ಬೆಡಗಿನ ತಾಣ ಜಯಪುರ
ಪಾಠ 3 ಬೆಡಗಿನ ತಾಣ ಜಯಪುರ ಲೇಖಕರ ಪರಿಚಯ
ಶ್ರೀ ಕೋಟ ಶಿವರಾಮ ಕಾರಂತ*
ಶ್ರೀ ಶಿವರಾಮ ಕಾರಂತ ಜನನ: ಅಕ್ಟೋಬರ್ ೧೦, ೧೯೦೨* ಜನನ ಸ್ಥಳ: ಸಾಲಿಗ್ರಾಮ, ಉಡುಪಿ ಜಿಲ್ಲೆ ನಿಧನ: ಡಿಸೆಂಬರ್ ೯,೧೯೯೭ ಮಣಿಪಾಲ, ಉಡುಪಿ ವೃತ್ತಿ: ಲೇಖಕ ರಾಷ್ಟ್ರೀಯತೆ: ಭಾರತೀಯ ಬರವಣಿಗೆಯ ಕಾಲ: (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) ಸಾಹಿತ್ಯದ ವಿಧ(ಗಳು): ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ ವಿಷಯಗಳು: ಕರ್ನಾಟಕ, ಜೀವನ ಸಾಹಿತ್ಯ ಶೈಲಿ: ನವೋದಯ ಪ್ರಥಮ ಕೃತಿ: (ಮೊದಲ ಪ್ರಕಟಿತ ಕೃತಿ/ಗಳು) ಪ್ರಭಾವಿತರು: ಪೂರ್ಣಚಂದ್ರ ತೇಜಸ್ವಿ ಹಸ್ತಾಕ್ಷರ:
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಪೂರ್ವದಿಂದ ಪಶ್ಚಿಮಕ್ಕೆ
ಆಕರ ಗ್ರಂಥ :- ಅಬೂವಿನಿಂದ ಬರಾಮಕ್ಕೆ
ಬೋಧನಾ ಉದ್ದೇಶಗಳು:- ಜಯಪುರದ ಸೌಂದರ್ಯ, ವೇಶಭೂಷಣ ,ಜನಪದ ಕಲೆಗಳನ್ನು ತಿಳಿಯುವುದು.
: ಜಂತ್ರ ಮಂತ್ರ ಪ್ರಯೋಗಾಲಯದ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸುವುದು... : ಪ್ರವಾಸದ ಪ್ರಾಮುಖ್ಯತೆ ಯನ್ನು ತಿಳಿಸುವುದುಳು. ಪಠ್ಯಪೂರಕ ವಿಷಯಗಳು
ಪರಾಂಗಣದ ಹಿಂದಿನ ಪಯಣ ಹೇಗನ್ನಿಸಿತು? ಹಸಿರಿನೊಳಗಣ ವಿಹಾರ ವಿಹಂಗಮವಾಗಿತ್ತೆಂದು ಊಹಿಸಬಹುದೇ?! ಕಳೆದೆರಡು ವಾರಗಳ ದೂರ ದೇಶದ ದೃಷ್ಟಿಯಾದ್ಭುತದನುಭವಗಳ ನಂತರ ಮುಂದಿನ ಪಯಣಕ್ಕಾಗಿ, ಕಥಾಚಿತ್ರಗಳನ್ನು ನೆನಪಿನಾಳದಿಂದ ಹೆಕ್ಕಿ-ಹರಡಿ-ಹುಡುಕುತ್ತಿರುವಾಗ ಕಳೆದ ವರ್ಷದ ಜನವರಿಯಲ್ಲಿ ಜರ್ಮನಿಯ ಗೆಳೆಯನೊಬ್ಬನೊಟ್ಟಿಗೆ ಭೇಟಿಕೊಟ್ಟ ರಾಜಸ್ಥಾನದ ಈ ನಗರಿಯ ಭವ್ಯವರ್ಣಗಳು ಚಿತ್ರ-ನೆನಹುಗಳ ಬೃಹತ್ ರಾಶಿಯಿಂದ ಪುಟಿದೆದ್ದು ಚುಕ್ಕು-ಬುಕ್ಕುವಿನ ಅಕ್ಷರಗಳಾವರಣಕ್ಕೆ ರಂಗು ತರಲು ಸಿದ್ಧವಾದಂತಿದ್ದವು!
