ಭಾರತದ ಪ್ರಾಕೃತಿಕ ವಿಭಾಗಗಳು ಚಟುವಟಿಕೆ1
ಬದಲಾವಣೆ ೧೨:೩೦, ೪ ನವೆಂಬರ್ ೨೦೧೪ ರಂತೆ Radharkulkarni (ಚರ್ಚೆ | ಕಾಣಿಕೆಗಳು) ಇವರಿಂದ (→ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
ಚಟುವಟಿಕೆ - ಚಟುವಟಿಕೆಯ ಹೆಸರು
ಕಲಿಕಾ ನಿಲ್ದಾಣ ಚಟುವಟಿಕೆ
ಅಂದಾಜು ಸಮಯ
೪೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸಿರುವ ಭಾರತದ ನಕ್ಷೆಗಳು
- ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳ ರಚನೆ,ಸ್ಥಾನ, ವಿಸ್ತೀರ್ಣ ಮೊದಲಾದ ಪ್ರಮುಖ ಅಂಶಗಳ ವಿವರಣೆ ಇರುವ ಚಾರ್ಟಗಳು
- ಭಾರತದ ನಾಲ್ಕು ಪ್ರಾಕೃತಿಕ ವಿಭಾಗಗಳ ವಿಡಿಯೋಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ವಿದ್ಯಾರ್ಥಿಗಳು ಸಾಲಿನಲ್ಲಿ ಶಾಂತತೆಯಿಂದ ಕಲಿಕಾ ನಿಲ್ದಾಣಗಳಲ್ಲಿ ಚಲಿಸುವುದು .
- ಗಮನವಿಟ್ಟು ಚುತ್ರಗಳನ್ನು ,ಚಾರ್ಟಗಳನ್ನು ಹಾಗೂ ವಿಡಿಯೋಗಳನ್ನು ವೀಕ್ಷಿಸುವುದು.
- ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಳ್ಳುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರೊಜೆಕ್ಟರ್,ಕಂಪ್ಯೂಟರ್
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==------
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರತಿಯೊಂದು ಗುಂಪಿನ ವಿದ್ಯಾರ್ಥಿಗಳು ಒಂದೊಂದು ಕಲಿಕಾ ನಿಲ್ದಾಣದಲ್ಲಿ ಸುಮಾರು ಐದು ನಿಮಿಷಗಳ ಕಾಲ ಅಲ್ಲಿರುವ ಅಂಶಗಳನ್ನು ಅವಲೋಕಿಸಿ,ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿಕೊಂಡು , ಮುಂದಿನ ಕಲಿಕಾ ನಿಲ್ದಾಣಕ್ಕೆ ಸಾಗುವುದು.ಪ್ರತಿಯೊಂದು ಕಲಿಕಾ ನಿಲ್ದಾಣಗಳನ್ನು ಅವಲೋಕಿಸಿದ ನಂತರ ಗುಂಪು ಚರ್ಚೆ ಏರ್ಪಡಿಸುವುದು. ಚರ್ಚಿಸುವಾಗ ಈ ಕೆಳಗಿನ ಅಂಶಗಳನ್ನಾಧರಿಸಿ ವಿದ್ಯಾರ್ಥಿಗಳ ವಿಷಯ ಗ್ರಹಿಕೆ, ಸ್ವಯಂ ಕಲಿಕಾ ಸಾಮರ್ಥ್ಯವನ್ನು ಅವಲೋಕಿಸುವುದು. 1)ವಿಷಯ ಮಂಡನ2) ತೊಡಗಿಸಿಕೊಳ್ಳುವಿಕೆ 3) ವಿಷಯದ ಬಗ್ಗೆ ಪೂರ್ವಜ್ಞಾನ4)ಸ್ಥಳೀಯ ಅಂಶಗಳ ಬಗೆಗಿನ ಜ್ಞಾನ 5)ವಿಷಯ ವಿಶ್ಲೇಷಣಾ ಸಾಮರ್ಥ್ಯetc.
- )ವಿದ್ಯಾರ್ಥಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸು ವುದು .
