ಭಾರತದ ಪ್ರಾಕೃತಿಕ ಲಕ್ಷಣಗಳು ಪೀಠಿಕೆ ಚಟುವಟಿಕೆ1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


=ಚಟುವಟಿಕೆ - ಚಟುವಟಿಕೆಯ ಹೆಸರು= ಸ್ಥಳೀಯ ಭೂಸ್ವರೂಪಗಳನ್ನು ಅರ್ಥೈಸಿಕೊಳ್ಳುವಿಕೆ

==ಅಂದಾಜು ಸಮಯ== ೧ ದಿನ

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== ಪೆನ್ನು, ಪೇಪರ,

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ನಾಲ್ಕು ಜನರ ಗುಂಪಿನಲ್ಲೇ ವೀಕ್ಷಿಸಿ, ಹಾಗೂ ಹಿರಿಯರ ಜೊತೆಯಲ್ಲಿ ವೀಕ್ಷಿಸಿ.
  2. ವೀಕ್ಷಿಸಿದ ವಿಷಯ ಚರ್ಚೆನಂತರದಲ್ಲಿ ಪಟ್ಟಿ ಮಾಡಿ
  3. ಗುಂಪಿನಲ್ಲಿ ವೀಕ್ಷಿಸುವಾಗ ಜಾಗರೂಕತೆ ಕಾಯ್ದುಕೊಳ್ಳಿ, ಹಾಗೂ ಪರಸ್ಪರ ಸಹಾಯ ಸಹಕಾರವನ್ನು ಮಾಡಿ.
  4. ಕೇವಲ ಎರಡು ಗಂಟೆ ಮಾತ್ರ ವೀಕ್ಷಣೆಗೆ ಸಮಯ ನೀಡಲಾಗಿದೆ .ಆದ್ದರಿಂದ ಅತೀಯಾದ ವೇಳೆಯನ್ನು ಕೇವಲ ವೀಕ್ಷಣೆಯಲ್ಲಿಯೇ ಕಳೆಯಬೇಡಿ, ಏಕೆಂದರೆ ತದನಂತರದಲ್ಲಿ ಚರ್ಚಿಸಿ ಪಟ್ಟಿಮಾಡಬೇಕಿದೆ.
  5. ವೀಕ್ಷಿಸಲು ಹೋಗುವಾಗ ಹಾಳೆ , ಪೆನ್ನು, ನೀರು ಹೀಗೆ ಅವಶ್ಯಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಮರೆಯದಿರಿ .

ಬಹುಮಾಧ್ಯಮ ಸಂಪನ್ಮೂಲಗಳ

==ಪ್ರಸಕ್ತ ಸ್ಥಳೀಯ ಸಂಪರ್ಕಗಳು== ಬೆಟ್ಟಗುಡ್ಡಗಳು, ನದಿ, ಕೆರೆ , ಸರೋವರ , ಪ್ರಸ್ಥಭೂಮಿಗಳು, ಮೈದಾನಗಳು,

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಪಾಠ ಅನುಕೂಲಿಸುವ ಹಿಂದಿನ ದಿನ ಅಥವಾ ಶನಿವಾರ ಶಾಲೆಯ ನಂತರದಲ್ಲಿ ಮೇಲಿನ ಕೆಲವು ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಸ್ಥಳೀಯ ಭಸ್ವರೂಪಗಳನ್ನು ವೀಕ್ಷಿಸಿ, ಚರ್ಚಿಸಿ , ಪಟ್ಟಿ ಮಾಡಿಕೊಂಡು ಬರಲು ತಿಳಿಸಿ. ನಂತರದಲ್ಲಿ ಪಾಠ ಅನುಕೂಲಿಸುವಾಗ ಭಾರತದ ಭೂಸ್ವರೂಪವನ್ನು ವಿವರಿಸಿದ ನಂತರ ಸ್ಥ ಳೀಯ ಭೂಸ್ಚರೂಪವು ಯಾವ ವಿಧದಲ್ಲಿ ಬರುವುದು ಮತ್ತು ಏಕೆ ಎಂಬುದನ್ನು ವಿವರಿಸಲು ತಿಳಿಸುವುದು (ಉದಾ: ಪರ್ವತಗಳು, ಮೈದಾನಗಳು,ಕರಾವಳಿ, ಮತ್ತು ಪ್ರಸ್ಥಭೂಮಿ ಇತ್ಯಾದಿ)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ಸ್ಥಳಿಯ ಪ್ರದೇಶವನ್ನು ಭೂಮೇಲ್ಮೈ ಲಕ್ಷಣಗಳ ಆಧಾರಿತವಾಗಿ ಯಾವ ಭೂಸ್ವರೂಪದಲ್ಲಿದೆ ಎಂಬುದನ್ನು ತಿಳಿಸಿ.
  2. ನಿಮ್ಮ ಸ್ಥಳೀಯಸ್ವರೂಪವನ್ನು ಆ ಭೂಸ್ವರೂಪದಲ್ಲಿದೆ ಎಂದು ಹೇಗೆ ನಿರ್ಧರಿಸಿದಿರಿ?
  3. ನಿಮ್ಮ ಸ್ಥಳೀಯ ಭೂಸ್ವರೂಪವು ನಿಮ್ಮ ಪ್ರದೇಶದ ವಾಯುಗುಣದ ಮೇಲೆ ಹೇಗೆ ಪ್ರಭಾವ ಬೀರಿದೆ? ಮತ್ತು ಏಕೆ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ವಿವಿಧ ಭೂಸ್ವರೂಪಕ್ಕೆ ಕಾರಣಗಳೇನು?
  2. ಭೂಸ್ವರೂಪಗಳನ್ನು ತಿಳಿಸಿ.
  3. ಭೂಸ್ವರೂಪಗಳಿಂದಾಗುವ ಪರಿಣಾಮಗಳನ್ನು ವಿವರಿಸಿ.

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ಲಕ್ಷಣಗಳು