ನಸುನಗೆ ಬೀರಿ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಗೆಳೆಯರ ಜೊತೆ ಓಟದಲ್ಲಿ ಎಲ್ಲರಿಗಿಂತ ಮುಂದೆ ಓಡುತ್ತಿದ್ದ ಜಿಂಕೆಗೆ ಇದ್ದಕ್ಕಿದ್ದಂತೆ ಏನಾಯ್ತು ನೋಡಿ?

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ, ಸರಳ ವಾಕ್ಯ ರಚನೆ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪರಿಚಯವನ್ನು ಮಾಡಿಕೊಡಬಹುದು.

ಕಥಾ ವಸ್ತು :ಸ್ನೇಹ,ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು

ಗುರುತು ಪಟ್ಟಿ : ಪ್ರಾಥಮಿಕ ಹಂತ, ತರಗತಿ ೧,೨,೩,೪,೫,

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Nasunage%20Beeri.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮಕ್ಕಳು ಸ್ನೇಹಿತರೊಂದಿಗೆ ಯಾವೆಲ್ಲಾ ಆಟ ಆಡುತ್ತಾರೆ ಹಾಗೂ ಅದರ ಅನುಭವ ಕುರಿತು ಮಾತನಾಡಲು ಅವಕಾಶ ಮಾಡಿಕೊಡುವುದು
  2. ಮಕ್ಕಳು ಬಿದ್ದಾಗ ಅವರ ಪೋಷಕರು ಅವರನ್ನು ಹೇಗೆ ಸಮಾಧಾನ ಮಾಡುತ್ತಾರೆ ಎಂಬುದನ್ನು ಚರ್ಚಿಸುವುದು
  3. ಜಿಂಕೆಯ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ? ಎಂಬುದನ್ನ ಕಲ್ಪಿಸಿಕೊಂಡು ತಿಳಿಸಿ.
  4. ಜಿಂಕೆಯು ಬಿದ್ದಾಗ ಅದರ ಸ್ನೇಹಿತರು ಓಟವನ್ನು ಬಿಟ್ಟು ಜಿಂಕೆಯ ಸಹಾಕಾರ ನಿಂತುದರ ಕುರಿತು ಮಕ್ಕಳ ಅಭಿಪ್ರಾಯ ಸಂಗ್ರಹಿಸುವುದು.