ತ್ರಿಭುಜದ ಎತ್ತರ ಮತ್ತು ಲಂಭಕೇಂದ್ರ
Jump to navigation
Jump to search
ತ್ರಿಭುಜದ ಎತ್ತರವು ಒಂದು ರೇಖಾಖಂಡವಾಗಿದ್ದು ಅದು ಶೃಂಗದಿಂದ ಎದುರು ಬಾಹುವಿಗೆ ಎಳೆಯಲ್ಪಡುತ್ತದೆ ಮತ್ತು ಬಾಹುವಿಗೆ ಲಂಬವಾಗಿರುತ್ತದೆ. ಒಂದು ತ್ರಿಭುಜವು ಮೂರು ಎತ್ತರಗಳನ್ನು ಹೊಂದಬಹುದು. ವಿವಿಧ ರೀತಿಯ ತ್ರಿಭುಜಗಳಿಗೆ ಈ ರೇಖೆಗಳ ಛೇಧಕ ಬಿಂದುವನ್ನು ಪರಿಶೋಧಿಸಲಾಗುತ್ತದೆ.
ಉದ್ದೇಶಗಳು:
ತ್ರಿಭುಜದ ಎತ್ತರ ಮತ್ತು ಅವುಗಳ ಏಕಕಾಲೀನ ಬಿಂದುವನ್ನು ಪರಿಚಯಿಸಿ.
ಅಂದಾಜು ಸಮಯ:
೩೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ತ್ರಿಭುಜಗಳ ವಿಧಗಳು ಮತ್ತು ಎತ್ತರದ ಪರಿಕಲ್ಪನೆಯನ್ನು ಪರಿಚಯಿಸಿರಬೇಕು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
ಜಿಯೋಜೆಬ್ರಾ ಫೈಲ್(ಕಡತವನ್ನು) ಅನ್ನು ತೋರಿಸಿ ಮತ್ತು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ.
ಬೆಳವಣಿಗೆಯ ಪ್ರಶ್ನೆಗಳು:
- ಇದು ಯಾವ ವಿಧದ ತ್ರಿಭುಜ?
- ತ್ರಿಭುಜ ಎತ್ತರ ಎಂದರೇನು?
- ನಾವು ಎತ್ತರವನ್ನು ಹೇಗೆ ರಚಿಸುತ್ತೇವೆ?
- 3 ಎತ್ತರಗಳ ಏಕಕಾಲಿಕ ಅರ್ಥವೇನು?
- ವಿಭಿನ್ನ ತ್ರಿಭುಜಗಳಲ್ಲಿ ಏಕಕಾಲಿಕ ಬಿಂದುವಿನ ಸ್ಥಾನವನ್ನು ಗುರುತಿಸಿ.
ಮೌಲ್ಯ ನಿರ್ಣಯ ಪ್ರಶ್ನೆಗಳು
- ವಿವಿಧ ರೀತಿಯ ತ್ರಿಭುಜಗಳಲ್ಲಿ ಆರ್ಥೋಸೆಂಟರ್ ನ (ಲಂಭಕೇಂದ್ರದ) ಸ್ಥಾನಗಳು ಯಾವುವು?
- ಆರ್ಥೋಸೆಂಟರ್‌ನ (ಲಂಭಕೇಂದ್ರದ) ಅಪ್ಲಿಕೇಶನ್‌ಗಳನ್ನು ಹುಡುಕಿ.