ಕರ್ನಾಟಕ ಮಳೆಯ ಹಂಚಿಕೆ ಮತ್ತು ಪರಿಣಾಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಮಳೆ ಎಂದರೇನು ?

ವಾಯುಮಂಡಲದಲ್ಲಿ ತೇವಾಂಶದಿಂದ ಘನೀಕರಣಗೊಂಡು ನಂತರ ಒತ್ತಡಗೊಂಡು  ಭೂಮಿಯ ಗುರುತ್ವಶಕ್ತಿಯಿಂದ ಹನಿ ಹನಿಯಾಗಿ   ಬೀಳುವ ದ್ರವರೂಪವೇ ಮಳೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. http://kanaja.in/archives/52801( ಕರ್ನಾಟಕ ಜಾನಪದ ಆಚರಣೆಗಳ ಸಾಹಿತ್ಯ)
  2. https://www.youtube.com/watch?v=QG0h4xE2YCM ( ಮಳೆಯ ಅನಿಮೇಶನ್ ವೀಡಿಯೋ)
  3. https://www.google.co.in/search? q=rain&source=lnms&tbm=isch&sa=X&ei=Fl8wUryCOoXokgXc9YBg&ved=0CAcQ_AUoAQ&biw=1366&bih=658 (ಮಳೆಯ ಚಿತ್ರಗಳು)
  4. https://www.youtube.com/watch?v=ql0V3PJalnc (ಮಳೆಯನ್ನು ಅಳೆಯುವ ಬಗೆಗಿನ ವೀಡಿಯೋ)

ಸಂಬಂಧ ಪುಸ್ತಕಗಳು

ಕರ್ನಾಟಕದ ಭೂಗೋಳ ಸ್ಟಡಿ ಪ್ನ್ಯಾನರ್ , ಭೂಗೋಳ ಪರಿಚಯ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #1 - ಮಳೆ

ಕಲಿಕೆಯ ಉದ್ದೇಶಗಳು

  1. ಮಳೆ ಹೇಗಾಗುತ್ತದೆ ? ಎಂಬುದನ್ನು ವಿದ್ಯಾರ್ಥಿಗಳು ಅರಿಯುವರು.
  2. ಮಳೆ ಅಂದರೆ ಏನು ? ಅದು ಹೇಗೆ ಬರುತ್ತದೆ , ಯಾವ ಕಾಲದಲ್ಲಿ ಬರುತ್ತೇ , ಮಳೆಯಿಂದ ಆಗುವ ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ಚರ್ಚಿಸುವುದು.

