"ಸಮುದಾಯ ಕುಟುಂಬ ಮಾಹಿತಿ ಸಮೀಕ್ಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
(ಹೊಸ ಪುಟ: ==ಶಾಲಾ ಸಮುದಾಯ ಕುಟುಂಬಗಳ ಸಮೀಕ್ಷೆ== ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿ...) |
|||
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ) | |||
೧ ನೇ ಸಾಲು: | ೧ ನೇ ಸಾಲು: | ||
+ | |||
+ | [http://karnatakaeducation.org.in/KOER/images1/1/19/Demographic_Information_Survey.odt ಸಮುದಾಯ ಕುಟುಂಬ ಮಾಹಿತಿ ಸಮೀಕ್ಷೆ ಕೈಪಿಡಿ ಇಲ್ಲಿ ಡೌನ್ ಲೋಡ್ ಮಾಡಬಹುದು] | ||
==ಶಾಲಾ ಸಮುದಾಯ ಕುಟುಂಬಗಳ ಸಮೀಕ್ಷೆ== | ==ಶಾಲಾ ಸಮುದಾಯ ಕುಟುಂಬಗಳ ಸಮೀಕ್ಷೆ== | ||
ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿರುತ್ತದೆ. ಸಾಮಾನ್ಯವಾಗಿ ಫ್ರೌಡಶಾಲೆಗಳು ವಿವಿಧ ಸಮುದಾಯ, ಬೇರೆ ಬೇರೆ ಸ್ಥಳಗಳ ಮಕ್ಕಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಯಾವ ಯಾವ ಸಮುದಾಯದ ಮಕ್ಕಳಿದ್ದಾರೆ, ಅಲ್ಲಿನ ಸಮುದಾಯದ ಜನ, ಕುಟುಂಬಗಳ ಬಗ್ಗೆ ಅರ್ಥೈಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ. | ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿರುತ್ತದೆ. ಸಾಮಾನ್ಯವಾಗಿ ಫ್ರೌಡಶಾಲೆಗಳು ವಿವಿಧ ಸಮುದಾಯ, ಬೇರೆ ಬೇರೆ ಸ್ಥಳಗಳ ಮಕ್ಕಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಯಾವ ಯಾವ ಸಮುದಾಯದ ಮಕ್ಕಳಿದ್ದಾರೆ, ಅಲ್ಲಿನ ಸಮುದಾಯದ ಜನ, ಕುಟುಂಬಗಳ ಬಗ್ಗೆ ಅರ್ಥೈಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ. | ||
೪೬ ನೇ ಸಾಲು: | ೪೮ ನೇ ಸಾಲು: | ||
===ಮೌಲ್ಯಮಾಪನ ಅಂಶಗಳು=== | ===ಮೌಲ್ಯಮಾಪನ ಅಂಶಗಳು=== | ||
− | ಭಾಗವಹಿಸುವಿಕೆ | + | #ಭಾಗವಹಿಸುವಿಕೆ |
− | ವಿಮರ್ಶನಾತ್ಮಕ ಯೋಚನೆ | + | #ವಿಮರ್ಶನಾತ್ಮಕ ಯೋಚನೆ |
− | ಪ್ರಶ್ನೆ ಕೇಳುವಿಕೆ | + | #ಪ್ರಶ್ನೆ ಕೇಳುವಿಕೆ |
− | ತಂಡಕಾರ್ಯ/ ನಾಯಕತ್ವ | + | #ತಂಡಕಾರ್ಯ/ ನಾಯಕತ್ವ |
− | ಭಾಷಾ ಕೌಶಲ | + | #ಭಾಷಾ ಕೌಶಲ |
− | ಪ್ರಸ್ತುತಿ ಕೌಶಲ | + | #ಪ್ರಸ್ತುತಿ ಕೌಶಲ |
− | ವಿದ್ಯುನ್ಮಾನ ಕೌಶಲ | + | #ವಿದ್ಯುನ್ಮಾನ ಕೌಶಲ |
