ಸಂತೆಯಲ್ಲಿ ಮಗ್ಗಿ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ: ಲೀಲು ತನ್ನ ತರಗತಿಯ 36 ವಿದ್ಯಾರ್ಥಿಗಳ ಜೊತೆಗೆ ಸಂತೆಗೆ ಹೋದಳು. ಟಿಕೆಟ್ ಖರೀದಿಸಲು ಎಷ್ಟು ಮಕ್ಕಳಿದ್ದಾರೆ ಎಂದು ಸರ್ ಆಗಾಗ ಎಣಿಸಬೇಕಾಗುತ್ತಿತ್ತು. 1, 2, 3, ಎಂದು 36ರವರೆಗೆ ಎಣಿಸುವ ಬದಲು ಇನ್ನೂ ಸುಲಭವಾಗಿ ಎಣಿಸಲು ಆಗುವುದೇ? ಜೊತೆ, ಜೊತೆಯಾಗಿ ಎಣಿಸುವುದನ್ನು ಕಥೆ ಮೂಲಕ ತಿಳಿಸುತ್ತಾ ಮಗ್ಗಿಯನ್ನು ಕತೆಯಲ್ಲಿ ಪರಿಚಯಿಸಿದೆ.
ಉದ್ದೇಶಗಳು : ಕಥೆಯ ಮೂಲಕ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಅಂಶಗಳು, ದಿನನಿತ್ಯ ಅವುಗಳ ಬಳಕೆ ಮತ್ತು ಪ್ರಾಮುಖ್ಯತೆ ಕುರಿತು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.
ಕಥಾ ವಸ್ತು : ಗಣಿತ, ಬುದ್ಧಿವಂತಿಕೆ ಮತ್ತು ಚತುರತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Santheyalli%20Maggi.mp3