ತಾರಾಳ ನೇರಳೆ ವಿಮಾನ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ನಗುವ ಎಲೆಗಳು, ಉರುಳಾಡುವ ಅಳಿಲುಗಳ ಕೀ... ಕೀ... ನಡುವೆ ಮರ ಹತ್ತಿ, ನೇರಳೆ ವಿಮಾನ ಏರಿದ ತಾರಾ ಮಾಡಿದ್ದೇನು?

ಉದ್ದೇಶಗಳು :

ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು, ವಾಕ್ಯರಚನೆಯ ಜೊತೆಗೆ ಮಾತನಾಡುವ ಕೌಶಲ್ಯವನ್ನು ಮೂಡಿಸಬಹುದು.

ಕಥಾ ವಸ್ತು :ಸಾಹಸ,ಭಾವನೆಗಳು,ಜಾದು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Thaarala%20Nerale%20Vimaana%20.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮಕ್ಕಳು ಕಥೆಯನ್ನು ಕೇಳಿದ ನಂತರ ಅವರದ್ದೇ ಆದ ಸ್ವಂತ ಮಾತುಗಳಲ್ಲಿ ಕಥೆಯನ್ನು ಹೇಳುವಂತೆ ತಿಳಿಸುವುದು.
  2. ಒಂದು ಜಾದು ಸನ್ನಿವೇಶವನ್ನು ಕಲ್ಪಿಸಿಕೊಂಡು ಮಕ್ಕಳಿಗೆ ಕಥೆ ರಚಿಸುವಂತೆ ತಿಳಿಸುವುದು.
  3. ತಾರಾಳ ಹಾಗೆ ಮಕ್ಕಳು ಕೂಡ ಕಂಡಿರುವ ಕಲ್ಪನೆಗಳ ಕುರಿತಾಗಿ ಗುಂಪಿನಲ್ಲಿ ಚರ್ಚಿಸುವಂತೆ ಮಕ್ಕಳಿಗೆ ತಿಳಿಸುವುದು.