"TIEE ಭಾಷಾ ಶಿಕ್ಷಕರ ಕಾರ್ಯಗಾರ 2024-2025" ಆವೃತ್ತಿಗಳ ಮಧ್ಯದ ಬದಲಾವಣೆಗಳು
ಚು (added Category:TIEE using HotCat) |
ಚು (added Category:TIEE ಕಾರ್ಯಗಾರಗಳು using HotCat) |
||
೩೧೫ ನೇ ಸಾಲು: | ೩೧೫ ನೇ ಸಾಲು: | ||
[[ವರ್ಗ:TIEE]] | [[ವರ್ಗ:TIEE]] | ||
+ | [[ವರ್ಗ:TIEE ಕಾರ್ಯಗಾರಗಳು]] |
೦೮:೩೫, ೨೮ ಆಗಸ್ಟ್ ೨೦೨೪ ನಂತೆ ಪರಿಷ್ಕರಣೆ
TIEE ಭಾಷಾ ಶಿಕ್ಷಕರ ಕಾರ್ಯಗಾರ 2024-2025
ಕಾರ್ಯಕ್ರಮದ ಮೇಲ್ನೋಟ
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ದಕ್ಷಿಣ 3 ಬ್ಲಾಕ್‌ನಲ್ಲಿರುವ ಉನ್ನತ ಪ್ರಾಥಮಿಕ ಶಾಲೆಗಳ (HPS) ವಿದ್ಯಾರ್ಥಿಗಳಲ್ಲಿ ಸಮನ್ವಯ ಕಲಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಫಾರ್ ಚಾಂಜ್ ಸಂಸ್ಥೆಯು "ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' (TIEE - Technology integration for equitable education) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಹಾಗೂ ಬೋಧನಾ ಅಭ್ಯಾಸಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಶಿಕ್ಷಕರನ್ನು ಸಬಲೀಕರಣಗೊಳಿಸುವುದಕ್ಕೆ ಈ ಯೋಜನೆಯು ಸಮನ್ವಯ ಶಿಕ್ಷಣದ ವಿಧಾನಗಳೆಡೆಗೆ ಗಮನಹರಿಸುತ್ತದೆ. TIEE ಕಾರ್ಯಕ್ರಮವು ಒಂದು ವರ್ಷದ ಪ್ರಾಯೋಗಿಕ ಯೋಜನೆಯಿಂದ ಪ್ರಾರಂಭವಾಗಿ ಎರಡು ವರ್ಷಗಳ ವಿಸ್ತರಣೆಯೊಂದಿಗೆ ಮೂರು ವರ್ಷಗಳ ಪ್ರಯತ್ನದಿಂದ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ-3 ಬ್ಲಾಕ್ ನ ಆಯ್ದ HPS ಶಾಲೆಗಳಲ್ಲಿ ಪ್ರಾಯೋಗಿಕ ಹಂತವನ್ನು ಅಳವಡಿಸಲಾಗಿದ್ದು, ಶಾಲಾ ಹಂತದಲ್ಲಿ ಸಮನ್ವಯ ಶಿಕ್ಷಣಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಮತ್ತು ಅಭ್ಯಾಸಗಾರರ ಸಮುದಾಯಗಳನ್ನು ನಿರ್ಮಿಸುವುದರ ಜೊತೆಗೆ ಯೋಜನೆಯ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ (KOER) ಭಂಡಾರದಲ್ಲಿ ಕರ್ನಾಟಕದಾದ್ಯಂತ ಶಿಕ್ಷಕರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟಿಸಲಾಗಿದೆ.
