"ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢಶಾಲೆ, ಕನ್ನಡ ಮಾಧ್ಯಮ- ಮಾಡ್ಯೂಲ್‌ಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೫೩ ನೇ ಸಾಲು: ೫೩ ನೇ ಸಾಲು:
  
 
{{Youtube
 
{{Youtube
|PL1-Jl87vnQBE0zF8FwQZmY36lMx8M36P|250|400}}
+
|PL1-Jl87vnQBE0zF8FwQZmY36lMx8M36P-|250|400}}
  
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]
 
[[ವರ್ಗ:ಗಂಗಮ್ಮ ಹೊಂಬೆಗೌಡ ಬಾಲಕಿಯರ ಪ್ರೌಢ ಶಾಲೆ]]

೦೬:೨೭, ೩೧ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ಚಿಗುರು ೧ - ಪರಿಚಯದ ಹೊಸ ಹೆಜ್ಜೆ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಡಿಜಿಟಲ್‌ ಕಂಟೆಂಟ್‌ (ವಿಷಯ) ಗಳನ್ನು ಉಪಯೋಗಿಸಿ ಸ್ಥಳದಲ್ಲಿಯೇ ಜೋಡಿಸಿದ ಡಿಜಿಟಲ್ ಕಥೆ ತೋರಿಸುವುದರಿಂದ ಕಿಶೋರಿಯರಿಗೆ ತಂತ್ರಜ್ಞಾನದ ಬಗ್ಗೆ ಇರುವ ಹಿಂಜರಿಕೆ, ಸಂಕೋಚಗಳು ಕಡಿಮೆಯಾಗುತ್ತವೆ ಹಾಗೂ ಅವರಿಗೆ ನಮ್ಮ ಕಾರ್ಯಕ್ರಮದ ಮೇಲೆ ಉತ್ಸುಕತೆ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೨ - ನನ್ನ ಸವಾಲು, ನಮ್ಮ ಸವಾಲೇ !

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಗುಂಪಿನ ಚರ್ಚೆಗಳ ಮೂಲಕ ಕಿಶೋರಿಯರು ಅವರ ಸವಾಲುಗಳು ಕೇವಲ ಅವರದ್ದೊಂದೇ ಅಲ್ಲ, ಎಲ್ಲರಿಗೂ ಒಂದೇ ತರಹದ ಸವಾಲುಗಳಿವೆ ಎಂದು ಗೊತ್ತಾಗುತ್ತವೆ. ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಒಟ್ಟು ಸಮಯ ೧೬೦ ನಿಮಿಷಗಳು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೩ - ಹದಿಹರೆಯದ ವ್ಯಾಖ್ಯಾನ

ಹಿಂದಿನ ಮಾಡ್ಯೂಲ್‌ನಲ್ಲಿ ಕಿಶೋರಿಯರು ಅವರ ಕಾಳಜಿಗಳನ್ನು ಗುರುತಿಸಿದ್ದಾರೆ ಹಾಗೂ ಅವು ಎಲ್ಲರ ಸಮಸ್ಯೆಗಳು ಎಂದು ತಿಳಿದುಕೊಂಡಿದ್ದಾರೆ. ಈ ಮಾಡ್ಯೂಲ್‌ನಲ್ಲಿ ಪಾತ್ರಾಭಿನಯಗಳ ಮೂಲಕ ಈ ಸಮಸ್ಯೆಗಳನ್ನು ಕಿಶೋರಿಯರ ಮುಂದಿಡುತ್ತೇವೆ. ಈ ಸಮಸ್ಯೆಗಳು ಸಾಮಾನ್ಯವಾಗಿ ಯಾಕೆ ಹಾಗೂ ಯಾವ ವಯಸ್ಸಿನಲ್ಲಿ ಜಾಸ್ತಿಯಾಗಿ ಬರುತ್ತವೆ ಎಂದು ಗುಂಪುಗಳಲ್ಲಿ ಚರ್ಚಿಸುತ್ತೇವೆ. ಪಾತ್ರಾಭಿನಯಗಳು ಕಿಶೋರಿಯರು ಚರ್ಚಿಸಿದ ಸಮಸ್ಯೆಗಳ ಮೇಲೆಯೇ ಆಧಾರಿತವಾಗಿರುತ್ತವೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೪ - ಆಡಿಯೊ ರೆಕಾರ್ಡಿಂಗ್‌ ಬೇಸಿಕ್ಸ್

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೫ - ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ - ಭಾಗ ೨

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೬-ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್ - ಭಾಗ ೩

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಿಗೆ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಜೊತೆಗೆ, ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲು ಉತ್ತೇಜಿಸುವುದರಿಂದ ಕಿಶೋರಿಯರ ಅಭಿವ್ಯಕ್ತಿ ಕೌಶಲ್ಯವನ್ನು ಕೂಡ ಹೆಚ್ಚಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೭ - ಪಿತೃಪ್ರಧಾನ ಸಂದೇಶಗಳು - ಭಾಗ ೧

ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೮-ಪುರುಷಪ್ರಧಾನ ಸಂದೇಶಗಳು ಭಾಗ-೨

ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹೀರಾತುಗಳಲ್ಲಿ ಮಹಿಳೆಯರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರ ಈ ಚರ್ಚೆಯನ್ನು ಮುಂದುವರೆಸುತ್ತಾ ಜಾಹೀರಾತುಗಳಲ್ಲಿ ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸುತ್ತೇವೆ. ಇವುಗಳ ಮೂಲಕ ಪುರುಷ ಪ್ರಧಾನತೆಯ ಬಗ್ಗೆ ಮಾತನಾಡುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೯-ಪುರುಷಪ್ರಧಾನ ಸಂದೇಶಗಳು ಭಾಗ-೩

ಹಿಂದಿನ ಎರಡು ವಾರಗಳಲ್ಲಿ ಕಿಶೊರಿಯರು ಮಹಿಳೆಯರನ್ನು ಮತ್ತು ಪುರುಷರನ್ನು ಜಾಹೀರಾತುಗಳಲ್ಲಿ ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ಚರ್ಚಿಸಿದ್ದಾರೆ. ಈ ವಾರದ ಮಾತುಕತೆಯಲ್ಲಿ ಕಿಶೋರಿಯರು ನಟ-ನಟಿಯರ ಸಂದರ್ಶನಗಳಲ್ಲಿ ಕೇಳುವ ಪ್ರಶ್ನೆಗಳಲ್ಲಿನ ವ್ತತ್ಯಾಸಗಳನ್ನು ಗುರುತಿಸುತ್ತಾರೆ. ಅದಷ್ಟೇ ಅಲ್ಲದೇ ಅವರ ಮೇಲೆ ಕುಟುಂಬದಲ್ಲಿರುವ ಯಾರಿಗೆ ಎಷ್ಟು ಅಧಿಕಾರ ಇದೆ ಎಂದು ಗುರುತಿಸುತ್ತಾರೆ. ಈ ಚಟುವಟಿಕೆಗಳ ಮೂಲಕ ಕುಟುಂಬದಲ್ಲಿ ಅವರ ಸ್ಥಾನಮಾನಗಳ ಬಗ್ಗೆ ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೧೦-ಪುರುಷಪ್ರಧಾನ ಸಂದೇಶಗಳು ಭಾಗ-೪

ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ.  ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೧೧ -ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ - ಭಾಗ ೧

ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಚಲನಚಿತ್ರದ ತುಣುಕುಗಳನ್ನು ನೋಡಿ ಅದನ್ನು ವಿಶ್ಲೇಷಣೆ ಮಾಡುವ ಮೂಲಕ ಪುರುಷ ಪ್ರಧಾನತೆಯನ್ನು ಹೇಗೆ ಮೀರಬಹುದು ಎಂದು ಮಾತನಾಡುತ್ತಾರೆ. ತಮಾಷೆಯ ವಿಡಿಯೋಗಳನ್ನು ಉಪಯೋಗಿಸಿಕೊಂಡು ಈ ಮಾತುಕತೆಯನ್ನು ನಡೆಸುವುದರಿಂದ ಕಿಶೋರಿಯರನ್ನು ಪರಿಣಾಮಕಾರಿಯಾಗಿ ತಲುಪಲು ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೧೨-ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ-ಭಾಗ-೨

ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸಿನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರೇ ಮಾಡುವ ಪಾತ್ರಾಭಿನಯಗಳ ಮೂಲಕ ಬೇರೆ ಬೇರೆ ರೀತಿ ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ ಎಂದು ಚರ್ಚಿಸುತ್ತಾರೆ. ಒಂದೇ ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದರಿಂದ ಅದನ್ನು ಮೀರುವ ರೀತಿ ಕೂಡ ಬೇರೆಯಾಗಿರುತ್ತದೆ, ಹಾಗೆಯೇ ಪುರುಷ ಪ್ರಧಾನತೆಯನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಮೀರಬಹುದು ಎಂದು ತಿಳಿದುಕೊಳ್ಳುವುದು ಈ ಮಾಡ್ಯೂಲಿನ ಉದ್ದೇಶ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೧೩-ನಾನು ನನ್ನ ಅಸ್ಮಿತೆ

ನಮ್ಮ ಮಾತುಕತೆಯನ್ನು ಪ್ರಾರಂಭಿಸಿದಾಗಿನಿಂದ ಕಿಶೋರಿಯರು ಹದಿಹರೆಯ, ಹದಿಹರೆಯದ ಸಮಸ್ಯೆಗಳು/ ಕಾಳಜಿಗಳು, ದೇಹದ ಚಿತ್ರಣ, ಪುರುಷ ಪ್ರಧಾನತೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಇವುಗಳ ಜೊತೆಗೆ ಅವರು ಯೋಚನಾ ಸರಣಿಯನ್ನು ಅಭಿವ್ಯಕ್ತಪಡಿಸಲು ಕೂಡ ತೊಡಗಿದ್ದಾರೆ ಹಾಗು 'ನಾನು ಯಾರು, ನನ್ನ ಕುಟುಂಬದಲ್ಲಿ ನನ್ನ ಸ್ಥಾನಮಾನ ಏನು ಎಂದು ಕೂಡ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರ ಕಲಿಕೆಯನ್ನು ಪ್ರತಿಬಿಂಬಿಸುವಂತೆ ಆಡಿಯೋ ಸಂದರ್ಶನಗಳು ಹಾಗು ವಾಕ್ಸ್‌ ಪಾಪ್‌ಗಳನ್ನು ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೧೪-ಪುರುಷ ಪ್ರಧಾನತೆ, ನನ್ನ ಕಣ್ಣಲ್ಲಿ

