"ಜ್ಯಾ ದ ಲಂಬಾರ್ಧಕವು ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
೩೨ ನೇ ಸಾಲು: ೩೨ ನೇ ಸಾಲು:
 
# ನೀವು ಏನು ಊಹಿಸುತ್ತೀರಿ?
 
# ನೀವು ಏನು ಊಹಿಸುತ್ತೀರಿ?
 
# ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು.
 
# ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು.
 +
 +
[[ವರ್ಗ:ವೃತ್ತಗಳು]]

೧೧:೨೨, ೨೧ ಫೆಬ್ರುವರಿ ೨೦೨೨ ದ ಇತ್ತೀಚಿನ ಆವೃತ್ತಿ

ಪ್ರತಿಯೊಂದು ಲಂಬಾರ್ಧಕವು ಕೇಂದ್ರದ ಮೂಲಕ ಹಾದುಹೋಗುವುದರಿಂದ, ಕೇಂದ್ರವು ಪ್ರತಿಯೊಂದರ ಮೇಲೆಯೂ ಇರಬೇಕು, ಆದ್ದರಿಂದ ಕೇಂದ್ರವು ಅವುಗಳ ಏಕೈಕ ಸಾಮಾನ್ಯ ಬಿಂದುವಾಗಿರಬೇಕು.

ಕಲಿಕೆಯ ಉದ್ದೇಶಗಳು :

  • ವೃತ್ತ ಮತ್ತು ಜ್ಯಾ ದ ಅರ್ಥ.
  • ಜ್ಯಾ ಗೆ ವೃತ್ತದ ಕೇಂದ್ರದಿಂದ ಲಂಬ ದೂರವನ್ನು ಅಳೆಯುವ ವಿಧಾನ.
  • ಜ್ಯಾದ ಗುಣಲಕ್ಷಣಗಳು.
  • ವೃತ್ತದಲ್ಲಿ ಗೊತ್ತಿಲ್ಲದ ಅಳತೆಗಳನ್ನು ಕಂಡುಹಿಡಿಯಲು ಜ್ಯಾ ದ ಗುಣಲಕ್ಷಣಗಳೊಂದಿಗೆ ಸಂಭಂದಿಸಿವುದಲ್ಲಿ ಸಾಧ್ಯವಾಗುತ್ತದೆ.
  • ವೃತ್ತಗಳಲ್ಲಿನ ಮತ್ತಷ್ಟು ಪ್ರಮೇಯಗಳ ಪುರಾವೆಗಾಗಿ ಜ್ಯಾದ ಗುಣಲಕ್ಷಣಗಳನ್ನು ಅನ್ವಯಿಸಿ.

ಅಂದಾಜು ಸಮಯ:

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್: ಲ್ಯಾಪ್ ಟಾಪ್, ಜಿಯೋಜಿಬ್ರಾ ಕಡತಗಳು, ಪ್ರೊಜೆಕ್ಟರ್ ಮತ್ತು ಪಾಯಿಂಟರ್

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ವೃತ್ತದ ಮೂಲ ಪರಿಕಲ್ಪನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪದಗಳನ್ನು ಚರ್ಚಿಸಿರಬೇಕು.

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ಜಿಯೋಜಿಬ್ರಾ ಕಡತವನ್ನು ಮಕ್ಕಳಿಗೆ ತೋರಿಸಿ ಮತ್ತು ಕೆಳಗೆ ಪಟ್ಟಿ ಮಾಡಲಾದ ಪ್ರಶ್ನೆಗಳನ್ನು ಕೇಳಿ.

  • ಜ್ಯಾ ಎಂದರೇನು?
  • ಪರಿಧಿಯಲ್ಲಿ ಎಷ್ಟು ಬಿಂದುಗಳಲ್ಲಿ ಜ್ಯಾವು ವೃತ್ತವನ್ನು ಮುಟ್ಟುತ್ತದೆ.
  • ವಿಭಜಕ ಎಂದರೇನು?
  • ಲಂಬಾರ್ಧಕ ಎಂದರೇನು?
  • ಪ್ರತಿಯೊಂದು ಸಂದರ್ಭದಲ್ಲೂ ಲಂಬಾರ್ಧಕವೂ ಯಾವ ಬಿಂದುವಿನ ಮೂಲಕ ಹಾದುಹೋಗುತ್ತದೆ?

ಮೌಲ್ಯ ನಿರ್ಣಯ ಪ್ರಶ್ನೆಗಳು

  1. ಜ್ಯಾ ಮತ್ತು ತ್ರಿಜ್ಯದ ಛೇದಕ ಬಿಂದುವಿನಲ್ಲಿ ರೂಪುಗೊಂಡ ಕೋನ ಯಾವುದು?
  2. ವಿದ್ಯಾರ್ಥಿಗಳು ಲಂಬಾರ್ಧಕ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?
  3. ಯಾವುದೇ ವೃತ್ತದಲ್ಲಿ ಯಾವುದೇ ಉದ್ದದ ಜ್ಯಾಗಳಿಗೆ ಲಂಬಾರ್ಧಕವನ್ನು ಎಳೆದಾಗ ಅದು ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆಯೆಂದು ವಿದ್ಯಾರ್ಥಿಗಳು ಅರಿತುಕೊಳ್ಳುತ್ತಾರೆಯೇ?.
  4. ನೀವು ಏನು ಊಹಿಸುತ್ತೀರಿ?
  5. ಯಾವುದೇ ಉದ್ದದ ಜ್ಯಾ ಗೆ ಲಂಬಾರ್ಧಕವೂ ಯಾವಾಗಲೂ ವೃತ್ತದ ಕೇಂದ್ರದಲ್ಲಿ ಹಾದುಹೋಗುತ್ತದೆ ಎಂದು ನೀವು ಹೇಗೆ ತರ್ಕಿಸಬಹುದು.