ಸಿ.ಆರ್.ಪಿ. ಓರಿಯೆಂಟೇಶನ್ ಕಾರ್ಯಾಗಾರ - ಮೈಸೂರು 2025

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಹಿನ್ನೆಲೆ

"ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT)' ಯು "ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ ಆಧಾರಿತ ಬೋಧನ ವಿಧಾನದ ಅಳವಡಿಕೆ' ಕಾರ್ಯಕ್ರಮವನ್ನು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (CTE) ಹಾಗು ಐಟಿ ಫಾರ್ ಚೇಂಜ್ (ITfC) ಸಂಸ್ಥೆಯ ಸಹಯೋಗದೊಂದಿಗೆ 2023-24 ರ ಶೈಕ್ಷಣಿಕ ವರ್ಷದಿಂದ ಅನುಷ್ಠಾನಗೊಳಿಸಲಾಗಿದೆ. ಕಥೆ-ಆಧಾರಿತ ಬೋಧನ ವಿಧಾನದ ಪರಿಣಾಮಕಾರಿತ್ವದ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯನ್ನು ವರ್ಧಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ .

ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ನಡೆಸಲಾಗಿದ್ದು, ಮೊದಲನೇ ವರ್ಷದಲ್ಲಿ ಸಂಪನ್ಮೂಲ ತಯಾರಿಕೆಯ ಮೇಲೆ ಕೇಂದ್ರಿಕರಿಸಿ, ಸರ್ಕಾರೀ ಶಾಲಾ ಶಿಕ್ಷಕರಿಂದ 200ಕ್ಕೂ ಹೆಚ್ಚು ಧ್ವನಿ ಕಥೆಗಳನ್ನು ನಾಲ್ಕು ಭಾಷೆಗಳಲ್ಲಿ ಸೃಜಿಸಲಾಯಿತು. ಪ್ರಸ್ತುತ2024-25 ರ ಶೈಕ್ಷಣಿಕ ವರ್ಷದಲ್ಲಿ ಸೃಜಿಸಲಾಗಿರುವ ಧ್ವನಿ ಕಥೆಗಳ ತರಗತಿ ಮಟ್ಟದ ಅನುಷ್ಠಾನವನ್ನು ಸಕ್ರಿಯಗೊಳಿಸುವ ಉದ್ದೇಶದಿಂದ ತಂತ್ರೋ ಬೋಧನ ವಿಧಾನ ಕಾರ್ಯಗಾರಗಳನ್ನು ಆಯೋಜಿಸಲಾಗಿದೆ. ಇದರ ಸಲುವಾಗಿ 23-25 ಜುಲೈ, 2024 ರಂದು ಮೈಸೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ 30 ಪ್ರಥಮಿಕ ಶಾಲಾ ಇಂಗ್ಲಿಷ್ ಭಾಷಾ ಶಿಕ್ಷಕರು, ಆಯ್ದ ಸಿ.ಆರ್.ಪಿ, ಬಿ.ಆರ್.ಪಿ.ಗಳು ಹಾಗು ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ದಿನದ ತಂತ್ರೋ-ಬೋಧನ ವಿಧಾನ ಕಾರ್ಯಾಗಾವನ್ನು ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಭಾಷಾ ಬೋಧನ-ಕಲಿಕೆಗೆ ಸಂಬಂಧಿಸಿದ ಹಲವು ಅಂಶಗಳನ್ನು ಚರ್ಚಿಸಲಾಯಿತು. ಮುಖ್ಯವಾಗಿ, ದಿಜಿಟಲ್ ಧ್ವನಿ ಕಥೆಗಳನ್ನು ತರಗತಿಯ ಕಲಿಕಾ ಪ್ರಕ್ರಿಯೆಯಲ್ಲಿ ಹೇಗೆ ಸಂಯೋಜಿಸುವುದು, ಕಲಿಕಾರ್ಥಿಗಳ ವಿಮರ್ಶಾತ್ಮಕ ಕೌಶಲ್ಯ, ವಿವರಣಾತ್ಮಕ ಕೌಶಲ್ಯ, ಹಾಗು ಸೃಜನಶೀಲ ಕೌಶಲ್ಯವನ್ನು ಕಥೆ ಆಧಾರಿತ ಚಟುವಟಿಕೆಗಳ ಮೂಲಕ ಹೇಗೆ ಉತೇಜಿಸಬಹುದು ಹಾಗು ಆಲಿಸುವಿಕೆ ಮತ್ತು ಮಾತನಾಡುವಿಕೆ, ಗ್ರಹಿಕೆಯುಕ್ತ ಓದುವಿಕೆ ಹಾಗೂ ಬರೆಯುವ ಅಥವಾ ಚಿತ್ರಿಸುವ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವ ಅವಕಾಶಗಳನ್ನು ಹೇಗೆ  ಕಲ್ಪಿಸಬಹುದೆಂದು ಅನ್ವೇಶಿಸಲಾಯಿತು.