ಪ್ರಸ್ತುತ ವರ್ಷದಲ್ಲಿ (2023-2025), TIEE ಈ ಕೆಲವು ಸವಾಲುಗಳನ್ನು ಎದುರಿಸುವುದನ್ನು ಮುಂದುವರಿಸುತ್ತಾ ಡಿಜಿಟಲ್ ತಂತ್ರಾಂಶಗಳನ್ನು ಮತ್ತು ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸುವ ಮೂಲಕ ಶಾಲಾ-ತರಗತಿಗಳನ್ನು ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಕಲಿಕೆಯ ಸ್ಥಳವನ್ನಾಗಿ ಮಾಡುವುದರ ಮೂಲಕ ಶಿಕ್ಷಣದ ಸಮತೆ ಮತ್ತು ಸಮನ್ವತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದ್ದು ಯೋಜನೆಯ ವಿಧಾನಗಳು ವಿವಿಧ ಡಿಜಿಟಲ್ ವಿಧಾನ/ತಂತ್ರಗಳನ್ನು ಬಳಸಿಕೊಂಡು ಸಮನ್ವಯ ಶಿಕ್ಷಣದ ವಾತಾವರಣವನ್ನು ಸೃಜಿಸುವ ಸಲುವಾಗಿ 'ಶೈಕ್ಷಣಿಕ ಬೆಂಬಲ ವ್ಯವಸ್ಥೆಯನ್ನು' ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಾರ್ಯಕ್ರಮದ ಉದ್ದೇಶಗಳು
• ಡಿಜಿಟಲ್ ತಂತ್ರಾಂಶ ಮತ್ತು ಸಂಪನ್ಮೂಲಗಳನ್ನು ಅರ್ಥಪೂರ್ಣವಾಗಿ ಸಂಯೋಜಿಸುವ ಮೂಲಕ ಶಾಲಾ-ತರಗತಿಗಳನ್ನು ಎಲ್ಲಾ ಮಕ್ಕಳಿಗೆ ಪರಿಣಾಮಕಾರಿ ಕಲಿಕೆಯ ಸ್ಥಳವನ್ನಾಗಿ ಮಾಡುವುದರ ಮೂಲಕ ಶಿಕ್ಷಣದ ಸಮತೆ ಮತ್ತು ಸಮನ್ವತೆಯನ್ನು ಉತ್ತೇಜಿಸುವುದು
• ವೈವಿಧ್ಯಮಯ ಬೋಧನ ವಿಧಾನವನ್ನು ಬಳಸಿಕೊಂಡು ತಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯತೆಗಳನ್ನು ಪೂರೈಸಲು ಶಿಕ್ಷಕರ ಸಾಮರ್ಥ್ಯಗಳನ್ನು ಬಲಪಡಿಸುವುದು
• ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರವೇಶಿಸಿ ತಮ್ಮ ತರಗತಿಯಲ್ಲಿ ಬಳಸಲು ಶಿಕ್ಷಕರಿಗೆ ಅನುವು ಮಾಡಿಕೊಡಲು ಪ್ರಾಯೋಗಿಕ ಅನುಭವಗಳ ಮೂಲಕ ಸಹಕಾರ ಒದಗಿಸುವುದು
• ಶಾಲಾ ಅಭಿವೃದ್ಧಿ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನಗಳನ್ನು ಸಂಯೋಜಿಸುವಲ್ಲಿ ಶಾಲೆಗಳನ್ನು ಬೆಂಬಲಿಸುವುದು
• ಶಿಕ್ಷಕರ ಕಲಿಕಾ ಸಮುದಾಯವನ್ನು ರಚಿಸುವ ಮೂಲಕ ಶಿಕ್ಷಕರಲ್ಲಿ ಸಹಭಾಗಿತ್ವದ ಕಲಿಕೆಯನ್ನು ಉತ್ತೇಜಿಸುವುದು
• ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗೆ ಬೆಂಬಲ ನೀಡುವುದು
ಕಾರ್ಯಾಗಾರದ ಉದ್ದೇಶಗಳು
• ಶಿಕ್ಷಕರು ತಮ್ಮ ಪ್ರಸ್ತುತ ತರಗತಿಯ ಅಭ್ಯಾಸಗಳನ್ನು ಅವಲೋಕಿಸಲು ಮತ್ತು ಅವರ ನಂಬಿಕೆಗಳು ಹಾಗೂ ಅಭ್ಯಾಸದಲ್ಲಿ ಸಾಧ್ಯವಾಗುವ ಪರಿಷ್ಕರಣೆಯ (ಸರಿಪಡಿಸಿಕೊಳ್ಳುವ) ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುವುದು
• ತರಗತಿಯಲ್ಲಿನ ಅಗತ್ಯಗಳ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಶಿಕ್ಷಕರಿಗೆ ಸಹಾಯ ಮಾಡುವುದು ಮತ್ತು ಭಾಷಾ ತರಗತಿಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನ ವಿಧಾನವನ್ನು ಸಂಯೋಜಿಸುವ ಸಾಧ್ಯತೆಗಳನ್ನು ಊಹಿಸಲು ಶಿಕ್ಷಕರಿಗೆ ಅನುವು ಮಾಡಿಕೊಡುವುದು
