ಪ್ರೀಪ್ಲೇನ್ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಪರಿಚಯ

ಪ್ರೀಪ್ಲೇನ್ ಎಂಬುದು ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದ್ದು ಶಾಲೆಯಲ್ಲಿ ಅಥವಾ ಮನೆಯಲ್ಲಿ ಆಗಬೇಕಿರುವ ಕೆಲಸಗಳನ್ನು ಯೋಚಿಸಲು ಹಾಗು ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಈತಂತ್ರಾಂಶವು ಮೈಂಡ್‌ಮ್ಯಾಪ್ ರಚಿಸಲು ಹಾಗು ಮಂಡ್‌ಮ್ಯಾಪ್‌ನಲ್ಲಿರುವ ಮಾಹಿತಿಯನ್ನು ವಿಶ್ಲೇಷಣೆ ಮಾಡಲು ಬಳಕೆಯಾಗುತ್ತದೆ. ಮೈಂಡ್‌ಮ್ಯಾಪ್ ನ್ನು ಪರಿಪೂರ್ಣವಾದ ವಿಚಾರಗಳನ್ನು ಹಾಗು ಫಲಿತಾಂಶಗಳನ್ನು ನೀಡುವ ಪರಿಣಾಮಕಾರಿ ಬುಧ್ದಿಮಂಥನ ತಂತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಮೈಂಡ್‌ಮ್ಯಾಪ್ ಬಳಕೆದಾರರಿಗೆ ಇದರ ಬಗೆಗಿನ ಕಲ್ಪನೆಗಳ ಬಗ್ಗೆ ಅರ್ಥೈಸಿಕೊಳ್ಳಲು ನಾವು ಸಹಾಯ ಮಾಡಬೇಕಿದೆ. ನಾವು ಲಾಭದಾಯಕವಾಗಿ ಹಾಗು ಆಕರ್ಷಣೀಯವಾಗಿ ವಿವಿಧ ರೀತಿಯಲ್ಲಿ ಫಲಿತಾಂಶವನ್ನು ತೋರಿಸಬಹುದು, ಆದರೆ ಇದನ್ನಯ ಬಳಸುತ್ತಿರುವವರು ಯಾರು ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.

ಐ.ಸಿ.ಟಿ ಸಾಮರ್ಥ್ಯ

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ಪ್ರೀಪ್ಲೇನ್ ಎಂಬುದು ಶೈಕ್ಷಣಿಕ ಬಳಕೆಗಾಗಿ ಇರುವ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶ ಅನ್ವಯಕವಾಗಿದೆ. ಮೈಂಡ್‌ಮ್ಯಾಪ್‌, ವಿಚಾರಗಳನ್ನು ಸಂಘಟಿಸಲು ವಿಧ್ಯಾರ್ಥಿಗಳಿಗೆ ಸಹಾಯಕವಾಗುವ ಉತ್ತಮ ವಿಧಾನವೆಂದು ಬೋಧಕರು ಪರಿಗಣಿಸಿದ್ದಾರೆ. ಹಾಗೆಯೇ ಬೋಧನೆಗೆ ಇದು ಬಹಳ ಉಪಯುಕ್ತವೆಂದು ಗುರುತಿಸಿದ್ದಾರೆ. ಶಿಕ್ಷಕರು ವಿಷಯದ ಮೂಲ ಪರಿಕಲ್ಪನೆಯನ್ನು ಮಾತ್ರವೇ ವಿಧ್ಯಾರ್ಥಿಗಳಿಗೆ ನೀಡಿದಾಗ, ವಿಧ್ಯಾರ್ಥಿಗಳು ಅದನ್ನಯ ವ್ಯವಸ್ಥಿತವಾಗಿ ಸಂಘಟಿಸುವ ಪ್ರಕ್ರಿಯೆಗೆ ಈ ಪರಿಕರವು ಬಹಳು ಉಪಯುಕ್ತವಾಗಿದೆ. ಹೀಗಿದ್ದರೂ ಮೈಂಡ್‌ಮ್ಯಾಪ್ ತನ್ನ ಉದ್ದೇಶ ತಲುಪಲು ವ್ಯಾಪಕ, ವ್ಯವಸ್ಥಿತ ಮತ್ತು ಓದಬಹುದಾದಂತಹ ಪರಿಕರವಾಗಿರಬೇಕು.

ಆವೃತ್ತಿ

Stable release 1.5.18 (December 7, 2016.
Preview release 1.5.18 (December 7, 2016;

ಸಂರಚನೆ

ಪ್ರೀಪ್ಲೇನ್ ಅನ್ವಯಕವು, ಉಬುಂಟು ಕಸ್ಟಮ್‌ ನ ಭಾಗವಾಗಿದೆ. ಇದನ್ನು Applications → Office → Freeplane ಮೂಲಕ ತೆರೆಯಬಹುದಾಗಿದೆ.

ಲಕ್ಷಣಗಳ ಮೇಲ್ನೋಟ

  1. ಟಿಪ್ಪಣಿ ತೆಗೆದುಕೊಳ್ಳುವುದು.
  2. ಸಂಬಂಧೀಕರಿಸುವ ವಿಚಾರಗಳನ್ನು ಕ್ರಮಾನುಗತವಾಗಿ ನಮೂದಿಸುವುದು.
  3. ಘಟಕಗಳನ್ನು ವಿವಿಧ ಶೈಲಿಗಳೊಂದಿಗೆ ಮತ್ತು ಮೆಟಾಡೇಟಾದೊಂದಿಗೆ ವರ್ಗೀಕರಿಸುವುದು.
  4. ವಿವಿಧ ಗ್ರಾಫಿಕ್ ಮೂಲಕ ಘಟಕಗಳನ್ನು ಗುಂಪು ಮಾಡುವುದು.
  5. ಘಟಕಗಳನ್ನು ಸಂಪರ್ಕಿಸುವುದು.
  6. ಕ್ರಮಾನುಗತದ ಅಧಾರದ ಮೇಲೆ ಸ್ವಯಂಚಾಲಿತವಾಗಿ ಘಟಕಗಳನ್ನು ವಿನ್ಯಾಸಗೊಳಿಸುವುದು ( ಬಬಲ್, ಬಣ್ಣ, ಅಂಚು ಇತ್ಯಾದಿ)
  7. ವಿಷಯಕ್ಕೆ ಮತ್ತು ಪ್ರಸ್ತುತಿಗೆ ಸೂಕ್ತವಾಗಿ ಘಟಕಗಳನ್ನು ಸಂರಚಿಸುವುದು. (ಪಠ್ಯ, ವಿಜ್ಞಾನ ಪಾರ್ಮುಲಾ, ಲೆಕ್ಕ, ಚಿಹ್ನೆ, ಚಿತ್ರಗಳು ಮತ್ತು ಹೈಪರ್‌ಲಿಂಕ್)
  8. ಘಟಕಗಳ ನೋಡ ಬದಲಾವಣೆ, ಎಳೆಯುವಿಕೆ .
  9. ಕ್ಯಾಲೆಂಡರ್ ಮತ್ತು ಜ್ಞಾಪನೆಗಳು.
  10. ಸಂಪೂರ್ಣ ಮೈಂಡ್‌ಮ್ಯಾಪ್‌ಗೆ ಪಾಸ್‌ವರ್ಡ್‌ ನಮೂದಿಸುವುದು.

ಇತರೇ ಸಮಾನ ಅನ್ವಯಕಗಳು

ಪ್ರೀಮೈಂಡ್

ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು