ಮರ ಕಡಿಯುವಾತ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾರಿ ಎಚ್ಚರಿಸಿದ. ಮುಂದೇನಾಯಿತು ಎಂದು ತಿಳಿಯಲು ಇಥಿಯೋಪಿಯಾದ ಈ ಜಾನಪದ ಕಥೆ ಓದಿ.

ಉದ್ದೇಶಗಳು :

ಕಥೆಯ ಮೂಲಕ ಮಕ್ಕಳಿಗೆ ಮರಗಳ ಅವಶ್ಯಕತೆ ಹಾಗೂ ಅವುಗಳ ನಾಶದಿಂದ ಆಗುವ ಪರಿಣಾಮಗಳ ಕರಿತು ತಿಳಿಸಿಕೊಡಬಹುದು.

ಕಥಾ ವಸ್ತು :ದುರಾಸೆ,ಹಾಸ್ಯ,ಪರಿಸರ ಮತ್ತು ವಾತಾವರಣ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Marakadiyuvatha.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಕಥೆಯನ್ನು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸುವುದು.
  2. ಮರಗಳನ್ನು ಕಡಿಯುವ ಕಾರಣಗಳ ಕುರಿತು ಚರ್ಚಿಸುವುದು.
  3. ಮರಗಳ ಪ್ರಾಮುಖ್ಯತೆಯನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು.
  4. ಮರಗಳ ವಿನಾಶದಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಚರ್ಚಿಸುವುದು.
  5. ಕಥೆಯನ್ನು ನಾಟಕ ಶೈಲಿಯಲ್ಲಿ ಅಭಿನಯಿಸಲು ಮಕ್ಕಳಿಗೆ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡುವುದು.
  6. ಇನ್ನಷ್ಟು ಕುತೂಹಲಕಾರಿಯಾಗಿ ಮುಂದುವರಿಯುವಂತೆ ಕಥೆಯನ್ನು ಮರುಸೃಷ್ಠಿ ಮಾಡುವಂತೆ ತಿಳಿಸುವುದು.