ವಿಷಯ ಪರಿವೀಕ್ಷಕರ ಒಂದು ದಿನದ ಅಭಿಶಿಕ್ಷಣ ಕಾರ್ಯಕ್ರಮ ಮೇ 2019

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೪೪, ೧೭ ಮೇ ೨೦೧೯ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ==== '''<nowiki/>'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು''' ==== VTC ಮತ್ತು ITFC ಸಹಯೋ...)
Jump to navigation Jump to search

'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಗುರಿಗಳು

VTC ಮತ್ತು ITFC ಸಹಯೋಗದಲ್ಲಿ ಈಗ ಸರ್ಕಾರಿ ಅನುದಾನಿತ ಶಾಲೆಗಳನ್ನು ಬಲಪಡಿಸಲು 'ಶಿಕ್ಷಕರ ಕಲಿಕಾ ಸಮುದಾಯ' ಎಂಬ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದೆ ಮತ್ತು ಈ ಶಾಲೆಗಳಿಗೆ ಒದಗುವಂತೆ ಮಾಡುತ್ತಿದೆ,

ಇದರ ಗುರಿಗಳು:

  • ಶಿಕ್ಷಕರನ್ನು ತಮ್ಮ ವೃತ್ತಿಪರ ಅಭಿವೃದ್ಧಿ ಮತ್ತು ವಿಷಯ ಬೋಧನೆಗೆ ಐಸಿಟಿ ಅನ್ವಯಗಳ ಬಳಕೆಗೆ ಪರಿಚಯಿಸುವುದು
  • ವಿದ್ಯಾರ್ಥಿಯ ಕಲಿಕೆ ಫಲಿತಾಂಶಗಳು ಮತ್ತು ಶಾಲಾ ಗುಣಮಟ್ಟವನ್ನು ಸುಧಾರಿಸಲು ಐಸಿಟಿ ಬಳಸಿ ಕಲಿಸಲು ಶಿಕ್ಷಕರಿಗೆ ಬೆಂಬಲಿಸುವುದು.
  • ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ, ಶಾಲೆಗಳ ನಡುವೆ ಸಹಯೋಗವನ್ನು ಸುಧಾರಿಸಲು ಮತ್ತು ವಿದ್ಯಾರ್ಥಿ ಕಲಿಕೆ ಸುಧಾರಿಸಲು ಶಿಕ್ಷಕರ ನಡುವೆ ವೃತ್ತಿಪರ ಕಲಿಕೆ ಸಮುದಾಯಗಳ (ಪಿಎಲ್‌ಸಿಗಳ) ರಚನೆ.

ಕಾರ್ಯಕ್ರಮದ ಚಟುವಟಿಕೆಯು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:

  • ವಿಷಯ ಆಧಾರಿತ ಕಾರ್ಯಾಗಾರಗಳು ಸೇರಿದಂತೆ ವಲಯಮಟ್ಟದ ಎಲ್ಲಾ ಶಾಲೆಗಳಿಗೆ ಮೊಬೈಲ್ ಫೋನ್ ಆಧಾರಿತ ಗುಂಪುಗಳು ಮತ್ತು ಸಂಪನ್ಮೂಲ ವೆಬ್‌ಸೈಟ್‌ಗಳ ಮೂಲಕ ಬೆಂಬಲಿತವಾದ ಕಲಿಕೆ ಕಾರ್ಯಕ್ರಮಗಳು
  • ಶಿಕ್ಷಕರಿಗೆ ವಲಯ ಮಟ್ಟದ ಕಾರ್ಯಕ್ರಮಗಳ ಮೂಲಕ ತರಗತಿಗಳಿಗಾಗಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ರಚಿಸಲು ಬೆಂಬಲ
  • ತರಗತಿ ಬೋಧನೆಗೆ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಹೊಸ ಉಪಕರಣಗಳನ್ನು ಪ್ರದರ್ಶಿಸಲು ಆಸಕ್ತ ಶಾಲೆಗಳಲ್ಲಿ ಶಾಲಾ ಹಂತದ ಬೆಂಬಲ, ಐಸಿಟಿ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು ಮತ್ತು ಶಾಲಾ ಆಡಳಿತ ಮತ್ತು ಸಂವಹನದಲ್ಲಿ ಐಟಿ ಬಳಕೆಗಾಗಿ ಬೆಂಬಲಿಸುವುದು.

