ಮರ ಕಡಿಯುವಾತ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾರಿ ಎಚ್ಚರಿಸಿದ. ಮುಂದೇನಾಯಿತು ಎಂದು ತಿಳಿಯಲು ಇಥಿಯೋಪಿಯಾದ ಈ ಜಾನಪದ ಕಥೆ ಓದಿ.
ಉದ್ದೇಶಗಳು :
ಕಥೆಯ ಮೂಲಕ ಮಕ್ಕಳಿಗೆ ಮರಗಳ ಅವಶ್ಯಕತೆ ಹಾಗೂ ಅವುಗಳ ನಾಶದಿಂದ ಆಗುವ ಪರಿಣಾಮಗಳ ಕರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು :ದುರಾಸೆ,ಹಾಸ್ಯ,ಪರಿಸರ ಮತ್ತು ವಾತಾವರಣ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Marakadiyuvatha.mp3