ಪ್ರೀಪ್ಲೇನ್ ಕಲಿಯಿರಿ
ಪರಿಚಯ
ಪ್ರೀಪ್ಲೇನ್ ಎಂಬುದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು ಶಾಲೆಯಲ್ಲಿ ಅಥವಾ ಮನೆಯಲ್ಲಿ ಆಗಬೇಕಿರುವ ಕೆಲಸಗಳನ್ನು ಯೋಚಿಸಲು ಹಾಗು ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಈತಂತ್ರಾಂಶವು ಮೈಂಡ್‌ಮ್ಯಾಪ್ ರಚಿಸಲು ಹಾಗು ಮಂಡ್‌ಮ್ಯಾಪ್‌ನಲ್ಲಿರುವ ಮಾಹಿತಿಯನ್ನು ವಿಶ್ಲೇಷಣೆ ಮಾಡಲು ಬಳಕೆಯಾಗುತ್ತದೆ. ಮೈಂಡ್‌ಮ್ಯಾಪ್ ನ್ನು ಪರಿಪೂರ್ಣವಾದ ವಿಚಾರಗಳನ್ನು ಹಾಗು ಫಲಿತಾಂಶಗಳನ್ನು ನೀಡುವ ಪರಿಣಾಮಕಾರಿ ಬುಧ್ದಿಮಂಥನ ತಂತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮೈಂಡ್‌ಮ್ಯಾಪ್ ಬಳಕೆದಾರರಿಗೆ ಇದರ ಬಗೆಗಿನ ಕಲ್ಪನೆಗಳ ಬಗ್ಗೆ ಅರ್ಥೈಸಿಕೊಳ್ಳಲು ನಾವು ಸಹಾಯ ಮಾಡಬೇಕಿದೆ. ನಾವು ಲಾಭದಾಯಕವಾಗಿ ಹಾಗು ಆಕರ್ಷಣೀಯವಾಗಿ ವಿವಿಧ ರೀತಿಯಲ್ಲಿ ಫಲಿತಾಂಶವನ್ನು ತೋರಿಸಬಹುದು, ಆದರೆ ಇದನ್ನಯ ಬಳಸುತ್ತಿರುವವರು ಯಾರು ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.
ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಪ್ರೀಪ್ಲೇನ್ ಎಂಬುದು ಶೈಕ್ಷಣಿಕ ಬಳಕೆಗಾಗಿ ಇರುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ. ಮೈಂಡ್‌ಮ್ಯಾಪ್, ವಿಚಾರಗಳನ್ನು ಸಂಘಟಿಸಲು ವಿಧ್ಯಾರ್ಥಿಗಳಿಗೆ ಸಹಾಯಕವಾಗುವ ಉತ್ತಮ ವಿಧಾನವೆಂದು ಬೋಧಕರು ಪರಿಗಣಿಸಿದ್ದಾರೆ. ಹಾಗೆಯೇ ಬೋಧನೆಗೆ ಇದು ಬಹಳ ಉಪಯುಕ್ತವೆಂದು ಗುರುತಿಸಿದ್ದಾರೆ. ಶಿಕ್ಷಕರು ವಿಷಯದ ಮೂಲ ಪರಿಕಲ್ಪನೆಯನ್ನು ಮಾತ್ರವೇ ವಿಧ್ಯಾರ್ಥಿಗಳಿಗೆ ನೀಡಿದಾಗ, ವಿಧ್ಯಾರ್ಥಿಗಳು ಅದನ್ನಯ ವ್ಯವಸ್ಥಿತವಾಗಿ ಸಂಘಟಿಸುವ ಪ್ರಕ್ರಿಯೆಗೆ ಈ ಪರಿಕರವು ಬಹಳು ಉಪಯುಕ್ತವಾಗಿದೆ. ಹೀಗಿದ್ದರೂ ಮೈಂಡ್‌ಮ್ಯಾಪ್ ತನ್ನ ಉದ್ದೇಶ ತಲುಪಲು ವ್ಯಾಪಕ, ವ್ಯವಸ್ಥಿತ ಮತ್ತು ಓದಬಹುದಾದಂತಹ ಪರಿಕರವಾಗಿರಬೇಕು.
ಆವೃತ್ತಿ
Stable release 1.5.18 (December 7, 2016.