ಶಿಕ್ಷಕರ ಟಿಪ್ಪಣಿ

  1. ಮಾನ್ಸೂನ್ ಎಂಬ ಪದವು ಅರೆಬಿಕ್ ಭಾಷೆಯ ಮೌಸಮ್ ದಿಂದ ಬಂದಿದೆ. ಇದರ ಅರ್ಥ ನಿಯತಕಾಲಿಕ ಅಥವಾ ಋತುಕಾಲಿಕ .
  2. ಮಳೆ ಭಿಕ್ಷೆ : ಕಾಲಕ್ಕೆ ಸರಿಯಾಗಿ ಮಳೆ ಆಗದೇ ಇರುವಾಗ ಗ್ರಾಮದ ಹುಡುಗರು ಸೇರಿ ಮಾಡುವ ಭಿಕ್ಷಾವಿಧಾನ. ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಆಚರಣೆ ನಡೆಯುತ್ತದೆ. ವಿಶೇಷವಾಗಿ ಗಂಡಸರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಸಣ್ಣಮಕ್ಕಳು ಇರುತ್ತಾರೆ. ಗುಂಪಿನ ಒಬ್ಬ ಯುವಕನಿಗೆ ಸೀರೆ, ಕುಪ್ಪಸ ಹಾಗೂ ಕೊಕಂಬಳ್ಳಿಯ ಬಳೆ, ಹಣೆಗೆ ಕುಂಕುಮ ಹಚ್ಚಿ ಹೆಣ್ಣು ಮಾಡುತ್ತಾರೆ. ನಂತರ ಒಂದು ಕೈಯಲ್ಲಿ ಮಣ್ಣಿನ ಗಡಿಗೆ ಮತ್ತೊಂದು ಕೈಯಲ್ಲಿ ಉದ್ದನೆಯ ಕೋಲು ಕೊಟ್ಟು, ಜೊತೆಗೆ ಬಗಲಿಗೊಂದು ಮಗು ಎತ್ತಿಕೊಂಡು ತುತ್ತನ್ನಕ್ಕೂ ಗತಿಯಿಲ್ಲದ ಭಿಕ್ಷುಕಿಯಾಗಿ ಭಿಕ್ಷೆ ಬೇಡಲು ಮುಂದೆ ಬಿಟ್ಟು, ಹಿಂದೆ ಉಳಿದವರಲ್ಲಿ ಒಬ್ಬ ಅವಳ ಗಂಡ, ಚಿಕ್ಕವರು ಮಕ್ಕಳಾಗಿ ಭಿಕ್ಷೆಗೆ ಹೊರಡುತ್ತಾರೆ

ಮಳೆ ನಕ್ಷತ್ರಗಳು

  1. ರೈತ ಸಂಮೃದ್ಧ ಬೆಳೆ ಬೆಳೆಯಬೇಕಾದರೆ ನೀರು ಬಹು ಮುಖ್ಯ, ಇಳುವರಿ ಮಳೆಯ ಮೇಲೆ ಅವಲಂಬಿತವಾಗಿದೆ. ಸದ್ಯ ಮಳೆ ರೈತನ ಜೋತೆಗೆ ಜೂಜಾಟವಾಡಿತ್ತಿದೆ. ಸಮಗ್ರವಾಗಿ ಮಳೆಯ ಬಗ್ಗೆ ತಿಳಿದುಕೊಳ್ಳ ಬೇಕಾಗಿದೆ. ಒಟ್ಟು ೨೭ ಮಳೆ ನಕ್ಷತ್ರಗಳಿವೆ, ಅವುಗಳಲ್ಲಿ ೧೮ ಮಳೆ ನಕ್ಷತ್ರಗಳು ರೈತರಿಗೆ ಬಹು ಮುಖ್ಯ. ಯಾವ ಯಾವ ದಿನಾಂಕದಲ್ಲಿ ಮಳೆ ನಕ್ಷತ್ರಗಳು ಬರುತ್ತೆವೆ ಎಂಬುವುದನ್ನು ಈ ಕೆಳಗೆ ಕೊಡಲಾಗಿದೆ.

