ಫಾರೂಕಜ್ಜನ ತೋಟ - ಧ್ವನಿ ಕಥೆಯ ಚಟುವಟಿಕೆ ಪುಟ
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ:
ಅಮೀರ್‌ನಿಗೆ ಫಾರೂಕಜ್ಜನ ತೋಟ ಎಂದರೆ ತುಂಬಾ ಇಷ್ಟ. ಆದರೆ, ಯಾವುದೋ ಕೀಟಗಳು ತೋಟದ ಗಿಡಗಳನ್ನೆಲ್ಲ ತಿನ್ನುತ್ತಿವೆ. ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಅಮೀರ್ ಏನು ಮಾಡಬಹುದು?
ಉದ್ದೇಶಗಳು :
ಪರಿಸರದ ಪ್ರಾಮುಖ್ಯತೆಯನ್ನ ಅರಿತು ಪರಿಸರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಅದನ್ನ ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಮಕ್ಕಳಿಗೆ ತಿಳಿಸಬಹುದು. ಮಕ್ಕಳಿಗೆ ಪರಿಸರದ ಕುರಿತು ಆಸಕ್ತಿ ಮೂಡಿಸಿ ಕೈದೋಟ ಬೆಳೆಸಲು ಪ್ರೇರೇಪಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಹುಟ್ಟಿಸಬಹುದು.
ಕಥಾ ವಸ್ತು :ಪರಿಸರ ಮತ್ತು ವಾತಾವರಣ,ಬುದ್ಧಿವಂತಿಕೆ ಮತ್ತು ಚತುರತೆ,ಕರುಣೆ ಮತ್ತು ಕಾಳಜಿ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Farookhajjana%20Tota.mp3
ತರಗತಿ ಚಟುವಟಿಕೆ:
ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು |
---|
|
ಸಂಪೂರ್ಣ ದೈಹಿಕ ಚಟುವಟಿಕೆ
- ಶಾಲಾ ಆವರಣದಲ್ಲಿನ ತೋಟವನ್ನು ನಿರ್ವಹಣೆ ಮಾಡಿಸುವುದು.
- ಆಲಿಸುವ ಪೂರ್ವದ ಚಟುವಟಿಕೆ
- ಪರಿಸರದಲ್ಲಿ ಕಂಡುಬರುವ ವಿಭಿನ್ನ ಪ್ರಾಣಿ ಪಕ್ಷಿ ಕೀಟಗಳನ್ನು ಪಟ್ಟಿ ಮಾಡುವುದು.
- ಕೃಷಿ ಎಂದರೇನು? ಅದನ್ನು ಮಾಡುವ ವಿಧಾನವೇನು? ನೀವು ನಿಮ್ಮ ಪೋಷಕರಿಗೆ ಕೃಷಿಯಲ್ಲಿ ಏನೆಲ್ಲಾ ಸಹಾಯ ಮಾಡುವಿರಿ.
- ವಿವಿಧ ಹೂವು, ಹಣ್ಣುಗಳು ಹಾಗೂ ಅದಕ್ಕೆ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿ.
ಆಲಿಸುವ ಸಮಯದ ಚಟುವಟಿಕೆ
- ಪರಿಸರ ಸ್ನೇಹಿ ಕೃಷಿ ಎಂದರೇನು?
- ಜಮೀನಿನಲ್ಲಿ ಮಾಡಬಹುದಾದ ಕಾರ್ಯಗಳನ್ನು ಪಟ್ಟಿ ಮಾಡಿ.
- ಕಾಂಪೋಸ್ಟ್ ಗೊಬ್ಬರವನ್ನು ಹೇಗೆ ತಯಾರಿಸುವಿರಿ?
- ರಸಾಯನಿಕ ಮತ್ತು ಕಾಂಪೋಸ್ಟ್ ಗೊಬ್ಬರದ ನಡುವಿನ ವ್ಯತ್ಯಾಸ ತಿಳಿಸಿ.
- ಕೀಟ ಬಾಧೆಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ನೀವು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳುವಿರಿ.
ಆಲಿಸಿದ ನಂತರದ ಚಟುವಟಿಕೆಗಳು
- ಮನೆ ಮತ್ತು ಶಾಲಾ ಆವರಣದಲ್ಲಿ ಕೈತೋಟ ನಿರ್ಮಿಸುವುದು.
- ಕಾಂಪೋಸ್ಟ್ ಗೊಬ್ಬರದ ಮಹತ್ವವನ್ನು ಚರ್ಚಿಸಿ ಹೇಳುವುದು.
- ಪರಿಸರ ಸ್ನೇಹಿಯಾಗಿ ಜೀವ ಸಂಕುಲವನ್ನು ರಕ್ಷಿಸುವ ಬಗ್ಗೆ ಚರ್ಚಿಸಿ ಹೇಳಲು ತಿಳಿಸುವುದು.
ಪಠ್ಯಪುಸ್ತಕಕ್ಕೆ ಸಂಪರ್ಕಿಸಬಹುದು
4 ತರಗತಿ
- ಕನ್ನಡ - ಅಜ್ಜಿಯ ತೋಟದಲ್ಲಿ ಒಂದು ದಿನ
5 ತರಗತಿ
- ಪರಿಸರ - ಅಧ್ಯಯನ ಜೀವ ಜಗತ್ತು
8 ತರಗತಿ
- ವಿಜ್ಞಾನ - ರಸಗೊಬ್ಬರ ಮತ್ತು ಜೈವಿಕ ಗೊಬ್ಬರದ ನಡುವಿನ ವ್ಯತ್ಯಾಸ.