• ಶಿಕ್ಷಕರು ತಮ್ಮ TPCK ಅನ್ನು ಹೆಚ್ಚಿಸಿಕೊಳ್ಳಲು ವಿವಿಧ ಡಿಜಿಟಲ್ ಉಪಕರಣಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಲು ಸಹಾಯ ಮಾಡುವುದು
• ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ ಮುಂದುವರಿಸುವ ಮತ್ತು ನಿರಂತರ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕೆಯ ಸಮುದಾಯವನ್ನು ನಿರ್ಮಿಸುವುದು
• ಆಡಿಯೋ ಕಥೆಗಳು ಭಾಷಾ ಬೋಧನೆಯನ್ನು ಬೆಂಬಲಿಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಭವ ಪಡೆಯಲು ಶಿಕ್ಷಕರಿಗೆ ಸಹಾಯ ಮಾಡುವುದು
• ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನಾ ತಂತ್ರಗಳನ್ನು ಹೇಗೆ ಬಳಸಬಕೆಂದು ಅರ್ಥಮಾಡಿಕೊಳ್ಳುವುದು
• ಮೊಬೈಲ್ ಆಧಾರಿತ ಆಡಿಯೋ ಕಥೆಗಳನ್ನು ಬಳಸಿ ಮಾಡಬಹುದಾದ ವಿವಿಧ ರೀತಿಯ ತರಗತಿ ಚಟುವಟಿಕೆಗಳನ್ನು ಚರ್ಚಿಸುವುದು
• ಮಕ್ಕಳಲ್ಲಿ ಆಲಿಸುವ ಮತ್ತು ಮಾತನಾಡುವ ಕೌಶಲ್ಯವನ್ನು ಬೆಳೆಸಲು ಕಥಾ ಬೋಧನಾ ವಿದಾನ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅನ್ವೇಷಿಸುವುದು
ಭಾಷಾ ಶಿಕ್ಷಕರ ಕಾರ್ಯಾಗಾರದ ನಿರೀಕ್ಷಿತ ಫಲಿತಾಂಶಗಳು
• ಶಿಕ್ಷಕರು ಕಥಾ-ಆಧಾರಿತ ಬೋಧನ ವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೆ
• ಶಿಕ್ಷಕರು ಭಾಷಾ ಬೋಧನೆಗೆ ಸಂಬಂಧಿಸಿದಂತೆ ಅವರ ನಂಬಿಕೆಗಳು ಮತ್ತು ಅಭ್ಯಾಸಗಳನ್ನು ಪರ್ಯಾಲೋಚಿಸುತ್ತಾರೆ
• ಶಿಕ್ಷಕರು ಭಾಷಾ ಕಲಿಕೆಗಾಗಿ ಆಡಿಯೊ ಕಥೆಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಅನುಭವ ಪಡೆಯುತ್ತಾರೆ
• ಭಾಷಾ ಸ್ವಾಧೀನತೆಯನ್ನು ಬೆಂಬಲಿಸಲು ಪರಿಣಾಮಕಾರಿ ಆಲಿಸುವಿಕೆಯನ್ನು ಅಭಿವೃದ್ಧಿಪಡಿಸಲು ಶಿಕ್ಷಕರು ಬೋಧನ ತಂತ್ರಗಳನ್ನು ಅನ್ವೇಷಿಸುತ್ತಾರೆ
• ಕಲಿಕಾ-ಬೋಧನೆಯಲ್ಲಿ ಆಡಿಯೊ ಕಥೆಗಳನ್ನು ಸಂಯೋಜಿಸಲು ಕಥೆ ಖಜಾನೆ ಯನ್ನು ಬಳಸುವುದರ ಪರಿಚಿತತೆ ಮತ್ತು ಸೌಕರ್ಯವನ್ನು ಪಡೆದುಕೊಳ್ಳುತ್ತಾರೆ
• ತರಗತಿಯಲ್ಲಿ ಅನುಷ್ಠಾನ ಮಾಡುವ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಾರೆ
ಶಿಕ್ಷಕರ ಮಾಹಿತಿ
ಶಿಕ್ಷಕರ ಮಾಹಿತಿ ನಮೂನೆ - TIEE ಭಾಷಾ ಶಿಕ್ಷಕರ ಕಾರ್ಯಾಗಾರ - ಈ ನಮೂನೆಯು 'ಶಿಕ್ಷಣ ಸಮತೆಗಾಗಿ ತಂತ್ರಜ್ಞಾನದ ಅಳವಡಿಕೆ' ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರ ಬಗ್ಗೆ ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವುದು.
