ಭಾರತದ ಸಾರಿಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Barathada sarige.mm

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಭಾರತದ ಸಾರಿಗೆ

ಮತ್ತಷ್ಟು ಮಾಹಿತಿ

  1. palki.jpg
  2.  

 ವಿವಿಧ ವಿಧ ಸಾರಿಗೆಯ ಸಾದನಗಳು

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

[#http://en.wikipedia.org/wiki/Transport_in_India Wikipedia, worlds most popular encyclopadia!]

  1. http://en.wikipedia.org/wiki/Public_transport_in_Mumbai
  2. http://www.facts-about-india.com/transportation-in-India.php
  3. Lonely Planet is a popular book that helps you in planning your own travel, worth reading before you travel to any place
  4. World Bank site on Indian Transport

$more commercial information on Indian Transport

ಸಂಬಂಧ ಪುಸ್ತಕಗಳು

  1. ಭೂಗೋಳ ಸಂಗಾತಿ
  2. ಪ್ರಾಕ್ರತಿಕ ಭೂಗೋಳ ಶಾಸ್ತ್ರ -ರಂಗನಾಥ್
  3. ಭಾರತದ ಆರ್ಥಿಕ ವ್ಯವಸ್ಥೆ -ಕೃಷ್ಣಯ್ಯ ಗೌಡ
  4. ಭಾರತದ ಆರ್ಥಿಕತೆ - ಕೆ ಡಿ ಬಸವ
  5. ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಆರ್.ಆರ್.ಕೆ ಮುದ್ರಣ ೨೦೧೩.
  6. ಭಾರತದ ಆರ್ಥಿಕ ಅಭಿವೃಧ್ದಿ, ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.
  7. ಬಾರತದ ಅರ್ಥ ವ್ಯವಸ್ಥೆಯ ಪರಿಚಯ, ಲೇಖಕರು- ಕೆ.ಡಿ.ಬಸವಾ ಮುದ್ರಣ ೧೯೯೯.

ಬೋಧನೆಯ ರೂಪರೇಶಗಳು

ಸಾರಿಗೆ ಎಂದರೇನು ? ಸಾರಿಗೆಯು ಕಾಲಕಾಲಕ್ಕೆ ಹೇಗೆ ಬದಲಾವಣೆ ಹೊಂದಿದೆ ? ಸಾರಿಗೆಯ ವಿವಿಧ ಪ್ರಕಾರಗಳು ಯಾವವು? ಸಾರಿಗೆ ಯ ಮಹತ್ವವೇನು? ಸಾರಿಗೆರಹಿತ ಬದುಕಿನ ಹಾನಿಗಳಾವವು? ಸಾರಿಗೆಯು ನಾಗರಿಕತೆಯ ಬೆಳವಣಿಗೆಗೆ ಸಹಾಯಕವೆ ? ಸಾರಿಗೆಯಿಂದ ಕೃಷಿ ಕೈಗಾರಿಕೆ ಬೆಳವಣಿಗೆ ಹೊಂದುತ್ತವೆಯೆ?

ಪರಿಕಲ್ಪನೆ #1 ಸಾರಿಗೆಯ ಅರ್ಥ

ವಸ್ತುಗಳು ಮತ್ತು ಸೇವೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವುದಕ್ಕೆ ಸಾರಿಗೆ ಎನ್ನುವರು

ಕಲಿಕೆಯ ಉದ್ದೇಶಗಳು

  1. ಸಾರಿಗೆ ಪರಿಕಲ್ಪನೆಯನ್ನು ತಿಳಿಯುವುದು .
  2. ಸಾರಿಗೆಯ ಮಹತ್ವ (ಅಗತ್ಯತೆಯನ್ನು)ತಿಳಿಯುವುದು .
  3. ಸಾರಿಗೆಯ ವಿಧಗಳು ಹಾಗೂ ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅರಿಯುವರು.
  4. ಹೊಸ ವಿದ್ಯಮಾನವಾಗಿ ಸಮೂಹ ಸಾರಿಗೆ.

