"ಡಿಕ್ಷನರಿ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೧ ನೇ ಸಾಲು: ೧ ನೇ ಸಾಲು:
 +
{| style="height:10px; float:right; align:center;"
 +
|<div style="width:150px;border:none; border-radius:10px;box-shadow: 5px 5px 5px #888888; background:#ffffff; vertical-align:top; text-align:center; padding:5px;">
 +
''[https://teacher-network.in/OER/index.php/Learn_Dictionaries See in English]''</div>
 
===ಪರಿಚಯ===
 
===ಪರಿಚಯ===
  

೦೫:೪೭, ೭ ಆಗಸ್ಟ್ ೨೦೧೭ ದ ಇತ್ತೀಚಿನ ಆವೃತ್ತಿ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ '‘ಗೋಲ್ಡನ್ ಶಬ್ಧಕೋಶ'ವು ಏಕ ಕಾಲದಲ್ಲಿ ವಿವಿಧ ಭಾಷೆಗಳ ಪದಗಳ ಅನುವಾದ,ಅರ್ಥ ಮತ್ತು ವ್ಯಾಕರಣಾಂಶವನ್ನು ತಿಳಿಯಲು ಬಳಸುವುದಾಗಿದೆ. ಇದು ಅಫ್ ಲೈನ್ ನಲ್ಲಿರುವುದರಿಂದ ಅವಶ್ಯವಿರುವ ಶಬ್ಧಕೋಶದ ಕಡತವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು ಇಂಟರ್‌ನೆಟ್ ಇಲ್ಲದಿದ್ದರೂ ಸುಲಭವಾಗಿ ಬಳಕೆ ಮಾಡಬಹುದು.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಈ ಅನ್ವಯಕದ ಮೂಲಕ ಭಾಷೆಯನ್ನು ಅನುವಾದ ಮಾಡಬಹುದು. ಪಠ್ಯದಲ್ಲಿನ ಕಠಿಣ ಪದದ ಅರ್ಥವನ್ನು ತಿಳಿಯಲು ಈ ಅನ್ವಯಕವು ಉಪಯುಕ್ತವಾಗುತ್ತದೆ.
ಆವೃತ್ತಿ Version 1.5.0
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
  1. Google Dictionary,
  2. wiktionary
  3. google translate
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್‌ ಆವೃತ್ತಿಯ ಮೊಬೈಲ್‌ನಲ್ಲಿ ಹಲವು ಅನ್ವಯಕಗಳು ಆಯಾ ಭಾಷಾ ಅನುವಾದಗಳಿಗಾಗಿ ಲಭ್ಯವಿವೆ. ಉದಾ: English
ಅಭಿವೃದ್ದಿ ಮತ್ತು ಸಮುದಾಯ ಸಹಾಯ ಅಧಿಕೃತ ವೆಬ್‌ಪುಟ

ಲಕ್ಷಣಗಳ ಮೇಲ್ನೋಟ

ಇದು ಸಂಪೂರ್ಣ ಯೂನಿಕೋಡ್‌ ಆಧಾರಿತವಾಗಿದ್ದು, ಸ್ಥಳೀಯ ಭಾಷೆಯ ಎಲ್ಲಾ ಪದಗಳು, ಕಠಿಣಪದಗಳು ಹಾಗು ಒತ್ತಕ್ಷರಸಹಿತ ಪದಗಳನ್ನು ಸುಲಭವಾಗಿ ನಮೂದಿಸಬಹುದು. ಕೇವಲ ಭಾಷಾ ಅನುವಾದವನ್ನು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿನ ಪದಗಳ ಸಮಾನಪದ ವಿರುದ್ದಪದ ಮೊದಲಾದ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಸಹ ಈ ಅನ್ವಯಕದಲ್ಲಿ ಕಾಣಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದು ವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “Golden Dictionary ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install golden dictionary


ಅನ್ವಯಕ ಬಳಕೆ

ಗೋಲ್ಡನ್‌ ಡಿಕ್ಷನರಿ ತೆರೆಯುವುದು

Golden dictionary main page.png

Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್‌ಲೋಡ್ (ಆಫ್‌ಲೈನ್‌ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು.

ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡುವುದು

Add dictionaries in Golden Dictionary.png

ಗೋಲ್ಡನ್‌ ಡಿಕ್ಷನರಿಯನ್ನು ಡೌನ್‌ಲೋಡ್‌ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್‌ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪುಟಕ್ಕೆ ಭೇಟಿ ನೀಡಿ. ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್‌ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್‌ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷನರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮಾನ್ಯವಾಗಿ ನಾವು ಡೌನ್‌ಲೋಡ್‌ ಮಾಡಿದ ಡಿಕ್ಷನರಿಗಳು ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ ಆದ್ದರಿಂದ ಈ ವಿಂಡೋದಲ್ಲಿ ಈಗಾಗಲೇ ಗೋಚರಿಸುವ ಡೌನ್‌ಲೋಡ್ ಕಡತಕೋಶವನ್ನು ಆಯ್ಕೆ ಮಾಡಿಕೊಂಡು "Rescan Now" ಮೇಲೆ ಒತ್ತಿ. ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುವ ಡಿಕ್ಷನರಿಯು ಸ್ವಯಂಚಾಲಿತವಾಗಿ ಗೋಲ್ಡನ್ ಡಿಕ್ಷನರಿಗೆ ಸೇರ್ಪಡೆಗೊಳ್ಳುತ್ತದೆ.

ಗೋಲ್ಡನ್‌ ಡಿಕ್ಷನರಿ

Using dictionary.png

ಗೋಲ್ಡನ್‌ ಡಿಕ್ಷನರಿ ಅನ್ವಯಕವನ್ನು ತೆರೆದ ನಂತರ "Lookup" ಎಂಬ ಸ್ಥಳದಲ್ಲಿ ನಿಮ್ಮ ಪದವನ್ನು ನಮೂದಿಸಿ ನಂತರ "Enter" ಒತ್ತಿರಿ. ಚಿತ್ರದಲ್ಲಿ ಕಾಣುವಂತೆ ಆ ಪದದ ಶಬ್ದಕೋಶವನ್ನು ಕಾಣಬಹುದು.

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಅನ್ವಯವಾಗುವುದಿಲ್ಲ

ಉನ್ನತೀಕರಿಸಿದ ಲಕ್ಷಣಗಳು

ಅನ್ವಯವಾಗುವುದಿಲ್ಲ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು

ವಿಕಿಪೀಡಿಯಾ