ಕಾರ್ಯಾಗಾರದ ಕಾರ್ಯಸೂಚಿ
DAY 1 | |||||
Sl. No. | Timing | Sessions | Session Details | Who | Resource Links |
Session 1 | 10:00AM to 10:30AM | Introduction
ಪರಿಚಯ |
1. Introduction to IT for Change’s work
ಐಟಿ ಫಾರ್ ಚೇಂಜ್ ನ ಕಾರ್ಯದ ಬಗ್ಗೆ ಪರಿಚಯ 2. Sharing the workshop agenda and expectation setting ಕಾರ್ಯಗಾರದ ಕಾರ್ಯಸೂಚಿಯನ್ನು ಹಂಚಿಕೊಳ್ಳುವುದು ಮತ್ತು ನಿರೀಕ್ಷೆಗಳನ್ನು ಹೊಂದಿಸುವುದು. |
GMP | TIEE ಕಾರ್ಯಕ್ರಮದ ಮೇಲ್ನೋಟ - ಪ್ರಸ್ತುತಿ ಸ್ಲೈಡ್‌ಗಳು |
Session 2 | 10:30 to 11:00 AM | Shared Context Understanding | 1. Understanding the teachers' perspectives on language learning (teacher questionnaire);
ಭಾಷಾ ಕಲಿಕೆಯಲ್ಲಿ ಶಿಕ್ಷಕರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವುದು (ಶಿಕ್ಷಕರ ಪ್ರಶ್ನಾವಳಿ); 2. Writing a sample lesson plan for any textbook lesson/ language topic ಪಠ್ಯ ಪುಸ್ತಕದ ಯಾವುದಾದರೂ ಪಾಠ/ಭಾಷಾ ವಿಷಯಕ್ಕೆ ಮಾದರಿ ಪಾಠ ಯೋಜನೆಯನ್ನು ಬರೆಯುವುದು |
RS, GMP | Teacher information form + beliefs questionnaire on language learning |
Tea Break (11:00 to 11:15 AM*) | |||||
Session 3 | 11:15 AM – 12:15 PM | Myths related to Language Learning
ಭಾಷಾ ಕಲಿಕೆಗೆ ಸಂಬಂಧಿಸಿದ ತಪ್ಪು ಕಲ್ಪನೆಗಳು |
Discussing on myths and challenges related to language learning
ಭಾಷಾ ಕಲಿಕೆಯಲ್ಲಿನ ಸವಾಲುಗಳು ಮತ್ತು ತಪ್ಪು ಕಲ್ಪನೆಗಳ ಕುರಿತು ಚರ್ಚಿಸುವುದು |
RS | 1. Challenges related to Language-Teaching (mindmap);
2. Myths about Language Learning (video) |
Session 4 | 12:15PM to 1:00PM | BICS and CALPS
ಬಿಕ್ಸ್ ಮತ್ತು ಕಾಲ್ಪ್ |
1. What is BICS
ಬಿಕ್ಸ್ ಎಂದರೇನು? 2. What is CALPS ಕಾಲ್ಪ್ ಎಂದರೇನು? 3. How they play a role in language learning ಭಾಷಾ ಕಲಿಕೆಯಲ್ಲಿ ಇವು ಹೇಗೆ ಪಾತ್ರ ವಹಿಸುತ್ತವೆ |
PVS | Slide-deck (Kannada) |
Lunch (1:00 to 2:00 PM) | |||||
2:00 PM– 2:30PM | Energiser | Krashen Activities
ಕ್ರಾಶೆನ್ ಚಟುವಟಿಕೆಗಳು |
RS | ||
Session 5 | 2:30PM to 3:30PM | Role of Storytelling in Language Learning
ಭಾಷಾ ಕಲಿಕೆಯಲ್ಲಿ ಕಥೆ ಹೇಳುವುದರ ಪಾತ್ರ |
1. Storytelling as a pedagogical tool;
ಒಂದು ಬೋಧನ ಸಾಧನವಾಗಿ ಕಥೆ ಹೇಳುವುದು; 2. Demo session (Kannada) using Kathe-khajane audiostory; ಕಥೆ-ಖಜಾನೆ ಆಡಿಯೊ ಸ್ಟೋರಿ ಬಳಸಿ ಡೆಮೊ ಸೆಷನ್ (ಕನ್ನಡ); |