ಶಿಕ್ಷಕರಿಗೆ ಟಿಪ್ಪಣಿ

ಭಾರತದಲ್ಲಿನ ಸಾರಿಗೆ ವ್ಯವಸ್ಥೆಗಳು ಬಗ್ಗೆ ತಿಳಿಯಲು ಕುತೂಹಲಕಾರಿ ಮಾಡಬಹುದು. ಶಿಕ್ಷಕರ ವರ್ಗ ಆಸಕ್ತಿದಾಯಕ ಮತ್ತು ಉತ್ಸಾಹಭರಿತ ಮಾಡಲು ಭಾರತೀಯ ಸಾರಿಗೆ ವ್ಯವಸ್ಥೆಯನ್ನು ಇತಿಹಾಸದ ಬಗ್ಗೆ ಮಾಹಿತಿ ತರಬಹುದು. ಉದಾ. ಬ್ರಿಟಿಷ್ ರೈಲ್ವೆಯ ಭಾರತ ಪರಿಚಯಿಸಿದಾಗ ರೈಲ್ವೆ ಭಾರತೀಯ ರೈಲ್ವೆ 1853 ರಲ್ಲಿ ಆರಂಭಿಸಿದರು. ಸಹ ಸಾರಿಗೆ ವ್ಯವಸ್ಥೆಗಳನ್ನು (ಬ್ರಿಟೀಷರು ಎಷ್ಟು ಅವರ ಸಾಗಿಸುವುದು ಸರಕು ಮತ್ತು ರಕ್ಷಣಾ ಉಪಕರಣಗಳನ್ನು / ಜನರು, ಭಾರತದ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ) ಪರಿಚಯಿಸಲಾಯಿತು ಏಕೆ ಬಗ್ಗೆ ಚರ್ಚಿಸುತ್ತಿದ್ದಾರೆ.

ಸಾರಿಗೆ ಇತಿಹಾಸದಲ್ಲಿ ಸಣ್ಣ ವಿಡಿಯೋ ನೋಡಿ!

ಸಾರಿಗೆ ವಿವಿಧ ವಿಧಾನಗಳನ್ನು (ಹೇಗೆ ಒಂದಕ್ಕೊಂದು ಪೂರಕವಾಗಿ ಇರಬಹುದು) ಅಗತ್ಯವಿದೆ ಏಕೆ ಚರ್ಚೆಯೊಂದು ಕಲಿಯುವವರಿಗೆ ಸಮಗ್ರ ಚಿತ್ರವನ್ನು ನೀಡಬಹುದು. ರೈಲುಸಾರಿಗೆಯು ಜನರು ಮತ್ತು ಸರಕುಗಳ ವಾಹಕ ಮತ್ತು ದೂರದ ಸಾಮೂಹಿಕ ಸಾರಿಗೆ, ವಾಯುಯಾನ ಜನರ ತ್ವರಿತ ಸಾರಿಗೆ ಮತ್ತು ಕೇವಲ ಸರಕು ಐಟಂಗಳನ್ನು ಆಯ್ಕೆ ಆಗಿದೆ ಸಾಧ್ಯ. ರೈಲು ಸಾರಿಗೆ ಎಲ್ಲಾ ಇತರ ವಿಧಾನಗಳು ಸಾಧ್ಯವಿಲ್ಲ ಅಂತಿಮ ತಲುಪಬಹುದು. (ಸಲಹೆ ಇದನ್ನು ಒಂದು ಚಟುವಟಿಕೆ ಯಾಗಿ ನೀಡಬಹುದು ).

ಶಿಕ್ಷಕರು ತಮ್ಮ ಸ್ಥಳೀಯ ಪರಿಸರಕ್ಕೆ ಸಂಬಂದಿಸಿದಂತೆ ರೈತರು ಬೆಳೆಯುವ ಬೆಳೆಗಳು , ಅವರು ಅದನ್ನು ಮಾರಾಟಕ್ಕೆ ಕೊಂಡುಹೋಗುವ ಸ್ಥಳ , ಇವುಗಳ ಉದಾಹರಣೆಯನ್ನು ತೆಗೆದುಕೊಂಡು ಸಾರಿಗೆ ಎಂಬ ಪರಿಕಲ್ಪನೆಯನ್ನು ಮನದಟ್ಟು ಮಾಡಬಹುದು.