- )ವಿದ್ಯಾರ್ಥಿಗಳ ಮಂಡನೆಯನ್ನು ಅವಲೋಕಿಸಿ ಶಿಕ್ಷಕರು ತಮ್ಮ ವಿವರಣೆಯನ್ನು ನೀಡು ವುದರ ಮೂಲಕ ಪರಿಕಲ್ಪನೆಯನ್ನು ಸ್ಪಷ್ಟಗೊಳಿಸುವುದು
- )ವಿದ್ಯಾರ್ಥಿಗಳು ಚರ್ಚಿಸಲು ಅನುಕೂಲವಾಗಲು ಪ್ರಶ್ನೆಗಳ ಪಟ್ಟಿಯನ್ನು ಒದಗಿಸು ವುದು .
- )ಅಗತ್ಯವಾದ ಹಿಮ್ಮಾಹಿತಿ ನೀಡು ವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಭಾರತದ ಪ್ರಾಕೃತಿಕ ವಿಭಾಗಗಳಾವುವು ?
- ನೀವಿರು ವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಲ್ಲಿದೆ?
- ಉತ್ತರದ ಪರ್ವತಗಳ ಉದ್ದ ಎಷ್ಟು ?
- ಉತ್ತರದ ಪರ್ವತಗಳ ಮೂರು ಪ್ರಮುಖ ಶ್ರೇಣಿಗಳಾವುವು?
- ನಿಮ್ಮ ರಾಜ್ಯದ ಯಾವ ದಿಕ್ಕಿಗೆ ಉತ್ತರದ ಮೈದಾನ ಪ್ರದೇಶವಿದೆ ?
- ಉತ್ತರದ ಮೈದಾನ ಪ್ರದೇಶದಲ್ಲಿ ಯಾವ ನದಿಗಳ ಜಲಾನಯನ ಪ್ರದೇಶವಿದೆ ?
- ಉತ್ತರದ ಮಹಾ ಮೈದಾನದ ಉದ್ದ ಮತ್ತು ಅಗಲಗಳನ್ನು ತಿಳಿಸಿ.
- ಉತ್ತರದ ಮಹಾ ಮೈದಾನ ಹೇಗೆ ರಚನೆಯಾಗಿದೆ ?
- ಉತ್ತರದ ಮೈದಾನ ಪ್ರದೇಶ ಯಾವ ಪ್ರಾಕೃತಿಕ ವಿಭಾಗಗಳ ಮಧ್ಯೆ ಕಂಡು ಬರುತ್ತದೆ?
- ಉತ್ತರದ ಮೈದಾನ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಣ್ಣು ಯಾವುದು?
- ಉತ್ತರದ ಮೈದಾನ ಪ್ರದೇಶದಲ್ಲಿರುವ ನದಿಗಳನ್ನು ಹೆಸರಿಸಿ.
- ಪರ್ಯಾಯ ಪ್ರಸ್ಥಭೂಮಿಯು ಯಾವ ಭೂರಾಶಿಯ ಭಾಗವಾಗಿದೆ ?
- ಪರ್ಯಾಯ ಪ್ರಸ್ಥ ಭೂಮಿಯ ಪ್ರಮುಖ ಬೆಟ್ಟಗಳನ್ನು ಹೆಸರಿಸಿ.
- ಕರಾವಳಿ ಮೈದಾನ ಎಂದರೇನು ?ಭಾರತದ ಕರಾವಳಿಯ ಎರಡು ಭಾಗಗಳಾವುವು?
- ಭಾರತದ ದಕ್ಷಿಣದ ತುದಿಗೆ ಏನೆಂದು ಕರೆಯುತ್ತಾರೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಹಿಮಾಲಯ ಪರ್ವತಗಳ ಪ್ರಯೋಜನಗಳೇನು?
- ಭಾರತದ ಅತ್ಯಂತ ಹಳೆಯ ಭೂ ಸ್ವರೂಪ ಯಾವುದು ?
- ಪೂರ್ವ ಮತ್ತು ಪಶ್ಚಿಮ ಘಟ್ಟಗಳ ವ್ಯತ್ಯಾಸಗಳೇನು ?
- ಸಂಚಯನ ಮೈದಾನ ಹೇಗೆ ರಚನೆಯಾಗುತ್ತದೆ?
- ಭಾರತದ ಯಾವ ಪ್ರಾಕೃತಿಕ ವಿಭಾಗದಲ್ಲಿ ಸಂಚಯನ ಮೈದಾನವನ್ನು ಕಾಣಬಹುದು?
- ಪೂರ್ವ ಕರಾವಳಿಯಲ್ಲಿ ಏಕೆ ಹೆಚ್ಚು ಮೆಕ್ಕಲು ಮಣ್ಣನ್ನು ಕಾಣಬಹುದು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು