಕಾರಯುಕ್ತತೆಯಿಂದ ಕೂಡಿದ ಒಬ್ಬರೇ ಮಾತನಾಡುವ ರೀತಿಗಿಂತ ಸಂವಾದ ರೀತಿಯಲ್ಲಿರಬೇಕು. ಇದು ಮಗು ಆತ್ಮ ವಿಶ್ವಾಸದಿಂದ ಮತ್ತು ಸ್ವಯಂ ಅರಿವಿನಿಂದ ಬೆಳೆಯಲು ಅವಕಾಶಗಳನ್ನು ಒದಗಿಸುತ್ತದೆ. ಈ ಪ್ರಕ್ರಿಯೆಯು ಮಗು ಬೋಧನೆ-ಕಲಿಕೆ, ಸ್ವ ಅನುಭವಗಳನ್ನು ಒಂದಕ್ಕೊಂದು ಹೊಂದಿಸಲು, ಸಂಬಂಧಿಸಲು ಸಾಧ್ಯವಾಗಿ ಶಾಲಾ ಸಮಯವನ್ನು ಅರ್ಥಪೂರ್ಣವಾಗಿ ಪರಿಗಣಿಸಲು ಸಾಧ್ಯವಾಗುತ್ತದೆ.

ಇದೇ ರೀತಿಯಲ್ಲಿ ಕಲಿಕಾ ಶಿಸ್ತು ಶಿಕ್ಷಣದ ಪ್ರಮುಖ ಭಾಗವಾದರೂ ಬಾಹ್ಯವಾಗಿ ಹೇರಿದ ಶಿಸ್ತು ಮಗು ತನ್ನ ಸುಸ್ಥಿತಿಗೆ (well-being) ಅಗತ್ಯ ಭಾಗ ಎಂದು ಗ್ರಹಿಸುವ ವ್ಯವಸ್ಥಿತ ಸ್ಥಿತಿಗೆ ವಿಲೀನಗೊಳ್ಳಬೇಕು. ಆದುದರಿಂದ ಜಾರಿಗೊಳಿಸಲಾದಂತಹ ಹೊಣೆಗಾರಿಕೆಗಳು ನಿಧಾನವಾಗಿ ಜವಾಬ್ದಾರಿಯ ಪ್ರಜ್ಞೆಗೆ ದಾರಿ ನೀಡಬೇಕು. ಸ್ವಯಂ ಮೌಲ್ಯ ಮಾಪನ ಹಾಗೂ ಹಂಚಿಕೆಯಾದ ಹೊಣೆಗಾರಿಕೆಗೆ ಹೆಚ್ಚು ಒತ್ತು ನೀಡಬೇಕೆನ್ನುವುದೇ ಇದರ ಸಾರ.

ಬುದ್ಧಿಶಕ್ತಿಯು ವೈವಿಧ್ಯಮಯವಾಗಿದೆ. ಈ ವೈವಿಧ್ಯತೆಯು ವಿಕಸನಗೊಳ್ಳವ ಸಾಧ್ಯತೆಯನ್ನು ಶಿಕ್ಷಣಶಾಸ್ತ್ರ ಹಾಗೂ ಮೌಲ್ಯಮಾಪನ ಕಲ್ಪಿಸಿಕೊಡುವಂತಿರಬೇಕು. ವಿವಿಧ ಕ್ಷೇತ್ರಗಳಲ್ಲಿರುವ ಶ್ರೇಷ್ಠತೆಯನ್ನು ಮನ್ನಣೆ ನೀಡಬೇಕು,ಸನ್ಮಾನಿಸಬೇಕು. ಕಲಿಸಿಕೊಟ್ಟಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯಕ್ಕಿಂತಲೂ ಕಲಿಸಿದ ವಿಷಯಗಳಿಗೆ ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಬಗ್ಗೆ ಮೌಲ್ಯಮಾಪನಕ್ಕೆ ಗಮನ ನೀಡಬೇಕು. ಇಂತಹ ಪ್ರತಿಕ್ರಿಯೆಗಳಿಗೆ ಈ ಕೆಳಗಿನವು ಕೆಲವು ಉದಾಹರಣೆಯಾಗಿದೆ. ಅವರ ಕಲಿಕೆಯನ್ನು ಅವರ ಜೀವನದ ವಿವಿಧ ಅನುಭವಗಳಿಗೆ ಅಳವಡಿಸುವ ಸಾಮರ್ಥ್ಯ, ಅವರ ಕಲಿಕೆಯ ವಿಷಯಗಳ ಬಗ್ಗೆ ವಿನೂತನ ರೀತಿಯಲ್ಲಿ ಪ್ರಶ್ನೆಗಳನ್ನು ರಚಿಸುವ ಸಾಮರ್ಥ್ಯ ಹಾಗೂ ಶಾಲೆಯು ಅವರಲ್ಲಿ ಅಳವಡಿಸಲು ಪ್ರಯತ್ನಿಸುತ್ತಿರುವ 'ಸರಿ ' ಹಾಗೂ 'ಉತ್ತಮ'ದ ಪರಿಕಲ್ಪನೆಯಿಂದ ವಿಚಲಿತಗೊಳ್ಳುತ್ತಿರುವುದನ್ನು ನೋಡುವ ಸಾಮರ್ಥ್ಯ.