=ಪಠ್ಯಕ್ರಮಕ್ಕೆ ಸಂಬಂಧೀಕರಣ= | =ಪಠ್ಯಕ್ರಮಕ್ಕೆ ಸಂಬಂಧೀಕರಣ= |
೧೭:೩೪, ೧೫ ಜುಲೈ ೨೦೧೪ ದ ಇತ್ತೀಚಿನ ಆವೃತ್ತಿ
ಸಮುದಾಯ ಕುಟುಂಬ ಮಾಹಿತಿ ಸಮೀಕ್ಷೆ ಕೈಪಿಡಿ ಇಲ್ಲಿ ಡೌನ್ ಲೋಡ್ ಮಾಡಬಹುದು
ಶಾಲಾ ಸಮುದಾಯ ಕುಟುಂಬಗಳ ಸಮೀಕ್ಷೆ
ಶಾಲೆ ಎಂಬುದು ಒಂದು ಚಿಕ್ಕ ಸಮುದಾಯವಾಗಿರುತ್ತದೆ. ಸಾಮಾನ್ಯವಾಗಿ ಫ್ರೌಡಶಾಲೆಗಳು ವಿವಿಧ ಸಮುದಾಯ, ಬೇರೆ ಬೇರೆ ಸ್ಥಳಗಳ ಮಕ್ಕಳನ್ನು ಹೊಂದಿರುತ್ತದೆ. ಶಿಕ್ಷಕರಿಗೆ ತಮ್ಮ ತರಗತಿಯಲ್ಲಿ ಯಾವ ಯಾವ ಸಮುದಾಯದ ಮಕ್ಕಳಿದ್ದಾರೆ, ಅಲ್ಲಿನ ಸಮುದಾಯದ ಜನ, ಕುಟುಂಬಗಳ ಬಗ್ಗೆ ಅರ್ಥೈಸಲು ಈ ಸಮೀಕ್ಷೆ ಸಹಕಾರಿಯಾಗುತ್ತದೆ. ಮಕ್ಕಳಿಗೆ, ತಮ್ಮ ತಂದೆತಾಯಿ ಏನು ಕೆಲಸ ಮಾಡುತ್ತಾರೆ, ವಂಶಪಾರಂಪರ್ಯವಾಗಿ ತಮ್ಮ ಕುಟುಂಬದಲ್ಲಿ ನಡೆದುಬಂದಿರುವ ವೃತ್ತಿಗಳೇನು ಎಂಬುನದನ್ನು ತಿಳಿಯಲು ಸಾಧ್ಯವಾಗುತ್ತದೆ. ಇದು ಅವರವರ ಕುಟುಂಬದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಸಾದ್ಯವಾಗುತ್ತದೆ. ತಮ್ಮ ಕುಟುಂಬಗಳ ವಂಶವೃಕ್ಷ ತಯಾರಿಸುವುದು ಮಕ್ಕಳಿಗೆ ತುಂಬಾ ಕುತೂಹಲ ಮೂಡಿಸುವುದು . ಈ ಮೂಲಕ ಮಕ್ಕಳು ತಮ್ಮ ಪೂರ್ವಿಕರ ಬಗ್ಗೆ ತಿಳಿಯಬಹುದು. ತಮ್ಮ ಪೂರ್ವಿಕರು ಹೇಗೆ ಬದುಕಿದ್ದರು, ಅವರ ಜೀವನ ಶೈಲಿ ಹೇಗಿತ್ತು, ಈಗ ನಮ್ಮ ಜೀವನ ಶೈಲಿ ಹೇಗೆ ಬದಲಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.
ಉದ್ದೇಶಗಳು
- ತರಗತಿಯಲ್ಲಿನ ಮಕ್ಕಳ ಕುಟುಂಬದ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು.
- ಸಮುದಾಯವನ್ನು ಅರ್ಥೈಸಿಕೊಳ್ಳುವುದು
- ಕುಟುಂಬದ ವಂಶವೃಕ್ಷ ಮತ್ತು ಸಂಬಂಧಗಳನ್ನು ಗುರುತಿಸುವುದು
- ಕುಟುಂಬದ ವೃತ್ತಿಗಳೇನು ಎಂಬುದನ್ನು ತಿಳಿಯುವುದು.
- ಕುಟುಂಬ ವಾಸಿಸುತ್ತಿರುವ ಸ್ಥಳದ ಮಾಹಿತಿ, ಸಮಸ್ಯೆಗಳೇನು ಎಂಬುದನ್ನು ಅರಿಯುವುದು.
- ಕುಟುಂಬ ವಾಸಿಸುತ್ತಿರುವ ಸ್ಥಳದ ಪರಿಸ್ಥಿತಿ ಬದಲಾವಣಯಲ್ಲಿ ನನ್ನ ಪಾತ್ರವೇನು ಎಂಬುದನ್ನು ವಿಮರ್ಶಿಸುವುದು.
ಪೂರ್ವಸಿದ್ದತೆ
ಮಕ್ಕಳಿಗೆ ಕುಟುಂಬ ಸಮೀಕ್ಷೆಗೆ ಪೂರಕವಾದ ಪ್ರಶ್ನಾವಳಿಯ ಪಟ್ಟಿಯನ್ನು ಮನೆಗೆಲಸವಾಗಿ ನೀಡುವುದು . ಮನೆಯಲ್ಲಿ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಈ ಪ್ರಶ್ನಾವಳಿಯನ್ನು ತುಂಬಿಕೊಂಡು ಬರಲು ತಿಳಿಸುವುದು .