Preview release 1.5.18 (December 7, 2016;
ಸಂರಚನೆ
ಪ್ರೀಪ್ಲೇನ್ ಅನ್ವಯಕವು, ಉಬುಂಟು ಕಸ್ಟಮ್ ನ ಭಾಗವಾಗಿದೆ. ಇದನ್ನು Applications → Office → Freeplane ಮೂಲಕ ತೆರೆಯಬಹುದಾಗಿದೆ.
ಲಕ್ಷಣಗಳ ಮೇಲ್ನೋಟ
- ಟಿಪ್ಪಣಿ ತೆಗೆದುಕೊಳ್ಳುವುದು.
- ಸಂಬಂಧೀಕರಿಸುವ ವಿಚಾರಗಳನ್ನು ಕ್ರಮಾನುಗತವಾಗಿ ನಮೂದಿಸುವುದು.
- ಘಟಕಗಳನ್ನು ವಿವಿಧ ಶೈಲಿಗಳೊಂದಿಗೆ ಮತ್ತು ಮೆಟಾಡೇಟಾದೊಂದಿಗೆ ವರ್ಗೀಕರಿಸುವುದು.
- ವಿವಿಧ ಗ್ರಾಫಿಕ್ ಮೂಲಕ ಘಟಕಗಳನ್ನು ಗುಂಪು ಮಾಡುವುದು.
- ಘಟಕಗಳನ್ನು ಸಂಪರ್ಕಿಸುವುದು.
- ಕ್ರಮಾನುಗತದ ಅಧಾರದ ಮೇಲೆ ಸ್ವಯಂಚಾಲಿತವಾಗಿ ಘಟಕಗಳನ್ನು ವಿನ್ಯಾಸಗೊಳಿಸುವುದು ( ಬಬಲ್, ಬಣ್ಣ, ಅಂಚು ಇತ್ಯಾದಿ)
- ವಿಷಯಕ್ಕೆ ಮತ್ತು ಪ್ರಸ್ತುತಿಗೆ ಸೂಕ್ತವಾಗಿ ಘಟಕಗಳನ್ನು ಸಂರಚಿಸುವುದು. (ಪಠ್ಯ, ವಿಜ್ಞಾನ ಪಾರ್ಮುಲಾ, ಲೆಕ್ಕ, ಚಿಹ್ನೆ, ಚಿತ್ರಗಳು ಮತ್ತು ಹೈಪರ್‌ಲಿಂಕ್)
- ಘಟಕಗಳ ನೋಡ ಬದಲಾವಣೆ, ಎಳೆಯುವಿಕೆ .
- ಕ್ಯಾಲೆಂಡರ್ ಮತ್ತು ಜ್ಞಾಪನೆಗಳು.
- ಸಂಪೂರ್ಣ ಮೈಂಡ್‌ಮ್ಯಾಪ್‌ಗೆ ಪಾಸ್‌ವರ್ಡ್ ನಮೂದಿಸುವುದು.
ಇತರೇ ಸಮಾನ ಅನ್ವಯಕಗಳು
ಪ್ರೀಮೈಂಡ್
ಅಭಿವೃದ್ದಿ ಮತ್ತು ಸಮುದಾಯ ಸಹಾಯ
ಅನ್ವಯಕ ಬಳಕೆ
ಕಾರ್ಯಕಾರಿತ್ವ
- Image
ಹಂತ 1 - ಪ್ರೀಪ್ಲೇನ್ ತೆರೆದ ನಂತರ ಈ ರೀತಿಯ ವಿಂಡೋ ಕಾಣುತ್ತದೆ. ಹೊಸ ಮೈಂಡ್ಮ್ಯಾಪ್ನ ಕೇಂದ್ರ ಘಟಕ (root node) ಕಾಣುತ್ತದೆ. ಅಲ್ಲಿ ನೀವು ರಚಿಸಲು ಉದ್ದೇಶಿಸಿರುವ ವಿಷಯದ ಹೆಸರು ನಮೂದಿಸಿ ಕಡತವನ್ನು ಉಳಿಸಬಹುದು (ಸೇವ್) ಮಾಡಬಹುದು. ಇಲ್ಲಿ ನಮೂಡಿಸುವ ಹೆಸರಿನಿಂದಲೇ ಮೈಂಡ್‌ಮ್ಯಾಪ್ ಉಳಿಯುತ್ತದೆ. ಬೇಕಿದ್ದಲ್ಲಿ ಆ ಹೆಸರನ್ನು ಬದಲಿಸಬಹುದು. ಆಗುತ್ತದೆ.
