ದೋಣಿ ವಿಹಾರ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೦೧, ೪ ಅಕ್ಟೋಬರ್ ೨೦೨೪ ರಂತೆ Deepak (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗ...)
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ

ಉದ್ದೇಶಗಳು :

ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ

ಕಥಾ ವಸ್ತು : ಕುಟುಂಬ, ಸಾಹಸಪರಿಸರ ಮತ್ತು ವಾತಾವರಣ

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Doni%20Vihara.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಶಗಳು
  1. ಮಕ್ಕಳಿಗೆ ತಮ್ಮ ಬೇಸಿಗೆ ರಜೆಯ ಅನುಭವವನ್ನು ಹಂಚಿಕೊಳ್ಳುವಂತೆ ತಿಳಿಸುವುದು.
  2. ನದಿ, ದೋಣಿ ಹಾಗೂ ನೀರಿನಲ್ಲಿ ಈಜುವ ಕುರಿತಾಗಿ ಮಕ್ಕಳಿಗಿರುವ ಅನುಭವಗಳನ್ನು ತಿಳಿದುಕೊಳ್ಳುವುದು.
  3. ಕೆರೆ, ನದಿ, ಸರೋವರಗಳ ಬಳಿ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪ್ರಭಂಧ ಬರೆಯಲು ಅವಕಾಶ ಮಾಡಿಕೊಡುವುದು.
  4. ದೋಣಿ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ತಿಳಿಸುವುದು.
  5. ಮಕ್ಕಳು ತಮ್ಮ ಪೋಷಕರು ಅಥವಾ ತಾತ-ಅಜ್ಜಿಯಿಂದ ಕಲಿತ ಆಟಗಳು ಅಥವಾ ವಿದ್ಯೆಯನ್ನು ಗುಂಪಿನೊಂದಿಗೆ ಚರ್ಚಿಸಲು ತಿಳಿಸುವುದು.
  6. ದೋಣಿ ಮತ್ತು ಹಡಗಿನ ವ್ಯತ್ಯಾಸಗಳು ಹಾಗೂ ಅವುಗಳ ಕಾರ್ಯ, ಉಪಯೋಗ ಮತ್ತು ಮಹತ್ವದ ಕುರಿತಾಗಿ ಮಕ್ಕಳೊಂದಿಗೆ ಚರ್ಚಿಸುವುದು.