ಮಾದರಿ ಹೂವಿನ ಭಾಗಗಳು
ಚಟುವಟಿಕೆ - ಚಟುವಟಿಕೆಯ ಹೆಸರು
ಮಾದರಿ ಹೂವಿನ ಭಾಗಗಳು
ಅಂದಾಜು ಸಮಯ
40 Min
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ದಾಸವಾಳದ ಹೂವು ,
- ಸೂಜಿ,
- ಫಾರ್ಸೆಪ್ಸ್ ,
- ಬ್ಲೇಡ್ ,
- ಗಾಜಿನ ಫಲಕ ,
- ಗಾಜಿನ ತಟ್ಟೆ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಆಗಷ್ಟೆ ಅರಳಿದ ದಾಸವಾಳ ಹೂ ಒಂದನ್ನು ತೆಗೆದುಕೊಳ್ಳಿ.. ಹೊರಬಾಗದಿಂದ ಒಳಭಾಗವನ್ನು ಗಮನಿಸಿದಾಗ ಈ ನಾಲ್ಕು ಭಾಗಗಳನ್ನು ಕ್ರಮವಾಗಿ ಪುಷ್ಪಪಾತ್ರೆ (calyx)
ಪುಷ್ಪದಳ (carolla) ಹೂವಿನ ಗಂಡು ಭಾಗ ಕೇಸರ ಮಂಡಳ (androecium) ಹಾಗು ಹೂವಿನ ಹೆಣ್ಣು ಭಾಗ ,ಶಲಾಕೆ (gyenoceium) ಈ ನಾಲ್ಕು ಭಾಗಗಳು ಒಂದರ ಒಳಗೆ ಒಂದರಾಗಿ ಅವ್ರುತ್ತವಾಗಿ ಜೋಡನೆ ಆಗಿರುತ್ತದೆ.
- ಹೂವಿನ ಅತ್ಯಂತ ಹೊರಭಾಗ ಪುಷ್ಪಪಾತ್ರೆ(sepals)ಯಾಗಿದ್ದು ಎಲೆಯಾಕಾರದ ಹಸಿರು ಬಣ್ಣದ ರಚನೆಗಳನ್ನು ಹೊಂದಿರಿತ್ತದೆ. ಪುಷ್ಪಪಾತ್ರೆ ಮೊಗ್ಗಿನ ಸ್ಥಿತಿಯಲ್ಲಿ ಹೂವಿನ ಒಳ ಭಾಗಗಳನ್ನು ರಕ್ಶಿಸುತ್ತದೆ.
- ಹೂವಿನ ಎರಡನೆಯ ಪದರ ಪುಷ್ಪದಳ (petals) ಇದು ಸಾಮಾನ್ಯವಾಗಿ ಆಕಷಕ ಬಣ್ಣಗಳನ್ನು ಹೊಂದಿರುತ್ತದೆ, ಈ ಪುಷ್ಪದಳವು ವಿಭಿನ್ನ ಆಕರಗಳಲ್ಲಿ ಕಂಡು ಬರುತ್ತ್ತದೆ. ಪರಾಗದಸ್ಪರ್ಷದಲ್ಲಿ ದುಂಬಿಗಳನ್ನ ಆಕರ್ಷಿಸುತ್ತದೆ.
- ಕೇಸರ ಮಂಡಳವು ಹೊರಗಿನಿಂದ ಮೂರನೇ ಅವರ್ತ. ಇದರಲ್ಲಿ ಪುರುಷ ಪ್ರಜನನ ರಚನೆಗಳಾದ ಪುಂಕೇಸರ (stamens)ಗಳಿವೆ , ಅವು ಪರಾಗವನ್ನು ಉತ್ಪತ್ತಿಮಾಡುತ್ತವೆ.
ಪರಾಗಗಳಲ್ಲಿ ಪುರುಷಾಣುಗಳು ಉತ್ಪತ್ತಿಯಾಗುತ್ತವೆ.
- ಅತ್ಯಂತ ಒಳಗಿನ ಅವರ್ತವೇ ಶಲಾಕೆ. ಇದು ಹೆಣ್ಣು ಪ್ರಜನನರಚನೆಗಳಾದ ಕಾರ್ಪೆಲ್ ಗಳನ್ನೊಳಗೊಂಡಿದೆ. ಪ್ರತಿ ಕಾರ್ಪೆಲ್ ನಲ್ಲಿ ಕೆಳಭಾಗವನ್ನು ಅಂಡಾಶಯ (ovary) ಎಂದೂ , ನೀಳವಾದ ಮಧ್ಯಭಾಗವನ್ನು ಶಲಾಕಾ ನಳಿಕೆ (style) ಎಂದೂ ತುದಿಯ ಭಾಗವನ್ನು ಶಲಾಕಾಗ್ರ (stigma)ಎಂದೂ ಕರೆಯಲಾಗುತ್ತದೆ.
- ಹೂವಿನ ಹೆಣ್ಣು ಭಾಗವನ್ನು ನಾವು ನೊಡಬೇಕೆಂದರೆ ಉದ್ದ ಸೀಳಿಕೆಯನ್ನು ತೆಗೆದಾಗ ಈ ಅಂಡಾಶಯದ ಒಳಭಾಗದಲ್ಲಿ ಅಂಡಕಗಳು ಎಂಬ ರಚನೆಗಳು ಕಳು ಕಾಳಾಗಿ ಕಂಡು ಬರುತ್ತದೆ ಇದನ್ನ (ovules) ಎಂದು ಕರೆಯುತ್ತೆವೆಅಂಡಕಗಳ ಒಳಗೆ ಹೆಣ್ಣು ಲಿಂಗಾಣುಗಳಾದ ಅಂಡಾಣು ಉತ್ಪತ್ತಿಯಾಗುತ್ತವೆ.
- ಅಂಡಾಶ ಇಂದ ಹೋರಾಟ ನಳಿಕೆಯು ಶಲಾಕ ನಳಿಕೆಯಾಗಿದ್ದು ಶಲಾಗ್ರಕ್ಕೆ ಜೋಡಣೆಯಾಗಿರುತ್ತದೆ ಶಲಾಗ್ರವು ಪ್ರೊಟಿನ್ ಯುಕ್ತವಾದ ಅಂಟಾದ ದ್ರವವನ್ನು ಸ್ರವಿಸುತ್ತದೆ,ಶಲಾಗ್ರದಮೇಲೆಬಂದುಬೀಳುವ ಪರಾಗುವ ಈ ಅಂಟಿಕೆ ಅಂಟಿಕೊಳ್ಳುತ್ತದೆ, ಪರಾಗದಲ್ಲಿರುವ ಗಂಡು ಲಿಂಗಾಣುಗಳು ಈ ಶಲಾಕ ನಳಿಕೆಯ ಮೂಲಕ ಸಾಗಿ ಬುಡ ಭಾಗದಲ್ಲಿರುವ ಅಂಡಾಯದ ಒಳಗಿನ ಅಂಡಾಣುಗಳ ಜೊತೆ ಸಂಯೋಗ ಹೊಂದಿ ನೀಶಾಚನ ಕ್ರಿಯೆ ಉಂಟಾಗುತ್ತದೆ.
{{#ev:youtube|XIuBvITN328| 500|left }}
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್