- Image
ಹಂತ 2 - ಮೈಂಡ್‌ಮ್ಯಾಪ್ ಉಳಿಸಲು "ಸೇವ್'’ ಮೇಲೆ ಕ್ಲಿಕ್ ಮಾಡಿದ ನಂತರ ಈ ಮೇಲಿನ ವಿಂಡೋ ಕಾಣಯತ್ತದೆ. ನೀವು ಕಡತವನ್ನು ಉಳಿಸಲು ಬಯಸುವ ಕಡವನ್ನು ಆಯ್ಕೆ ಮಾಡಿ ಉಳಿಸಬಹುದು. ಈ ಮೇಲಿನ ಚಿತ್ರದಲ್ಲಿ Food ಎನ್ನುವ ಹೆಸರಿನ ಮೈಂಡ್ ಮ್ಯಾಪ್ನ್ನು ಕಂಪ್ಯೂಟರ್ನ ಡಾಕ್ಯುಮೆಂಟ್ ಕಡತಕೋಶದಲ್ಲಿ ಉಳಿಸಲಾಗುತ್ತಿದೆ.
- Image
ಹಂತ 3 – ಈ ಚಿತ್ರದಲ್ಲಿ ಮೈಂಡ್‌ಮ್ಯಾಪ್ “Food” ಎನ್ನುವ ಹೆಸರಿನಲ್ಲಿ ಉಳಿದಿದೆ, ಇದರ ಮುಖ್ಯ ಘಟಕವೂ “Food” ಎಂದು ನಮೂದಾಗಿದೆ. ಇದಕ್ಕೆ ಇತರೇ ಘಟಕಗಳನ್ನು ಮುಂದುವರೆಸಲು "Enter" ಮತ್ತು "Insert" ಕೀ ಬಳಸಬೇಕು. ಒಂದು ಘಟಕ ಸೇರಿಸಿದ ನಂತರ ಮತ್ತೊಂದು ಘಟಕ ಸೇರಿಸಲು "Enter" ಕೀ ಬಳಸಿ.
- Image
ಹಂತ 4 - ಒಂದು ಘಟಕ್ಕೆ ಎಷ್ಟು ಬೇಕಾದರು ಉಪಘಟಕಗಳನ್ನು ಸೇರಿಸುತ್ತಾ ಹೋಗಬಹುದು. ಈ ಮೇಲಿನ ಚಿತ್ರದಲ್ಲಿ ‘’environment’’ ಎಂಬ ಘಟಕಕ್ಕೆ Plants ಮತ್ತು Animals ಎಂಬ ಉಪಘಟಕಗಳನ್ನು ಸೇರಿಸಲಾಗಿದೆ. ಈ ರೀತಿ ಉಪಘಟಕ ಸೇರಿಸಲು "Insert" ಕೀ ಬಳಸಬೇಕು. ‘’environment’’ ಘಟಕದ ನಂತರ "agriculture" ಎಂಬ ಘಟಕ ಸೇರಿಸಲಾಗಿದೆ. ಇದಕ್ಕೆ "Enter" ಕೀ ಬಳಸಬೇಕು. ಇಲ್ಲಿ ವಿವಿಧ ಮಾಹಿತಿಗಳ ವರ್ಗೀಕರಣವನ್ನು ಸೇರಿಸಬಹುದು. ಘಟಕಗಳು ವರ್ಗೀಕರಣದ ಅಂಶಗಳಾದರೆ, ಉಪಘಟಕಗಳು ಉದಾಹರಣೆಗಳಾಗಿ ಬಳಸಬಹುದು. ಈ ಮೇಲಿನ ಚಿತ್ರದಲ್ಲಿ ಪ್ರಾಣಿಗಳು ಘಟಕವಾದರೆ ನಂತರ ಇದಕ್ಕೆ ಎರಡು ಉಪಘಟಕಗಳನ್ನು ನೀಡಬಹುದು , ಸಸ್ಯಾಹಾರಿ & ಮಾಂಸಹಾರಿ ಎಂದು ನಂತರ ಮತ್ತಷ್ಟು ಉಪಘಟಕಗಳಲ್ಲಿ ಆಯಾ ವಿಧದ ಪ್ರಾಣಿಗಳನ್ನು ಹೆಸರಿಸಬಹುದು. ಈ ರೀತಿಯಾಗಿ ಮೈಂಟ್ಮ್ಪಾಪ್ ಮೂಲಕ ಮಾಹಿತಿಯನ್ನು ವಿಂಗಡಿಸಲು ಹಾಗು ವರ್ಗೀಕರಿಸಲು ಸಾಧ್ಯವಾಗುತ್ತದೆ.