ಮುಂಗಾರುಮಳೆ ನಕ್ಷತ್ರಗಳು ರೇವತಿ = ಮಾರ್ಚ ೩೦ ರಿಂದ ಎಪ್ರಿಲ್ ೧೨ ಅಶ್ವನಿ = ಎಪ್ರಿಲ್ ೧೩ ರಿಂದ ಎಪ್ರಿಲ್ ೨೬ ಭರಣಿ = ಎಪ್ರಿಲ್ ೨೭ ರಿಂದ ಮೇ ೧೦ ಕೃತಿಕಾ = ಮೇ ೧೧ ರಿಂದ ಮೇ ೨೪ ರೋಹಿಣಿ = ಮೇ ೨೫ ರಿಂದ ಜೂನ್ ೭ ಮುಂಗಾರು ಮಳೆ ನಕ್ಷತ್ರಗಳು ಮೃಗಶಿರಾ = ಜೂನ್ ೮ ರಿಂದ ಜೂನ್ ೨೧ ಆರಿದ್ರಾ = ಜೂನ್ ೨೨ ರಿಂದ ಜುಲೈ ೫ ಪುನರ್ವಸು = ಜುಲೈ ೬ ರಿಂದ ಜುಲೈ ೧೯ ಪುಷ್ಯ = ಜುಲೈ ೨೦ ರಿಂದ ಆಗಷ್ಟ ೨ ಆಶ್ಲೇಷ = ಆಗಷ್ಟ ೩ ರಿಂದ ಆಗಷ್ಟ ೧೬ ತಡವಾದ ಮುಂಗಾರು ಮಳೆ ನಕ್ಷತ್ರಗಳು ಮಖೆ = ಆಗಷ್ಟ ೧೭ ರಿಂದ ಆಗಷ್ಟ ೩೦ ಪುಬ್ಬ = ಆಗಷ್ಟ ೩೧ ರಿಂದ ಸೆಪ್ಟಂಬರ್ ೧೩ ಉತ್ತರ = ಸೆಪ್ಟಂಬರ್ ೧೪ ರಿಂದ ಸೆಪ್ಟಂಬರ್ ೨೬ ಹಸ್ತ = ಸೆಪ್ಟಂಬರ್ ೨೭ ರಿಂದ ಅಕ್ಟೋಬರ್ ೧೦ ಹಿಂಗಾರು ಮಳೆ ನಕ್ಷತ್ರಗಳು ಚಿತ್ತ = ಅಕ್ಟೋಬರ್ ೧೧ ರಿಂದ ಅಕ್ಟೋಬರ್ ೨೩ ಸ್ವಾತಿ = ಅಕ್ಟೋಬರ್ ೨೪ ರಿಂದ ನವಂಬರ ವಿಶಾಖ = ನವಂಬರ್ ೬ ರಿಂದ ನವಂಬರ್ ೧೯ ಅನುರಾಧ = ನವಂಬರ್ ೨೦ ರಿಂದ ಡಿಸೆಂಬರ್ ೨

ಚಟುವಟಿಕೆಗಳು #1 -ಅತಿವೃಷ್ಟಿಯಿ೦ದ ಆದ ಪರಿಣಾಮಗಳ ಕುರಿತು ದಿನಪತ್ರಿಕೆಗಳಲ್ಲಿ ವರದಿಗಳನ್ನು ಚಿತ್ರ ಸಹಿತ ತಯಾರಿಸಿರಿ.

  • ಅಂದಾಜು ಸಮಯ ….........ನಿರ್ದಿಷ್ಟ ಪಡಿಸಿಲ್ಲ.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ….......ಅ೦ಟು.ಕಾಗದ,ಹಳೆಯ ದಿನಪತ್ರಕೆಗಳು,ಕತ್ತರಿ,ಇತ್ಯಾದಿಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ….......ಬೇರೆ,ಬೇರೆ ಭಾಷೆಯ ದಿನಪತ್ರಕೆಗಳಿ೦ದ ವರದಿ ಹಾಗೂ ಚಿತ್ರಗಳನ್ನು ಸ೦ಗ್ರಹಿಸಲು ಮುಕ್ತ ಅವಾಶ ವಿದೆ.
  • ಬಹುಮಾಧ್ಯಮ ಸಂಪನ್ಮೂಲಗಳು …....ದೂರ ದಶ೯ನದಲ್ಲಿ ನೋಡಿದ ವರದಿಗಳನ್ನು ಸ೦ಗ್ರಹಿಸಿ ಬರೆಯಿರಿ.
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು …....ನಿಮ್ಮ ಸುತ್ತ ಮುತ್ತಲಿನ ಜನರಿ೦ದ ವಿಷಯ ಸ೦ಗ್ರಹಿಸಿ ವರದಿ ತಯಾರಿಸಿರಿ.
  • ಅಂತರ್ಜಾಲದ ಸಹವರ್ತನೆಗಳು...... ಅಂತರ್ಜಾಲದ ಮೂಲಕ ಚಿತ್ರಗಳನ್ನು ಸ೦ಗ್ರಹಿಸಿರಿ..
  • ವಿಧಾನ …..