PVS | Slide-deck; www.storyweaver.org.in |
Tea Break (3:45 to 4:00 PM) | |||||
Session 7 | 3:45 PM to 4:45PM | Kathe Khajane
ಕಥೆ ಖಜಾನೆ |
1. Installing Antenna-pod app;
ಆಂಟೆನಾ-ಪಾಡ್ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದು; 2. Demo of Antenna-pod and accessing audio stories; ಆಂಟೆನಾ-ಪಾಡ್‌ನ ಡೆಮೊ ಮತ್ತು ಆಡಿಯೊ ಕಥೆಗಳನ್ನು ಪ್ರವೇಶಿಸುವುದು; 3. Hands-on exploration by teachers; ಶಿಕ್ಷಕರಿಂದ ಪ್ರಾಯೋಗಿಕ ಅನ್ವೇಷಣೆ; 4. Troubleshooting, if need be ಅಗತ್ಯವಿದ್ದರೆ ಸಮಸ್ಯೆ ನಿವಾರಣೆ |
GMP | Antennapod installation link |
Closing for the Day | 4:45 PM to 5:00PM | Summing up for the day
ದಿನದ ಸಾರಾಂಶ |
Consolidation of themes and suggestions for integration into classroom teaching; Inputs from teachers
ವಿಷಯ ವಸ್ತುಗಳನ್ನು ಹೊಂದಿಸುವುದು ಮತ್ತು ಅದನ್ನು ತರಗತಿಯಲ್ಲಿ ಸಂಯೋಜಿಸಲು ಶಿಕ್ಷಕರಿಂದ ಸಲಹೆಗಳು. |
RS | Ask teachers to explore some stories on their own |
DAY 2 | |||||
Sl. No. | Timing | Sessions | Session Details | Resource Links | |
Session 1 | 10:00 – 10:30AM | Recap + Troubleshooting
ಪುನರಾವಲೋಕನ ಮತ್ತು ಸಮಸ್ಯೆ ನಿವಾರಣೆ |
Recap of Day 1 themes and Kathe Khajane/ Storyweaver
ಮೊದಲನೇ ದಿನದ ವಿಷಯ ವಸ್ತುವಿನ ಪುಸರಾವಲೋಕನ ಮತ್ತು ಕಥೆ ಖಜಾನೆ/ಸ್ಟೋರಿವೀವರ್ |
RS | Antennapod installation link,
www.storyweaver.org.in |
Session 2 | 10:30 to 11:30 AM | Teaching English using Audio Stories
ಆಡಿಯೋ ಕಥೆಗಳನ್ನು ಬಳಸಿಕೊಂಡು ಇಂಗ್ಲಿಷ್ ಕಲಿಸುವುದು |
1. Benefits of effective listening in the language classroom (why audio-stories, connect to BICS and CALP);
ಭಾಷಾ ತರಗತಿಯಲ್ಲಿ ಪರಿಣಾಮಕಾರಿ ಆಲಿಸುವಿಕೆಯ ಪ್ರಯೋಜನಗಳು (ಆಡಿಯೋ-ಕಥೆಗಳು ಏಕೆ, BICS ಮತ್ತು CALP ಗೆ ಸಂಪರ್ಕ ಕಲ್ಪಿಸುವುದು) 2. Demo session (English) using Kathe-khajane audiostory - Connecting to textbook lessons; ಕಥೆ-ಖಜಾನೆ ಆಡಿಯೊ ಸ್ಟೋರಿ ಬಳಸಿ ಡೆಮೊ ಸೆಷನ್ (ಇಂಗ್ಲಿಷ್) - ಪಠ್ಯಪುಸ್ತಕ ಪಾಠಗಳಿಗೆ ಸಂಪರ್ಕ ಕಲ್ಪಿಸಿ. |
RS | Audio story + storyweaver PDF, additional resources/ handouts |
Tea Break (11:30 to 11:45 AM) | |||||
Session 3 | 11:30AM -12:30PM | Activities with Audio-stories
ಆಡಿಯೋ-ಕಥೆಗಳೊಂದಿಗೆ ಚಟುವಟಿಕೆಗಳು |
Discussion on pre, during and post-listening activities
ಪೂರ್ವ ಆಲಿಸುವಿಕೆ ಚಟುವಟಿಕೆ, ಆಲಿಸುವಾಗಿನ ಚಟುವಟಿಕೆ ಮತ್ತು ಆಲಿಸಿದ ನಂತರದ ಚಟುವಟಿಕೆ |
PVS | Activity page for Kannada story, Activity Page for same story in English |
Session 4 | 12:30 - 1:00 PM | Hands-on session (In smaller groups)
ಪ್ರಾಯೋಗಿಕ ತರಗತಿ (ಚಿಕ್ಕ ಗುಂಪುಗಳಿಗೆ) |
1. Creating activities and lesson plan using Kathe khajane/ Storyweaver stories;
ಕಥೆ ಖಜಾನೆ/ ಸ್ಟೋರಿವೀವರ್ ಕಥೆಗಳನ್ನು ಬಳಸಿಕೊಂಡು ಚಟುವಟಿಕೆ ಮತ್ತು ಪಾಠ ಯೋಜನೆಯನ್ನು ರಚಿಸುವುದು; 2. Discussion on how the story can be used in their classroom teaching; ಅವರ ತರಗತಿಯ ಬೋಧನೆಯಲ್ಲಿ ಕಥೆಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಚರ್ಚೆ; |
RS, PVS | Bilingual handout on activity creation |
Lunch (1:00 to 1:45) | |||||
Session 4 | 2:00 – 3:00PM | Continuation of hands-on activity
ಪ್ರಾಯೋಗಿಕ ಚಟುವಟಿಕೆಯನ್ನು ಮುಂದುವರಿಸುವುದು |
Continuation of group work followed by presentations and discussion
ಪ್ರಸ್ತುತಿ ಮತ್ತು ಚರ್ಚೆಯ ನಂತರ ಗುಂಪು ಕಾರ್ಯವನ್ನು ಮುಂದುವರೆಸುವುದು |
RS, PVS | |
Session 5 | 3:00 to 3:30 PM | Taking the resources to the classroom
ಸಂಪನ್ಮೂಲಗಳನ್ನು ತರಗತಿಗೆ ಕೊಂಡೊಯ್ಯುವುದು |
1. Feedback on resources shared;
ಹಂಚಿಕೊಳ್ಳಲಾದ ಸಂಪನ್ಮೂಲಗಳ ಕುರಿತು ಪ್ರತಿಕ್ರಿಯೆ; 2. Strategies to take the resources to the classroom; ಸಂಪನ್ಮೂಲಗಳನ್ನು ತರಗತಿಗೆ ಕೊಂಡೊಯ್ಯುವ ತಂತ್ರಗಳು; 3. Creating a Community of Practice (CoP) - expectations from participants ಅಭ್ಯಾಸದ ಸಮುದಾಯವನ್ನು ರಚಿಸುವುದು (CoP) - ಭಾಗವಹಿಸುವವರಿಂದ ನಿರೀಕ್ಷೆಗಳು |
GMP | |
Tea Break (3:30 to 3:45 PM) | |||||
Session 5 | 3:45 to 4:15PM | Additional resources and support
ಹೆಚ್ಚುವರಿ ಸಂಪನ್ಮೂಲಗಳು ಮತ್ತು ಬೆಂಬಲ |
1. Demo of KOER pages - workshop page (access, use, links);
KOER ಪುಟಗಳ ಡೆಮೊ - ಕಾರ್ಯಾಗಾರ ಪುಟ (ಪ್ರವೇಶ, ಬಳಕೆ, ಲಿಂಕ್‌ಗಳು); 2. Classroom toolkit links ತರಗತಿಯ ಸಾಧನಗಳ ಲಿಂಕ್‌ಗಳು 3. Other ways in which IT for Change can support ಐಟಿ ಫಾರ್ ಚೇಂಜ್ ಬೆಂಬಲಿಸಬಹುದಾದ ಇತರೆ ಮಾರ್ಗಗಳು |
KOER links | |
Session 6 | 4:15 to 5:00 PM | Feedback form and Way Forward
ಹಿಮ್ಮಾಹಿತಿ ನಮೂನೆ ಮತ್ತು ಮುಂದುವರೆಯುವುದು |
Consolidation of themes, next steps, inputs from teachers, Feedback form.