- ಸಮುದಾಯ ಸಮೀಕ್ಷೆಯ ಯೋಜನೆಯನ್ನು ತಯಾರಿವ ಮೊದಲು ಶಿಕ್ಷಕರು ಕೆಲವು ಪ್ರಶ್ನೆಗಳನ್ನು ಚರ್ಚಿಸುವುದು ಉತ್ತಮ, ಅವುಗಳೆಂದರೆ, ಏನು, ಏಕೆ, ಹೇಗೆ, ಯಾವಾಗ ಮತ್ತು ಯಾರು ಯಾರು ಎಂಬ ಚರ್ಚೆ ನಡೆಯಬೇಕು.ಈ ಪ್ರಶ್ನೆಗಳನ್ನು ಶಿಕ್ಷಕರು ಬುದ್ಧಿಮಂಥನದ ಮೂಲಕ ಚರ್ಚಿಸಿ ಈ ಸಮೀಕ್ಷೆ ಕಾರ್ಯಕ್ರಮಕ್ಕೆ ಸೂಕ್ತ ಸಿದ್ದತೆ ಮಾಡಿಕೊಳ್ಳುವರು..
- ಶಿಕ್ಷಕರು ಜವಾಬ್ದಾರಿ ಹಂಚಿಕೆ ಮಾಡಿಕೊಳ್ಳುವುದು . ಮಕ್ಕಳ ಸುರಕ್ಷತೆಯ ಬಗ್ಗೆಯೂ ಗಮನವಹಿಸುವುದು.
- ಮಕ್ಕಳಲ್ಲಿ ನಾಯಕರನ್ನು ಗುರುತಿಸಿ ಶಿಸ್ತಿನಿಂದ ಈ ಕಾರ್ಯಕ್ರಮ ನಡೆಯಲು ಸೂಚನೆ ನೀಡುವುದು .
ಕಾರ್ಯವಿಧಾನ
ಮಕ್ಕಳಿಗೆ ಕುಟುಂಬ ಸಮೀಕ್ಷೆಗೆ ಪೂರಕವಾದ ಪ್ರಶ್ನಾವಳಿಯ ಪಟ್ಟಿಯನ್ನು ಮನೆಗೆಲಸವಾಗಿ ನೀಡುವುದು . ಮನೆಯಲ್ಲಿ ಮಕ್ಕಳು ತಮ್ಮ ಪೋಷಕರ ನೆರವಿನಿಂದ ಈ ಪ್ರಶ್ನಾವಳಿಯನ್ನು ತುಂಬಿಕೊಂಡು ಬರಲು ತಿಳಿಸುವುದು .ನಂತರ ಸಂಗ್ರಹಿಸಿದ ಮಾಹಿತಯನ್ನು ಕಂಪ್ಯೂಟರ್ ನಲ್ಲಿ ದಾಖಲಿಸಬಹದು. ಕುಟುಂಬದ ಮಾಹಿತಿಯ ಗ್ರಾಪ್ ತಯಾರಿಸಬಹದು. ನಂತರ ಶಿಕ್ಷಕರು ಈ ಪ್ರಶ್ನಾವಳಿಯನ್ನು ಸಂಗ್ರಹಿಸಿಕೊಂಡು ಸಾರಾಂಸಿಕರಿಸಬಹದು. ಈ ಚಟುವಟಿಕೆಯನ್ನು ಸಮಾಜಶಾಸ್ತ್ರದ ಕುಟುಂಬದ ಬಗೆಗಿನ ಪಾಠದ ಸಂದರ್ಭದಲ್ಲಿ ಬಳಸಬಹುದು.
- ವಿದ್ಯಾರ್ಥಿಯ ಹೆಸರು
- ವಾಸಿಸುವ ಸ್ಥಳ , ತಾಲ್ಲೂ ಕು, ಜಿಲ್ಲೆ
- ತಂದೆಯ ಹೆಸರು, ಕೆಲಸ
- ತಾಯಿಯ ಹೆಸರು, ಅವರು ಮಾಡುತ್ತಿರುವ ಕೆಲಸ ಏನು?
- ಅವರು ಯಾವ ಯಾವ ಬೆಳೆಗಳನ್ನು ಬೆಳೆಯುತ್ತಾರ ?
- ನಿಮ್ಮ ಮನೆಯಲ್ಲಿರು ವ ಜನರು ಎಷ್ಟು? , ಸಹೋದರರು? , ಸಹೋದರಿಯರು?
- ಸಹೋದರರು ಸಹೋದರಿಯರು ಶಾಲೆಗೆ ಹೋಗುತ್ತಿದ್ದಾರೆಯೇ?