ಹಿಂದಿನ ತರಗತಿಯಲ್ಲಿ ಮಳೆಯ ಬಗೆಗಿನ ಮಾಹಿತಿ ಕಲೆಹಾಕಲು ನೀಡಿದ್ದ ಮನೆಗೆಲಸವನ್ನು ಪ್ರತೀ ಮಕ್ಕಳು ಒಬ್ಬರಿಗೊಬ್ಬರು ಹಂಚಿಕೊಳ್ಳಲು ತಿಳಿಸುವುದು . ನಂತರ ಅವರು ಕಲೆಹಾಕಿರುವ ಮಾಹಿತಿಯನ್ನು ಚರ್ಚಿಸುವುದು . ಮಳೆ ಅಂದರೆ ಏನು ? ಅದು ಹೇಗೆ ಬರುತ್ತದೆ , ಯಾವ ಕಾಲದಲ್ಲಿ ಬರುತ್ತೇ , ಮಳೆಯಿಂದ ಆಗುವ ಅನುಕೂಲ ಮತ್ತು ಅನಾನುಕೂಲತೆಗಳ ಬಗ್ಗೆ ಚರ್ಚಿಸುವುದು . ಮಳೆಯ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಮಕ್ಕಳನ್ನು ಗುಂಪುಗಳಲ್ಲಿ ವಿಂಗಡಿಸಿ ಪ್ರತ್ಯೇಕ ವಿಷಯಗಳನ್ನು ಚರ್ಚಿಸಲು ತಿಳಿಸುವುದು . ಸಾದ್ಯವಾದಲ್ಲಿ ಮೋಡಗಳ ಹೆಪ್ಪುಗಟ್ಟುವಿಕೆಯ ವೀಡಿಯೋ ಸಂಗ್ರಹಿಸುವುದು . ಚಿತ್ರಗಳನ್ನು ಅಚ್ಚುಕಟ್ಟಾಗಿ ಸ೦ಗ್ರಹಿಸಿ ಒ೦ದು ಪಸ್ತಕ ರೂಪ ಕೊಡಿ .

  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?.....ಚಿ೦ತನಾತ್ಮಕ ಪ್ರಶ್ನೆಗಳನ್ನು ಕೇಳಬಹುದು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು

1. *ಪ್ರಶ್ನೆಗಳು.......ಮಕ್ಕಳೇ ನೀವೂ ನೆರೆ ಹಾವಳಿ ಸ೦ತ್ರಸ್ತರಿಗೆ ಯಾವ ರೀತಿ ಸಹಾಯ ಮಾಡಬಹುದು,?

ಚಟುವಟಿಕೆಗಳು #2 - ನಿಮ್ಮ ಊರಿನಲ್ಲಿ ಆಗುವ ಮಳೆಯ ಪ್ರಮಾಣವನ್ನು ಅಳೆಯುವುದು.