ವಿಷಯ ವಸ್ತುಗಳ ಏಕೀಕರಣ, ಮುಂದಿನ ಹಂತಗಳು, ಶಿಕ್ಷಕರಿಂದ ಮಾಹಿತಿ, ಹಿಮ್ಮಾಹಿತಿ ನಮೂನೆ |
Feedback form for participants |
ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ನಡೆಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ.
ಸಂಪನ್ಮೂಲಗಳು
- ಕಥೆ-ಖಜಾನೆ- ಧ್ವನಿ ಕಥೆಗಳು
- ಭಾಷಾ ಸ್ವಾಧೀನತೆ ಮತ್ತು ಕಲಿಕೆಯಲ್ಲಿ ಆಲಿಸುವ ಕೌಶಲ್ಯದ ಪ್ರಾಮುಖ್ಯತೆ
- ಭಾಷಾ ತರಗತಿಯಲ್ಲಿ ಆಡಿಯೋ ಕಥೆಗಳನ್ನು ಬಳಸುವುದು
- ಸ್ಟೋರೀವೀವರ್ : ಮತ್ತಷ್ಟು ವಿಧ ವಿಧದ ಕಥೆಗಳನ್ನು ಓದಲು ಮತ್ತು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
- ಸಾಮಾಜಿಕ ಮತ್ತು ಶೈಕ್ಷಣಿಕ ಭಾಷಾ ಕೌಶಲ್ಯ(BICS and CALP) - ಪ್ರಸ್ತುತಿ ಸ್ಲೈಡ್‌ಗಳು
- ಕಥೆ-ಆಧಾರಿತ ಬೋಧನ ವಿಧಾನ - ಪ್ರಸ್ತುತಿ ಸ್ಲೈಡ್‌ಗಳು
- ಪರಿಣಾಮಕಾರಿ ಆಡಿಯೋ ಕಥೆ ಆಧಾರಿತ ಚಟುವಟಿಕೆಗಳನ್ನು ರಚಿಸಲು ಸಲಹೆಗಳು
- ಚಟುವಟಿಕೆ ವಿನ್ಯಾಸದ ಮಾದರಿಯ ಕೈಪಿಡಿ
- ತರಗತಿಯಲ್ಲಿ ಅನುಷ್ಠಾನದ ಕ್ರಿಯಾ ಯೋಜನೆಯ ವಿನ್ಯಾಸ
ತಂತ್ರಜ್ಞಾನ ಆಧರಿತ ಸಂಪನ್ಮೂಲಗಳು
ಆಂಟೆನಾಪಾಡ್ ಇನ್‌ಸ್ಟಾಲ್ ಮಾಡಿ, ಕಥೆ ಖಜಾನೆಯ ಕಥೆಗಳನ್ನು ಪ್ರವೇಶಿಸುವುದು
ಆಂಟೆನಾಪಾಡ್ ಆಪ್ ಡೌನ್ಲೋಡ್: https://play.google.com/store/apps/details?id=de.danoeh.antennapod ಧ್ವನಿ ಕಥೆಗಳಿಗೆ ಚಂದಾದಾರರಾಗಲು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ಕಿಸಿ: https://kathe-khajane.teacher-network.in/pages/help/ka-help.html |
---|
|