ಸೇತುಬಂಧ ಕಾರ್ಯಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸೇತುಬಂಧ ಕಾರ್ಯಕ್ರಮ

ಬೆಂಗಳೂರು ದಕ್ಷಿಣ ವಲಯ-೩ ರಲ್ಲಿ ಶಿಕ್ಷಕರ ಕಲಿಕಾ ಸಮೂದಾಯದ ಅಡಿಯಲ್ಲಿ ಕನ್ನಡ ಶಿಕ್ಷಕರಿಗೆ ೨ದಿನದ ಕಾರ್ಯಾಗಾರವನ್ನು ಮಾಡಲಾಯಿತು.ಕಾರ್ಯಾಗಾರದಲ್ಲಿ ಶಿಕ್ಷಕರು ತಮ್ಮ ತರಗತಿಯ ಅನುಭವ ಅದರಲ್ಲಿ ತರಗತಿಯಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅದಕ್ಕೆ ಅವರು ಕಂಡುಕೊಂಡ ಪರಿಹಾರಗಳ ಬಗ್ಗೆ ಚರ್ಚೆ ಮಾಡಲಾಯಿತು. ಮುಖ್ಯವಾಗಿ ಶಿಕ್ಷಕರು ತಾವು ತರಗತಿಯಲ್ಲಿ ಎದುರಿಸುವ ಸಮಸ್ಯೆ ಮಕ್ಕಳು ೮ ನೇ ತರಗತಿಗೆ ಬರುವಾಗ, ೮ನೇ ತರಗತಿಗೆ ಇರಬೇಕಾದ ಸಾಮರ್ಥ್ಯಗಳನ್ನು ಪಡೆದಿರುವುದಿಲ್ಲ, ಆ ಕಾರಣದಿಂದ ಮಕ್ಕಳಿಗೆ ನಾವು ಸೇತುಬಂಧ ಕಾರ್ಯಕ್ರಮವನ್ನು ಒಂದು ತಿಂಗಳು ಮಾಡಿದರೂ ಪ್ರಯೋಜನವಾಗುವದಿಲ್ಲ, ಅವರಿಗಾಗಿ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೆಂಗಳೂರು ದಕ್ಷಿಣ ವಲಯದ ೩ ಶಿಕ್ಷಕರ ಕಲಿಕಾ ಸಮೂದಾಯದ ೨ ಶಾಲೆಗಳಲ್ಲಿ ನಾವು ಪ್ರತಿವಾರ ಒಂದು ದಿನ ಶಾಲೆಯ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ,ಎರಡು ಶಾಲೆಗಳಲ್ಲಿ ೮ ನೇ ತರಗತಿಯನ್ನು ನಿರ್ವಹಿಸುವ ಶಿಕ್ಷಕರಿಗೆ ಆ ತರಗತಿಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಲು ಸಹಾಯ ಮಾಡುತ್ತೇವೆ. ಅದರಲ್ಲಿ ನಾವು ಮುಖ್ಯಾವಾಗಿ ಕಂಡು ಬಂದಂತೆ ಕಾರ್ಯಾಗಾರದಲ್ಲಿ ಹಂಚಿಕೊಂಡಂತೆ ಮಕ್ಕಳು ವಿವಿಧ ಕಲಿಕಾ ಮಟ್ಟವನ್ನು ಹೊಂದಿದ್ದಾರೆ, ಎಲ್ಲಾರಿಗೂ ಒಂದೇ ರೀತಿಯಲ್ಲಿ ಬೋಧನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಆಕಾರಣದಿಂದ ಎಲ್ಲಾ ಮಕ್ಕಳ ಸಾಮರ್ಥ್ಯವನ್ನು ತಿಳಿಯಲು ಒಂದು ಪೂರ್ವ ಪರೀಕ್ಷೆಯನ್ನು ಮಾಡಲಾಯಿತು.

ಪೂರ್ವ ಪರೀಕ್ಷೆ ಮಾಡಲು ಬಳಸಿದ ಸಾಮಾಗ್ರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಮೌಲ್ಯಮಾಪನ