  • ಅಂದಾಜು ಸಮಯ :....................೧ ಅವಧಿ ನಂತರ ಮನೆಗೆಲಸ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಸಮತಟ್ಟಾದ ಹಲಗೆ,ಸ್ಕೇಲ್,ಸಮಾಂತರವಾದ ಗಾಜಿನ ಜಾರು, ಅಂಟು ,ಮಳೆ ಹನಿಗಳು ನೇರವಾಗಿ ತಾಗುವಂತಹ ಭೂಪ್ರದೇಶ.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ವೃಷ್ಟಿ ಮಾಪನವನ್ನು ತಯಾರಿಸುವುದು. ಮಳೆ ಬಂದಾಗ ಇದರ ಸಹಾಯದಿಂದ ಮಳೆಯ ಪ್ರಮಾಣವನ್ನು ಅಳೆಯಿರಿ.
  • ವಿಧಾನ : ಮಳೆಯ ಪ್ರಮಾಣವನ್ನು ಪ್ರತಿದಿನ ರೇಡಿಯೋ , ಟಿ,ವಿಗಳಲ್ಲಿ ಕೇಳುತ್ತಿರುತ್ಏವೆ , ಸಮಾಂತರವಾದ ಹಲಗೆಯ ಮೇಲೆ ಅಂಟಿನ ಸಹಾಯದಿಂದ ಗಾಜಿನ ಜಾರನ್ನು ಹಲಗೆಗೆ ಅಂಟಿಸಿ ವೃಷ್ಟ ಮಾಪನವನ್ನು ತಯಾರಿಸಿ. ನಂತರ ಮಳೆ ಬಂದಾಗ ಅದರ ಸಹಾಯದಿಂದ ನಿಮ್ಮ ಊರಿನಲ್ಲಿ ಆದ ಒಂದು ದಿನದ ಮಳೆಯನ್ನು ಅಳೆಯಿರಿ.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು ;................. ನಿಮ್ಮ ಊರಿನಲ್ಲಿ ಆದ ಮಳೆಗೂ ಆಗುಂಬೆಯಲ್ಲಿ ಆದ ಮಳೆಗೂ ಏನು ವ್ಯತ್ಯಾಸ ಎಂಬುದನ್ನು ತಿಳಿಸಿ. ಅದಕ್ಕೆ ಕಾರಣ ಕೊಡಿ.

ಪ್ರಮುಖ ಪರಿಕಲ್ಪನೆ #2 - ಕರ್ನಾಟಕದ ಮಳೆಯ ಹಂಚಿಕೆ

ಕಲಿಕೆಯ ಉದ್ದೇಶಗಳು

  1. ಕರ್ನಾಟಕದಲ್ಲಿ ಆಗುವ ಮಳೆಯ ಹಂಚಿಕೆಯನ್ನು ವಿದ್ಯಾರ್ಥಿಗಳು ತಿಳಿಯುವರು.
  2. ಅಧಿಕ ಮಳೆ ಬೀಳುವ ಪ್ರದೇಶಗಳನ್ನು ವಿದ್ಯಾರ್ಥಿಗಳು ಗುರುತಿಸುವರು.
  3. ಕಡಿಮೆ ಮಳೆ ಬೀಳುವ ಪ್ರದೇಶಗಳನ್ನು ವಿದ್ಯಾರ್ಥಿಗಳು ಗುರುತಿಸುವರು.

ಶಿಕ್ಷಕರ ಟಿಪ್ಪಣಿ

  1. ಮಳೆಯ ಹಂಚಿಕೆ : ಮಾನಸಯೂನ್ ಮಾರುತಗಳು ಪರ್ಯಾಯ ಪ್ರಸ್ಥಭೂಮಿ ಸಮುದ್ರ ಸಾಗರಗಳು ಇಲ್ಲಿ ಮಳೆಯ ಹಂಚಿಕೆ ವೈವಿಧ್ಯೆತೆಗೆ ಪ್ರಮುಖ ಕಾರಣವಾಗಿವೆ.
  2. ಕರ್ನಾಟಕ ಸರಾಸರಿ ವಾರ್ಷಿಕ ಮಳೆ ೧೧೭ cm ಆದರೆ ರಾಜ್ಯದ ಎಲ್ಲೆಡೆಯೂ ಒಂದೇ ಸಮನಾಗಿಲ್ಲ.
  3. ರಾಜ್ಯದ ವಾರ್ಷಿಕ ಮಳೆ ಹಂಚಿಕೆಯಲ್ಲಿ ಸುಮಾರು ಶೇ. ೮೦ ರಷ್ಟು ಭಾಗ ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯಲ್ಲಿ ಹಂಚಿಕೆಯಾಗಿದೆ. ಶೇ.೧೨ ರಷ್ಟು ಭಾಗ ನೈಋತ್ಯ ಮಾರುತಗಳ ಅವಧಿಯಲ್ಲಿ ಮಳೆ ಆಗುತ್ತದೆ. ಶೆ.೭ ರಷ್ಟು ಭಾಗ ಬೇಸಿಗೆಯಲ್ಲಿ ಶೆ.೧ ಭಾಗ ಚಳಿಗಾಲದಲ್ಲಿ ಆಗುತ್ತದೆ.
  4. ಆಗುಂಬೆಯಲ್ಲಿ ವರ್ಷದಲ್ಲಿ ೫೦೦೦ ದಿಂದ ೮೦೦೦ ಮಿ.ಮಿ. ಮಳೆ ಪಡೆಯುವುದು. ಇದನ್ನು ಕರ್ನಾಟಕದ ಮಾಸಿನ್ ರಾಮ್ ಎನ್ನು ವರು .
  5. ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಚಿತ್ರದುರ್ಗ ಜಿಲ್ಲೆಯ ಚಳ್ಳಿಕೆರೆ ೫೪೬ ಮಿ.ಮಿ.
  6. ಇತ್ತಿಚಿಗೆ ಆಗುಂಬೆಯಲ್ಲಿ ದಾಖಲಾದ ಮಳೆಯು ಮಾಸಿನ್ ರಾಮ್ ದಲ್ಲಾದ ಮಳೆಗಿಂತಲೂ ಅಧಿಕವಾಗಿ ದಾಖಲಾಗಿದೆ.
  7. ಕರ್ನಾಟಕದಲ್ಲಿ ಮಳೆಯ ಹಂಚಿಕೆಯನ್ನಾಧರಿಸಿ ಮೂರು ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ.

ಮಳೆಯ ಹಂಚಿಕೆ ವಾರ್ಷಿಕ ಸರಾಸರಿ ಮಳೆ ಪ್ರದೇಶಗಳು ಅಧಿಕ ಮಳೆ ೨೫೫೦ ಮಿ.ಮಿ.: ದ.ಕನ್ನಡ,ಉ.ಕನ್ನಡ , ಶಿವಮೊಗ್ಗ ,ಚಿಕ್ಕಮಗಳೂರು, ಕೊಡಗು ,ಬೆಳಗಾವಿಯ ಪಶ್ಚಿಮ ಭಾಗ, ಧಾರವಾಡ ಮತ್ತು ಮೈಸೂರು. ಸಾಧಾರಣ ಮಳೆ೯೫೦ ಮಿ.ಮಿ.:ಚಿಕ್ಕಮಗಳೂರು,ಧಾರವಾಡ,ಬೆಳಗಾವಿಯ ಮಧ್ಯ, ಬೆಂಗಳೂರು .ಹಾಸನ, ಬೀದರ್ ,ತುಮಕೂರು, ಕೋಲಾರ ಕಡಿಮೆ ಮಳೆ :೬೦೦ ಮಿ.ಮಿ.:ರಾಯಚೂರು, ಗುಲಬರ್ಗಾ,ಬಳ್ಳಾರಿ,ಬಿಜಾಪುರ,

ಚಟುವಟಿಕೆ #1 - ಕರ್ನಾಟಕದ ಅಂದವಾದ ನಕ್ಷೆಯನ್ನು ಬಿಡಿಸಿ ಅದರಲ್ಲಿ ಮಲೆನಾಡು ಪ್ರದೇಶಗಳನ್ನು ಗುರುತಿಸಿ.

  • ಅಂದಾಜು ಸಮಯ :.......................................೧ ಅವಧಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು …..........................ಪೇಪರ್ , ಪೆನ್ಸಿಲ್,ಕಲರ್ ಬಾಕ್ಸ್, ಇತ್ಯಾದಿ
  • ಬಹುಮಾಧ್ಯಮ ಸಂಪನ್ಮೂಲಗಳು.................................
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು...........................
  • ಅಂತರ್ಜಾಲದ ಸಹವರ್ತನೆಗಳು...........................ಮಳೆಯ ಹಂಚಿಕೆಯನ್ನು ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕಿ
  • ವಿಧಾನ:...........