- Image
ಹಂತ 5 - ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ವಿಷಯಗಳು ಒಂದಕ್ಕೊಂದು ಸಂಬಂಧೀಕರಿಸಿರುತ್ತವೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್ಮ್ಯಾಪ್ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್ನಲ್ಲಿ Insert > add graphical link ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿ ಚಲಿಸಬಹುದು.
- Image
ಹಂತ 6 - ಕೆಲವು ಸಲ ವಿಷಯಗಳ ಬಗ್ಗೆ ಚರ್ಚಿಸುವಾಗ ಅದರ ಟಿಪ್ಪಣಿಗಳು ಬಹಳ ವಿಸ್ತಾರವಾಗಿದ್ದು ಅದಕ್ಕೆ ಬೇರೊಂದು ಮೈಂಡ್‌ಮ್ಯಾಪ್ ರಚಿಸಬೇಕಾಗಬಹುದು. ಈ ಮೇಲಿನ ಚಿತ್ರದಲ್ಲಿ ‘agriculture’ ವಿಷಯಕ್ಕೆ ಮತ್ತೊಂದು ಮೈಂಡ್‌ಮ್ಯಾಪ್ ರಚಿಸಬಹುದು. ಪ್ರತ್ಯೇಕ ಮೈಂಡ್‌ಮ್ಯಾಪ್ ರಚಿಸಿದ ನಂತರ ಈ ಎರಡು ಮೈಂಡ್ಮ್ಯಾಪ್ಗಳ ನಡುವೆ ಲಿಂಕ್ ನೀಡಬಹುದು. ಈ ಮೂಲಕ ಒಂದು ಮೈಂಡ್‌ಮ್ಯಾಪ್ ನಲ್ಲಿನ ‘agriculture’ ನ ಘಟಕದ ಮೇಲೆ ಕ್ಲಿಕ್ ಮಾಡುವ ಮೂಲಕವೇ ಇನ್ನೊಂದು ಮೈಂಡ್‌ಮ್ಯಾಪ್ ತೆರೆಯಬಹುದು. ಇದಕ್ಕಾಗಿ ಮೆನುಬಾರ್ನಲ್ಲಿ "Insert" > "Hyperlink - File chooser" ಕ್ಲಿಕ್ ಮಾಡಬೇಕು. ಈಗ ನಾವು ರಚಿಸಿರುವ ಮೈಂಡ್‌ಮ್ಯಾಪ್ ಕಡತವನ್ನು ಆಯ್ಕೆ ಮಾಡಬೇಕು. ಈ ರೀತಿಯಾಗಿ ಮೈಂಡ್‌ಮ್ಯಾಪ್ ಮಾತ್ರವಲ್ಲದೇ ಚಿತ್ರಗಳು ಮತ್ತು ವೀಡಿಯೋಗಳನ್ನು ಸಹ ಸೇರಿಸಬಹುದು.
- Image
ಹಂತ 7 - ವೆಬ್ಪುಟಗಳ ಕೊಂಡಿಯನ್ನು ಸಹ ಈ ಘಟಕಗಳಿಗೆ ಮೈಂಡ್‌ಮ್ಯಾಪ್ ನಲ್ಲಿ ಸೇರಿಸಬಹುದು. ಇದಕ್ಕಾಗಿ ಮೆನುಬಾರ್ನಲ್ಲಿ "Insert" > "Hyperlink - Text field" ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ Ctrl+K ಕೀ ಬಳಸಬಹುದು.
- Image
ಹಂತ 8 - ಘಟಕದ ವಿಷಯಗಳಿಗೆ ಹೆಚ್ಚಿನ ಮಾಹಿತಿಯುಳ್ಳ ಟಿಪ್ಪಣಿಯನ್ನು ನೀಡಬಹುದು. ಇದಕ್ಕಾಗಿ ಮೆನುಬಾರ್ ನಲ್ಲಿ "View" > "Note Window" ಆಯ್ಕೆ ಮಾಡಬೇಕು. ಇದು ಮೈಂಡ್‌ಮ್ಯಾಪ್ ಕೆಳಗೆ ಒಂದು ಕೋಷ್ಟಕವನ್ನು ತೆರೆಯುತ್ತದೆ. ಆ ಕೋಷ್ಟಕದಲ್ಲಿ ನಾವು ಆಯ್ಕೆ ಮಾಡಿಕೊಂಡಿರುವ ಘಟಕಕ್ಕೆ ಅವಶ್ಯಕವಾದ ಟಿಪ್ಪಣಿ ನೀಡಬಹುದು.
- Image
ಹಂತ 9 - ಕೊಂಡಿಗಳು ಮತ್ತು ಟಿಪ್ಪಣಿಗಳನ್ನು ಒಳಗೊಂಡ ಪೂರ್ಣ ಮೈಂಡ್‌ಮ್ಯಾಪ್ ಈ ರೀತಿಯಾಗಿ ಕಾಣುತ್ತದೆ. ಮೆನುಬಾರ್ನ Format ಮತ್ತು Navigate ಆಯ್ಕೆಗಳ ಮೂಲಕ ಘಟಕಗಳ ಬಣ್ಣ, ವಿನ್ಯಾಸವನ್ನು ಬದಲಿಸಬಹುದು ಹಾಗು ಘಟಕಗಳನ್ನು ಸ್ಥಳಾಂತರಿಸಬಹುದು.
- Image
ಹಂತ 10 ಪೂರ್ಣಗೊಂಡ ಮೈಂಡ್ಮ್ಯಾಪ್ನ್ನು ಪಠ್ಯ ದಾಖಲೆಗೆ ಅಥವಾ ಚಿತ್ರವಾಗಿ ಎಕ್ಸ್‌ಪೋರ್ಟ್ ಮಾಡಬಹುದು. ಇದಕ್ಕಾಗಿ ಮೆನುಬಾರ್ನ File > Export As ಆಯ್ಕೆ ಬಳಸಬಹುದು. ನಮಗೆ ಬೇಕಾದ ನಮೂನೆಯನ್ನು ನಮೂದಿಸಿ ಎಕ್ಸ್‌ಪೋರ್ಟ್ ಮಾಡಬಹುದು.
ಕಡತ ರೂಪ
ಕಡತ ಉಳಿಸಿಕೊಳ್ಳುವುದು
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ FILE – SAVE AS ಮೂಲಕ ಉಳಿಸಬಹುದು. ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ CTRL-S ಕೀ ಬಳಸಬಹುದು. ಕಡತಕ್ಕೆ ಅರ್ಥಪೂರ್ಣವಾದ ಹೆಸರನ್ನುನಮೂದಿಸಿ ಉಳಿಸಬಹುದು.
ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್) ಮತ್ತು ಪ್ರಕಟಣೆ
ಬೇರೆ ಎಲ್ಲಾ ಅನ್ವಯಕಗಳಂತೆಯೇ, ಇದನ್ನು ಸಹ PNG, JPEG ಹಾಗು ಪಠ್ಯದಾಖಲೆಗೆ ಎಕ್ಸ್‌ಪೋರ್ಟ್ ಮಾಡಬಹುದು.
ಉನ್ನತೀಕರಿಸಿದ ಲಕ್ಷಣಗಳು
- ಬರವಣಿಗೆ
- ಗ್ರಾಫಿಕ್ ಅಂಶಗಳ ಸೇರ್ಪಡೆ
- ಮೋಡಗಳ ವಿನ್ಯಾಸ
- ಮಿನುಗುವುದು
- ಬಣ್ಣಗಳು
ಅನುಸ್ಥಾಪನೆ
ಅನುಸ್ಥಾಪನೆ ವಿಧಾನಗಳು | ಹಂತಗಳು |
---|---|
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ | |
ಟರ್ಮಿನಲ್‌ನಿಂದ | |
ವೆಬ್‌ಪುಟದಿಂದ | |
ವೆಬ್‌ಆಧಾರಿತ ನೊಂದಣಿ |