ಚಗಳಿ ಇರುವೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೩:೪೮, ೧೬ ಡಿಸೆಂಬರ್ ೨೦೨೪ ರಂತೆ Punith (ಚರ್ಚೆ | ಕಾಣಿಕೆಗಳು) ಇವರಿಂದ (→‎ಸಂಪನ್ಮೂಲ :)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪಠ್ಯ : ಚಗಳಿ ಇರುವೆ.

ಕರ್ತೃ : ಪೂರ್ಣಚಂದ್ರ ತೇಜಸ್ವಿ.

ಪಠ್ಯ ವಿಷಯದ ಉದ್ದೇಶಗಳು:

  • ನಮಗೆ ಚಿರಪರಿಚಿತವಾದ ಇರುವೆಗಳ ಕುರಿತ ವಿಶಿಷ್ಟ ಶಕ್ತಿಯ ಕುರಿತು ತಿಳಿದುಕೊಳ್ಳುವುದು.
  • ಅತ್ಯಂತ ಸಣ್ಣ ಜೀವಿಯಾದ ಇರುವೆಗಳಲ್ಲಿರುವ ಒಗ್ಗಟ್ಟನ್ನು ಮೆಚ್ಚಿಕೊಳ್ಳುಕೊಳ್ಳುವುದು.
  • ಪರಿಸರದಲ್ಲಿರುವ ಇತರೆ ಜೀವಿಗಳ ಕೌತುಕ ವಿಚಾರಗಳನ್ನು ಅನ್ವೇಷಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸುವುದು.
  • ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳನ್ನು ಮಕ್ಕಳಿಗೆ ಪರಿಚಯಿಸುವುದು.    

ಸಂಪನ್ಮೂಲ :

  • ಪೂರ್ಣಚಂದ್ರ ತೇಜಸ್ವಿ ರವರ ಕವಿ ಪರಿಚಯ -  MIND MAP
  • ಚಗಳಿ ಇರುವೆಗಳು ಕಾರ್ಯ ನಿರ್ವಹಿಸುವ ಕೌತುಕ ವಿಡಿಯೋ. https://www.youtube.com/watch?v=B3QTAgHlwEg&t=0s

ತರಗತಿ ಚಟುವಟಿಕೆ.

ಚಟುವಟಿಕೆ ೧ :                        

ಕೆಳಗಿನ ಚಿತ್ರಪಟ ಪ್ರದರ್ಶಿಸಿ ಅವುಗಳ ಕುರಿತಾಗಿ ಮಕ್ಕಳಿಗಿರುವ ಪೂರ್ವಜ್ಞಾನವನ್ನು ಹಂಚಿಕೊಳ್ಳಲು ಅವಕಾಶ ನೀಡುವುದು.

ಚಟುವಟಿಕೆ ೨ :

ಪಠ್ಯಕ್ಕೆ ಪೂರಕವಾಗಿ ತಿಳಿಸಿರುವ ಚಗಳಿ ಇರುವೆ ಪಾಠ ರಚನೆಯ ಹಿನ್ನೆಲೆಯನ್ನು ಮಕ್ಕಳಲ್ಲಿ ಕೃತಿಕಾರರ ಕುರಿತು ಆಸಕ್ತಿ ಮೂಡುವಂತೆ ಶಿಕ್ಷಕರು ಮೌಖಿಕವಾಗಿ ತಿಳಿಸುವುದು.

ಚಟುವಟಿಕೆ ೩ :

ಚಗಳಿ ಇರುವೆ ಪಾಠದ ಕರ್ತೃಗಳಾದ ಕೆ.ಪಿ ಪೂರ್ಣಚಂದ್ರ ತೇಜಸ್ವಿರವರನ್ನು ಪರಿಚಯಿಸುವುದು.

ಚಟುವಟಿಕೆ ೪ :

ಚಗಳಿ ಇರುವೆಗಳು ಹೇಗೆ ತಮ್ಮ ಗೂಡನ್ನು ನಿರ್ವಹಿಸುತ್ತವೆ ಎಂಬುದನ್ನ ವಿಡಿಯೋ ಮೂಲಕ ಪ್ರದರ್ಶಿಸುವುದು.

https://www.youtube.com/watch?v=B3QTAgHlwEg&t=0s

(ಚಗಳಿ ಇರುವೆಗಳಂತೆ ಕುತೂಹಲವೆನಿಸುವ ಇತರೆ ಜೀವಿಗಳ ಕುರಿತು ತಿಳಿದುಕೊಂಡು ಬಂದು ತರಗತಿಯಲ್ಲಿಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವುದು.)

ಚಟುವಟಿಕೆ ೫ :

ಇರುವೆಯನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಕಥೆಯನ್ನು ಸೃಷ್ಟಿಸುವ ಚಟುವಟಿಕೆ ನೀಡುವುದು.

(ಮೊದಲನೇ ವಿದ್ಯಾರ್ಥಿ ಪ್ರಾರಂಭಿಸಿದ ಕಥೆಯನ್ನ ಮುಂದಿನ ವಿದ್ಯಾರ್ಥಿಗಳು ಆಸಕ್ತಿಯಿಂದ ಮುಂದುವರೆಸಿಕೊಂಡು ಹೋಗುವುದು.)

ಮೌಲ್ಯಮಾಪನ

  • ಮಕ್ಕಳ ಭಾಷಾ ಹಿನ್ನೆಲೆಯ ಕುರಿತು ತಿಳಿದುಕೊಳ್ಳುವುದು.
  • ಮಕ್ಕಳು ಭಾಷೆಯನ್ನು ಅರ್ಥೈಸಿಕೊಳ್ಳಲು ಕಷ್ಟಪಡುತ್ತಿರುವರೇ ಎಂಬುದನ್ನು ಗಮನಿಸುವುದು.
  • ಗುಂಪು ಚಟುವಟಿಕೆಯಲ್ಲಿ ಎಲ್ಲ ಮಕ್ಕಳೂ ಸಕ್ರಿಯವಾಗಿ ಭಾಗವಹಿಸುತ್ತಿರುವರೇ? ಎಂದು ಗಮನಿಸುವುದು
  • ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಳ್ಳುವಾಗ ನಿಖರವಾಗಿ ವಾಕ್ಯ ರಚನೆ ಮಾಡುತ್ತಿರುವರೇ ಎಂದು ಗಮನಿಸುವುದು.