ಉಬುಂಟು16.04
ಪರಿಚಯ
ಉಬುಂಟು ತಂತ್ರಾಂಶ ಪ್ರತೀ ವರ್ಷದಲ್ಲಿ ಎರಡುಬಾರಿ ನವೀಕರಣಗೊಳ್ಳುತ್ತಿರುತ್ತದೆ, ಅಂದರೆ ವರ್ಷದ ಮಾರ್ಚ್ ಮತ್ತು ಆಕ್ಟೋಬರ್ ತಿಂಗಅಳಲ್ಲಿ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ.
ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ ಎಲ್.ಟಿ.ಸ್(LTS- Long Term Support) ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ ಪ್ರಸ್ತುತ ಉಬುಂಟು ಎಲ್.ಟಿ.ಸ್ 16.04 ಆವೃತ್ತಿಯು ಚಾಲನೆಯಲ್ಲಿದೆ.
ಕಳೆದ ಎಲ್.ಟಿ.ಸ್ ಉಬುಂಟು 14.04 ಅಥವ ಯಾವುದೆ ಆವೃತ್ತಿಯನ್ನು ಬಳಸುತ್ತಿರುವವರು, ಈ 16.04 ಆವೃತ್ತಿಗೆ ನವೀಕರಣ ಮಾದಿಕೋಳ್ಳುವ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.
ಅನುಸ್ಥಾಪನೆ
ಅನುಸ್ಥಾಪನೆಗೆ ಮುನ್ನ ಮಾಡಬೇಕಾದ ಸೂಚನೆಗಳು
ಈ ಉಬುಂಟು ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೋಳ್ಳಳು ಬಯಸುವವರು, ಈ ಕೆಳಗಿನ ಏಲ್ಲಾ ಸೂಚನೆಗಳನ್ನು ಪಾಲಿಸಿ ನಂತರ ಅನುಸ್ಥಾಪನೆಗೆ ಚಾಲನೆ ಮಾಡಿ. ೧. ತನ್ನ ಗಣಕಯಂತ್ರದ ಪ್ರಸ್ತುತ ತಂತ್ರಾಂಶದಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಬೇಕು, ಅದರಲ್ಲೂ ಉಬುಂಟುವಿನ ಡೇಟಾವನ್ನು ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. ೨. ಅನುಸ್ಥಾಪನೆ ಮಾಡುವ ಸಮಯದಲ್ಲಿ, ಯಾವುದೆ ಕಾರಣಕ್ಕೂ ಸಹ ಗಣಕಯಂತ್ರ ಸ್ಥಗಿತಗಳಿಸಬಾರದು. ೩. ಅನುಸ್ಥಾಪನೆ ಮಾಡುವ ಉಬುಂಟು 16.04 ಆವೃತ್ತಿಯ ತಂತ್ರಾಂಶವನ್ನು ಕೆಳಗಿನ ಲಿಂಕ್ ನಿಂದ ಡೌನ್‌ಲೋಡ್ ಮಾಡಿಕೊಂಡು, ಅದನ್ನು ಡಿ.ವಿ.ಡಿ ಗೆ ಆಥವಾ ಪೆನ್ ಡ್ರೈವ್ ಗೆ ಹಾಕಿ ಇಟ್ಟುಕೊಳ್ಳಿ.
> ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು ಈ ಲಿಂಕ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ಉಬುಂಟು 16.04 ತಂತ್ರಾಂಶಕ್ಕೆ ಇಲ್ಲಿ ಒತ್ತಿ >
ಉಬುಂಟು 16.04 ನ್ನು ಅನುಸ್ಥಾಪನೆ ಮಾಡಿಕೊಳ್ಳಲು ಉಪಯುಕ್ತವಾಗುವ ವಿವರವಾದ ಕೈಪಿಡಿಯನ್ನು ಪಡೆಯಲು ಇಲ್ಲಿ [....... ಇಲ್ಲಿ ಕ್ಲಿಕ್ ಮಾಡಿ]
ಅನುಸ್ಥಾಪನೆಯ ವಿಧಗಳು
ಗೂಗಲ್ ಡ್ರೈವ್ ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು
ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ ಕಲ್ಪವೃಕ್ಷವನ್ನು ಈ ಕೆಳಕಂಡ ಲಿಂಕ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
ಉಬುಂಟು 16.04
ಗೂಗಲ್ ಡ್ರೈವ್‌ನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
- ನಿಮ್ಮ ಕಂಪ್ಯೂಟರ್‌ಗೆ ಹೊಸ ಡಿ.ವಿ.ಡಿ (ಬಳಸದಿರುವ)ಯನ್ನು ಸೇರಿಸಿ.