ಕರ್ನಾಟಕ ನಕ್ಷೆಯನ್ನು ಬೋರ್ಡ ಮೇಲೆ ಬರೆದು , ವಿವಿಧ ಜಿಲ್ಲೆಗಳನ್ನು ಗುರುತಿಸುವುದು , ನಂತರ ಯಾವ ಯಾವ ಪ್ರದೇಶದಲ್ಲಿ ಹೆಚ್ಚು ಮತ್ತು ಕಡಿಮೆ ಮಳೆ ಬೀಳುತ್ತದೆ ಎಂಬುದನ್ನು ಚರ್ಚಿಸುವುದು . ಈ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳಲು ಕಾರಣ ಗಳೇನು ಎಂಬ ಬಗ್ಗೆ ಚರ್ಚೆ ನಡೆಸುವುದು ಹಾಗೆಯೇ ಕಡಿಮೇ ಮಳೆ ಬೀಳುವ ಪ್ರದೇಶಗಳ ಬಗ್ಗೆ ಯೂ ಕಾರಣ ಮತ್ತು ಪರಿಣಾಮಗಳ ಬಗ್ಗೆ ಚರ್ಚಿಸಸುವುದು .

  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? ….........ಚಿಂತನಾತ್ಮಕ ಪ್ರಶ್ನೆಗಳು, ಕುತೂಹಲಕಾರಿ ಪ್ರಶ್ನೆಗಳು.
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು :.......................

೧)ನಿಮ್ಮ ಜಿಲ್ಲೆಯು ,ಮಳೆಯ ಹಂಚಿಕೆಯ ಯಾವ ವಿಭಾಗದಲ್ಲಿ ಬರುತ್ತದೆ.?


ಮಳೆ ಒಗಟುಗಳು …............................ ೧) “ರೋಣಿ ಮಳೆ ಬಂದ್ರೆ ಓಣೆಲ್ಲಾ ಜೋಳ” ೨) ಮಳೆ ಬರೋದಿಲ್ಲ ಅಂತ ಕಂಬಳಿ ಬಿಟ್ಟು ಹೋಗ್ಬಾರ್ದು, ಕೆಸರು ಆಗಿದೆ ಅಂತ ಕೆರ ಬಿಟ್ಟು ಹೋಗ್ಬಾರ್ದು” ೩) “ಅಳಿಯ ಬಂದ ಮರುದಿನ ಮಗಳ ಮಾರಿ ನೋಡು, ಮಳೆ ಬಂದ ಮರುದಿನ ಬೆಳಿ ಮಾರಿ ನೋಡು” ೪) ಬಂದ್ರ ಮಗಿ ಬರದಿದ್ರ ಹೊಗಿ.

ಚಟುವಟಿಕೆ #2

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆ #3

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆ #4

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸುಮಾರು ೨೦ ವರ್ಷಗಳ ಹಿಂದೆ ಮಳೆ ಯಾವ ರೀತಿ ಆಗುತ್ತಿತ್ತು ಎಂಬುದನ್ನು ನಿಮ್ಮ ಹಿರಿಯರಿಂದ ತಿಳಿದುಕೊಂಡು ಒಂದು ವರದಿ ತಯಾರಿಸಿ.

ಸಮುದಾಯ ಆಧಾರಿತ ಯೋಜನೆಗಳು

ಮಳೆಯ ಕುರಿತಾದ ಜಾನಪದ ಹಾಡುಗಳನ್ನು ನಿಮ್ಮ ಹಿರಿಯರಿಂದ ಸಂಗ್ರಹಿಸಿ.

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