ಚಿಗುರು ೭ -ಪಿತೃಪ್ರಧಾನ ಸಂದೇಶಗಳು - ಭಾಗ ೧
Jump to navigation
Jump to search
ಸಾರಾಂಶ
ಹಿಂದಿನ ವಾರಗಳಲ್ಲಿ ಕಿಶೋರಿಯರು ಕಿಶೋರಾವಸ್ಥೆ ಅಂದರೆ ಏನು ಹಾಗು ಕಿಶೋರಿಯರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಚರ್ಚೆಯನ್ನು ಮುಂದುವರಿಸಿಕೊಂಡು, ಈ ವಾರದಿಂದ ಪಿತೃಪ್ರಧಾನತೆಯ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಅದರ ಭಾಗವಾಗಿ ಬಾಡಿ ಇಮೇಜ್‌ನ ಬಗ್ಗೆ ಈ ವಾರದಲ್ಲಿ ಮಾತನಾಡಲಾಗುವುದು. ನಟಿಯರ ವೇಷಭೂಷಣ ಹಾಗು ಜಾಹೀರಾತುಗಳಲ್ಲಿ ವಿವಿಧ ಉತ್ಪನ್ನಗಳ ಪ್ರಚಾರ ಮತ್ತು ಅದರಲ್ಲಿ ಬರುವ ವ್ಯಕ್ತಿಗಳ ಚಿತ್ರಣಗಳ ಮೂಲಕ ಕಿಶೋರಿಯರು ಬಾಡಿ ಇಮೇಜ್‌ನ ಬಗ್ಗೆ ಯೋಚಿಸುವಂತೆ ಮಾಡುವುದು ಈ ಮಾಡ್ಯೂಲಿನ ಉದ್ದೇಶ.
ಊಹೆಗಳು
- ಹಿಂದಿನ ವಾರ ಆಶುಭಾಷಣ ಸ್ಪರ್ಧೆ ಇದ್ದಿದ್ದರಿಂದ ನಮ್ಮ ಮಾಡ್ಯೂಲ್ ಅನ್ನು ಮುಂದೂಡಿದ್ದೆವು.
- ಹಿಂದಿನ ದಿನ ಕ್ರೀಡೋತ್ಸವ ಇರುವುದರಿಂದ ಕಿಶೋರಿಯರು ಸುಸ್ತಾಗಿರುವ ಸಂಭವವಿದೆ.
- ನಮ್ಮ ಮಾಡ್ಯೂಲಿನಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಅವರ ಶಿಕ್ಷಕರು ಪ್ರಶ್ನಿಸಿದರೆ ಉತ್ತರಿಸಬೇಕಾಗುತ್ತದೆಂದು, ಕಿಶೋರಿಯರು ಮಾತುಕತೆಗಳಲ್ಲಿ ಭಾಗವಹಿಸಲು ಹಿಂಜರಿಯಬಹುದು. ನಮ್ಮ ಚಟುವಟಿಕೆಗಳು ಭಾಗೀದಾರಿ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುವುದರಿಂದ, ಈ ಹಿಂಜರಿಕೆಯು ನಮ್ಮ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು.
- ಸೋಮವಾರ ಗೈರು ಹಾಜರಾಗಿದ್ದ ಕಿಶೋರಿಯರಿಗೆ ಬ್ರಿಟಿಷ್ ಏಷಿಯನ್ ಟ್ರಸ್ಟ್‌ನ ಬಗ್ಗೆ ಮಾತನಾಡುವಾಗ ಏನೂ ಗೊತ್ತಾಗದೆ ಇರಬಹುದು.
- ಇದು ಹೆಚ್ಚು ಉತ್ಸಾಹಕಾರಿ ಚಟುವಟಿಕೆಯಾದ್ದರಿಂದ ಗಲಾಟೆ ಹೆಚ್ಚಿರಬಹುದು.
- ಮನೆಯಲ್ಲಿ ಟಿ.ವಿ ಇಲ್ಲದೆ ಇರುವುದರಿಂದ ಕೆಲವರು ಜಾಹೀರಾತುಗಳನ್ನು ನೋಡಿರದೆ ಇರಬಹುದು.
- ಮುಂಚೆಯೇ ಗುಂಪುಗಳನ್ನು ಮಾಡಿಕೊಂಡು ಹೋಗುವುದು ಉತ್ತಮ. ಇದರಿಂದ ಭಾಷಾವಾರು ಅಥವಾ ಇನ್ನಾವುದೋ ಅಂಶದ ಗುಂಪುಗಳನ್ನು ಒಂದೆಡೆ ಸೇರಿಸಬಹುದು.