ಕಿಶೋರಿಯರ ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಕಿಶೊರಿಯರ ಕಲಿಕೆಯನ್ನು ಪ್ರತಿಬಿಂಬಿಸುವಂತೆ world cafe ಮಾದರಿಯ ಚಟುವಟಿಕೆಯ ಮೂಲಕ ಕಿಶೊರಿಯರು ಅವರ ವಯಸ್ಸಿನ ಕಿಶೊರಿಯರಿ ಎದುರಿಸಬಹುದಾದಂತಹ ಸಮಸ್ಯೆಗಳು ಹಾಗು ಅವರಿಗೆ ಸಿಗಬಹುದಾದಂತಹ ಅವಕಾಶಗಳನ್ನು ಗುಂಪಿನಲ್ಲಿ ಚರ್ಚಿಸುತ್ತಾರೆ. ಅದರ ಜೊತೆಗೆ ಸಮಸ್ಯೆಗಳನ್ನು ಕಡಮೆ ಮಾಡಲು ಹಾಗು ಅಚಿಗುರುವಕಾಶಗಳನ್ನು ಹೆಚ್ಚಿಸಲು ಇರುವ ದಾರಿಗಳನ್ನು ಚರ್ಚಿಸುತ್ತಾರೆ. ಹಾವು-ಏಣಿ ಆಟದ ಪಟವನ್ನು ಮಾದರಿಯಾಗಿರಿಸಿಕೊಂಡು ಪ್ರತಿ ಪ್ರಶ್ನೆಗೂ ರೂಪಿಸಿದ ಚಾರ್ಟ್‌ಗಳ ಮೂಲಕ ಗುಂಪಿನ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರಿಗೆ ತಮ್ಮ ಯೋಚನಾ ಸರಣಿಯನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೧೫- ನನ್ನ ಇಂದು ಬದಲಾಗಲಿ ಮುಂದು

ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾಡ್ಯೂಲ್‌ನ ಸಮಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ, ಕಿಶೋರಿಯರಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಅವರು ಎಲ್ಲ ಮಹಿಳೆಯರಿಗೂ ಏನನ್ನು ಆಶಿಸುತ್ತಾರೆ ಹಾಗು ಏನು ಬದಲಾದರೆ ಮಹಿಳೆಯರಿಗೆ ಒಳ್ಳೆಯದು ಉತ್ತಮ ಎಂದು ಅವರಿಗೆ ಅನಿಸುತ್ತದೆ ಎಂದು ಬರೆಯುತ್ತಾರೆ. ಇದರ ಜೊತೆಗೆ ಅವರು ಈ ವರ್ಷ ಶಾಲಾ ಗೈರು ಹಾಜರಿಗೆ ಕಾರಣಗಳನ್ನು ಕೂಡ ಬರೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೧೬-ಸಮಾರೋಪ

ಕಿಶೋರಿಯರು ಹೊಸ ಹೆಜ್ಜೆ ಹೊಸ ದಿಶೆ ತಂಡದ ಜೊತೆಗೆ ಬಹಳ ದಿನಗಳಿಂದ ಮಾತುಕತೆಯಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಜೊತೆ ಜೊತೆಗಿನ ಪಯಣದ ಸಮಯಯದಲ್ಲಿ ಅವರು ಅವರ ವಿಚಾರ ಸರಣಿಯನ್ನು ವ್ಯಕ್ತಪಡಿಸುವ ರೀತಿಯೂ ಕೂಡ ಸುಧಾರಿಸಿದೆ. ಈ ವಾರದ ಮಾತುಕತೆ ಈ ಶೈಕ್ಷಣಿಕ ವರ್ಷದ ಕೊನೆಯ ಮಾತುಕತೆಯಾಗಿದ್ದು ತಂಡವು ಕಿಶೋರಿಯರನ್ನು ನಮ್ಮ ಕಾರ್ಯಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಕೇಳತ್ತದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಏನು ಇಷ್ಟ ಆಯಿತು,  ಏನು ಇಷ್ಟ ಆಗಿಲ್ಲ, ಮತ್ತು ಯಾವ ವಿಷಯದಲ್ಲಿ ಬದಲಾವಣೆ/ ಸುಧಾರಣೆ ಮಾಡಿಕೊಳ್ಳಬಹುದು ಎಂದು ಕಿಶೋರಿಯರು ತಂಡಕ್ಕೆ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿತ್ರಗಳು

GHGHS

ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...