ಕಾರ್ಯಗಾರದ ಗುರಿಗಳು,

  • ಶಾಲಾ ಮುಖ್ಯ ಶಿಕ್ಷಕರಿಗೆ 'ಶಿಕ್ಷಕರ ಕಲಿಕಾ ಸಮುದಾಯ' ಕಾರ್ಯಕ್ರಮದ ಪರಿಚಯ, ಸಂಬಂಧಿಸಿದ ಸಾಮಾನ್ಯ ಕ್ಷೇತ್ರಗಳನ್ನು ಗುರುತಿಸುವುದು, ವಲಯ ಹಾಗು ಶಾಲಾ ಮಟ್ಟದ ಶೈಕ್ಷಣಿಕ ಕೆಲಸಗಳ ಕಾರ್ಯಕ್ರಮದ ಬಗ್ಗೆ ಚರ್ಚೆ.
  • ಶಾಲಾ ನಾಯಕತ್ವ ಹಾಗು ಅಭಿವೃದ್ಧಿಯ ಬಗ್ಗೆ ಮುಖ್ಯ ಶಿಕ್ಷಕರ ನಡುವೆ "ವೃತ್ತಿಪರ ಕಲಿಕಾ ಸಮುದಾಯ"ಗಳನ್ನು ರಚಿಸುವುದು, ಸಹಯೋಗ ಹಾಗು ಕಲಿಕೆಗೆ ಸ್ವಾಯತ್ತ ಸ್ಥಳವನ್ನು ನೀಡುವುದು.
  • ಗಣಿತ, ಕನ್ನಡ ಹಾಗು ಆಂಗ್ಲ ವಿಷಯಗಳಿಗೆ 2018-19ನೇ ಸಾಲಿನಲ್ಲಿ ವಲಯ ಹಾಗು ಶಾಲಾ ಮಟ್ಟದ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು. ಇವುಗಳ ಮೂಲಕ ಪಡೆದ ತಿಳುವಳಿಕೆಯ ಚರ್ಚೆ.
ಕ್ರಮ ಸಂಖ್ಯೆ ವಿಶೇಷಗಳು ಸಮಯ ವಿಸ್ತರಿಸಿದ ಸಭಾ ಯೋಜನೆ
1 ನೋಂದಣಿ 9.30 - 10.00 ODKಯಲ್ಲಿ ಭಾಗುದಾರರ ಮಾಹಿತಿಯನ್ನು ಭರ್ತಿಮಾಡುವುದು, ಕಡತವನ್ನು ಪಡೆದುಕೊಳ್ಳುವುದು, ಮುಖ್ಯ ಶಿಕ್ಷಕರ ಫೋನ್‌ಗಳಲ್ಲಿ ಮೂಡಲ್‌ ಅನ್ನು ಅನುಷ್ಟಾನಗೊಳಿಸುವುದು.
2 ಸನ್ನಿವೇಶದ ಸಂಯೋಜನೆ 10.00 - 11.30 ಉದ್ಘಾಟನೆ ಹಾಗು ಸ್ವಾಗತ ಭಾಷಣ

ಸನ್ನಿವೇಶದ ಸಂಯೋಜನೆ ಅನುದಾನಿತ ಶಾಲೆಗಳ ಸವಾಲುಗಳು, SSLC ಫಲಿತಾಂಶ ಹಾಗು ದಾಖಲಾತಿಯ ಮಾಹಿತಿ ಹಂಚಿಕೆ.

ನಮ್ಮ ಶಾಲೆಯ ಮೂರು ಪ್ರಮುಖ ಸವಾಲುಗಳು ಯಾವುವು?

ಚಹಾ ವಿರಾಮ 11.30 - 11.45
3 ನಿರೀಕ್ಷೆಗಳು ಹಾಗು ಯೋಜನೆಗಳು 11.45 - 12.30 ಪ್ರಾಣಿಗಳ ಕಥೆಯ ಓದು ಹಾಗು ಚರ್ಚೆ, ಭಾಗುದಾರರ ಅನುಭವದ ಹಂಚಿಕೆ.

ಐ.ಸಿ.ಟಿಯು ಯಾವ ಪಾತ್ರವನ್ನು ವಹಿಸಬಹುದು?

ನನ್ನ ಶಾಲೆಗೆ ಯೋಜನೆ.

ಐಟಿಎಫ್‌ಸಿ ಯ ಕೆಲಸಗಳು

4 ಮೊಬೈಲ್‌ ಅನ್ವಯಕಗಳು 12.30 - 1.00 ಟೆಲಿಗ್ರಾಮ್‌ ಹಾಗು ಮೂಡಲ್‌ನಂತಹ ಮೂಲಭೂತ ಮತ್ತು ಹಲವು ಸಾಮಾನ್ಯ ಅನ್ವಯಕಗಳನ್ನು ಮೊಬೈಲ್‌ನಲ್ಲಿ ಅನುಷ್ಟಾನಗೊಳಿಸುವುದು.

ಟೆಲಿಗ್ರಾಮ್‌ ಗುಂಪನ್ನು ಸೃಷ್ಟಿಸುವುದು.

ಭೋಜನ ವಿರಾಮ 1.00 - 2.00
5 ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು 2.00 - 4.00 ಒಟ್ಟಾರೆ ಕಾರ್ಯಕ್ರಮದ ವಿನ್ಯಾಸ ಹಾಗು ಸಾಧ್ಯತೆಗಳು.

ಗಣಿತ, ಕನ್ನಡ/ಬೇರೆ ಭಾಷೆ, ಶಾಲಾ ನಾಯಕತ್ವ ಹಾಗು ಡಿಜಿಟಲ್ ಸಾಕ್ಷರತಾ ಅಂಶಗಳು.

ವಲಯ ಮಟ್ಟದ ಕಾರ್ಯಗಾರಗಳ ಚರ್ಚೆ.

ಆಸಕ್ತ ಶಾಲೆಗಳಲ್ಲಿ ಶಾಲಾ ಮಟ್ಟದ ಕಾರ್ಯಕ್ರಮದ ಯೋಜನೆ

ಚಹಾ ವಿರಾಮ
6 ಮುಂದಿನ ಹೆಜ್ಜೆಗಳು 4.00 - 4.30 ಮುಂದಿನ ಮುಖ್ಯ ಶಿಕ್ಷಕರ ಕಾರ್ಯಗಾರಗಳಿಗೆ ದಿನಾಂಕ ನಿಗದಿ, ವಲಯ ಮಟ್ಟದ ಕಾರ್ಯಗಾರಗಳ ಹಂಚಿಕೆ.

ಶಾಲಾ ಮಟ್ಟದ ಕಾರ್ಯಕ್ರಮಗಳಿಗಾಗಿ ನಮೂನೆಯನ್ನು ಭರ್ತಿ ಮಾಡಿ.