ಈ ಹಿನ್ನೆಲೆಯಲ್ಲಿ, ಸದರಿ ಕಾರ್ಯಕ್ರಮದ ಸಂಪನ್ಮೂಲಗಳು ಮತ್ತು ಕಲಿಕೆಯು ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ತಲುಪಿಸುವ ನಿಟ್ಟಿನಲ್ಲಿ ಮೈಸುರು ಜಿಲ್ಲೆಯ ಎಲ್ಲಾ ಸಿ.ಆರ್.ಪಿಗಳಿಗೆ ಡಯಟ್ ನ ಸಹಯೋಗದೊಂದಿಗೆ ಎರೆಡು ದಿನದ ಓರಿಯಂಟೇಶನ್ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗರದಲ್ಲಿ ಸೃಜಿಸಲಾಗಿರುವ ಸಂಪನ್ಮೂಲಗಳು ಮತ್ತು ತರಗತಿಯಲ್ಲಿ ಭಾಷಾ ಬೋಧನೆಗೆ ಬಳಸಿಕೊಳ್ಳಬಹುದಾದ ವಿಧಗಳನ್ನು ಪರಿಚಯಿಸಲಾಗುವುದು. ಇದರ ಮೂಲಕ, ಸಿಆರ್‌ಪಿಗಳು ತಮ್ಮ ಕ್ಲಸ್ಟರ್‌ನ ಶಿಕ್ಷಕರೊಂದಿಗೆ ಧ್ವನಿ ಕಥೆಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ತರಗತಿಯಲ್ಲಿ ಅವುಗಳ ಪರಿಣಾಕಾರಿ ಬಳಕೆಗೆ ಶಿಕ್ಷಕರನ್ನು ಬೆಂಬಲಿಸಲು ಸಾಧ್ಯವಾಗುತ್ತದೆ.

ಕಾರ್ಯಾಗಾರದ ಉದ್ದೇಶಗಳು

  • ಭಾಷಾ ಬೋಧನೆ-ಕಲಿಕೆಯಲ್ಲಿ ಆಡಿಯೋ ಕಥೆಗಳನ್ನು ಬಳಸಬಹುದಾದ ವಿಧಾನಗಳನ್ನು CRP ಗಳು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು
  • ಆಂಟೆನಾಪಾಡ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಥೆ ಖಜಾನೆ ಆಡಿಯೊ ಸ್ಟೋರಿ ಭಂಡಾರವನ್ನು ಅನ್ವೇಷಿಸುವುದು
  • ವಿದ್ಯಾರ್ಥಿಗಳ ಕಲಿಕೆಯನ್ನು ಮತ್ತಷ್ಟು ಹೆಚ್ಚಿಸಲು ತಮ್ಮ ಬೋಧನಾ ಅಭ್ಯಾಸದಲ್ಲಿ ಆಡಿಯೋ ಕಥೆಗಳನ್ನು ಸಂಯೋಜಿಸುವುದು
  • ಶಿಕ್ಷಕರು ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳು ಮತ್ತು ಬೋಧನ ವಿಧಾನಗಳನ್ನು ತರಗತಿಯಲ್ಲಿ ಅಳವಡಿಸಿಕೊಳ್ಳಲು ಬೆಂಬಲಿಸಲು CRP ಗಳು ಬಳಸಬಹುದಾದ ಕಾರ್ಯತಂತ್ರಗಳನ್ನು ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು
  • CRP ಗಳ ನಡುವೆ ಪರಸ್ಪರ ಹಂಚಿಕೆ ಮತ್ತು ಕಲಿಕೆಗಾಗಿ ಅಭ್ಯಾಸದ ವರ್ಚುವಲ್ ಸಮುದಾಯವನ್ನು ರಚಿಸುವುದು
  • CRP ಗಳ ದಿನನಿತ್ಯದ ಚಟುವಟಿಕೆಗಳಿಗೆ ಬೆಂಬಲಿಸಬಹುದಾದ ತಂತ್ರಾಂಶಗಳನ್ನು ಪರಿಚಯಿಸಿ ಅನ್ವೇಶಿಸುವುದು

ಕಾರ್ಯಸೂಚಿ

ಸಮಯ ಅಧಿವೇಶನ ವಿವರಣೆ/ವಿಷಯಗಳು