- ಮಾತನಾಡುವ ಭಾಷೆ ಯಾವುದು?
- ಇದು ನಿಮ್ಮ ಮೂಲ ಸ್ಥಳವೇ? ಇಲ್ಲದಿದ್ದಲ್ಲಿ, ನಿಮ್ಮ ಮೂಲ ಸ್ಥಳ ಯಾವುದು?
- ಅಜ್ಜನ ಹೆಸರು?(ತಂದೆಯ ತಂದೆ) ಅವರು ಏನು ಕೆಲಸ ಮಾಡುತ್ತಿದ್ದಾರೆ?
- ಅಜ್ಜಿಯ ಹೆಸರು? ಅವರು ಏನು ಕೆಲಸ ಮಾಡುತ್ತಿದ್ದಾರೆ?
- ಅವರು ಯಾವ ಯಾವ ಬೆಳೆಗಳನ್ನು ಬೆಳೆಯುತ್ತಿದ್ದರು ?
- ಅವರ ಮನೆ ಎಲ್ಲಿ?
- ಅಜ್ಜನ ಹೆಸರು?(ತಾಯಿಯ ತಂದೆ) , ಅವರು ಏನು ಕೆಲಸ ಮಾಡುತ್ತಿದ್ದಾರೆ?
- ಅಜ್ಜಿಯ ಹೆಸರು, ಅವರು ಏನು ಕೆಲಸ ಮಾಡುತ್ತಿದ್ದಾರೆ?
- ಅವರು ಯಾವ ಯಾವ ಬೆಳೆಗಳನ್ನು ಬೆಳೆಯುತ್ತಿದ್ದರು ?
- ಅವರ ಮನೆ ಎಲ್ಲಿ?
ಈ ಪ್ರಕ್ರಿಯೆಯ ಮೂಲಕ ಮಕ್ಕಳಿಗೆ ವಂಶವೃಕ್ಷ, ಕುಟುಂಬದ ವೃತ್ತಿ, ಪೂರ್ವಿಕರ ಬಗೆಗಿನ ಮಾಹಿತಿ ಸಿಗುತ್ತದೆ. ಈ ಎಲ್ಲಾ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ದಾಖಲಿಸುವ ಮೂಲಕ , ಗ್ರಾಫ್ ತಯಾರಿಸುವ ಮೂಲಕ ಮಕ್ಕಳಿಗೆ ಕಂಪ್ಯೂಟರ್ ಕೌಶಲ ಬೆಳವಣಿಗೆಯಾಗುತ್ತದೆ.
ನಿರೀಕ್ಷಿತ ಫಲಿತಾಂಶ:
- ತರಗತಿಯಲ್ಲಿನ ಮಕ್ಕಳ ಕುಟುಂಬದ ಹಿನ್ನೆಲೆಯನ್ನು ಅರ್ಥೈಸಿಕೊಳ್ಳುವುದು.
- ಸಮುದಾಯವನ್ನು ಅರ್ಥೈಸಿಕೊಳ್ಳುವುದು
- ಕುಟುಂಬದ ವಂಶವೃಕ್ಷ ಮತ್ತು ಸಂಬಂಧಗಳನ್ನು ಗುರುತಿಸುವುದು
- ಕುಟುಂಬದ ವೃತ್ತಿಗಳೇನು ಎಂಬುದನ್ನು ತಿಳಿಯುವುದು.
- ಕುಟುಂಬ ವಾಸಿಸುತ್ತಿರುವ ಸ್ಥಳದ ಮಾಹಿತಿ, ಸಮಸ್ಯೆಗಳೇನು ಎಂಬುದನ್ನು ಅರಿಯುವುದು.
- ಕುಟುಂಬ ವಾಸಿಸುತ್ತಿರುವ ಸ್ಥಳದ ಪರಿಸ್ಥಿತಿ ಬದಲಾವಣಯಲ್ಲಿ ನನ್ನ ಪಾತ್ರವೇನು ಎಂಬುದನ್ನು ವಿಮರ್ಶಿಸುವುದು.
ಮೌಲ್ಯಮಾಪನ ಅಂಶಗಳು
- ಭಾಗವಹಿಸುವಿಕೆ
- ವಿಮರ್ಶನಾತ್ಮಕ ಯೋಚನೆ
- ಪ್ರಶ್ನೆ ಕೇಳುವಿಕೆ
- ತಂಡಕಾರ್ಯ/ ನಾಯಕತ್ವ
- ಭಾಷಾ ಕೌಶಲ
- ಪ್ರಸ್ತುತಿ ಕೌಶಲ
- ವಿದ್ಯುನ್ಮಾನ ಕೌಶಲ