ಫಾರೂಕಜ್ಜನ ತೋಟ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೧೩, ೬ ಸೆಪ್ಟೆಂಬರ್ ೨೦೨೪ ರಂತೆ Deepak (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗ...)
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಅಮೀರ್‌ನಿಗೆ ಫಾರೂಕಜ್ಜನ ತೋಟ ಎಂದರೆ ತುಂಬಾ ಇಷ್ಟ. ಆದರೆ, ಯಾವುದೋ ಕೀಟಗಳು ತೋಟದ ಗಿಡಗಳನ್ನೆಲ್ಲ ತಿನ್ನುತ್ತಿವೆ. ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಅಮೀರ್ ಏನು ಮಾಡಬಹುದು?

ಉದ್ದೇಶಗಳು :

ಪರಿಸರದ ಪ್ರಾಮುಖ್ಯತೆಯನ್ನ ಅರಿತು ಪರಿಸರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಅದನ್ನ ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಮಕ್ಕಳಿಗೆ ತಿಳಿಸಬಹುದು. ಮಕ್ಕಳಿಗೆ ಪರಿಸರದ ಕುರಿತು ಆಸಕ್ತಿ ಮೂಡಿಸಿ ಕೈದೋಟ ಬೆಳೆಸಲು ಪ್ರೇರೇಪಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಹುಟ್ಟಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

ಕಥಾ ವಸ್ತು :ಪರಿಸರ ಮತ್ತು ವಾತಾವರಣ,ಬುದ್ಧಿವಂತಿಕೆ ಮತ್ತು ಚತುರತೆ,ಕರುಣೆ ಮತ್ತು ಕಾಳಜಿ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Farookhajjana%20Tota.mp3