ಡಿಕ್ಷನರಿ ಕಲಿಯಿರಿ
ಪರಿಚಯ
ಮೂಲ ಮಾಹಿತಿ
ಐ.ಸಿ.ಟಿ ಸಾಮರ್ಥ್ಯ | '‘ ಗೋಲ್ಡನ್ ಶಬ್ಧಕೋಶ'ವು ಏಕ ಕಾಲದಲ್ಲಿ ವಿವಿಧ ಭಾಷೆಗಳ ಪದಗಳ ಅನುವಾದ,ಅರ್ಥ ಮತ್ತು ವ್ಯಾಕರಣಾಂಶವನ್ನು ತಿಳಿಯಲು ಬಳಸುವುದಾಗಿದೆ. ಇದು ಅಫ್ ಲೈನ್ ನಲ್ಲಿರುವುದರಿಂದ ಅವಶ್ಯವಿರುವ ಶಬ್ಧಕೋಶದ ಕಡತವನ್ನು ಒಮ್ಮೆ ಡೌನ್‌ಲೋಡ್ ಮಾಡಿಕೊಂಡರೆ ಸಾಕು ಇಂಟರ್‌ನೆಟ್ ಇಲ್ಲದಿದ್ದರೂ ಸುಲಭವಾಗಿ ಬಳಕೆ ಮಾಡಬಹುದು. |
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | ಈ ಅನ್ವಯಕದ ಮೂಲಕ ಭಾಷೆಯನ್ನು ಅನುವಾದ ಮಾಡಬಹುದು. ಪಠ್ಯದಲ್ಲಿನ ಕಠಿಣ ಪದದ ಅರ್ಥವನ್ನು ತಿಳಿಯಲು ಈ ಅನ್ವಯಕವು ಉಪಯುಕ್ತವಾಗುತ್ತದೆ. |
ಆವೃತ್ತಿ | Version 1.5.0 |
ಸಂರಚನೆ | ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ. |
ಇತರೇ ಸಮಾನ ಅನ್ವಯಕಗಳು | Google Dictionary, |
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ | ಆಂಡ್ರಾಯಿಡ್ ಆವೃತ್ತಿಯ ಮೋಬೈಲ್ ನಲ್ಲಿಹಲವು ಅನ್ವಯಕಗಳು ಆಯಾ ಭಾಷಾ ಅನುವಾದಗಳಿಗಾಗಿ ಲಭ್ಯವಿವೆ. |
ಅಭಿವೃದ್ದಿ ಮತ್ತು ಸಮುದಾಯ ಸಹಾಯ | ಅಧಿಕೃತ ವೆಬ್‌ಪುಟ |
ಲಕ್ಷಣಗಳ ಮೇಲ್ನೋಟ
ಇದು ಸಂಪೂರ್ಣ ಯೂನಿಕೋಡ್ ಆಧಾರಿತವಾಗಿದ್ದು, ಸ್ಥಳೀಯ ಭಾಷೆಯ ಎಲ್ಲಾ ಪದಗಳು, ಕಠಿಣಪದಗಳು ಹಾಗು ಒತ್ತಕ್ಷರಸಹಿತ ಪದಗಳನ್ನು ಸುಲಭವಾಗಿ ನಮೂದಿಸಬಹುದು. ಕೇವಲ ಭಾಷಾ ಅನುವಾದವನ್ನು ಮಾತ್ರವಲ್ಲದೆ, ವಿವಿಧ ಭಾಷೆಗಳಲ್ಲಿನ ಪದಗಳ ಸಮಾನಪದ ವಿರುದ್ದಪದ ಮೊದಲಾದ ಭಾಷಾ ಸಂಬಂಧಿ ಚಟುವಟಿಕೆಗಳನ್ನು ಸಹ ಈ ಅನ್ವಯಕದಲ್ಲಿ ಕಾಣಬಹುದು.
ಅನುಸ್ಥಾಪನೆ
- ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
- ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “
Golden Dictionary
” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. - ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
- Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
- ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
sudo apt-get install golden dictionary
ಅನ್ವಯಕ ಬಳಕೆ
ಗೋಲ್ಡನ್ ಡಿಕ್ಷನರಿ ತೆರೆಯುವುದು
Application > Office > Golden Dictionary ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ lookup ಕೆಳಗಿರುವ ಬಾಕ್ಸ್‌ನಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಟೈಪಿಸಿದರೆ ಪರದೆಯ ಮಧ್ಯಭಾಗದಲ್ಲಿ ನಾಮಪದ,ಕ್ರಿಯಾಪದ ಅನುವಾದ ಮೂಡುತ್ತದೆ. ಆದರೆ ಈ ಎಲ್ಲಾ ಡಿಕ್ಷನರಿಗಳನ್ನು ಮೊದಲೇ ಡೌನ್‌ಲೋಡ್(ಆಫ್‌ಲೈನ್‌ಗೆ ಸೇರಿಸಿಕೊಂಡಿರಬೇಕು) ಮಾಡಿಕೊಂಡಿರಬೇಕು.
ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡುವುದು
ಗೋಲ್ಡನ್ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಂಡ ಮೇಲೆ, ಇದಕ್ಕೆ ಸ್ಥಳೀಯ ಭಾಷಾ ಡಿಕ್ಷನರಿಗಳನ್ನು ಪ್ರತ್ಯೇಕವಾಗಿ ಡೌನ್ ಮಾಡಿಕೊಳ್ಳಬೇಕಾಗುತ್ತದೆ. ಸ್ಥಳೀಯ ಭಾಷಾ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು https://github.com/yogiks/offline-indic-wiktionaries/wiki/Dictionaries#wiktionary ಪುಟಕ್ಕೆ ಭೇಟಿ ನೀಡಿ. ಇಲ್ಲಿ ನಿಮ್ಮ ಭಾಷೆಯ ಡಿಕ್ಷನರಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ನಿಮ್ಮ ಕಂಪ್ಯೂಟರ್‌ನ ಡೌನ್‌ಲೋಡ್ ಕಡತಕೋಶದಲ್ಲಿ ಉಳಿಯುತ್ತದೆ. ನಂತರ ಗೋಲ್ಡನ್ ಡಿಕ್ಷನರಿ ಪುಟದಲ್ಲಿನ ಮೆನುಬಾರ್‌ನಲ್ಲಿ Edit > Dictionaries ಮೇಲೆ ಒತ್ತಿ. ಚಿತ್ರದಲ್ಲಿ ಕಾಣುವ ಪುಟದಲ್ಲಿ ಈಗಾಗಲೇ ಡೌನ್‌ಲೋಡ್ ಮಾಡಿದ ಆಯಾ ಭಾಷೆಯ ಡಿಕ್ಷಣರಿಗಳು ಉಳಿದಿರುವ ಕಡತಕೋಶವನ್ನು ಆಯ್ಕೆ ಮಾಡಿ. ಸಾಮನ್ಯವಾಗಿ ನಾವು ಡೌನ್‌ಲೋಡ್ ಮಾಡಿದ