- ಗಲಾಟೆ ಜಾಸ್ತಿ ಇದ್ದರೆ ಪಕ್ಕದ ತರಗತಿಗಳಿಗೆ ತೊಂದರೆಯಾಗಬಹುದು.
- ದಿನೇ ದಿನೇ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ.
- ಸೂಕ್ಷ್ಮ ವಿಚಾರಗಳನ್ನೂ ಸಹ ಅವರೊಡನೆ ಮಾತನಾಡಬಹುದು.
ಉದ್ದೇಶ
- ಪಿತೃಪ್ರಧಾನತೆಯ ಕುರಿತ ಮಾತುಕತೆಯನ್ನು - ದೇಹದ ಚಿತ್ರಣದ ಬಗೆಗಿನ ಸರಳ ಚಟುವಟಿಕೆಗಳ ಮೂಲಕ ಪ್ರಾರಂಭಿಸುವುದು.
- ದೇಹದ ಚಿತ್ರಣ (ಬಾಡಿ ಇಮೇಜ್), ಸಂಸ್ಕೃತಿಯ ಪ್ರಭಾವ ಹಾಗೂ ಮಾರುಕಟ್ಟೆಯ ಶಕ್ತಿಗಳು, ಮಾಧ್ಯಮಗಳ ಬಗ್ಗೆ ವಿಚಾರ ಮಾಡುವುದು.
ಪ್ರಕ್ರಿಯೆ
- ಕಟ್ಟುಪಾಡುಗಳನ್ನು ನೆನಪಿಸಿವುದು. ೧೦ ನಿಮಿಷಗಳು
- ಎರಡು ಗುಂಪುಗಳನ್ನು ಮಾಡಿಕೊಳ್ಳುವುದು. ಈ ಗುಂಪುಗಳಲ್ಲಿ ಈ ಕೆಳಗಿನ ಪ್ರಶ್ನೆಯ ಮೂಲಕ ಬಾಡಿ ಇಮೇಜ್‌ನ ಬಗೆಗಿನ ಚರ್ಚೆಯನ್ನು ಪ್ರಾರಂಭಿಸುವುದು - “ ನಿಮಗೆ ದೇವರು ವರ ಕೊಟ್ಟು, ನಿಮ್ಮ ದೇಹದಲ್ಲಿನ ಯಾವುದಾದರೂ ಮೂರು ಅಂಶ/ಅಂಗಗಳನ್ನು ಬದಲಾಯಿಸಿಕೊಳ್ಳಬಹುದು ಅಂದರೆ, ಏನೇನನ್ನು ಬದಲಾಯಿಸಿಕೊಳ್ಳುತ್ತೀರ?”
ಕಿಶೋರಿಯರು ಹೇಳಿದ್ದನ್ನು ಬರೆದುಕೊಳ್ಳುವುದು. ಈ ಚಟುವಟಿಕೆಗೆ ಮಹಿಳಾ ಫೆಸಿಲಿಟೇಟರ್‌ಗಳಿರುವುದು ಅವಶ್ಯಕ.
- ಈ ಚಟುವಟಿಕೆಯ ಸಮಯದಲ್ಲಿಯೇ ಲ್ಯಾಪ್‌ಟಾಪ್, ಪ್ರೊಜೆಕ್ಟರ್, ಸ್ಪೀಕರ್‌ಗಳನ್ನು ಜೋಡಿಸಿಟ್ಟುಕೊಂಡಿರುವುದು. ೨೫ ನಿಮಿಷಗಳು
- ಗುಂಪಿನ ಚಟುವಟಿಕೆಯ ನಂತರ ತರಗತಿಯಲ್ಲಿ ಮಾತುಕತೆಯು ಮುಂದುವರೆಯುತ್ತದೆ.
- ಬೇರೆ ಬೇರೆ ಕಾಲದ ನಟಿಯರ ಚಿತ್ರಗಳ ಗುಂಪುಗಳನ್ನು ಕಿಶೋರಿಯರ ಮುಂದೆ ಪ್ರಸ್ತುತ ಪಡಿಸುತ್ತೇವೆ.
- ಕಿಶೋರಿಯರಿಗೆ ನಟಿಯರ ಬಣ್ಣ, ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಸಾಮ್ಯತೆಯ ಬಗ್ಗೆ ಮಾತನಾಡಲು ಹೇಳುವುದು.
- ಇದಾದ ನಂತರ ಇವುಗಳ ಬಗ್ಗೆ ಏನನ್ನಿಸಿತು ಎಂದು ಕೇಳುವುದು. ೧೦ ನಿಮಿಷಗಳು
- ಈ ಮಾತುಕತೆಯ ನಂತರ ಜಾಹೀರಾತುಗಳನ್ನು ತೋರಿಸುವುದು. ಈ ಜಾಹೀರಾತುಗಳು ಈ ಕೆಳಗಿನ ವಿಷಯಗಳ ಬಗ್ಗೆ ಇವೆ
- ಶ್ಯಾಂಪೂ
- ಕೂದಲಿನ ಸ್ಟ್ರೇಟನರ್
- ಮುಖದ ಕ್ರೀಮ್
- ಕಾಜಲ್
- ಲಿಪ್ ಸ್ಟಿಕ್
- ಲಿಪ್ ಬಾಮ್
- ಮೊಯಶ್ಚರೈಜರ್
- ಪರ್‌ಫ್ಯೂಮ್ ಪೌಡರ್
- ನೇಲ್ ಪೇಂಟ್
- ಸ್ಯಾಂಡಲ್ಸ್
- ತೂಕ ಕಮ್ಮಿ ಮಾಡಿಕೊಳ್ಳಲು ಬಳಸುವ ಮಾತ್ರೆ
- ಹೇರ್ ಬರಿಮೂವಲ್ ರೇಜರ್
- ಶ್ಯಾಂಪೂ
- ಪ್ರತಿ ಜಾಹೀರಾತನ್ನು ತೋರಿಸಿದ ನಂತರ ಆ ಜಾಹೀರಾತನ ವಿಷಯದ ಬಗ್ಗೆ, ಅದರಲ್ಲಿರುವ ವ್ಯಕ್ತಿಗಳ ಬಣ್ಣ, ಕೂದಲು, ಎತ್ತರ, ಗಾತ್ರ, ಬಟ್ಟೆ, ಮುಖ ಇತ್ಯಾದಿ ಅಂಶಗಳ ಬಗ್ಗೆ ಕೇಳುವುದು.
- ಕೊನೆಯ ಜಾಹೀರಾತನ್ನು ತೋರಿಸುವಷ್ಟೊತ್ತಿಗೆ ಕಿಶೋರಿಯರೇ ಎಲ್ಲವನ್ನು ಗುರುತಿಸುವಂತರಬೇಕು.
- ಅವರು ಹೇಳುವ ಅಂಶಗಳನ್ನು ಬರೆದುಕೊಳ್ಳುವುದು. ೨೫ ನಿಮಿಷಗಳು
- ಈ ಜಾಹೀರಾತುಗಳು ಪುರುಷರಿಗಾಗಿ ಇದ್ದರೆ ಯಾವ ಥರ ಇರುತ್ತಿದ್ದವು ಎಂದು ಕೇಳುವುದು.
- ಕೊನೆಯಲ್ಲಿ, ಈ ಜಾಹೀರಾತುಗಳು ಏನು ಹೇಳುತ್ತಿವೆ ಹಾಗು ಚಿತ್ರನಟಿಯರು ಏನು ಹೇಳತ್ತಿದ್ದಾರೆ? ಎನ್ನುವುದನ್ನು ಮುಂದಿನ ವಾರಗಳಲ್ಲಿ ಚರ್ಚಿಸೋಣ. ಮನೆಯಲ್ಲಿ ಟ.ವಿ. ನೋಡುವಾಗ ಬರುವ ಜಾಹೀರಾತುಗಳು, ಧಾರಾವಾಹಿಗಳು ಮತ್ತು ಟಿಕ್-ಟಾಕ್ ವೀಡಿಯೋಗಳನ್ನು ಗಮನಿಸಿ, ಅವುಗಳಲ್ಲಿ ಯಾವ ಥರಹದ ವ್ಯಕ್ತಿಗಳು ಇರತ್ತಾರೆಂದು ಗಮನಿಸಲು ಹೇಳುವುದು. ೧೦ ನಿಮಿಷಗಳು
ಬೇಕಾದ ಸಂಪನ್ಮೂಲಗಳು
- ಆಫೀಸ್ ಸೂಟ್ ಇರುವ ಕಂಪ್ಯೂಟರ್/ಲ್ಯಾಪ್‌ಟಾಪ್ ೧
- ಪ್ರೊಜೆಕ್ಟರ್- ೧
- ಸ್ಪೀಕರ್ -೧
- ಮುಂಚೆಯೇ ಗುರುತಿಸಿಕೊಂಡ ಜಾಹೀರಾತುಗಳ ತುಣುಕುಗಳು
ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು
ಒಟ್ಟು ಸಮಯ
೮೦ ನಿಮಿಷಗಳು
ಇನ್‌ಪುಟ್‌ಗಳು
- ನಟಿಯರ ಚಿತ್ರಗಳಿರುವ ಪ್ರಸ್ತುತಿ.
- ಜಾಹೀರಾತುಗಳ ವಿಡಿಯೋ ತುಣುಕುಗಳು
ಔಟ್‌ಪುಟ್‌ಗಳು
- ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