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಸಾರಿಗೆಯ ಅರ್ಥ_ ಚಟುವಟಿಕೆ
  2. ಚಟುವಟಿಕೆ ಸಂ 2,ಭಾರತದ ಸಾರಿಗೆಯ ಪೀಠಿಕೆ ಚಟುವಟಿಕೆ-೨

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ಒಂದು ರಾಷ್ಟ್ರವನ್ನು ಮನುಷ್ಯನ ದೇಹಕ್ಕೆ ಹೋಲಿಸಿದರೆ, ಕೃಷಿ ಮತ್ತು ಕೈಗಾರಿಕೆಗಳು ಅದರ ಮೌಂಸಖಂಡಗಳೆಂದೂ, ಸಾರಿಗೆಯು ಅದರ ನರಮಂಡಲವೆಂದು ಹೇಳಬಹುದು . ಇಂದು ಮಕ್ಕಳಿಗೆ ಸಾರಿಗೆ ಇಲ್ಲದ ಜೀವನ , ವಾಹನಗಳಿಲ್ಲದ ಜೀವನ ಹೇಗಿರುತ್ತೆ ಎಂದು ಕಲ್ಪಿಸಿಕೊಳ್ಳುವ ,ಇಂದು ಸಾರಿಗೆಯು ಎಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಬೇಕಾಗಿದೆ.

ಚಟುವಟಿಕೆಗಳು #

  1. ಚಟುವಟಿಕೆ ಸಂ 1
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

  1. ತರಗತಿಯಲ್ಲಿ ಗುಂಪು ಚಟುವಟಿಕೆಯನ್ನು ಮಾಡಿಸುವುದು.
  2. ರಸ್ತೆ ಸಾರಿಗೆ ಮತ್ತು ವಾಯುಸಾರಿಗೆ -ಯಾವುದು ಉತ್ತಮ ,ಯಾಕೆ ಉತ್ತಮ ಎಂದು ಚರ್ಚೆಯನ್ನು ಏರ್ಪಡಿಸುವುದು.
  3. ಪ್ರಮುಖ ಬಂದರುಗಳು, ಪ್ರಮುಖ ವಿಮಾ ಣ ನಿಲ್ದಾನಗಳನ್ನು ನಕಾಶೆಯಲ್ಲಿ ಗುರುತಿಸುವುದು.
  4. ಚತುಷ್ಕೋನ ರಸ್ತೆಗಳನ್ನು ವಿದ್ಯಾರ್ಥಿಗಳು ಸ್ವತಹ ನಕಾಶೆಯನ್ನು ಬಿಡಿಸಿ ಅದರಲ್ಲಿ ಗುರುತಿಸುವುದು.
  5. ತಮ್ಮ ಊರಿನಲ್ಲಿ ಬರುವ ಪ್ರಮುಖ ರಾಜ್ಯ ರಸ್ತೆ , ರಾಷ್ಟ್ರೀಯ ರಸ್ತೆಗಳನ್ನು ಪಟ್ಟಿ ಮಾಡುವುದು.
  6. ಮಂಗಳೂರು ಬಂದರು ಭೇಟಿಕೊಟ್ಟು ಬಂದರು ವೀಕ್ಷಣೆ ಮಾಡುವುದು.
  7. ವಿಮಾಣ ನಿಲ್ದಾಣಗಳಿಗೆ ಭೇಟಿಕೊಟ್ಟು ವಿಮಾಣ ವೀಕ್ಷಣೆ ಮಾಡುವುದು.
  8. ಅಟ್ಲಾಸ್ ನೊಡಿಕೊಂಡು ಭಾರತದ ಪ್ರಮುಖ ಬಂದರು ,ಪ್ರಮುಖ ವಿಮಾಣ ನಿಲ್ದಾಣ ಗಳನ್ನು ಪಟ್ಟಿ ಮಾಡುವುದು.
  9. ರಸ್ತೆ ನಿಯಂತ್ರಣಾಧಿಕಾರಿಯನ್ನು ಶಾಲೆಗೆ ಕರೆದುಕೊಂಡು ಬಂದು ರಸ್ತೆ ಸಾರಿಗೆ ಬಗ್ಗೆ ಮಾಹಿತಿಯನ್ನು ಕೊಡುವಂತೆ ವಿನಂತಿಸುವುದು.

ಯೋಜನೆಗಳು

  1. ನಿಮ್ಮ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಕುರಿತು ಟಿಪ್ಪಣಿ ಬರೆಯಿರಿ.