ರಾಜಸ್ಥಾನ. ಆ ಹೆಸರಲ್ಲೇ ಅಮಿತ ಗಾಂಭೀರ್ಯವೊಂದಡಗಿದೆ. ಇತಿಹಾಸದ ಅತ್ಯಮೋಘ ಕ್ಷಣಗಳ ಬಹುಗಾತ್ರದ ಭಂಡಾರವನ್ನೇ ತನ್ನ ಕಾಲಗ್ರಂಥದ ಅಳಿಸಲಾರದ ಪುಟಗಳಲ್ಲಿ ಬೆಚ್ಚನೆ ಕಥಾಕ್ಷರಗಳಾಗಿ ಕಾಪಿಟ್ಟಿರುವಂಥ ಭೂಭಾಗವಿದು. ನಿಲ್ಲಲಾರದೊಂದು ಅತ್ಯವಸರದಿ ಭವಿಷ್ಯವೆಂಬ ಅನವರತದಾಕರ್ಷಣೆಗೆ ಬಿದ್ದು ಎಗ್ಗಿಲ್ಲದಂತೆ ಮುನ್ನುಗ್ಗುವ ಸಮಯದಲೆಗಳ ಸೀಮೆಯಡಿ ಸಿಲುಕಿಯೂ ಸಹ ತನ್ನಿರುವಿನ ಛಾಪನ್ನು ಹಾಗೆಯೇ ಉಳಿಸಿಕೊಂಡಿರುವ ಕೆಲವೇ ಕೆಲವು ವಿಶಿಷ್ಟ ಸ್ಥಳಗಳಲ್ಲಿ ರಾಜಸ್ಥಾನವೂ ಒಂದು. ಇಂತಹ ಕಾಲಾತೀತ ಖನಿಗೆ, ಅಪೂರ್ವ ಆಸ್ತಿಯಾದ ರತ್ನಖಚಿತ ಕಿರೀಟವೊಂದರಂತೆ ಲೆಕ್ಕವಿಲ್ಲದಷ್ಟು ಐತಿಹಾಸಿಕ ಕಥಾಸ್ಮಾರಕಗಳಿಂದ ಅಲಂಕೃತಗೊಂಡಿರುವ ನಗರಿ - ಜೈಪುರ್. ಇಂದಿನ ಪರಾಂಗಣದ ನಡಿಗೆ ಈ ರಾಜ-ಮಹಾರಾಜರಾಳಿದ ಕೋಟೆಕೊತ್ತಲ-ಅರಮನೆಗಳಿಂದಾವೃತಗೊಂಡ ಪರಮಾದ್ಭುತ ಶಹರಕ್ಕೆ. ಒಮ್ಮೆ ಉಸಿರು ಬಿಗಿಹಿಡಿದು, ಕಾಲಯಂತ್ರಚಕ್ರದ ಚುಕ್ಕಾಣಿ ಹಿಡಿದು ಶತಮಾನಗಳಿಂದ ಮಾನವನ ಅಸ್ತಿತ್ವದ ಶಾಶ್ವತದಿರುವಿನ ವ್ಯರ್ಥ ಪ್ರಯತ್ನಕ್ಕೆ ಅಪ್ರತಿಮ ಸಾಕ್ಷಿಯಂತೆ ನಿಂತಿರುವ ಜೈಪುರ್ ನಗರದ 'ಪರಾಂಗಣ'ದಂಕಣಕ್ಕೆ ಜಿಗಿಯುವ ಬನ್ನಿ.. ಪ್ರತಿ ಹೆಜ್ಜೆಯಲ್ಲೂ ಕ್ಯಾಮೆರಾ ಕಣ್ಣಿಗೆ ಕೆಲಸ ಕೊಡುವಂತಹ ಜಾದೂ ಇದೆ ಈ ನಗರಕ್ಕೆ! ಭೂತ-ವರ್ತಮಾನ-ಭವಿಷ್ಯಗಳು ಯಾವುದೋ ಒಂದು ಅಪ್ರತಿಹತ ಹದವೊಂದರಲ್ಲಿ ಸಮ್ಮಿಳಿತಗೊಂಡಂತಿರುವ ಜೈಪುರ್ ನಗರಿಯನ್ನ ಒಂದೇ ಓದಿನ ಓಟಕ್ಕೆ ಸೀಮಿತಗೊಳಿಸುವುದು ಬೇಡ. ಹಾಗಾಗಿ ಈ ಪರಾಂಗಣ ಸ್ಪರ್ಶವನ್ನು ಒಂದೇ ಸಂಚಿಕೆಗೆ ಕುಗ್ಗಿಸದೆ ಮುಂದಿನ ಬಾರಿ ಒಂದದ್ಭುತ ತಾಣದ ಪರಿಚಯದೊಂದಿಗೆ ಅಂತ್ಯಗೊಳಿಸೋಣ. ಈ ಬಾರಿ, ಜೈಪುರದ ಉಸಿರಾಗಿರುವ ಜೀವಭರಿತ ಹಾದಿಬೀದಿಗಳಲ್ಲಿ ಸಂಚರಿಸುವ ಮೂಲಕ ನಗರದೊಡಲ ದಿಗ್ದರ್ಶನಕ್ಕೆ ಮುನ್ನುಡಿ ಹೇಳುವ.. ೧೭೨೭ರಲ್ಲಿ ಮಹರಾಜ ಸವಾಯಿ ಜಯಸಿಂಹ್ ಸ್ಥಾಪಿಸಿದ ಈ ರಾಜಕಳೆಯ ಮಹಾನಗರ ಅವನ ಹೆಸರನ್ನೇ ತನ್ನ ಪೂರ್ವಾರ್ಧವನ್ನಾಗಿ ಮಾಡಿಕೊಂಡಿದೆ. ಶತಮಾನಗಳಷ್ಟು ಹಿಂದಿನ ಇತಿಹಾಸವಿದ್ದರೂ, ಜೈಪುರ್ ನಗರ ನಿರ್ಮಾಣ ಯೋಜನೆಯಲ್ಲಿ ಆಗಲೇ ದಾಪುಗಾಲಿಕ್ಕಿತ್ತೆಂದರೆ ಅತಿಶಯೋಕ್ತಿಯಲ್ಲ. ದಿನಂಪ್ರತಿ ಸಾವಿರಾರು ಪ್ರವಾಸಿಗಳ ಕಣ್ಮನಕ್ಕೆ ಅಚ್ಚರಿಪೂರ್ಣ ಅನುಭವಗಳನ್ನು ದೊರಕಿಸುವ ಕಾರ್ಯವನ್ನು ಎಡಬಿಡದೆ ಮಾಡುತ್ತಿರುವ ಈ 'ಗುಲಾಬಿ ನಗರ', ಪಶ್ಚಿಮ ಭಾರತದ ಮಾನವ ನಿರ್ಮಿತ ನಗರಿಗಳಲ್ಲಿ ಅತೀ ಯೋಜನಾಬಧ್ಹವಾಗಿ ಕಟ್ಟಲ್ಪಟ್ಟ ಅಸಾಮಾನ್ಯಸಾಮ್ರಾಜ್ಯತಾಣ\
ನೂರಾರು ವರ್ಷಗಳ ಕಾಲ ನಗರವೊಂದು ತನ್ನ ಕಳೆದುಹೋದ ವೈಭವದ ಕುರುಹನ್ನು ಕಾಪಾಡಿಕೊಂಡು ಬರುವುದು ಕಷ್ಟಸಾಧ್ಯ. ಆದರೆ, ಜೈಪುರ್ ತನ್ನರಿವಿನಾವೃತಿಗೇ ಗೊತ್ತಾಗದಂತೆ ಬಹಳಷ್ಟು ಹಳೆಯ ಚಿತ್ರಗಳ ಛಾಯೆಯನ್ನು ತನ್ನ ರಸ್ತೆಗಳಲ್ಲಿ, ಜನರ ಉಡುಗೆ-ತೊಡುಗೆಗಳಲ್ಲಿ, ಕೊನೆಯಿಲ್ಲದೆ ಹಬ್ಬಿರುವ ಬೀದಿ ಬದಿಯ ಅಂಗಡಿಗಳಲ್ಲಿ ಮತ್ತು ಚಿತ್ತಾಪಹರಿಸುವ ಚಿಕ್ಕ ಚಿಕ್ಕ ಛಾವಡಿಗಳಲ್ಲಿ ಅಡಗಿಸಿಟ್ಟಿದೆ. ದಿನರಾತ್ರಿಯ ವ್ಯತ್ಯಾಸವರಿಯದೆ ಗುಂಯ್ಗುಟ್ಟುವ ಅಸಂಖ್ಯ ಜನಜಂಗುಳಿಯ ಹರಿವಿರದ ಮುರುಕು ಮಾತುಗಳ ಏಕಲಯ ಗಾನದ ನಡುವೆ - ಅಲ್ಲಲ್ಲಿ ಕಾಣಸಿಗುವ, ಕೇಳಿಬರುವ, ಆಘ್ರಾಣ ಮತ್ತು ರುಚಿಯ ನರತಂತುಗಳಿಗ ಮೆಲುವಾಗಿ ನಾಟುವ ಜಯಸಿಂಹನ ಹಳೆಯ ಜಯಪುರದ ದೃಷ್ಟಿನಾದಸ್ವಾದಗಳು ಶತಮಾನಗಳಾಚೆಯಿಂದ ತೂರಿ ಬರುವ ಹಠಾತ್ ಅಲೆಯೊಂದರಂತೆ ನಮ್ಮನ್ನು ಗಿಜಿಗಿಜಿಗುಟ್ಟುವ ಹದಿನೇಳನೇ ಶತಮಾನದ ಪೇಟೆಬೀದಿಯೊಂದರ ನಡುವಿಗೇ ಸೆಳೆದೊಯ್ಯುತ್ತವೆ.. ಇದು ಜಯಪುರದ ಹೃದಯಭಾಗದಲ್ಲಿದೆ. ಇದನ್ನು ಮಹಾರಾಜರ ವೈಭವದ ಕುಟುಂಬಗಳಿಗಾಗಿ ನಿರ್ಮಿಸಲಾಯಿತು. ಇದನ್ನು ಮಹಾರಾಜ ಎರಡನೇ ಸವಾಯ್ ಜೈಸಿಂಗ್ ಕಟ್ಟಿಸಿದನು.
ಸಿಟಿ ಪ್ಯಾಲೇಸ್ ಇದು ಭಾರತದ ಸುಂದರ ವಾಸ್ತುಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಪ್ರಮುಖ ವೈಶಿಷ್ಟ್ಯವೆಂದರೆ ಪ್ರಪಂಚದಲ್ಲೆ ಬಹುದೊಡ್ಡ ಬೆಳ್ಳಿಯ ಗಂಗಾಜಲ ಪಾತ್ರೆ. ಇದನ್ನು ಪವಿತ್ರವಾದ ಗಂಗಾಜಲವನ್ನು ಸಂಗ್ರಹಿಸಿಡಲು ಬಳಸುತ್ತಿದ್ದರು. ಇದು ಪ್ರಪಂಚದಲ್ಲೆ ಅತಿದೊಡ್ಡ ಗಂಗಾಜಲ ಪಾತ್ರೆ ಎಂದು ಹೆಸರಾಗಿದ್ದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಜಯಪುರವು ತನ್ನಲ್ಲಿರುವ ಅಭೂತಪೂರ್ವವಾದ ಶಿಲ್ಪಕಲಾಕೃತಿಗಳಿಂದ, ಪ್ರಾಕೃತಿಕ ಸೌಂದರ್ಯದಿಂದ ಅಲ್ಲದೆ ಕಲಾಪೂರ್ಣವಾದ ವಿನ್ಯಾಸ, ರಾಜರ ಘನತೆಗೆ ತಕ್ಕಂತಹ ಯೋಜನಾ ಪೂರ್ವಕವಾದ ಕಟ್ಟಡ ನಿರ್ಮಾಣ ಪ್ರವಾಸಿಗರನ್ನು ಮನಸೂರೆಗೊಳ್ಳುವುದರ ಮೂಲಕ ಬೆಡಗಿನ ತಾಣವೆನಿಸಿದೆ
