ಬಾಯ್ಲ್ ನಿಯಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೭:೨೬, ೨೫ ಜುಲೈ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→‎ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಬಾಯ್ಲ್ ನಿಯಮದ ಪ್ರಾತ್ಯಕ್ಷಿಕೆ

ಅಂದಾಜು ಸಮಯ

30 ನೀಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. 60 ಮಿ.ಲೀ ಸಿರಿಂಜ್
  2. ಬಲೂನ್
  3. ಸೂಜಿ ರಂಧ್ರದ ಮುಚ್ಚಳ (ಗಾಳಿಯನ್ನು ಬಂಧಿಸಲು)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಹೊಸದಾದ ನಿಷ್ಕ್ರೀಮೀಕರಣ ಗೊಳಿಸಿದ ಸಿರಿಂಜ್ ಬಳಸಿ
  2. ಸಿರಿಂಜ್ ನ ಜೊತೆ ಬರುವ ಸೂಜಿಯನ್ನು ಸೂಕ್ತವಾಗಿ ವಿಲೇವಾರಿ ಮಾಡಿ
  3. ಶಿಕ್ಷಕರ ಸೂಕ್ತ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿಧಾನ-ಒಂದು ಬಲೂನನ್ನು ತೆಗೆದುಕೊಳ್ಳಿ,ಗಾಳಿಯನ್ನು ಊದಿ,ಸಿರಿಂಜ್ ನ ಸಿಲಿಂಡರ್ ನ ಗಾತ್ರಕ್ಕೆ ಅನುಗುಣವಾಗಿ ಬೇಬಿ ಬಲೂನನ್ನು ತಯಾರಿಸಿಕೊಳ್ಳಿ, ಸಿರಿಂಜ್ ನ ಪಿಸ್ಟನ್ ಹೊರ ತೆಗೆದು ಬೇಬಿ ಬಲೂನನ್ನು ಸಿರಿಂಜ ನ ಸಿಲಿಂಡರ್ ನ ಒಳಗೆ ಹಾಕಿ, ನಂತರ ಸಿರಿಂಜ್ ಗೆ ಪಿಸ್ಟನ್ ಅಳವಡಿಸಿ, ಗಾಳಿ ಹೊರ ಹೋಗದಂತೆ ಸಿಲಿಂಡರ್ ನ ಸೂಜಿಯ ಬಾಯಿಯನ್ನು ಭದ್ರ ಪಡಿಸಿ. ಪಿಸ್ಟನ್ ನ ಸಹಾಯದಿಂದ ಸಿರಿಂಜ್ ನ ಒಳಗೆ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತಾ ಹೋಗಿ, ಬಲೂನ್ ನ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ. ಇದೇ ರೀತಿ ಪಿಸ್ಟನ್ ನ ಸಹಾಯದಿಂದ ಗಾಳಿಯ ಒತ್ತಡವನ್ನು ಕಡಿಮೆಮಾಡಿ ಬಲೂನ್ ನ ಗಾತ್ರದಲ್ಲಾಗುವ ಬದಲಾವಣೆಯನ್ನು ಗಮನಿಸಿ. ಉಪಸಂಹಾರ-ಸ್ಥಿರ ತಾಪದಲ್ಲಿ ನಿರ್ದಿಷ್ಟ ರಾಶಿಯ ಅನಿಲದ ಒತ್ತಡ ಹೆಚ್ಚಾದಂತೆ ಬಲೂನ್ ನ ಗಾತ್ರವೂ ಕಡಿಮೆಯಾಗುತ್ತದೆ,ಒತ್ತಡ ಕಡಿಮೆಯಾದಂತೆ ಬಲೂನ್ ಗಾತ್ರವೂ ಹೆಚ್ಚಾಗುತ್ತದೆ.ಅಂದರೆ "ಸ್ಥಿರ ತಾಪದಲ್ಲಿ ನಿರ್ದಿಷ್ಟ ರಾಶಿಯ ಅನಿಲದ ಗಾತ್ರವೂ ಅದರ ಒತ್ತಡಕ್ಕೆ ವಿಲೋಮಾನು ಪಾತದಲ್ಲಿರುತ್ತದೆ"-ಬಾಯ್ಲ್ ನಿಯಮ

{{#ev:youtube|MXTQlEhG-Ak| 500|left }}























ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಸ್ಕೂಬಾ ಈಜುಗಾರರು ಸಮುದ್ರದ ಆಳದಿಂದ ಮೇಲೆ ಬರುವಾಗ ತಕ್ಷಣವೇ ಒತ್ತಡ ಕಡಿಮೆಯಾಗುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ನಿಧಾನಗತಿಯಲ್ಲಿ ಮೇಲೆ ಬರುತ್ತಾರೆ .
  2. ವಿಮಾನವು ಮೇಲೇರುವಾಗ ಗಾಳಿಯ ಒತ್ತಡವು ಕಡಿಮೆಯಾಗುವುದರಿಂದ ಉಂಟಾಗುವ ಅನಾಹುತವನ್ನು ತಪ್ಪಿಸಲು ಪ್ರಯಾಣಿಕರಿಗೆ ಬಾಯಿಯನ್ನು ತೆರೆದುಕೊಳ್ಳಲು ವಿಮಾನದ ಸಿಬ್ಬಂದಿಯು ಸೂಚಿಸುತ್ತಾರೆ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಗಾಳಿಯ ಒತ್ತಡವನ್ನು ಹೆಚ್ಚಿಸಿದಾಗ ಬಲೂನ್ ನ ಗಾತ್ರದಲ್ಲಾದ ಬದಲಾವಣೆಯೇನು?
  2. ಗಾಳಿಯ ಒತ್ತಡವನ್ನು ಕಡಿಮೆ ಮಾಡಿದಾಗ ಬಲೂನ್ ನ ಗಾತ್ರದಲ್ಲಾದ ಬದಲಾವಣೆಯೇನು?
  3. ತಾಪವು ಸ್ಥಿರವಾಗಿದ್ದಾಗ ಅನಿಲದ ಗಾತ್ರ ಮತ್ತು ಒತ್ತಡಗಳಿಗಿರುವ ಸಂಬಂಧವನ್ನು ನಿರೂಪಿಸಿ.
  4. ಬಾಯ್ಲನ ನಿಯಮವನ್ನು ನಿರೂಪಿಸಿ

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಅನಿಲಗಳ ವರ್ತನೆ