- ನಂತರ Application - Sound and Video- K3b ತೆರೆಯಿರಿ. ಇಲ್ಲಿ "More actions" ಎಂಬಲ್ಲಿ ಕ್ಲಿಕ್ ಮಾಡಿ. ನಂತರ "Burn Image" ಆಯ್ಕೆ ಮಾಡಿಕೊಳ್ಳಿ.
ನಂತರ "Image Burn" ಎಂಬಲ್ಲಿ ಕ್ಲಿಕ್ ಮಾಡಿ, ಈಗಾಗಲೇ ನೀವು ಗೂಗಲ್ ಡ್ರೈವ್ ನಿಂದ ಡೌನ್‌ಲೋಡ್ ಮಾಡಿ ಸೇವ್ ಮಾಡಿರುವ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಕಡತವನ್ನು ಆಯ್ಕೆ ಮಾಡಿ ನಂತರ "Start" ಬಟನ್ ಕ್ಲಿಕ್ ಮಾಡಿ.
ಸ್ವಲ್ಪ ಸಮಯದ ನಂತರ, ಡಿವಿಡಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಡಿವಿಡಿಯನ್ನು ಬಳಸಿ ನೀವು ಉಬುಂಟು 16.04 ಆವೃತ್ತಿಯನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು.
ಕಲ್ಪವೃಕ್ಷ ಡಿ.ವಿ.ಡಿ ಮೂಲಕ ಅನುಸ್ಥಾಪನೆ
ಗೂಗಲ್ ಡ್ರೈವ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಐಟಿ ಫಾರ್ ಚೇಂಜ್ ಸಂಸ್ಥೆಯವರನ್ನು ಸಂಪರ್ಕಿಸಿ "ಉಬುಂಟು 16.04 ಆವೃತ್ತಿಯ ಕಸ್ಟಮ್ ತಂತ್ರಾಂಶ" ದ ಡಿವಿಡಿಯನ್ನು ಅಂಚೆ (ಕೊರಿಯರ್) ಮೂಲಕ ಪಡೆದುಕೊಳ್ಳಬಹುದು.
ಡಿವಿಡಿ ಕೋರಿಕೆಯನ್ನು ಮತ್ತು ಕೊರಿಯರ್ ತಲುಪಬೇಕಾದ ನಿಮ್ಮ ವಿಳಾಸವನ್ನು kalpavrikshaiso@gmail.com ವಿಳಾಸಕ್ಕೆ ಇಮೇಲ್ ಕಳುಹಿಸಬೇಕು. ನೀವು ಇಮೇಲ್ ಕಳುಹಿಸಿದ ಒಂದು ವಾರದೊಳಗೆ ನಿಮಗೆ ಕಲ್ಪವೃಕ್ಷ ಡಿವಿಡಿ ತಲುಪಿಸಲಾಗುವುದು.
ಕಲ್ಪವೃಕ್ಷ ಡಿವಿಡಿಯನ್ನು ಪಡೆಯಲು ಸಂಸ್ಥೆಯ ಬ್ಯಾಂಕ್ ಖಾತೆ ಸಂಖ್ಯೆಗೆ 160 ರೂಗಳನ್ನು ಸಂದಾಯ ಮಾಡಬೇಕಾಗುತ್ತದೆ.(100 ರೂ ಡಿವಿಡಿ ಗೆ ಮತ್ತು 60 ರೂ ಕೊರಿಯರ್ ವೆಚ್ಚ).
ಹೆಚ್ಚಿನ ಮಾಹಿತಿಗೆ 080-26654134 (ಸುನಿಲ್) ಸಂಖ್ಯೆಗೆ ಕರೆಮಾಡಬಹುದು.
ಅನುಸ್ಥಾಪನೆಯ ವಿಧಾನ
ಗೂಗಲ್ ಡ್ರೈವ್ ಮೂಲಕ ಅಥವಾ ಕೊರಿಯರ್ ಮೂಲಕ ಡಿವಿಡಿ ಪಡೆದುಕೊಂಡ ನಂತರ ನಿಮ್ಮ ಕಂಪ್ಯೂಟರ್/ಲ್ಯಾಪ್‌ಟಾಪ್‌ನಲ್ಲಿನ ಪ್ರಸ್ತುತ ಇರುವ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ. ನಂತರ ಡಿವಿಡಿ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕು.
ಉಬುಂಟು 16.04 ಆವೃತ್ತಿಯನ್ನು ವಿಂಡೋಸ್ 7,8 & 10 ಜೊತೆ ಅನುಸ್ಥಾಪನೆ ಮಾಡುವ ವಿಧಾನಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಇಲ್ಲಿ ಲಿಂಕ್ ನೀಡಬೇಕು"