ಎಲ್ಲೆಡೆಯಲ್ಲೂ ನೆಲೆಸಿರುವ ಅರ್ಥಪೂರ್ಣ ಕಟ್ಟಡಗಳು ಶಿಲ್ಪಕಲೆಯ ಅಭಿವ್ಯಕ್ತಿಗೇ ಹೊಸದೊಂದು ಅನುರೂಪವನ್ನೀಯುತ್ತದೆ. ಕೆಂಗುಲಾಬಿ ಬಣ್ಣದ ಕಲ್ಗಳಿಂದ ಕಟ್ಟಿದ ಹವಾ ಮಹಲ್ ಅಥವಾ ಗಾಳಿಯರಮನೆ, ಜೈಪುರದ ಮಹೋತ್ಕೃಷ್ಟ ಮೆರುಗು. ಎತ್ತರದ ತೆಳುಗೋಡೆಯೊಂದರ ಮೇಲೆ ಚಿತ್ತಾರಗಳೊಡನೆ ವರ್ಣದಾಟವನ್ನಾಡುವ ಹವಾಮಹಲ್, ಬಹುದೂರದಿಂದಲೇ ತನ್ನ್ಯಾವುದೋ ಆಯಸ್ಕಾಂತೀಯ ಬಲದಿಂದ ನಮ್ಮನ್ನು ಆಕರ್ಷಿಸುತ್ತದೆ. ಅದರ ಸುತ್ತಲೂ ಅನಾವರಣಗೊಂಡಿರುವ ಜೈಪುರಿಯ ಸಂಸ್ಕೃತಿ ಮಹಾನಗರದೊಳಗೊಂದು ಪುಟ್ಟ ಚಿತ್ರಲೋಕವನ್ನೇ ತೆರೆದಂತೆನಿಸುತ್ತದೆ. ಇನ್ನು ಖಗೋಳ ಶಾಸ್ತ್ರದ ಅತೀ ಸಂಕೀರ್ಣ ಲೆಕ್ಕಾಚಾರಗಳನ್ನು ಭುವಿಯ ಚಲನೆ, ಜೈಪುರಿಯ ಸ್ಥಾನಕ್ಕನುಗುಣವಾಗಿ ಶಿಲ್ಪಕಲೆಯಲ್ಲಿ ಬಿಂಬಿಸುವ ಅದ್ವಿತೀಯ ತಾಣ ಜಂತರ್-ಮಂತರ್. ಕ್ಷಣಮಾತ್ರಗಳ ಮಟ್ಟಕ್ಕೂ ಕರಾರುವಕ್ಕಾಗಿ ಆಕಾಶಕಾಯಗಳ ಸ್ಥಾನ, ಅವುಗಳ ಚಲನೆಗಳನ್ನು ಎತ್ತರೆತ್ತರದ ವಿಚಿತ್ರದಾಕಾರಗಳ ಕಟ್ಟಡಗಳಿಂದ ಅರ್ಥೈಸುವ ಈ ಸ್ಥಳ, ಮಹಾರಾಜ ಜಯಸಿಂಹನ ವೈಜ್ಞಾನಿಕ ಆಸಕ್ತಿಗಳಿಗೆ ತಿಳಿಗನ್ನಡಿ ಹಿಡಿದಂತಿದೆ. ಹೀಗೆ, ನಗರದ ಹೃದಯಭಾಗದೊಳು ನಡೆದಲ್ಲೆಲ್ಲಾ ಅಚ್ಚರಿಯ ಅಲೆಗಳು ಮನತಟ್ಟಿ ಹಾದುಹೋಗುತ್ತವೆ. ಇತಿಹಾಸದ ಮಜಲೊಂದು ಇಲ್ಲಿನ ಪ್ರತೀ ಉಸಿರಲ್ಲೂ ಹಾಸುಹೊಕ್ಕಾಗಿರುವ ಅತೀ ವಿಶಿಷ್ಟ ಪುರಾವೆಯೊಂದು ನಗರದಾದಿಯುದ್ದಕ್ಕೂ ಕಾಣಬಹುದಾಗಿದೆ..