ಈ ಯೋಜನೆಯನ್ನು ಮಾಡುವ ಮೊದಲು ಏನನ್ನು ಬರೆಯಬೇಕು , ಹೇಗೆ ಬರೆಯಬೇಕು, ಎಷ್ಟು ಬರೆಯಬೇಕು , ಸಂಕ್ಷಿಪ್ತವಾಗಿ ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಡಿ .ವಿದ್ಯಾರ್ಥಿಗಳು ವಾಸ ಮಾಡುವ ಊರಿನ ಸಾರಿಗೆಯ ಸ್ಥಿತಿಗತಿಗಳನ್ನು ಬರೆಯಲು ತಿಳಿಸುವುದು . ಸಾರಿಗೆಯ ಸಮಸ್ಯೆಗಳನ್ನು ಬರೆಯಲು ಹೇಳುವುದು .ಶಿಕ್ಷಕರು ಸ್ಥಳೀಯ ಪರಿಸ್ಥಿತಿಗೆ ಸರಿಯಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಕೊಡಿ .

  1. ಹಳ್ಳಿ ರಸ್ತೆಗಳ ಸ್ಥಿತಿಗತಿ ಬಗೆಗೆ ನಿರ್ವಹಣೆಯ ಅಗತ್ಯತೆಯನ್ನು ಕುರಿತು ವರದಿ ತಯಾರಿಸಿ .

ಈ ಯೊಜನೆಯನ್ನು ಮಾಡುವ ಮೊದಲು ವಿದ್ಯಾರ್ಥಿಗಲನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಸೂಚನೆಯನ್ನು ಕೊಡುವುದು. ಹಳ್ಳಿ ರಸ್ತೆಗಳು ಯಾಕೆ ಬೇಕು ಎಂದು ಮೊದಲು ಮನದಟ್ಟು ಮಾಡಿಕೊಟ್ಟು , ಅಲ್ಲಿ ಬರುವ ಸಮಸ್ಯೆಗಳನ್ನು ಗುರುತಿಸಲು ಹೇಳುವುದು . ಅದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂದು ತಿಳಿಸುವುದು. ಅದರ ನಿರ್ವಹಣೆಗೆ ಜನರ ಸಹಕಾರ ಯಾವರೀತಿ ಇರಬೇಕು ಎಂದು ವರದಿಯಲ್ಲಿ ತಿಳಿಸಲು ಹೇಳುವುದು.

  1. ದೇಶದ ಆರ್ಥಿಕಾಭಿವೃದ್ದಿಯಲ್ಲಿ ಸಾರಿಗೆಯ ಪಾತ್ರವನ್ನು ಕುರಿತು ವಿವರ ಸಂಗ್ರಹಿಸಿ .

ಈ ಯೊಜನೆಯನ್ನು ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಮಾಡಿ. ಅಂತರ್ಜಾಲದ ಮೂಲಕ ಮಾಹಿತಿಯನ್ನು ಸಂಗ್ರಹಿಸಲು ತಿಳಿಸುವುದು.

  1. 'ಪ್ರಧಾನಿ ಗ್ರಾಮ ರಸ್ತೆ ಯೋಜನೆಯ' ಬಗ್ಗೆ ಪ್ರಬಂಧ ಬರೆಯಲು, ನೋಡಿ ಪ್ರಧಾನಿ ಗ್ರಾಮ ರಸ್ತೆ ಯೋಜನೆ ಬಗ್ಗೆ ವಿಕಿಪಿಡಿಯಾದಲ್ಲಿ
  2. ಭಾರತದ ಸಕಾ‍ರದ ಗ್ರಾಮೀಣಾಭಿವೃದ್ಧಿ ಇಲಾಖೆ

ಸಮುದಾಯ ಆಧಾರಿತ ಯೋಜನೆಗಳು

  1. ನಿಮ್ಮ ಗ್ರಾಮದ ನಕಾಶೆಯನ್ನು ಬಿಡಿಸಿ ಗ್ರಾಮದಲ್ಲಿ ಬರುವ ಎಲ್ಲಾ ಪಕ್ಕಾ ರಸ್ತೆಗಳನ್ನು ಗುರುತಿಸುವುದು. ಪ್ರಮುಖ ಕಟ್ಟಡಗಳನ್ನು , ಸರಕಾರಿ ಕಟ್ಟಡಗಳನ್ನು ಸೇರಿಸುವುದು. ನದಿ , ಕೆರೆಗಳನ್ನು ಗುರುತಿಸುವುದು.
  2. ನಿಮ್ಮ ಜಿಲ್ಲೆಯಲ್ಲಿ ಹಾದು ಹೊಗಿರುವ ರಾ‌ಷ್ಶಿಯ ಹೆದ್ದಾರಿಗಳು.ರಾಜ್ಯ ಹೆದ್ದಾರಿಗಳು.ಜಿಲ್ಲಾ ರಸ್ತೆಗಳು/ಗ್ರಾಮೀಣ ರಸ್ತೆಗಳನ್ನು ನಕಾಶೆಯಲ್ಲಿ ಬಿಡಿಸಿ ಚಿತ್ತ್ರಿಸಿರಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು -ಪಾಠದ ಪ್ರಾರಂಭದ ವಾಕ್ಯದಲ್ಲಿ ಸಾರಿಗೆಯ ಅರ್ಥ .

