ಬೆದರು ಬೊಂಬೆಗಳ ಮೆರವಣಿಗೆ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಹೊಲಗಳಲ್ಲಿ ತೆನೆ ಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳು ಬೆದರಿ ಓಡಿ ಹೋಗುವಂತೆ ಮಾಡಲು ಬೆದರುಬೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ಪುಟ್ಟ ಗೌರಿ ಯೋಚಿಸುವುದೇ ಬೇರೆ! ಅದೇನೆಂದು ಓದಿ ತಿಳಿಯಿರಿ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳೊಂದಿಗೆ ಕನಸುಗಳ ಕುರಿತಾಗಿ ಚರ್ಚಿಸಬಹುದು. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಮಾಡುವ ಸಹಾಯಗಳ ಕುರಿತು ಚರ್ಚಿಸಬಹುದು. ಮಕ್ಕಳೊಂದಿಗೆ ಸಂತೋಷ, ದುಖಃ, ಭಯ ಮುಂತಾದ ಭಾವನೆಗಳ ಬಗ್ಗೆ ಚರ್ಚಿಸಬಹುದು.

ಕಥಾ ವಸ್ತು :ಕುಟುಂಬ,ಕುಟುಂಬ,ಸಹಾಯ - ಸಹಕಾರ,ಭಾವನೆಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Beduru%20Bombina%20Meravanige.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮಕ್ಕಳಿಗೆ ಕಥೆಯನ್ನು ಕೇಳಿಸುವ ಮೊದಲು ಮಕ್ಕಳು ಎಂತೆಂತಹ ಕನಸುಗಳನ್ನು ಕಂಡಿರುವರೆಂದು ಚರ್ಚಿಸುವುದು.
  2. ಮನೆಗೆಲಸದಲ್ಲಿ ಪೋಷಕರಿಗೆ ಹೇಗೆಲ್ಲಾ ನೆರವಾಗುವಿರೀ? ಎಂದು ಪ್ರಶ್ನಿಸುವುದು.
  3. ಹೊಲದ ಬೆಳೆ ತಿನ್ನಲು ಬರುವ ಪಕ್ಷಿಗಳನ್ನು ಓಡಿಸುವುದಕ್ಕೆ ನೀವು ನೀಡುವ ಸಲಹೆಗಳೇನು?
  4. ನೀವು ಹಗಲಿನಲ್ಲಿ ಯಾರೊಂದಿಗಾದರೂ ಮಾತನಾಡಿದ ವಿಚಾರದ ಕುರಿತಾಗಿಯೇ ಕನಸನ್ನು ಕಂಡಿರುವಿರಾ?
  5. ಬೆದರು ಬೊಂಬೆಗಳು ವಿಚಿತ್ರವಾಗಿ ಕಾಣುವಂತೆ ತಯಾರಿಸಲು ಕಾರಣವೇನು? ಹಾಗೂ ಅದರಿಂದ ಆಗಬಹುದಾದ ಪರಿಣಾಮಗಳೇನು ?
  6. ನಿಮಗೆ ಎಂದಾದರೂ ಭಯವುಂಟುಮಾಡುವಂತಹ ಕನಸು ಬಿದ್ದಿದೆಯೇ? ಅರದ ಅನುಭವಗಳನ್ನು ಹಂಚಿಕೊಳ್ಳಿ.