  1. "ವಸ್ತುಗಳು , ಸೇವೆಗಳು, ಮಾಹಿತಿ, ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಮತ್ತೋಂದು ಸ್ಥಳಕ್ಕೆ ಸಾಗಿಸುವುದನ್ನು ಸಾರಿಗೆ ಎನ್ನುವರು."

ಈ ವಾಕ್ಯದಲ್ಲಿ ವಸ್ತುಗಳು ಮತ್ತು ಸರಕುಗಳು ಎಂಬ ಶಬ್ದ ಒಂದೇ ಅಲ್ಲವೇ?ಹಾಗೆಯೇ ಮಾಹಿತಿ ಎಂಬ ಶಬ್ದ ಸಂಪರ್ಕ ಎಂಬ ವಿಷಯಕ್ಕೆ ಸಂಬಂದಿಸಿದ್ದು ಅಲ್ಲವೇ? ಈ ವ್ಯಾಖ್ಯೆ ಯನ್ನು ಸರಿಪಡಿಸಬೇಕಾಗಿದೆ.

  1. ಈ ಅಧ್ಯಾಯದಲ್ಲಿ ವಿಶ್ವದ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆ ಯ ಬಗ್ಗೆ ಚರ್ಚಿಸಿಲ್ಲ. ಭಾರತೀಯ ರೈಲ್ವೆ ಸಾರ್ವಜಿಕ ವಲಯದಲ್ಲಿನ ಪ್ರಪಂಚದ ಒಂಭತ್ತನೇ ದೊಡ್ಡ ಉದ್ಯೋಗದಾತ ಸಂಸ್ಥೆಯಾಗಿದೆ.ಭಾರತೀಯ ರೈಲ್ವೆ ಯ ಬಗ್ಗೆ ವಿಕಿಪೀಡಿಯದಲ್ಲಿ ಮಾಹಿತಿ
  1. ಈ ಅಧ್ಯಾಯ ಕೆಲವು ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ, ಇನ್ನೂ ವಿಷಯ ಅರ್ಥ /ಪರಿಕಲ್ಪನೆಗಳನ್ನು ಸೇರಿಸಬಹುದು . ಉದಾ. 'ಬಾಂಬೆ ಬಂದರನ್ನು "ಭಾರತದ ಹೆಬ್ಬಾಗಿಲು"ಕರೆಯಲಾಗುತ್ತದೆ ಎಂದು ಹೇಳಲಾಗಿದೆ' ಆದರೆ ನಾವು ಬಾಂಬೆ ಬಂದರಿಗೆ ಭಾರತದ ಹೆಬ್ಬಾಗಿಲು ಎಂದು ಏಕೆ ಕರೆಯುತ್ತಾರೆ ಚರ್ಚಿಸಬೇಕಾಗಿದೆ ? ಇದು ನೂರಾರು ವರ್ಷಗಳಿಂದ ಮತ್ತು ಇಂದಿಗೂ ಜನರ ಸಾರಿಗೆಗೆ ಹಾಗೂ ಸರಕುಗಳ ಸಾಗಾಟಕ್ಕೆ ಗಮನಾರ್ಹ ಪ್ರಮುಖವಾದ ನೈಸರ್ಗಿಕ ಬಂದರಾಗಿದೆ ಇದಕ್ಕಾಗಿ ಭಾರತದ ಹೆಬ್ಬಾಗಿಲು ಕರೆಯಲಾಗುತ್ತದೆ. ಈ ಬಂದರು ಹತ್ತಿರ ಸಣ್ಣ ಕಮಾನು ಕೂಡ ನಿರ್ಮಿಸಲಾಗಿದೆ . ಇದಕ್ಕೂಕೂಡಾ ಭಾರತದ ಹೆಬ್ಬಾಗಿಲು ಎಂದು ಕರೆಯುತ್ತಿರಬಹುದು.

Image:84526-004-815E768E.jpg ಗೇಟ್ ವೇ ಆಫ್ ಇಂಡಿಯಾ ಮುಂಬಾಯಿ